Composer : Shri Jagannatha dasaru
ಶ್ರೀ ಶ್ರೀನಿವಾಸ ಸ್ತೋತ್ರ
ಶ್ರೀನಿವಾಸನ ಪೋಲ್ವ ದೀನವತ್ಸಲರುಂಟೆ
ದಾನಿಗಳುಂಟೆ ಜಗದೊಳು | ಜಗದೊಳು ಇಹರೆಂಬ
ಜ್ಞಾನಿಗಳುಂಟೆ ಅನುಗಾಲ || ೧ || || ೨೧೭ ||
ಏನು ಕರುಣಾನಿಧಿಯೊ ಶ್ರೀನಿತಂಬಿನಿರಮಣ
ತಾ ನಮ್ಮನಗಲಿ ಸೈರಿ-ಸ | ಸೈರಿಸದ ಕರುಣಿಯ
ನಾನೆಂತು ತುತಿಸಿ ಹಿಗ್ಗ-ಲಿ || ೨ || || ೨೧೮ ||
ಶ್ರೀನಾಥ ನಿನ್ನವರ ನಾನಾಪರಾಧಗಳ
ನೀನೆಣಿಸದವರ ಸಲಹಿದಿ | ಸಲಹಿದಿ ಸರ್ವಜ್ಞ
ಏನೆಂಬೆ ನಿನ್ನ ಕರುಣಕ್ಕೆ || ೩ || || ೨೧೯ ||
ಅಚ್ಯುತನೆ ನಿನ್ನಂಥ ಹುಚ್ಚುದೊರೆಗಳ ಕಾಣೆ
ಕಚ್ಚಿ ಬೈದೊದ್ದ ಭಕತರ | ಭಕತರಪರಾಧಗಳ
ತುಚ್ಛಗೈದವರ ಸಲಹಿದಿ || ೪ || || ೨೨೦ ||
ತಂದೆ ತಾಯಿಯು ಭ್ರಾತೃ ಬಂಧು ಸಖ ಗುರು ಪುತ್ರ
ಎಂದೆಂದು ನೀನೇ ಗತಿ ಗೋತ್ರ | ಗತಿ ಗೋತ್ರ ಇಹಪರದಿ
ಇಂದಿರಾರಾಧ್ಯ ಸಲಹೆಮ್ಮ || ೫ || || ೨೨೧ ||
ಎನ್ನ ಪೋಲುವ ಭಕ್ತರನ್ನಂತ ನಿನಗಿಹರು
ನಿನ್ನಂಥ ಸ್ವಾಮಿ ಎನಗಿಲ್ಲ | ಎನಗಿಲ್ಲವದರಿಂದ
ಬಿನ್ನೈಪೆನಿನ್ನೂ ಸಲಹೆಂದು || ೬ || || ೨೨೨ ||
ಇಂದಿರಾಪತಿ ನೀನು ಮಂದಭಾಗ್ಯನು ನಾನು
ವಂದ್ಯನೋ ನೀನು ಸುರರಿಂದ | ಸುರರಿಂದ ನರರಿಂದ
ನಿಂದ್ಯನೋ ನಾನು ಜಗದೊಳು || ೭ || || ೨೨೩ ||
ಶರಣು ಶರಣರ ದೇವ ಶರಣು ಸುರವರಮಾನ್ಯ
ಶರಣು ಶಶಿಕೋಟಿಲಾವಣ್ಯ | ಲಾವಣ್ಯಮೂರುತಿಯೆ
ಶರಣೆಂಬೆ ಸ್ವಾಮಿ ಕರುಣಿಸೋ || ೮ || || ೨೨೪ ||
ಎನ್ನೊಳಿಪ್ಪ ಮಹಾತ್ಮ ಅನ್ಯರೊಳು ನೀನಿದ್ದು
ಅನ್ಯೋನ್ಯವಾಗಿ ಮಮತೆಯ | ಮಮತೆಯ ಕಲ್ಪಿಸಿ
ನಿನ್ನೊಳಗೆ ನೀನೇ ರಮಿಸುವಿ || ೯ || || ೨೨೫ ||
ಪತಿತ ನಾನಾದರೂ ಪತಿತಪಾವನ ನೀನು
ರತಿನಾಥಜನಕ ನಗಪಾಣಿ | ನಗಪಾಣಿ ನೀನಿರಲು
ಇತರ ಚಿಂತ್ಯಾಕೋ ಎನಗಿನ್ನು || ೧೦ || || ೨೨೬ ||
ನಡೆನುಡಿಗಳಪರಾಧ ಒಡೆಯ ನೀನೆಣಿಸಿದರೆ
ಬಡವ ನಾನೆಂತು ಬದುಕ-ಲೋ | ಬದುಕಲೋ ಕರುಣಾಳು
ಕಡೆಬೀಳ್ವದೆಂತೋ ಭವದಿಂದ || ೧೧ || || ೨೨೭ ||
ಏಸೇಸು ಜನ್ಮದಲಿ ದಾಸ ನಾ ನಿನಗಯ್ಯ
ಈಶ ನೀನೆಂಬೋ ನುಡಿ ಸಿದ್ಧ | ನುಡಿ ಸಿದ್ಧವಾಗಿರಲು –
ದಾಸೀನ ಮಾಡ-ಲುಚಿತಲ್ಲ || ೧೨ || || ೨೨೮ ||
ಆವ ಯೋನಿಯೊಳಿರಿಸು ಆವ ಲೋಕದೊಳಿರಿಸು
ಆವಾಗ ನಿನ್ನ ನೆನೆವಂತೆ | ನೆನೆವಂತೆ ಕರುಣಿಸೋ
ದೇವಕೀಕಂದ ದಯದಿಂದ || ೧೩ || || ೨೨೯ ||
ಶಿಷ್ಟನೆಂದೆನಿಸೆನ್ನ ಭ್ರಷ್ಟನೆಂದೆನಿಸು ಸ –
ರ್ವೇಷ್ಟಮೂರುತಿಯೇ ಜನರಿಂದ | ಜನರಿಂದ ನುಡಿಸಿದ್ದು
ಇಷ್ಟವೇ ಕಣೋ ಎನಗಿನ್ನು || ೧೪ || || ೨೩೦ ||
ಶರಣಪಾಲಕನೆಂಬ ಬಿರುದಿದ್ದಮೇಲಿನ್ನು
ಪೊರೆಯದಿರಲೆನ್ನ ನಗರೇನೊ | ನಗರೇನೊ ಮೂರ್ಲೋಕ –
ದರಸ ನೀನಾಗಿ ಇರುತಿರ್ದು || ೧೫ || || ೨೩೧ ||
ಶ್ರೀಯರಸನೆ ನಿನ್ನ ಮಾಯಕ್ಕೆ ಎಣೆಗಾಣೆ
ಹೇಯವಿಷಯಗಳ ಜನರಿಗೆ | ಜನರಿಗುಣಿಸಿ ಉಪಾ –
ದೇಯವೆಂತೆಂದು ಸುಖಿಸುವಿ || ೧೬ || || ೨೩೨ ||
ಸರ್ವಸ್ವತಂತ್ರ ನೀನೋರ್ವನಲ್ಲದೆ ಮ –
ತ್ತೋರ್ವನಿನ್ನುಂಟೇ ಜಗದೊಳು | ಜಗದೊಳಗಜಾದಿಗಳು
ದರ್ವಿಯಂದದಲಿ ಚರಿಸೋರು || ೧೭ || || ೨೩೩ ||
ಏನು ಕೊಟ್ಟರು ಕೊಡೋ ಶ್ರೀನಿವಾಸನೆ ನಿನ್ನ –
ಧೀನದವನಯ್ಯ ಎಂದೆಂದು | ಎಂದೆಂದು ಸುಖದುಃಖ –
ಮಾನಾದಿಗಳಿಗೆ ಪ್ರಭು ನೀನು || ೧೮ || || ೨೩೪ ||
ಮುನ್ನಾವ ಜನ್ಮದ ಪುಣ್ಯ ತಾ ಫಲಿಸಿತೋ
ನಿನ್ನಂಥ ಸ್ವಾಮಿ ಎನಗಾದಿ | ಎನಗಾದಿ ಅದರಿಂದ
ಧನ್ಯರೋ ನಮ್ಮ ಹಿರಿಯರು || ೧೯ || || ೨೩೫ ||
ಮನದಲ್ಲಿ ಹರಿಯ ಚಿಂತನೆ ಉಳ್ಳ ನರನಿಗೆ
ಮನೆಯಾದರೇನು ವನವೇನು | ವನವೇನು ಸತತ ದು –
ರ್ಜನರ ಸಂಗದೊಳು ಇರಲೇನು || ೨೦ || || ೨೩೬ ||
ಬಿಂಬ ನೀನೆನಗೆ ಪ್ರತಿಬಿಂಬ ನಾ ನಿನಗೆ ಕ್ಷೀ –
ರಾಂಬುಧಿ-ಶಾಯಿ ನರಸಿಂಹ | ನರಸಿಂಹ ನೀನಿರಲು
ಹಂಬಲಿಪುದ್ಯಾಕೆ ಜಗದೊಳು || ೨೧ || || ೨೩೭ ||
ಏನು ಮಾಡುವ ಕರ್ಮ ನೀನೆ ಮಾಡಿಪೆ ಎಂಬ
ಜ್ಞಾನವೇ ಎನಗೆ ಜಿತವಾಗಿ | ಜಿತವಾಗಿ ಇರಲಿ ಮ –
ತ್ತೇನು ನಾನೊಲ್ಲೆ ನಿನ್ನಾಣೆ || ೨೨ || || ೨೩೮ ||
ಅಪರಾಧಿ ನಾನೆಂಬುದುಪಚಾರ ಮಾತ್ರ ನಿನ –
ಗಪರಾಧವೆಂಬೋದಿಳೆಯೊಳು | ಇಳೆಯೊಳು ಇನ್ನುಂಟೆ
ಅಪರಾಧಿ ಎಂಬೋದಪರಾಧ || ೨೩ || || ೨೩೯ ||
ಎಲ್ಲಿ ಈಶತ್ವ ಮತ್ತಲ್ಲಿಹುದು ಕರ್ತೃತ್ವ
ಹುಲ್ಲುಮನುಜರಿಗೆ ಕರ್ತೃತ್ವ | ಕರ್ತೃತ್ವವೆಂಬುದು
ಎಲ್ಲಿಹುದು ಬರಿದೆ ಅಪವಾದ || ೨೪ || || ೨೪೦ ||
ಹಗಲು ಇರಳು ಸ್ಮರಣೆಯೊದಗುತಿರೆ ಜಿಹ್ವೆಯೊಳು
ಬಗೆಯಲಿನ್ನುಂಟೆ ಸಾಧನಗಳು | ಸಾಧನಗಳೇತಕ್ಕೆ
ಜಗದೊಳಗೆ ಇನ್ನು ಅವರಿಗೆ || ೨೫ || || ೨೪೧ ||
ನಿನ್ನ ವಿಸ್ಮೃತಿಕೊಡುವ ಪುಣ್ಯಕರ್ಮಗಳೊಲ್ಲೆ
ನಿನ್ನನೇ ನೆನೆವ ಮಹಪಾಪ | ಮಹಪಾಪ ಕರ್ಮಗಳು
ಜನ್ಮಜನ್ಮದಲಿ ಇರಲಯ್ಯ || ೨೬ || || ೨೪೨ ||
ಗುಣಕಾಲಕರ್ಮಗಳ ಮನೆಮಾಡಿ ಜೀವರಿಗೆ
ಉಣಿಸುವಿ ನೀನೇ ಸುಖದುಃಖ | ಸುಖದುಃಖಮಿಶ್ರಫಲ
ಉಣದೆ ಸರ್ವತ್ರ ಬೆಳಗುವಿ || ೨೭ || || ೨೪೩ ||
ನಿನಗಸಮ್ಮತವಾದ ಅನಿಮಿಷೇಶನ ಲೋಕ
ಎನಗ್ಹತ್ತದಯ್ಯ ಯದುನಾಥ | ಯದುನಾಥ ನೀನಿತ್ತ
ಘನನರಕವೆನಗೆ ಪುರುಷಾರ್ಥ || ೨೮ || || ೨೪೪ ||
ನೀನಿಲ್ಲದಾಸ್ಥಾನ ಈ ನಳಿನಜಾಂಡದೊಳು
ನಾನೆಲ್ಲಿ ಕಾಣೆ ನರಸಿಂಹ | ನರಸಿಂಹ ನರಕ ಬಂ –
ದೇನು ಮಾಡುವುದೋ ಎನಗಿನ್ನು || ೨೯ || || ೨೪೫ ||
ದ್ರುಹಿಣಪಿತ ನಿನ್ನವರ ಸಹವಾಸ ನಿನ್ನನು –
ಗ್ರಹವೆಂದು ತಿಳಿವೆ ಅನುಗಾಲ | ಅನುಗಾಲ ಸುಖವೀವ
ಮಹರಾದಿಲೋಕ ನಾನೊಲ್ಲೆ || ೩೦ || || ೨೪೬ ||
ಎನಗೆ ದಾತನು ನೀನು ನಿನಗೆ ದೂತನು ನಾನು
ಇನಿತಿದ್ದ ಬಳಿಕ ಅಧಮರ | ಅಧಮ ಮಾನವರನ್ನು
