Sharanu ratinatha

Composer : Shri Pranesha dasaru

By Smt.Shubhalakshmi Rao

ಶರಣು ಶರಣು ರತಿನಾಥಾ |
ಸುರವರ ಅನಿರುದ್ಧನ ತಾತಾ |
ಕರುಣಾ ಪಯೋನಿಧಿ ರುಗ್ಮಿಣೀ ಜಾತಾ |
ತ್ವರದಿಂ ಲಾಲಿಸು ಮಾತಾ ||

ಭರತನೆ ಸನತ್ಕುಮಾರಾ |
ಸುದರುಶನ ಪರಮೋದಾರಾ ||
ಹರನಂದನ ನತ ಬಂದು ಕುಮಾರಾ |
ಕರ ಪಿಡಿ ಕೃಷ್ಣ ಕುಮಾರಾ || ೧||

ಗುರು ಮೊರೆ ಇಡಲೈತಂದೂ | ದಿವಿ |
ಜರರಿಗೆ ಮನಸಿಗೆ ತಂದೂ |
ತರುಣಿಯ ಬಿನ್ನಪ ಶಿವನಲ್ಲಿ ಬಂದು |
ಶರೀರವ ಕರಗಿಸಿದೆಂದೂ || ೨ ||

ಮೀನಿನ ಬಸರೊಳು ಪೊಕ್ಕೆ |
ಆ ಮಾನವರ ಕೈಗೆ ಸಿಕ್ಕೆ |
ದಾನವನನ್ನು ಬಿಸುಟಿದೆ ಕುಕ್ಕೆ |
ಆ ನೊರಣಿಸಲಿಕ್ಕಿದು ಶಕ್ಕೆ || ೩ ||

ಭುವನದ ಅಶೋಕ ಚೂತಾ |
ನವ ಮಲ್ಲಿಕುತ್ಪಲ ಧರಿತಾ |
ಪವನ ಉಡುಗಣಪ ವಸಂತ ಮಿಳಿತಾ |
ಸುವಿಶಾಲ ಅದ್ಭುತ ಚರಿತಾ || ೪ ||

ಅಕಳಂಕನಂಗ ಮಾರಾ |
ಮಕರ ಧ್ವಜ ಶುಕದೇರಾ |
ಅಕುಟಿಲ ಪ್ರಾಣೇಶವಿಠಲನುದಾರಾ |
ಸುಕಥೆ ಅರುಪು ಗಂಭೀರಾ || ೫ ||


SaraNu SaraNu ratinAthA |
suravara aniruddhana tAtA |
karuNA payOnidhi rugmiNI jAtA |
tvaradiM lAlisu mAtA ||

Baratane sanatkumArA |
sudaruSana paramOdArA ||
haranaMdana nata baMdu kumArA |
kara piDi kRuShNa kumArA || 1||

guru more iDalaitaMdU | divi |
jararige manasige taMdU |
taruNiya binnapa Sivanalli baMdu |
SarIrava karagisideMdU || 2 ||

mInina basaroLu pokke |
A mAnavara kaige sikke |
dAnavanannu bisuTide kukke |
A noraNisalikkidu Sakke || 3 ||

Buvanada aSOka cUtA |
nava mallikutpala dharitA |
pavana uDugaNapa vasaMta miLitA |
suviSAla adButa caritA || 4 ||

akaLaMkanaMga mArA |
makara dhvaja SukadErA |
akuTila prANESaviThalanudArA |
sukathe arupu gaMBIrA || 5 ||

Leave a Reply

You might also like

error: Content is protected !!