Bharati Palisu Nitya

Composer : Shri Gurujagannatha dasaru

By Smt.Shubhalakshmi Rao

ಭಾರತಿ ಪಾಲಿಸು ನಿತ್ಯ [ಪ]

ಭಾರತಿ ಭಾಸ್ಕರಕಾಂತೆ ನಿನ್ನ
ಸಾರುವೆ ಸತತ ನಿಶ್ಚಿಂತೆ , ಆಹಾ,
ವಾರಿಜ ಸಮಪಾದ ತೋರಿಸು ಮಮ ಸುಹೃನ್ –
-ನೀರಜದೊಳು ನಿತ್ಯ ಗಾರುಮಾಡದೆ ಜನನಿ [ಅ.ಪ]

ಹರಿಯ ಪಟ್ಟದ ನಿಜರಾಣಿ ಎನಗೆ
ಹರಿಯ ತೋರಿಸೆ ಹೇ ಕಲ್ಯಾಣಿ, ನಿನಗೆ
ಶರಣೆಂಬೆ ಕಾಲಾಹಿವೇಣಿ, ಪರಮ
ಕರುಣಿಯೆ ಕೋಕಿಲವಾಣಿ, ಆಹಾ,
ಹರಿಹರಾದ್ಯನಿಮಿಷ ಕರಕಮಲ ಪೂಜಿತೆ
ವರ ಭಾಗವತರಗ್ರೇಸಳೆಂದು ನಮಿಸುವೆ [೧]

ಮೂರೇಳು ತತ್ತ್ವಾಭಿಮಾನಿ ಎನಿಸಿ,
ಮೂರಾರು ಭಕುತಿಯಿಂದಲಿ ನೀ ಸತತ,
ಮೂರು ಜೀವರೊಳು ಪ್ರೇರಣಿಯಾಗಿ,
ಮೂರೊಂದು ಮೊಗನ ಕಲ್ಯಾಣಿ, ಆಹಾ,
ಮೂರು ಬಗೆಯ ಜನಕೆ ಮೂರು ವಿಧದಿ ಗತಿ
ಮೂರು ಕಾಲಕೆ ಇತ್ತು ಮೂರು ಮಾಡುವಿ ದೇವಿ [೨]

ಮಾತರಿಶ್ವನ ಪಾದಕಮಲ ಯುಗಕೆ,
ನೀತ ಷಟ್ ಪದಳೆ ನಿರ್ಮಲ ಮನಸು,
ಆತುರದಲಿ ಮಾಡು ವಿಮಲೆ ನಮಿಪೆ,
ಕಾತರ ಭವ ಶ್ರಮ ಶಮಲಾ, ಆಹಾ,
ಜಾತರೂಪೋದರ ತಾತ ಶ್ರೀ ಗುರುಜಗ –
ನ್ನಾಥ ವಿಠ್ಠಲಗೆ ನೀ ದೂತನೆನಿಸು ಎನ್ನ [೩]


BArati pAlisu nitya [pa]

BArati BAskarakAMte ninna
sAruve satata niSciMte , AhA,
vArija samapAda tOrisu mama suhRun –
-nIrajadoLu nitya gArumADade janani [a.pa]

hariya paTTada nijarANi enage
hariya tOrise hE kalyANi, ninage
SaraNeMbe kAlAhivENi, parama
karuNiye kOkilavANi, AhA,
hariharAdyanimiSha karakamala pUjite
vara BAgavataragrEsaLeMdu namisuve [1]

mUrELu tattvABimAni enisi,
mUrAru BakutiyiMdali nI satata,
mUru jIvaroLu prEraNiyAgi,
mUroMdu mogana kalyANi, AhA,
mUru bageya janake mUru vidhadi gati
mUru kAlake ittu mUru mADuvi dEvi [2]

mAtariSvana pAdakamala yugake,
nIta ShaT padaLe nirmala manasu,
Aturadali mADu vimale namipe,
kAtara Bava Srama SamalA, AhA,
jAtarUpOdara tAta SrI gurujaga –
nnAtha viThThalage nI dUtanenisu enna [3]

Leave a Reply

You might also like

error: Content is protected !!