ಅನುಸರಿಸಲ್ಯಾಕೋ ನಾನಿನ್ನು || ೩೧ || || ೨೪೭ ||
ಪೂಜ್ಯಪೂಜಕ ನೀನು ಪೂಜೋಪಕರಣಸ್ಥ
ಮೂಜಗತ್ಪತಿಯೆ ನೀನಾಗಿ | ನೀನಾಗಿ ಭಕತರಿಗೆ
ನೈಜಸುಖವ್ಯಕ್ತಿ ಕೊಡುತಿರ್ಪೆ || ೩೨ || || ೨೪೮ ||
ಸನ್ನಿಧಾನವು ನಿನ್ನದೆನ್ನಲ್ಲಿ ಇರಲಾಗಿ
ಮನ್ನಿಸುತ್ತಿಹರು ಜನರೆಲ್ಲ | ಜನರೆಲ್ಲ ನಿನ್ನ ಕಾ –
ರುಣ್ಯ ಕಾರಣವೋ ಕಮಲಾಕ್ಷ || ೩೩ || || ೨೪೯ ||
ಏಸು ಬಗೆಯಾದರೂ ನೀ ಸಲಹಬೇಕೆನ್ನ
ವಾಸವವಂದ್ಯ ವರದೇಶ | ವರದೇಶ ನಿನ್ನವರ
ದಾಸ ನಾನೆಂದು ದಯದಿಂದ || ೩೪ || || ೨೫೦ ||
ಜ್ಞಾನಗಮ್ಯನೆ ಕೇಳು ನೀನರಿಯದಪರಾಧ
ನಾನೊಮ್ಮೆ ಮಾಡೆ ನಳಿನಾಕ್ಷ | ನಳಿನಾಕ್ಷ ಕಾಯೊ ಕೊ –
ಲ್ಲೇನನ್ನ ಮಾಡೋ ಶರಣನ್ನ || ೩೫ || || ೨೫೧ ||
ವಿಧಿನಿಷೇಧಗಳೆಂಬುದಧಮಾಧಿಕಾರಿಗ –
ಲ್ಲದೆ ನಿನ್ನ ನಾಮ ಸರ್ವತ್ರ | ಸರ್ವತ್ರ ಚಿಂತಿಪ
ಬುಧರಿಗಿನ್ನುಂಟೆ ಜಗದೊಳು || ೩೬ || || ೨೫೨ ||
ಜಲದೊಳಗೆ ಮಿಂದು ನಿರ್ಮಲರಾದೆವೆಂದು ತ –
ಮ್ಮೊಳು ತಾವೆ ಹಿಗ್ಗಿ ಸುಖಿಸೋರು | ಸುಖಿಸೋರು ಪರಮ ಮಂ –
ಗಳಮೂರ್ತಿ ನಿನ್ನ ನೆನೆಯದೆ || ೩೭ || || ೨೫೩ ||
ಜಡಭೂತಜಲ ಜನರ ಮಡಿಮಾಡಲಾಪವೆ
ಜಡಧಿಮಂದಿರನ ಶುಭನಾಮ | ಶುಭನಾಮ ಮೈಲಿಗೆಯ
ಬಿಡಿಸಿ ಮಂಗಳವ ಕೊಡದೇನೋ || ೩೮ || || ೨೫೪ ||
ಓಡಿಹೋಗುವ ಮಡಿಯ ಮಾಡಿ ದಣಿಯಲುಬೇಡ
ನೋಡು ಸರ್ವತ್ರ ಹರಿರೂಪ | ಹರಿರೂಪ ನೋಡಿ ಕೊಂ –
ಡಾಡಿ ಸುಖಿಯಾಗೋ ಮನವುಬ್ಬಿ || ೩೯ || || ೨೫೫ ||
ಮೀನುಮೊಸಳೆಗಳ ತಪ್ಪೇನೊ ಜಲದೊಳಗಿಹವು
ಸ್ನಾನಫಲವ್ಯಾಕೆ ಬರಲಿಲ್ಲ | ಬರಲಿಲ್ಲ ಜಲಚರ –
ಪ್ರಾಣಿಗಿನ್ನಜ್ಞರಿಗೆ ಕೊರೆತೇನೋ || ೪೦ || || ೨೫೬ ||
ಮನವೆ ಆಲೋಚಿಸಿಕೊ ನಿನಗಿದ್ದ ಚಿಂತೆ ನ –
ಮ್ಮನಿರುದ್ಧಗಿಲ್ಲೇ ಈ ಅನುಗಾಲ | ಅನುಗಾಲ ಸಲಹುವ
ಬಿನಗು ಮಾನವರ ಬಿಡು ಕಂಡ್ಯ || ೪೧ || || ೨೫೭ ||
ಭಂಡಮನವೆ ಕೇಳು ಕಂಡಕಂಡವರಿಗೆ
ಅಂಡಲೆದರೇನೋ ಪುರುಷಾರ್ಥ | ಪುರುಷಾರ್ಥ ಸ್ವಾಮಿಪದ –
ಪುಂಡರೀಕವನೇ ನೆರನಂಬು || ೪೨ || || ೨೫೮ ||
ಅಶನ ವಸನಗಳೀವ ವಸುದೇವಸುತನಿರಲು
ಹುಸಿಯಾಗಿ ಬದುಕೋ ನರರಿಗೆ | ನರರಿಗಾಲ್ಪರಿದರೆ
ಹಸಿವೆಯಡಗುವುದೇ ಎಲೆ ಜೀವ || ೪೩ || || ೨೫೯ ||
ಹಿಂದೆ ಜನ್ಮಾಂತರದಿ ತಂದುಕೊಟ್ಟವರಾರು
ಇಂದು ಮುಂದೀವ ಪ್ರಭುವಾರು | ಪ್ರಭುವಾರು ಎಲೆ ಮನವೆ
ಮಂದಮತಿಯಾಗಿ ಕೆಡಬೇಡ || ೪೪ || || ೨೬೦ ||
ಅನ್ನವಿಲ್ಲೆಂದು ನೀನನ್ಯರಿಗೆ ಹಲುಬದಿರು
ಅನ್ನಮಯನಾದ ಅನಿರುದ್ಧ | ಅನಿರುದ್ಧ ಜಗಕೆ ದಿ –
ವ್ಯಾನ್ನ ತಾ ಕೊಟ್ಟು ಸಲಹುವ || ೪೫ || || ೨೬೧ ||
ಏಸೇಸು ಜನ್ಮದಲಿ ಬೇಸರಾಗದೆ ಜೀವ –
ರಾಶಿಗಳಿಗನ್ನ ಕೊಡುತಿರ್ಪ | ಕೊಡುತಿರ್ಪ ನಮ್ಮನು ಉ –
ದಾಸೀನಮಾಡಿ ಬಿಡುವೋನೆ || ೪೬ || || ೨೬೨ ||
ಅನ್ನದನ್ನಾದ ಸಪ್ತನ್ನ ಕಲ್ಪಕನಾಗಿ
ಅನ್ನಮಯರೂಪೀ ಅನಿರುದ್ಧ | ಅನಿರುದ್ಧ ಜಗಕೆ ದಿ –
ವ್ಯಾನ್ನಗಳ ಕೊಟ್ಟು ಸಲಹುವ || ೪೭ || || ೨೬೩ ||
ಪ್ರಾಣಪಂಚಕರೂಪ ಪ್ರಾಣಾಂತರಾತ್ಮಕನು
ಪ್ರಾಣಿಗಳೊಳಗಿದ್ದು ಪ್ರತಿದಿನ | ಪ್ರತಿದಿನವು ಪ್ರದ್ಯುಮ್ನ
ಪ್ರಾಣಮಯನೆಂದು ಕರೆಸುವ || ೪೮ || || ೨೬೪ ||
ಎಂತೆಂತು ನೀ ನಡೆಸಿದಂತೆ ನಾ ನಡೆವೆನೋ
ಎಂತು ನೀ ನುಡಿಸೆ ನುಡಿವೆನು | ನುಡಿವೆನಲ್ಲದೆ ರಮಾ –
ಕಾಂತ ಎನ್ನಲ್ಲಿ ತಪ್ಪೇನೋ || ೪೯ || || ೨೬೫ ||
ನಿಲ್ಲಲು ನಿಲ್ಲುವೆನು ಮಲಗಿದರೆ ಮಲಗುವೆನು
ತಿಳಿದು ತಿಳಿಸಿದರೆ ತಿಳಿವೆನು | ತಿಳಿವೆನೊ ದೇಹದ
ನೆಳಲಂತೆ ಇರ್ಪೆ ನಿನಗಾನು || ೫೦ || || ೨೬೬ ||
ಸರ್ವಜ್ಞ ಸರ್ವೇಶ ಸರ್ವಾಂತರಾತ್ಮಕನೆ
ಶರ್ವಾದಿವಂದ್ಯ ಶಿವರೂಪಿ | ಶಿವರೂಪಿ ಸಜ್ಜನರ
ಸರ್ವಕಾಲದಲಿ ಸಲಹಯ್ಯ || ೫೧ || || ೨೬೭ ||
ಉಂಡು ಉಟ್ಟದ್ದೆಲ್ಲ ಖಂಡನ ಮಖವೆನ್ನಿ
ಕಂಡದ್ದು ಹರಿಯ ಪ್ರತಿಮೆನ್ನಿ | ಪ್ರತಿಮೆನ್ನಿ ಮೂರ್ಜಗಕೆ
ಪಾಂಡವಪ್ರಿಯನೇ ದೊರೆಯೆನ್ನಿ || ೫೨ || || ೨೬೮ ||
ಮನವಚನಕಾಯದಿಂದನುಭವಿಪ ವಿಷಯಗಳ
ನಿನಗರ್ಪಿಸುವೆನೋ ನಿಖಿಳೇಶ | ನಿಖಿಳೇಶ ನಿನ್ನ ಪಾ –
ವನಮೂರ್ತಿ ತೋರಿ ಸುಖವೀಯೋ || ೫೩ || || ೨೬೯ ||
ನಿಖಿಳಾಗಮೈಕವೇದ್ಯಕಳಂಕ ಸುಚರಿತ್ರ
ವಿಖನಸಾರಾಧ್ಯ ಸುಖರೂಪ | ಸುಖರೂಪ ನಿನ್ನಂಥ
ಸಖನಿರಲು ದುರಿತ ಬರಲುಂಟೆ || ೫೪ || || ೨೭೦ ||
ಭೋಜ್ಯವಸ್ತುಗಳಲ್ಲಿ ಭೋಜ್ಯನಾಮಕನಾಗಿ
ತಜ್ಜನ್ಯರಸವ ಹರಿ ತಾನು | ಹರಿ ತಾನು ಉಂಡುಣಿಸಿ
ನಿರ್ಜರೋತ್ತಂಸ ಸುಖವೀವ || ೫೫ || || ೨೭೧ ||
ಭೂಮಂಡಲವೆ ಪೀಠ ವ್ಯೋಮಮಂಡಲ ಛತ್ರ
ಸೋಮಸೂರ್ಯರೇ ಮಹದೀಪ | ಮಹದೀಪ ನಕ್ಷತ್ರ –
ಸ್ತೋಮಗಳೆ ನಿನಗೆ-ಉಪದೀಪ || ೫೬ || || ೨೭೨ ||
ಮಳೆಯೆ ಮಜ್ಜನವು ದಿಗ್ವಲಯಂಗಳೇ ವಸನ
ಬೆಳೆವ ಬೆಳಸುಗಳೇ ನೈವೇದ್ಯ | ನೈವೇದ್ಯ ಜನರ ಕಂ –
ಗಳ ಕಾಂತಿ ನಿನಗೆ ಆರಾರ್ತಿ || ೫೭ || || ೨೭೩ ||
ತರುಗಳೇ ಚಾಮರಗಳಾಗಿರ್ಪವು ನಿನಗೆ
ಶರಧಿಗರ್ಜನೆಯೇ ಮಹವಾದ್ಯ | ಮಹವಾದ್ಯ ಜೀವರ –
ಸ್ವರಗಳೇ ನಿನಗೆ ಸಂಗೀತ || ೫೮ || || ೨೭೪ ||
ಪಾತಾಳ ಪಾದುಕ ವಿಧಾತೃಲೋಕವೆ ಮುಕುಟ
ಶ್ವೇತದ್ವೀಪವೆ ನಿನಗೆ ಒಡ್ಯಾಣ | ಒಡ್ಯಾಣ ವೈಕುಂಠ
ಆತಪತ್ರವೇ ನಿನಗೀವೆ || ೫೯ || || ೨೭೫ ||
ನಡೆವುದೇ ಹರಿಯಾತ್ರೆ ನುಡಿವುದೇ ಹರಿನಾಮ
ಕುಡಿವ ನೀರುಗಳೇ ಅಭಿಷೇಕ | ಅಭಿಷೇಕ ದಿನದಿನದಿ
ಒಡಲಿಗುಂಬನ್ನ ನೈವೇದ್ಯ || ೬೦ || || ೨೭೬ ||
ವೇದಶಾಸ್ತ್ರಗಳು ನಿನಗಾದರುಪಚಾರವು
ಹಾದಿ ನಡೆಯುವುದೇ ನರ್ತನ | ನರ್ತನವು ಸಜ್ಜನರ
ವಾದಸಂವಾದಗಳು ಉಯ್ಯಾಲೆ || ೬೧ || || ೨೭೭ ||
ನಕ್ಷತ್ರಮಂಡಲವು ಲಕ್ಷದೀಪವು ನಿನಗೆ
