Nodide venkata ninna

Composer : Shri Gurujagannatha dasaru

ನೋಡಿದೆ ವೇಂಕಟ ನಿನ್ನ [ಪ]

ಕೊಂಡಾಡಿ ಬೇಡಿದೆ ವರವನ್ನ, ಆಹಾ
ರೂಢಿಯೊಳಗೆ ನಿನಗೆ ಈಡುಗಾಣೆನೊ ದೇವ
ನಾಡು ದೈವಗಳೆಲ್ಲ ಒಡಿ ಪೋದವೊ ಸ್ವಾಮಿ [ಅ.ಪ]

ಮಣಿಗಣಮಯದ ಕಿರೀಟ, ಕಪ್ಪು-ವ
ರಣ ಕುಂತಲದ ಲೋಲ್ಯಾಟ, ಯುಗ-ಕ
ರಣ ಕುಂಡಲ ಬಹು ಮಾಟ, ಅರ
ಗಿಣಿ ಶಶಿ ಪೋಲ್ವ ಲಲಾಟ, ಆಹಾ,
ಎಣೆಗಾಣೆ ಕಸ್ತೂರಿ ಮಣಿರ್ದಿಪ ಭ್ರೂಯುಗ
ಕುಣಿಯುತ ಸ್ಮರಧನು ಗಣಿಸದೊ ಎಲೋದೇವಾ (೧)

ವಾರಿಜಯುಗ ಸಮ ನಯನ, ನಾಸ
ಚಾರು ಚಂಪಕ ತೆನೆ ವದನ-ದೊಳು
ತೋರುವ ಸುಂದರ ರದನ, ಪಂಕ್ತಿ
ಸಾರಿದಾಧರ ಬಹು ಅರುಣ, ಆಹಾ,
ಸಾರಸ ಮುಖದೊಳು ಸೇರಿ ಶೋಭಿಪ ಚುಬಕ
ಕೂರುಮ ಯುಗ ಕದಪು ಸಾರ ಕಟಾಕ್ಷವ (೨)

ಕಂಧರಾಂಕಿತ ಸತ್ರಿ ರೇಖಾ, ಕಂಠ
ದಿಂದೊಪ್ಪುದ್-ವರ್ತುಲ ಕ್ರಮುಕ, ಕೊರಳ
ಸುಂದರ ಕೌಸ್ತುಭ ಪದಕ, ಬಹು
ಬಂಧುರ ಚೈತ್ರ ಸುರೇಖ, ಆಹಾ
ಹಿಂದೆ ಸಿಂಹದ ಹೆಗಲಿನಂದ-ದಲೊಪ್ಪಿದ
ಸ್ಕಂಧದಿ ಶೋಭಿಪ ಒಂದು ಸರಿಗೆಯನ್ನು (೩)

ಸ್ವನ್ನ ಏಕಾವಳಿಹಾರಾ, ಬಾ
ವನ್ನ ಪುತ್ಥಳಿ ಸಿರಿಯಾಕಾರ, ಬಹು
ಚನ್ನವಾಗಿಹ ನಾನಾಹಾರ, ಶುಭ್ರ
ವರ್ಣ ಶೋಭಿಪ ಜನಿವಾರ, ಆಹಾ,
ಇನ್ನು ಗುಂಡಿನ ಮ್ಯಾಲೆ, ಘನ್ನ ಜಲಸರಪಳಿ
ಉನ್ನತದಾನಘ್ರ್ಯ ರನ್ನ ಜಯಂತಿಯಾ (೪)

ಶಿರಿವತ್ಸಲಾಂಛನ ಹೃದಯ, ಸುರ
ಕರಿಕರ ತೆರ ಬಾಹು ಶಿರಿಯಾ, ನಾಲ್ಕು
ಕರಗಳೊಪ್ಪವವೀಪರಿಯ, ಮೇಲಿ
ನ್ನೆರಡು ಹಸ್ತದಿ ಶಂಖ ಅರಿಯ, ಆಹಾ,
ವರ ರತ್ನ ಮುದ್ರಿಕೆ ಧರಿಸಿದ ಬೆರಳುಳ್ಳ
ಕರತೋಡ ಕಡಗಕ್ಕೆ ಸರಿಗಾಣೆ ಧರೆಯೊಳು (೫)

