Composer : Shri Vijayadasaru
ನಾಮತ್ರಯ ನೆನೆಯಿರೊ [೨],
ಕಾಮಕ್ರೋಧವು ಹರಿದು ಬೈಲಾಗಿ ಪೋಗುವುದು ||ಪ||
ಅಚ್ಯುತಾ ಅಚ್ಯುತಾ ಎಂದು ಸ್ಮರಣೆಯನು ಮಾಡಿದರೆ,
ದುಶ್ಚರಿತವೆಂಬ ಮಹ ಕಾನನಕ್ಕೆ,
ಕಿಚ್ಚಾಗಿ ದಹಿಸುವುದು ನಿಮಿಷದೊಳಗೆ ಶುದ್ಧ,
ನಿಚ್ಚಳವಾಗಿದ್ದ ಸುಜ್ಞಾನ ಪಾಲಿಪದು ||೧||
ಅನಂತ ಅನಂತ ಎಂದು ಮನದಲ್ಲಿ ನೆನೆಯೆ,
ನಾನಾ ಭವಬಂಧ ದುಷ್ಕರ್ಮದಿ,
ಹೀನಾಯವನು ಕಳೆದು ಹಿತದಿಂದಲಿ ವೊಲಿದು,
ಆನಂದ ಆನಂದವಾದ ಫಲ ಕೊಡುವುದು ||೨||
ಗೋವಿಂದ ಗೋವಿಂದ ಎಂದು ಧ್ಯಾನವ ಮಾಡೆ,
ಗೋವಿಂದ ಕಡೆ ಹಾಕಿ ಸಾಕುವದು,
ದೇವೇಶ ಶಿರಪತಿ ವಿಜಯವಿಠ್ಠಲೇಶನ
ಸೇವೆ ಸತ್ಕಾರ್ಯದಲಿ ಪರಿಪೂರ್ಣವಾಗಿಹುದು ||೩||
nAmatraya neneyiro [2],
kAmakrOdhavu haridu bailAgi pOguvudu ||pa||
acyutA acyutA eMdu smaraNeyanu mADidare,
duScaritaveMba maha kAnanakke,
kiccAgi dahisuvudu nimiShadoLage Suddha,
niccaLavAgidda suj~jAna pAlipadu ||1||
anaMta anaMta eMdu manadalli neneye,
nAnA BavabaMdha duShkarmadi,
hInAyavanu kaLedu hitadiMdali volidu,
AnaMda AnaMdavAda Pala koDuvudu ||2||
gOviMda gOviMda eMdu dhyAnava mADe,
gOviMda kaDe hAki sAkuvadu,
dEvESa Sirapati vijayaviThThalESana
sEve satkAryadali paripUrNavAgihudu ||3||

Leave a Reply
You must be logged in to post a comment.