ಋಕ್ಷೇಶತರಣಿ ಆಕಾಶ | ಆಕಾಶದೀಪಗಳು
ವೃಕ್ಷವಲ್ಲಿಜವೇ ಫಲಪುಷ್ಪ || ೬೨ || || ೨೭೮ ||
ಕುಂಡವೇ ಗೋಳಕವು ಕೆಂಡವೇ ಕರಣಗಳು
ಉಂಡುಡುವ ವಿಷಯ ಅವದಾನ | ಅವದಾನ ಕೈಗೊಂಡು
ಪುಂಡರೀಕಾಕ್ಷ ದಯವಾಗೋ || ೬೩ || || ೨೭೯ ||
ಗೋಳಕಗಳೆಲ್ಲ ನಿನಗಾಲಯವು ಕರಣಗಳ –
ಸಾಲುಗಳೆ ದೀಪ ತದ್ಭೋಗ್ಯ | ತದ್ಭೋಗ್ಯ ವಿಷಯಗಳ
ಮೇಳನವೆ ನಿನಗೆ ಮಹಪೂಜೆ || ೬೪ || || ೨೮೦ ||
ತತ್ತತ್ಪದಾರ್ಥದಲಿ ತತ್ತದಾಕಾರನಾ –
ಗೆತ್ತ ನೋಡಿದರು ಇರುತಿರ್ಪ | ಇರುತಿರ್ಪ ಹರಿಗೆ ನಾ
ಭೃತ್ಯನೆಂಬುವುದೇ ಬಲುಧರ್ಮ || ೬೫ || || ೨೮೧ ||
ಸದಸದ್ವಿಲಕ್ಷಣನೆ ಅಧಿಭೂತ ಅಧ್ಯಾತ್ಮ-
ಅಧಿದೈವದರಸ ರಸರೂಪೀ | ರಸರೂಪನಾಗಿ ಸ –
ನ್ಮುದ ತುಷ್ಟಿ ಪುಷ್ಟಿ ಕೊಡುತಿರ್ಪೆ || ೬೬ || || ೨೮೨ ||
ಮನದೊಳಗೆ ನೀನಿದ್ದು ಮನವೆಂದೆನಿಸಿಕೊಂಡು
ಮನದ ವೃತ್ತಿಗಳನ್ನು ಸೃಜಿಸುವಿ | ಸೃಜಿಸಿ ಸಂಕರ್ಷಣನೆ
ನಿನ್ನ ಕರುಣಕ್ಕೆ ಎಣೆಗಾಣೆ || ೬೭ || || ೨೮೩ ||
ಅಧಿಭೂತ ಅಧ್ಯಾತ್ಮ ಅಧಿದೈವತಾಪ ಕಳೆ –
ವುದು ನಿನ್ನ ದಿವ್ಯತ್ರಯನಾಮ | ತ್ರಯನಾಮ ಸರ್ವದಾ
ಒದಗಲೋ ಬಂದು ವದನಕ್ಕೆ || ೬೮ || || ೨೮೪ ||
ನಾನಾ ಪದಾರ್ಥದಲಿ ನಾನಾ ಪ್ರಕಾರದಲಿ
ನೀನಿದ್ದು ಜಗವ ನಡೆಸುವಿ | ನಡೆಸುವಿ ಹರಿ ನೀನೆ
ನಾನೆಂಬ ನರಗೆ ಗತಿಯುಂಟೆ || ೬೯ || || ೨೮೫ ||
ಸೇವ್ಯಸೇವಕರಲ್ಲಿ ಸೇವ್ಯ ಸೇವಕನಾಗಿ
ಅವ್ಯಕ್ತನಾಗಿ ನೆಲೆಸಿರ್ಪೆ | ನೆಲೆಸಿರ್ಪೆ ಸರ್ವದಾ
ಸೇವ್ಯ ನಾ ನಿನಗೆ ಸರಿಗಾಣೆ || ೭೦ || || ೨೮೬ ||
ಮರುಳು ಮನವೇ ಕೇಳು ಮರೆವರೇ ಹರಿನಾಮ
ಕರುಣಾಬ್ಧಿ ಕೃಷ್ಣ ಅನುಗಾಲ | ಅನುಗಾಲ ಸಲಹುವನು
ಬರಿದೆ ಚಿಂತ್ಯಾಕೋ ನಿನಗಿನ್ನು || ೭೧ || || ೨೮೭ ||
ತಂದೆ ಮಕ್ಕಳನು ಪೊರೆವಂದದಲಿ ಶ್ರೀಕಾಂತ
ಎಂದೆಂದು ತನ್ನ ಭಕತರ | ಭಕತರ ಸಲಹುವ
ಸಂದೇಹವ್ಯಾಕೋ ನಿನಗಿನ್ನು || ೭೨ || || ೨೮೮ ||
ಅಂಬುಜಭವಾಂಡದೊಳು ಒಂಬತ್ತು ವಿಧವಿಪ್ಪ
ಅಂಬುಜಾಂಬಕನ ವಿಭೂತಿ | ವಿಭೂತಿರೂಪವನು
ಕಾಂಬುವನೆ ಯೋಗೀ ಜಗದೊಳು || ೭೩ || || ೨೮೯ ||
ಕರ್ತೃಕರ್ಮಗಳಲ್ಲಿ ಕಾರಣ ಕ್ರಿಯೆಗಳಲಿ
ನಿತ್ಯ ನೀನಿದ್ದು ನಡೆಸುವಿ | ನಡೆಸುವಿ ಜೀವರ
ಕೃತಕೃತ್ಯರನು ಮಾಡಿ ಸಲಹುವಿ || ೭೪ || || ೨೯೦ ||
ನಿತ್ಯಬದ್ಧನು ನಾನು ನಿತ್ಯಮುಕ್ತನು ನೀನು
ಭೃತ್ಯನು ನಾನು ಪ್ರಭು ನೀನು | ಪ್ರಭು ನೀನು ಮೂರ್ಲೋಕ
ವ್ಯಾಪ್ತನು ನೀನು ಅಣು ನಾನು || ೭೫ || || ೨೯೧ ||
ಹೃಷಿಕನಿಯಾಮಕನೆ ವಿಷಯದೊಳು ನೀ ನಿಂತು
ಪ್ರಸುಖಾತ್ಮನಾಗಿ ರಮಿಸುವಿ | ರಮಿಸಿ ಜೀವರನು ಮೋ –
ಹಿಸಿ ತಿಳಿಯಗೊಡದೆ ಇರುತಿರ್ಪೆ || ೭೬ || || ೨೯೨ ||
ಶ್ರೀಪ್ರಾಣನಾಯಕನೆ ನೀ ಪ್ರಾಣಿಗಳ ಮೇಲೆ
ಸುಪ್ರೀತನಾಗಿ ಸಲಹೆಂದು | ಸಲಹೆಂದು ಸರ್ವದಾ
ನಾ ಪ್ರಾರ್ಥಿಸುವೆನೋ ಪರಮಾತ್ಮ || ೭೭ || || ೨೯೩ ||
ಅನಘ ರೋಗಘ್ನ ಎಂದಿನಿತು ಮಂಗಳನಾಮ
ನೆನೆಯೆ ದುರಿತಗಳು ಬರಲುಂಟೆ | ಬರಲುಂಟೆ ಲೋಕದ
ಜನರ ಧನ್ವಂತ್ರಿ ಕಾಪಾಡೋ || ೭೮ || || ೨೯೪ ||
ನಿನ್ನ ಕೊಂಡಾಡಿದಂತನ್ಯರನು ಕೊಂಡಾಡೆ
ನಿನ್ನನೇ ನೋಡ ಬಯಸುವೆ | ಬಯಸುವೆ ಬೇಸರದೆ
ಎನ್ನ ಕುಲದೈವ ಸುಖವೀಯೋ || ೭೯ || || ೨೯೫ ||
ನೀರು ತೃಣವೀಯೆ ಗೋ ಕ್ಷೀರವನು ಕರೆವಂತೆ
ಸೂರಿಗಳು ಮಾಳ್ಪ ಅಪರಾಧ | ಅಪರಾಧ ಸ್ವೀಕರಿಸಿ
ಸಾರೂಪ್ಯವೀವೆ ಸರ್ವಜ್ಞ || ೮೦ || || ೨೯೬ ||
ನಿನ್ನ ಸಂಕಲ್ಪಕ್ಕೆ ಅನ್ಯಥಾವಾಗಿಪ್ಪ
ಪುಣ್ಯಕರ್ಮಗಳ ನಾನೊಲ್ಲೆ | ನಾನೊಲ್ಲೆ ಶ್ರೀಹರಿಯೆ
ಮನ್ನಿಸೈ ನಿನ್ನ ಮನದಂತೆ || ೮೧ || || ೨೯೭ ||
ನಿನ್ನ ತುತಿಪುದಕ್ಕಿಂತ ಪುಣ್ಯಬೇರೇನಯ್ಯ
ನಿನ್ನಂಘ್ರಿ ಭಜನೆ ಸುಖಕಿಂತ | ಸುಖಕಿಂತ ಪುರುಷಾರ್ಥ
ಇನ್ನುಂಟೆ ಸ್ವಾಮಿ ಜಗದೊಳು || ೮೨ || || ೨೯೮ ||
ದೇಶಕಾಲಾದಿಗಳಿಗೀಶ ನೀನೆಂದರಿದು –
ಪಾಸನೆಯ ಗೈವ ಭಜಕರು | ಭಜಕರೆಲ್ಲಿದ್ದರೂ
ದೋಷವೆಲ್ಲಿಹುದೋ ಅವರಿಗೆ || ೮೩ || || ೨೯೯ ||
ಅನಿರುದ್ಧ ಪ್ರದ್ಯುಮ್ನ ಅನಲಧರಣೀಧರನೆ
ಅನುವಿಷ್ಟನಾಗಿ ಪ್ರಕೃತಿಯ | ಪ್ರಕೃತಿಯ ನಿರ್ಮಿಸಿದ
ಘನಮಹಿಮ ಎಮಗೆ ದಯವಾಗೋ || ೮೪ || || ೩೦೦ ||
ವಾಸುದೇವಾನಂತ ವಾಸವಾನುಜ ವರ –
ವಾಸುಕೀಶಯನ ವನಮಾಲಿ | ವನಮಾಲಿ ವೀತಭಯ
ವಾಸವಾಗೆನ್ನ ಮನದಲ್ಲಿ || ೮೫ || || ೩೦೧ ||
ನಾರಾಯಣಾಚ್ಯುತ ಮುರಾರಿ ಮುನಿಗಣಸೇವ್ಯ
ನಾರದಪ್ರಿಯ ನರಸಿಂಹ | ನರಸಿಂಹ ನಿನ್ನವರಿ –
ಗಾರೋಗ್ಯಭಾಗ್ಯ ಕರುಣಿಸೋ || ೮೬ || || ೩೦೨ ||
ಮೃತ್ಯುಂಜಯಾರಾಧ್ಯ ಮೃತ್ಯುಮೃತ್ಯುವೆ ಮೃಕಂ –
ಡಾತ್ಮಜಪ್ರಿಯ ಕವಿಗೇಯ | ಕವಿಗೇಯ ಭಕ್ತರಪ –
ಮೃತ್ಯು ಪರಿಹರಿಸಿ ಸಲಹಯ್ಯ || ೮೭ || || ೩೦೩ ||
ಇಂದಿರಾರಮಣ ಗೋವಿಂದ ಕೇಶವ ಭಕ್ತ –
ಬಂಧು ನೀನೆಂದೂ ಮೊರೆಹೊಕ್ಕೆ | ಮೊರೆಹೊಕ್ಕೆ ಕಾರುಣ್ಯ –
ಸಿಂಧು ನೀನೆನಗೆ ದಯವಾಗೋ || ೮೮ || || ೩೦೪ ||
ನೋಕನೀಯನೆ ನಿನ್ನ ಶ್ರೀಕಮಲಜಾದಿಗಳು
ಏಕದೇಶವನು ಅರಿಯರೊ | ಅರಿಯದಾ ಮಹಿಮೆಗಳು
ಈ ಕುಮತಿಜನರು ತಿಳಿವೋರೇ || ೮೯ || || ೩೦೫ ||
ವಾಸುದೇವನ ಬಿಟ್ಟು ಲೇಸು ಹಾರೈಸಿಕೊಂ –
ಡೇಸು ದೈವಗಳ ಭಜಿಸಲು | ಭಜಿಸಲು ಬರಿದೆ ಆ –
ಯಾಸವಲ್ಲದೆ ಸುಖವಿಲ್ಲ || ೯೦ || || ೩೦೬ ||
ನಾ ನಿನ್ನ ಮರೆತರೂ ನೀನೆನ್ನ ಮರೆಯದಲೆ
ಸಾನುರಾಗದಿ ಸಲಹುವಿ | ಸಲಹುವಿ ಸರ್ವಜ್ಞ
ಏನೆಂಬೆ ನಿನ್ನ ಕರುಣಕ್ಕೆ || ೯೧ || || ೩೦೭ ||
ಜೀವನಾಮಕನಾಗಿ ಜೀವರೊಳು ನೀ ನಿಂತು
ಜೀವಕೃತಕರ್ಮ ನೀ ಮಾಡಿ | ನೀ ಮಾಡಿ ಮಾಡಿಸಿ
ಜೀವರಿಗೆ ಕೊಡುವೆ ಸುಖದುಃಖ || ೯೨ || || ೩೦೮ ||