ಪರಮ ವೈಕುಂಠದಕಿಂತ ಈ,
ಧರಿತಳವದಿಕವೆನ್ನು ತಾ, ಬಲ
ಕರದಿಂದ ಜನಕೆ ತೋರುತಾ ಬಾಹು
ಎರಡು ಆಜಾನುಪೂರಿತಾ, ಆಹಾ,
ಸ್ವರಣರತ್ನ ಖಚಿತ ವರ ನಾಗ ಭೂಷಣ
ಧರಿಸಿ ಟೊಂಕದಿ ವಾಮಕರವಿಟ್ಟು ಮೆರೆವೋದು (೬)

ಹಸ್ತಯುಗದಿ ತೋಡ್ಯ ಕಡಗ, ಪ್ರ
ಶಸ್ತ ರತ್ನದ್ಹರಳ ಸಂಘ, ರಚಿತ
ಸಿಸ್ತಾದ ಉಂಗುರ ಬೆಡಗ, ಬಹು
ವಿಸ್ತರಾಂತರ ಭುಜಯುಗ, ಆಹಾ,
ಹಸ್ತಿವರದ ಸಮಸ್ತ ಲೋಕಕೆ ಸುಖ,
ವಿಸ್ತಾರ ನೀಡುತ ಸಿಸ್ತಾದ ದೇವನ (೭)

ಉದರ ತ್ರಿರೇಖ ರೋಮಾಳಿ ನಾಭಿ
ಪದುಮ ಶೋಭಿಪ ಗುಂಭ ಸುಳಿ, ಮೇಲೆ
ಉದಯಾರ್ಕ ಪೋಲುವ ಕಲೆ, ಇಂದ
ಸದಮಲಾಂಬರ ಪಟಾವಳಿ, ಆಹಾ,
ಬಿದುರ ಶೋಭಿತ ಮಹಾ ಚದುರದ್-ಒಡ್ಯಾಣವು
ಪದಕ ಮುತ್ತಿನ ತುದಿ ವಿಧವಿಧ ಪೊಳೆವೋದು (೮)

ಕುಂಭಿ ಮಸ್ತಕದೋಲ್ ನಿತಂಬ, ದಿಂದ
ರಂಭೆ ಪೋಲುವ ಊರು ಸ್ತಂಭ, ಇಂದು
ಬಿಂಬವೆನಿಪ ಜಾನು ಡಿಂಬ, ಭಕ್ತ ಕ
ದಂಬ ಮೋಹಿಪ ವಿಡಂಬ, ಆಹಾ
ಅಂಬುಜಾಸನ ಪಿತನ ತುಂಬಿದ ಮೀನ್ಜಂಘ
ನಂಬಿದ ಜನರನ್ನ ಇಂಬಾಗಿ ಸಲಹೋನಾ (೯)

ಪರಡೆರಡು ಮಾಣಿಕ್ಯಾವರಣ, ಪೊಳೆವ
ಕಿರು ಗೆಜ್ಜೆ ನೂಪುರಾಭರಣ, ಇಟ್ಟು
ಮೆರೆವೊ ಗಂಗೆಯ ಪೆತ್ತ ಚರಣ, ಯುಗ
ನಿರುತ ಭಜಿಪರೊಳತಿ ಕರುಣ, ಆಹಾ
ಮರೆಯದೆ ಮಾಡುತ ಪರಿಪರಿ ಸೌಖ್ಯವ
ಕರೆದು ನೀಡುವನಹಿ ಗಿರಿವಾಸ ಶ್ರೀಶನ್ನ (೧೦)

