Shivane na ninna kareyuve

Composer : Shri Indiresha ankita

By Smt.Shubhalakshmi Rao

ಶಿವನೆ ನಾ ನಿನ್ನ ಕರೆಯುವೆ ಬಾರೊ [ಪ]
ಗಿರಿಜಾ ಮನೋಹರನೆ ಶಂಕರನೆ [ಅ.ಪ]

ತರುಣಿ ಮಣಿಯು ವಾಮ ತೊಡೆಯಲೊಪ್ಪುವಳು
ತರಳರಿಬ್ಬರು ಬಲ ತೊಡೆಯಲೊಪ್ಪುವರು
ಸುರ ಸರಿತೆಯು ಜಟೋತ್-ಪರಿ ಶೋಭಿಪಳು
ಗರಳ ಕಂಠದಿ ನೀಲ ಹರಳಿನಂತ್ ಹೊಳೆವುದು [೧]

ಬಾಲಮುನಿಯು ತನ್ನ ಕೇಳಿ ಮೃತಿಯನು
ನೀಲ ಲೋಹಿತಾ ನಿನ್ನ ಸೇವೆ ಮಾಡಿದನು
ಕಾಲನ ಜೈಸುತ ಬಹಳ ಆಯುಷ್ಯವಿತ್ತೆ
ವ್ಯಾಳಚಲಾಂತಕ ಶ್ರೀಶೈಲದಿ ನಿಂತೆ [೨]

ಮಂದ ರುಗ್ಮಿಯು ತಪದಿಂದ ಒಲಿಸಲು
ಬಂದು ಶಾಪವ ನೀಡಿ ತಂದಿ ಕ್ಷಿತಿಯೊಳು
ಇಂದಿರೇಶನ ದ್ವೇಷ ಎಂದು ಮಾಡುವಿ ಶಾಪ
ಅಂದೇ ಬರುವದು ಮಂದಿರಕೋ ಇತಿ [೩]


Sivane nA ninna kareyuve bAro [pa]
girijA manOharane SaMkarane [a.pa]

taruNi maNiyu vAma toDeyaloppuvaLu
taraLaribbaru bala toDeyaloppuvaru
sura sariteyu jaTOt-pari SOBipaLu
garaLa kaMThadi nIla haraLinaMt hoLevudu [1]

bAlamuniyu tanna kELi mRutiyanu
nIla lOhitA ninna sEve mADidanu
kAlana jaisuta bahaLa AyuShyavitte
vyALacalAMtaka SrISailadi niMte [2]

maMda rugmiyu tapadiMda olisalu
baMdu SApava nIDi taMdi kShitiyoLu
iMdirESana dvESha eMdu mADuvi SApa
aMdE baruvadu maMdirakO iti [3]

Leave a Reply

You might also like

error: Content is protected !!