ಸತ್ಯಸಂಕಲ್ಪ ತ್ವಚ್ಚಿತ್ತಾನುಸಾರ ಮ –
ಚ್ಚಿತ್ತ ವರ್ತಿಸಲಿ ಸರ್ವತ್ರ | ಸರ್ವತ್ರ ಸರ್ವದಾ
ಭಕ್ತಿ ಇರಲೆನಗೆ ಅನುಗಾಲ || ೯೩ || || ೩೦೯ ||
ನರಕಸ್ವರ್ಗಗಳೆರಡು ಇರುತಿಹವು ಇಲ್ಲೆ ವಿ –
ಸ್ಮರಣೆಯೇ ನರಕ ಸ್ಮೃತಿ ಸ್ವರ್ಗ | ಸ್ಮೃತಿಸ್ವರ್ಗವಿರೆ ಬಾಹ್ಯ –
ನರಕಭಯಕಂಜೆ ಎಂದೆಂದು || ೯೪ || || ೩೧೦ ||
ಪ್ರಾಣಭಯ ಬಂದಾಗ ಕಾಣದಲೆ ಹಲುಬಿದರು
ಪ್ರಾಣಮಯನಾದ ಪ್ರದ್ಯುಮ್ನ | ಪ್ರದ್ಯುಮ್ನ ಮೂಜಗ –
ತ್ತ್ರಾಣನಾಗಿನ್ನು ಸಲಹುವ || ೯೫ || || ೩೧೧ ||
ವಾಮನ ತ್ರಿವಿಕ್ರಮ ನಿರಾಮಯ ನಿರಾಧಾರ
ರಾಮ ರಾಜೀವದಳನೇತ್ರ | ದಳನೇತ್ರ ಮಮ ಕುಲ –
ಸ್ವಾಮಿ ನೀನೆಮಗೆ ದಯವಾಗೋ || ೯೬ || || ೩೧೨ ||
ಶೋಕನಾಶನ ವಿಗತಶೋಕ ನೀನೆಂದರಿದು
ನಾ ಕರವ ಮುಗಿವೆ ಕರುಣಾಳು | ಕರುಣಾಳು ಭಕತರ –
ಶೋಕಗಳ ಕಳೆದು ಸುಖವೀಯೋ || ೯೭ || || ೩೧೩ ||
ಆನಂದನಂದ ವಿಜ್ಞಾನಮಯ ವಿವಿಧ ಸ –
ನ್ಮಾನದ ಪ್ರವರಸಮವರ್ತಿ | ಸಮವರ್ತಿ ಸುಮನಸ –
ತ್ರಾಣ ನೀನೆಮಗೆ ದಯವಾಗೋ || ೯೮ || || ೩೧೪ ||
ನೀನಿಪ್ಪ ಲೋಕ ನಿರ್ವಾಣವೆಂದಾಗಮಪು –
ರಾಣ ಪೇಳುವುವು ಅನುದಿನ | ಅನುದಿನದಿ ನರಕ ವಿ –
ದ್ದೇನು ಮಾಡುವುದೋ ಎನಗಿನ್ನು || ೯೯ || || ೩೧೫ ||
ಕೃಪಣವತ್ಸಲನೆ ಎನ್ನಪರಾಧಗಳ ನೋಡಿ
ಕುಪಿತನಾಗುವುದೆ ಕಮಲಾಕ್ಷ | ಕಮಲಾಕ್ಷ ನೀನೆನಗೆ
ಉಪಕಾರಿ ಎಂದು ಸ್ಮರಿಸುವೆ || ೧೦೦ || || ೩೧೬ ||
ಸತ್ಯಸಂಕಲ್ಪ ಜಗದತ್ಯಂತ ಭಿನ್ನ ಸ –
ರ್ವೋತ್ತಮೋತ್ತಮನೇ ಸುಖಪೂರ್ಣ | ಸುಖಪೂರ್ಣ ನೀನೆನ್ನ
ಚಿತ್ತದಿಂದ ಅಗಲದಿರು ಕಂಡ್ಯ || ೧೦೧ || || ೩೧೭ ||
ಜ್ಞಾನಕರ್ಮೇಂದ್ರಿಯಗಳಾನಂದಮಯಗಧಿ –
ಷ್ಠಾನವೆಂದರಿದು ಪ್ರತಿದಿನ | ಪ್ರತಿದಿನ ಉಂಬನ್ನ –
ಪಾನಾದಿವಿಷಯ ಹರಿಗೆನ್ನಿ || ೧೦೨ || || ೩೧೮ ||
ಎನಗೆ ನಿನ್ನಲಿ ಭಕುತಿ ಇನಿತಿಲ್ಲದಿದ್ದರೂ
ಅನಿಮಿತ್ತಬಂಧು ಸಲಹುವಿ | ಸಲಹುವಿ ಸರ್ವದಾ
ಎಣೆಗಾಣೆ ನಿನ್ನ ಕರುಣಕ್ಕೆ || ೧೦೩ || || ೩೧೯ ||
ಮಾನಧನವನಿತೆಸಂತಾನಗಳ ಬಯಸುತ್ತ
ಸ್ನಾನ ಜಪ ಹೋಮ ಉಪವಾಸ | ಉಪವಾಸ ವ್ರತ ನೇಮ
ಏನು ಮಾಡಿದರೂ ಹರಿ ಮೆಚ್ಚ || ೧೦೪ || || ೩೨೦ ||
ಶ್ರೀವರನೆ ನೀ ತತ್ವದೇವತೆಗಳೊಳಗಿದ್ದು
ಯಾವತ್ತು ಕರ್ಮ ನೀ ಮಾಡಿ | ನೀ ಮಾಡಿ ಮಾಡಿಸುತ
ಜೀವರಿಗೆ ಈವೆ ಸುಖದುಃಖ || ೧೦೫ || || ೩೨೧ ||
ವೈಷಮ್ಯ ಮೊದಲಾದ ದೋಷರಹಿತನೆ ನಿರಭಿ –
ಲಾಷೆಯಲಿ ನಿನ್ನ ಸರ್ವತ್ರ | ಸರ್ವತ್ರ ಚಿಂತಿಪರ
ತೋಷಿಸುವೆ ಒಲಿದು ಸುಖವಿತ್ತು || ೧೦೬ || || ೩೨೨ ||
ಭೂರಮಣ ನಿತ್ಯಸಂಸಾರಿಗಳಲಿದ್ದು ಧನ –
ದಾರಾದಿಗಳಲಿ ಮಮತೆಯ | ಮಮತೆಯ ಕೊಟ್ಟು ಸಂ –
ಚಾರ ಮಾಡಿಸುವೆ ಭವದೊಳು || ೧೦೭ || || ೩೨೩ ||
ಕ್ರೂರಕರ್ಮಗಳ ದುರ್ಗೆರಮಣನೆ ದೈತ್ಯರೊಳು
ತೋರಿಕೊಳ್ಳದಲೆ ನೀ ಮಾಡಿ | ನೀ ಮಾಡಿ ಮಾಡಿಸುತ
ಘೋರದುಃಖಗಳನುಣಿಸುವಿ || ೧೦೮ || || ೩೨೪ ||
ಹರಿಯೆ ನೀನೊಳಗಿದ್ದು ಪರದಾರಧನಗಳಲಿ
ಎರಗಿಸುವೆ ಮನವ ಮರುಗಿಸಿ | ಮರುಗಿಸಿ ಮೋಹಿಸುವೆ
ಕರುಣಿ ನಿನಗಿದು ಉಚಿತವೆ || ೧೦೯ || || ೩೨೫ ||
ಎಲ್ಲಿ ಹರಿರೂಪ ಮತ್ತಲ್ಲಿ ಗುಣಕ್ರಿಯೆಗಳು
ಅಲ್ಲೆ ಗುಣರೂಪಕ್ರಿಯೆಗಳು | ಕ್ರಿಯೆಗಳು ಗುಣರೂಪ
ಬಲ್ಲವನೆ ಜ್ಞಾನಿ ಜಗದೊಳು || ೧೧೦ || || ೩೨೬ ||
ನಿನ್ನಧೀನನು ನಾನು ನಿನ್ನ ದಾಸರ ದಾಸ
ಎನ್ನದೇನಯ್ಯ ಅಪರಾಧ | ಅಪರಾಧಗಳ ನೋಡಿ
ಬನ್ನಬಡಿಸೋದು ಉಚಿತವೆ || ೧೧೧ || || ೩೨೭ ||
ಒಳಹೊರಗೆ ನೀನಿದ್ದು ತಿಳಿಯಗೊಡದಲೆ ಜಗದಿ
ಹಲವು ಕರ್ಮಗಳ ನೀ ಮಾಡಿ | ನೀ ಮಾಡಿ ಮಾಡಿಸುತ
ಫಲಗಳನ್ನೀವೆ ಜನರಿಗೆ || ೧೧೨ || || ೩೨೮ ||
ದೇವಗಂಗೆಯ ತಡಿಯ ಭಾವಿ ತೋಡುವನಂತೆ
ದೇವೇಶನಿರಲು ತಿರಿದುಂಬ | ತಿರಿದುಂಬ ರಕ್ಕಸರ
ದೇವರೆಂತೆಂದು ಕೆಡದಿರು || ೧೧೩ || || ೩೨೯ ||
ನಿರ್ದೋಷ ಗುಣಪೂರ್ಣ ಸ್ವರ್ಧುನೀಜನಕ ಗೋ –
ವರ್ಧನೋದ್ಧಾರ ಗಂಭೀರ | ಗಂಭೀರ ಖಳರ ಕುಲ –
ಮರ್ದನನೆ ನೀನೆನಗೆ ದಯವಾಗೋ || ೧೧೪ || || ೩೩೦ ||
ನಾರಾಯಣನಿರುದ್ಧ ಈರೈದು ಕರಣದಿ ವಿ –
ಹಾರಗೊಳುತಿರ್ಪ ಪ್ರದ್ಯುಮ್ನ | ಪ್ರದ್ಯುಮ್ನ ಸಂಕರ್ಷಣನೆ ನೀ –
ವಿರಾಜಿಸುವಿ ಜಗದೊಳು || ೧೧೫ || || ೩೩೧ ||
ವಾಸುದೇವನೆ ಜೀವರಾಶಿಯೊಳಗಿದ್ದು ಅವ –
ಕಾಶ ಕೊಡುತಿರ್ಪೆ ವಿಷಯಕ್ಕೆ | ವಿಷಯಗಳನುಂಡು ಸಂ –
ತೋಷ ಪಡಿಸುವಿ ಭಕತರ || ೧೧೬ || || ೩೩೨ ||
ಅಣುವಿಗಣುತರನಾಗಿ ಘನಕೆ ಘನತರನಾಗಿ
ಅಣುಮಹತ್ತುಗಳ ದೆಶೆಯಿಂದ | ದೆಶೆಯಿಂದ ನೀ ವಿಲ –
ಕ್ಷಣನೆನಿಸಿಕೊಂಬೆ ಶ್ರುತಿಯೊಳು || ೧೧೭ || || ೩೩೩ ||
ವಿಹಿತ ಕರ್ಮಗಳಿಂದ ಅಹಿಕಪಾರತ್ರಿಕಗ –
ಳಹವು ಜೀವರಿಗೆ ಸರ್ವತ್ರ | ಸರ್ವತ್ರ ಸಜ್ಜನರ
ಸಹವಾಸವೆಂತು ದೊರೆವುದೋ || ೧೧೮ || || ೩೩೪ ||
ಎನ್ನಪ್ಪ ಎನ್ನಮ್ಮ ಎನ್ನಯ್ಯ ಎನ್ನಣ್ಣ
ಎನ್ನರಸ ಎನ್ನ ಕುಲದೈವ | ಕುಲದೈವ ಇಹಪರದಿ
ಎನ್ನ ಬಿಟ್ಟಗಲದೇ ಇರು ಕಂಡ್ಯ || ೧೧೯ || || ೩೩೫ ||
ಎನ್ನ ಬಂಧುಗಳೆಲ್ಲ ನಿನ್ನ ದಾಸರು ಸ್ವಾಮಿ
ಮನ್ನಿಸು ಕಂಡ್ಯ ಮಹರಾಯ | ಮಹರಾಯ ನೀ ಮರೆದ –
ರಿನ್ನಾರು ಸಾಕಲರಿಯರು || ೧೨೦ || || ೩೩೬ ||
ಸರ್ವಾಂತರಾತ್ಮಕನೆ ದುರ್ವಿಷಯತೈಲದೊಳು
ದರ್ವಿಯಂದದಲಿ ಚರಿಸುವ | ಚರಿಸುವ ಮನದಲ್ಲಿ
ಸರ್ವಕಾಲದಲಿ ನೆಲೆಗೊಳ್ಳೋ || ೧೨೧ || || ೩೩೭ ||
ಏನ ಬೇಡಲಿ ನಿನ್ನಧೀನವೀ ಜಗವು ಸ್ವಾ –
ಧೀನ ವಸ್ತುಗಳ ನಾ ಕಾಣೆ | ನಾ ಕಾಣೆ ಭಕ್ತಿ ವಿ –
ಜ್ಞಾನವೈರಾಗ್ಯವನೆ ಕರುಣಿಸೋ || ೧೨೨ || || ೩೩೮ ||
ಆಶೆಯೊಂದುಂಟು ಸರ್ವೇಶ ವಿಜ್ಞಾಪಿಸುವೆ