ಪೋತೇಂದು ನಖಯುತ ಬೆರಳ, ಸಾಲು
ದೂತತತಿಗೆ ಸುಖಗಳ-ನಿತ್ತು
ನೀತ-ಜ್ಞಾನ ಭಕ್ತಿ-ಗಳ, ನಿತ್ಯ
ಪ್ರೀತಿ ಪಡೆಯೆ ಮುಕ್ತಿಗಳ, ಆಹಾ
ವಾತ ಗುರುಜಗನ್ನಾಥವಿಠಲನತಿ
ಪ್ರೀತಿಂದ ಪುರುಷಾರ್ಥ ದಾತನಾದುದು ನಿತ್ಯ (೧೧)


nODide vEMkaTa ninna [pa]

koMDADi bEDide varavanna, AhA
rUDhiyoLage ninage IDugANeno dEva
nADu daivagaLella oDi pOdavo svAmi [a.pa]

maNigaNamayada kirITa, kappu-va
raNa kuMtalada lOlyATa, yuga-ka
raNa kuMDala bahu mATa, ara
giNi SaSi pOlva lalATa, AhA,
eNegANe kastUri maNirdipa BrUyuga
kuNiyuta smaradhanu gaNisado elOdEvA (1)

vArijayuga sama nayana, nAsa
cAru caMpaka tene vadana-doLu
tOruva suMdara radana, paMkti
sAridAdhara bahu aruNa, AhA,
sArasa muKadoLu sEri SOBipa cubaka
kUruma yuga kadapu sAra kaTAkShava (2)

kaMdharAMkita satri rEKA, kaMTha
diMdoppud-vartula kramuka, koraLa
suMdara kaustuBa padaka, bahu
baMdhura caitra surEKa, AhA
hiMde siMhada hegalinaMda-daloppida
skaMdhadi SOBipa oMdu sarigeyannu (3)

svanna EkAvaLihArA, bA
vanna putthaLi siriyAkAra, bahu
cannavAgiha nAnAhAra, SuBra
varNa SOBipa janivAra, AhA,
innu guMDina myAle, Ganna jalasarapaLi
unnatadAnaGrya ranna jayaMtiyA (4)

SirivatsalAMCana hRudaya, sura
karikara tera bAhu SiriyA, nAlku
karagaLoppavavIpariya, mEli
nneraDu hastadi SaMKa ariya, AhA,
vara ratna mudrike dharisida beraLuLLa
karatODa kaDagakke sarigANe dhareyoLu (5)

parama vaikuMThadakiMta I,
dharitaLavadikavennu tA, bala
karadiMda janake tOrutA bAhu
eraDu AjAnupUritA, AhA,
svaraNaratna Kacita vara nAga BUShaNa
dharisi ToMkadi vAmakaraviTTu merevOdu (6)

hastayugadi tODya kaDaga, pra
Sasta ratnad~haraLa saMGa, racita
sistAda uMgura beDaga, bahu
vistarAMtara Bujayuga, AhA,
hastivarada samasta lOkake suKa,
vistAra nIDuta sistAda dEvana (7)

udara trirEKa rOmALi nABi
paduma SOBipa guMBa suLi, mEle
udayArka pOluva kale, iMda
sadamalAMbara paTAvaLi, AhA,
bidura SOBita mahA cadurad-oDyANavu
padaka muttina tudi vidhavidha poLevOdu (8)

kuMBi mastakadOl nitaMba, diMda
raMBe pOluva Uru staMBa, iMdu
biMbavenipa jAnu DiMba, Bakta ka
daMba mOhipa viDaMba, AhA
aMbujAsana pitana tuMbida mInjaMGa
naMbida janaranna iMbAgi salahOnA (9)

paraDeraDu mANikyAvaraNa, poLeva
kiru gejje nUpurABaraNa, iTTu
merevo gaMgeya petta caraNa, yuga
niruta BajiparoLati karuNa, AhA
mareyade mADuta paripari sauKyava
karedu nIDuvanahi girivAsa SrISanna (10)

pOtEMdu naKayuta beraLa, sAlu
dUtatatige suKagaLa-nittu
nIta-j~jAna Bakti-gaLa, nitya
prIti paDeye muktigaLa, AhA
vAta gurujagannAthaviThalanati
prItiMda puruShArtha dAtanAdudu nitya (11)

Leave a Reply

You might also like

error: Content is protected !!