ವಿಶ್ವಂಭರಾಭಾಗ್ಯಸತಿಮೋಹ | ಸತಿಮೋಹ ತಪ್ಪಿಸಿ
ನೀ ಸಲಹಬೇಕೋ ದಯದಿಂದ || ೧೨೩ || || ೩೩೯ ||
ಏನು ಬೇಡುವುದಿಲ್ಲ ಮಾನಾದಿಸಂಪತ್ತು
ನಾನೊಲ್ಲೆ ಸ್ವಪ್ನದಲಿ ತವ ನಾಮ | ತವ ನಾಮ ಕ್ಷಣಕ್ಷಣಕೆ
ತಾನೊದಗಲೆನ್ನ ವದನಕ್ಕೆ || ೧೨೪ || || ೩೪೦ ||
ಸಿರಿ ನಿನ್ನ ಚರಣದ ಕಿರುಬೆರಳ ನಖದ ಗುಣ
ಅರಿಸಿ ನೋಡುತಲಿ ಅನುಗಾಲ | ಅನುಗಾಲ ಕಾಣದಿರೆ
ಬೆರಗುಬೀಳುವಳೋ ಮರುಳಾಗಿ || ೧೨೫ || || ೩೪೧ ||
ಕರ್ಮಜ್ಞ ಕರ್ಮೇಶ ಕರ್ಮಪ್ರವರ್ತಕನೆ
ಕರ್ಮಫಲದಾತ ಕರ್ಮಸ್ಥ | ಕರ್ಮಸ್ಥ ಎನ್ನ ದು –
ಷ್ಕರ್ಮ ಕಳೆದು ನೀ ಸಲಹಯ್ಯ || ೧೨೬ || || ೩೪೨ ||
ಸ್ವಾನಂದಪರಿಪೂರ್ಣ ನಾನಾ ವಿಷಯಗಳಲಿ
ನೀ ನಿಂದು ಮಮತೆಯ ಕಲ್ಪಿಸಿ | ಕಲ್ಪಿಸಿ ಹೀನನೆಂ –
ದೆನ್ನನೇತಕ್ಕೆ ದಣಿಸುವಿ || ೧೨೭ || || ೩೪೩ ||
ವಿಜಿತಾತ್ಮ ನೀ ಭೂಭುಜರೊಳಿದ್ದು ಅನವರತ
ಯಜಮಾನನೆಂದು ಕರೆಸುವಿ | ಕರೆಸಿ ಶಿಕ್ಷಕನಾಗಿ
ಪ್ರಜರ ಸಂತೈಪೆ ಅನುಗಾಲ || ೧೨೮ || || ೩೪೪ ||
ಎಲ್ಲರಂದದಿ ಲಕ್ಷ್ಮಿನಲ್ಲನೆಂದೆನಬೇಡ
ಬಲ್ಲಿದನು ಕಂಡ್ಯ ಭಗವಂತ | ಭಗವಂತನ ಮಹಿಮೆ
ಬಲ್ಲವರು ಇಲ್ಲ ಜಗದೊಳು || ೧೨೯ || || ೩೪೫ ||
ಗೋವಿಂದನೇ ಬಂದು ಆವಾವ ಕಾಲದಲಿ
ಕಾವನು ಎಂಬ ನುಡಿ ಸಿದ್ಧ | ನುಡಿ ಸಿದ್ಧವಾಗಿರಲು
ಆವ ಭಯಕಂಜೆ ಎಂದೆಂದು || ೧೩೦ || || ೩೪೬ ||
ಕರಿವರದನೇ ನಿನ್ನ ಕರುಣವಿಲ್ಲದೆ ಭವ –
ಶರಧಿಯನೆ ದಾಟುವ ತೆರನ್ಹ್ಯಾಂಗೆ | ತೆರನ್ಹ್ಯಾಂಗೆ ಲೋಕದ –
ವರಿಂದಲಿ ಎಮಗೆ ಸುಖವಿಲ್ಲ || ೧೩೧ || || ೩೪೭ ||
ಅಪರಾಧಿ ನಾನಲ್ಲ ಅಪರಾಧವೆನಗಿಲ್ಲ
ಸ್ವಪರಗತನಾಗಿ ನೀ ಮಾಡಿ | ನೀ ಮಾಡಿ ಮಾಡಿಸಿ
ಅಪರಿಚಿತನಂತೆ ಇರುತಿರ್ಪೆ || ೧೩೨|| || ೩೪೮ ||
ಶರಣು ದೇವರ ದೇವ ಶರಣರಿಗೆ ಸುಖವೀವ
ಶರಧಿಜೆಯ ರಮಣ ಕರುಣಿಸೊ | ಕರುಣಿಸಿ ಸಲಹೊ ನಾ
ಮೊರೆಹೊಕ್ಕೆ ನಿನ್ನ ಚರಣಕ್ಕೆ || ೧೩೩ || || ೩೪೯ ||
ದೋಷದೂರನೆ ಕೇಳು ದ್ವೇಷಿ ನಿನಗಾನಲ್ಲ
ಈಷಣತ್ರಯದಿ ಮಮತೆಯ | ಮಮತೆಯ ಕೊಟ್ಟು ಪ್ರ –
ದ್ವೇಷಗೊಳಿಸುವುದು ಉಚಿತಲ್ಲ || ೧೩೪ || || ೩೫೦ ||
ಪನ್ನಗಾಚಲವಾಸ ನಿನ್ನುಳಿದು ಸಂತೈಪ –
ರಿನ್ನೆಲ್ಲಿ ಕಾಣೆ ನಿನ್ನಾಣೆ | ನಿನ್ನಾಣೆ ಸುಗುಣ ಸಂ –
ಪನ್ನ ಸಜ್ಜನರ ಸಲಹೆಂಬೆ || ೧೩೫ || || ೩೫೧ ||
ಭೂರಮಣ ಸರ್ವಪ್ರಕಾರದಲಿ ಒಲಿದೆಮ್ಮ
ದೂರದಲಿ ಬಪ್ಪ ದುರಿತೌಘ | ದುರಿತೌಘ ಸಂಹರಿಸಿ
ಕಾರುಣಿಕ ನೀನೇ ಸಂತೈಸೋ || ೧೩೬ || || ೩೫೨ ||
ಅನಾಥಬಂಧುವೆ ಜಗನ್ನಾಥವಿಟ್ಠಲ ಪ್ರ –
ಪನ್ನಪರಿಪಾಲ ಮಾಲೋಲ | ಮಾಲೋಲ ಅರಿಪಾಂಚ –
ಜನ್ಯಧೃತಪಾಣಿ ಸಲಹೆಮ್ಮ || ೧೩೭ || || ೩೫೩ ||
SrI SrInivAsa stOtra
SrInivAsana pOlva dInavatsalaruMTe
dAnigaLuMTe jagadoLu | jagadoLu ihareMba
j~jAnigaLuMTe anugAla || 1 || || 217 ||
Enu karuNAnidhiyo SrInitaMbiniramaNa
tA nammanagali sairi-sa | sairisada karuNiya
nAneMtu tutisi higga-li || 2 || || 218 ||
SrInAtha ninnavara nAnAparAdhagaLa
nIneNisadavara salahidi | salahidi sarvaj~ja
EneMbe ninna karuNakke || 3 || || 219 ||
acyutane ninnaMtha huccudoregaLa kANe
kacci baidodda Bakatara | BakataraparAdhagaLa
tucCagaidavara salahidi || 4 || || 220 ||
taMde tAyiyu BrAtRu baMdhu saKa guru putra
eMdeMdu nInE gati gOtra | gati gOtra ihaparadi
iMdirArAdhya salahemma || 5 || || 221 ||
enna pOluva BaktarannaMta ninagiharu
ninnaMtha svAmi enagilla | enagillavadariMda
binnaipeninnU salaheMdu || 6 || || 222 ||
iMdirApati nInu maMdaBAgyanu nAnu
vaMdyanO nInu surariMda | surariMda narariMda
niMdyanO nAnu jagadoLu || 7 || || 223 ||
SaraNu SaraNara dEva SaraNu suravaramAnya
SaraNu SaSikOTilAvaNya | lAvaNyamUrutiye
SaraNeMbe svAmi karuNisO || 8 || || 224 ||
ennoLippa mahAtma anyaroLu nIniddu
anyOnyavAgi mamateya | mamateya kalpisi
ninnoLage nInE ramisuvi || 9 || || 225 ||
patita nAnAdarU patitapAvana nInu
ratinAthajanaka nagapANi | nagapANi nIniralu
itara ciMtyAkO enaginnu || 10 || || 226 ||
naDenuDigaLaparAdha oDeya nIneNisidare
baDava nAneMtu baduka-lO | badukalO karuNALu
kaDebILvadeMtO BavadiMda || 11 || || 227 ||
EsEsu janmadali dAsa nA ninagayya
ISa nIneMbO nuDi siddha | nuDi siddhavAgiralu –
dAsIna mADa-lucitalla || 12 || || 228 ||
Ava yOniyoLirisu Ava lOkadoLirisu
AvAga ninna nenevaMte | nenevaMte karuNisO
dEvakIkaMda dayadiMda || 13 || || 229 ||
SiShTaneMdenisenna BraShTaneMdenisu sa –
rvEShTamUrutiyE janariMda | janariMda nuDisiddu
iShTavE kaNO enaginnu || 14 || || 230 ||
SaraNapAlakaneMba birudiddamElinnu
poreyadiralenna nagarEno | nagarEno mUrlOka –
darasa nInAgi irutirdu || 15 || || 231 ||
SrIyarasane ninna mAyakke eNegANe
hEyaviShayagaLa janarige | janariguNisi upA –
dEyaveMteMdu suKisuvi || 16 || || 232 ||
sarvasvataMtra nInOrvanallade ma –
ttOrvaninnuMTE jagadoLu | jagadoLagajAdigaLu
darviyaMdadali carisOru || 17 || || 233 ||
Enu koTTaru koDO SrInivAsane ninna –
dhInadavanayya eMdeMdu | eMdeMdu suKaduHKa –
mAnAdigaLige praBu nInu || 18 || || 234 ||
munnAva janmada puNya tA PalisitO
ninnaMtha svAmi enagAdi | enagAdi adariMda
dhanyarO namma hiriyaru || 19 || || 235 ||
manadalli hariya ciMtane uLLa naranige
maneyAdarEnu vanavEnu | vanavEnu satata du –
rjanara saMgadoLu iralEnu || 20 || || 236 ||
biMba nInenage pratibiMba nA ninage kShI –
rAMbudhi-SAyi narasiMha | narasiMha nIniralu
haMbalipudyAke jagadoLu || 21 || || 237 ||
Enu mADuva karma nIne mADipe eMba
j~jAnavE enage jitavAgi | jitavAgi irali ma –
ttEnu nAnolle ninnANe || 22 || || 238 ||
aparAdhi nAneMbudupacAra mAtra nina –
gaparAdhaveMbOdiLeyoLu | iLeyoLu innuMTe
aparAdhi eMbOdaparAdha || 23 || || 239 ||
elli ISatva mattallihudu kartRutva
hullumanujarige kartRutva | kartRutvaveMbudu
ellihudu baride apavAda || 24 || || 240 ||
hagalu iraLu smaraNeyodagutire jihveyoLu
bageyalinnuMTe sAdhanagaLu | sAdhanagaLEtakke
jagadoLage innu avarige || 25 || || 241 ||
ninna vismRutikoDuva puNyakarmagaLolle
ninnanE neneva mahapApa | mahapApa karmagaLu
janmajanmadali iralayya || 26 || || 242 ||
guNakAlakarmagaLa manemADi jIvarige
uNisuvi nInE suKaduHKa | suKaduHKamiSraPala
uNade sarvatra beLaguvi || 27 || || 243 ||
ninagasammatavAda animiShESana lOka
enag~hattadayya yadunAtha | yadunAtha nInitta
Gananarakavenage puruShArtha || 28 || || 244 ||
nInilladAsthAna I naLinajAMDadoLu
nAnelli kANe narasiMha | narasiMha naraka baM –
dEnu mADuvudO enaginnu || 29 || || 245 ||
druhiNapita ninnavara sahavAsa ninnanu –
grahaveMdu tiLive anugAla | anugAla suKavIva
maharAdilOka nAnolle || 30 || || 246 ||
enage dAtanu nInu ninage dUtanu nAnu
initidda baLika adhamara | adhama mAnavarannu
anusarisalyAkO nAninnu || 31 || || 247 ||
pUjyapUjaka nInu pUjOpakaraNastha
mUjagatpatiye nInAgi | nInAgi Bakatarige
naijasuKavyakti koDutirpe || 32 || || 248 ||
sannidhAnavu ninnadennalli iralAgi
mannisuttiharu janarella | janarella ninna kA –
ruNya kAraNavO kamalAkSha || 33 || || 249 ||
Esu bageyAdarU nI salahabEkenna
vAsavavaMdya varadESa | varadESa ninnavara
dAsa nAneMdu dayadiMda || 34 || || 250 ||
j~jAnagamyane kELu nInariyadaparAdha
nAnomme mADe naLinAkSha | naLinAkSha kAyo ko –
llEnanna mADO SaraNanna || 35 || || 251 ||
vidhiniShEdhagaLeMbudadhamAdhikAriga –
llade ninna nAma sarvatra | sarvatra ciMtipa
budhariginnuMTe jagadoLu || 36 || || 252 ||
jaladoLage miMdu nirmalarAdeveMdu ta –
mmoLu tAve higgi suKisOru | suKisOru parama maM –
gaLamUrti ninna neneyade || 37 || || 253 ||
jaDaBUtajala janara maDimADalApave
jaDadhimaMdirana SuBanAma | SuBanAma mailigeya
biDisi maMgaLava koDadEnO || 38 || || 254 ||
ODihOguva maDiya mADi daNiyalubEDa
nODu sarvatra harirUpa | harirUpa nODi koM –
DADi suKiyAgO manavubbi || 39 || || 255 ||
mInumosaLegaLa tappEno jaladoLagihavu
snAnaPalavyAke baralilla | baralilla jalacara –
prANiginnaj~jarige koretEnO || 40 || || 256 ||
manave AlOcisiko ninagidda ciMte na –
mmaniruddhagillE I anugAla | anugAla salahuva
binagu mAnavara biDu kaMDya || 41 || || 257 ||
BaMDamanave kELu kaMDakaMDavarige
aMDaledarEnO puruShArtha | puruShArtha svAmipada –
puMDarIkavanE neranaMbu || 42 || || 258 ||
aSana vasanagaLIva vasudEvasutaniralu
husiyAgi badukO nararige | nararigAlparidare
hasiveyaDaguvudE ele jIva || 43 || || 259 ||
hiMde janmAMtaradi taMdukoTTavarAru
iMdu muMdIva praBuvAru | praBuvAru ele manave
maMdamatiyAgi keDabEDa || 44 || || 260 ||
annavilleMdu nInanyarige halubadiru
annamayanAda aniruddha | aniruddha jagake di –
vyAnna tA koTTu salahuva || 45 || || 261 ||
EsEsu janmadali bEsarAgade jIva –
rASigaLiganna koDutirpa | koDutirpa nammanu u –
dAsInamADi biDuvOne || 46 || || 262 ||
annadannAda saptanna kalpakanAgi
annamayarUpI aniruddha | aniruddha jagake di –
vyAnnagaLa koTTu salahuva || 47 || || 263 ||
prANapaMcakarUpa prANAMtarAtmakanu
prANigaLoLagiddu pratidina | pratidinavu pradyumna
prANamayaneMdu karesuva || 48 || || 264 ||
eMteMtu nI naDesidaMte nA naDevenO
eMtu nI nuDise nuDivenu | nuDivenallade ramA –
kAMta ennalli tappEnO || 49 || || 265 ||
nillalu nilluvenu malagidare malaguvenu
tiLidu tiLisidare tiLivenu | tiLiveno dEhada
neLalaMte irpe ninagAnu || 50 || || 266 ||
sarvaj~ja sarvESa sarvAMtarAtmakane
SarvAdivaMdya SivarUpi | SivarUpi sajjanara
sarvakAladali salahayya || 51 || || 267 ||
uMDu uTTaddella KaMDana maKavenni
kaMDaddu hariya pratimenni | pratimenni mUrjagake
pAMDavapriyanE doreyenni || 52 || || 268 ||
manavacanakAyadiMdanuBavipa viShayagaLa
ninagarpisuvenO niKiLESa | niKiLESa ninna pA –
vanamUrti tOri suKavIyO || 53 || || 269 ||
niKiLAgamaikavEdyakaLaMka sucaritra
viKanasArAdhya suKarUpa | suKarUpa ninnaMtha
saKaniralu durita baraluMTe || 54 || || 270 ||
BOjyavastugaLalli BOjyanAmakanAgi
tajjanyarasava hari tAnu | hari tAnu uMDuNisi
nirjarOttaMsa suKavIva || 55 || || 271 ||
BUmaMDalave pITha vyOmamaMDala Catra
sOmasUryarE mahadIpa | mahadIpa nakShatra –
stOmagaLe ninage-upadIpa || 56 || || 272 ||
maLeye majjanavu digvalayaMgaLE vasana
beLeva beLasugaLE naivEdya | naivEdya janara kaM –
gaLa kAMti ninage ArArti || 57 || || 273 ||
tarugaLE cAmaragaLAgirpavu ninage
SaradhigarjaneyE mahavAdya | mahavAdya jIvara –
svaragaLE ninage saMgIta || 58 || || 274 ||
pAtALa pAduka vidhAtRulOkave mukuTa
SvEtadvIpave ninage oDyANa | oDyANa vaikuMTha
AtapatravE ninagIve || 59 || || 275 ||
naDevudE hariyAtre nuDivudE harinAma
kuDiva nIrugaLE aBiShEka | aBiShEka dinadinadi
oDaliguMbanna naivEdya || 60 || || 276 ||
vEdaSAstragaLu ninagAdarupacAravu
hAdi naDeyuvudE nartana | nartanavu sajjanara
vAdasaMvAdagaLu uyyAle || 61 || || 277 ||
nakShatramaMDalavu lakShadIpavu ninage
RukShESataraNi AkASa | AkASadIpagaLu
vRukShavallijavE PalapuShpa || 62 || || 278 ||
kuMDavE gOLakavu keMDavE karaNagaLu
uMDuDuva viShaya avadAna | avadAna kaigoMDu
puMDarIkAkSha dayavAgO || 63 || || 279 ||
gOLakagaLella ninagAlayavu karaNagaLa –
sAlugaLe dIpa tadBOgya | tadBOgya viShayagaLa
mELanave ninage mahapUje || 64 || || 280 ||
tattatpadArthadali tattadAkAranA –
getta nODidaru irutirpa | irutirpa harige nA
BRutyaneMbuvudE baludharma || 65 || || 281 ||
sadasadvilakShaNane adhiBUta adhyAtma-
adhidaivadarasa rasarUpI | rasarUpanAgi sa –
nmuda tuShTi puShTi koDutirpe || 66 || || 282 ||
manadoLage nIniddu manaveMdenisikoMDu
manada vRuttigaLannu sRujisuvi | sRujisi saMkarShaNane
ninna karuNakke eNegANe || 67 || || 283 ||
adhiBUta adhyAtma adhidaivatApa kaLe –
vudu ninna divyatrayanAma | trayanAma sarvadA
odagalO baMdu vadanakke || 68 || || 284 ||
nAnA padArthadali nAnA prakAradali
nIniddu jagava naDesuvi | naDesuvi hari nIne
nAneMba narage gatiyuMTe || 69 || || 285 ||
sEvyasEvakaralli sEvya sEvakanAgi
avyaktanAgi nelesirpe | nelesirpe sarvadA
sEvya nA ninage sarigANe || 70 || || 286 ||
maruLu manavE kELu marevarE harinAma
karuNAbdhi kRuShNa anugAla | anugAla salahuvanu
baride ciMtyAkO ninaginnu || 71 || || 287 ||
taMde makkaLanu porevaMdadali SrIkAMta
eMdeMdu tanna Bakatara | Bakatara salahuva
saMdEhavyAkO ninaginnu || 72 || || 288 ||
aMbujaBavAMDadoLu oMbattu vidhavippa
aMbujAMbakana viBUti | viBUtirUpavanu
kAMbuvane yOgI jagadoLu || 73 || || 289 ||
kartRukarmagaLalli kAraNa kriyegaLali
nitya nIniddu naDesuvi | naDesuvi jIvara
kRutakRutyaranu mADi salahuvi || 74 || || 290 ||
nityabaddhanu nAnu nityamuktanu nInu
BRutyanu nAnu praBu nInu | praBu nInu mUrlOka
vyAptanu nInu aNu nAnu || 75 || || 291 ||
hRuShikaniyAmakane viShayadoLu nI niMtu
prasuKAtmanAgi ramisuvi | ramisi jIvaranu mO –
hisi tiLiyagoDade irutirpe || 76 || || 292 ||
SrIprANanAyakane nI prANigaLa mEle
suprItanAgi salaheMdu | salaheMdu sarvadA
nA prArthisuvenO paramAtma || 77 || || 293 ||
anaGa rOgaGna eMdinitu maMgaLanAma
neneye duritagaLu baraluMTe | baraluMTe lOkada
janara dhanvaMtri kApADO || 78 || || 294 ||
ninna koMDADidaMtanyaranu koMDADe
ninnanE nODa bayasuve | bayasuve bEsarade
enna kuladaiva suKavIyO || 79 || || 295 ||
nIru tRuNavIye gO kShIravanu karevaMte
sUrigaLu mALpa aparAdha | aparAdha svIkarisi
sArUpyavIve sarvaj~ja || 80 || || 296 ||
ninna saMkalpakke anyathAvAgippa
puNyakarmagaLa nAnolle | nAnolle SrIhariye
mannisai ninna manadaMte || 81 || || 297 ||
ninna tutipudakkiMta puNyabErEnayya
ninnaMGri Bajane suKakiMta | suKakiMta puruShArtha
innuMTe svAmi jagadoLu || 82 || || 298 ||
dESakAlAdigaLigISa nIneMdaridu –
pAsaneya gaiva Bajakaru | BajakarelliddarU
dOShavellihudO avarige || 83 || || 299 ||
aniruddha pradyumna analadharaNIdharane
anuviShTanAgi prakRutiya | prakRutiya nirmisida
Ganamahima emage dayavAgO || 84 || || 300 ||
vAsudEvAnaMta vAsavAnuja vara –
vAsukISayana vanamAli | vanamAli vItaBaya
vAsavAgenna manadalli || 85 || || 301 ||
nArAyaNAcyuta murAri munigaNasEvya
nAradapriya narasiMha | narasiMha ninnavari –
gArOgyaBAgya karuNisO || 86 || || 302 ||
mRutyuMjayArAdhya mRutyumRutyuve mRukaM –
DAtmajapriya kavigEya | kavigEya Baktarapa –
mRutyu pariharisi salahayya || 87 || || 303 ||
iMdirAramaNa gOviMda kESava Bakta –
baMdhu nIneMdU morehokke | morehokke kAruNya –
siMdhu nInenage dayavAgO || 88 || || 304 ||
nOkanIyane ninna SrIkamalajAdigaLu
EkadESavanu ariyaro | ariyadA mahimegaLu
I kumatijanaru tiLivOrE || 89 || || 305 ||
vAsudEvana biTTu lEsu hAraisikoM –
DEsu daivagaLa Bajisalu | Bajisalu baride A –
yAsavallade suKavilla || 90 || || 306 ||
nA ninna maretarU nInenna mareyadale
sAnurAgadi salahuvi | salahuvi sarvaj~ja
EneMbe ninna karuNakke || 91 || || 307 ||
jIvanAmakanAgi jIvaroLu nI niMtu
jIvakRutakarma nI mADi | nI mADi mADisi
jIvarige koDuve suKaduHKa || 92 || || 308 ||
satyasaMkalpa tvaccittAnusAra ma –
ccitta vartisali sarvatra | sarvatra sarvadA
Bakti iralenage anugAla || 93 || || 309 ||
narakasvargagaLeraDu irutihavu ille vi –
smaraNeyE naraka smRuti svarga | smRutisvargavire bAhya –
narakaBayakaMje eMdeMdu || 94 || || 310 ||
prANaBaya baMdAga kANadale halubidaru
prANamayanAda pradyumna | pradyumna mUjaga –
ttrANanAginnu salahuva || 95 || || 311 ||
vAmana trivikrama nirAmaya nirAdhAra
rAma rAjIvadaLanEtra | daLanEtra mama kula –
svAmi nInemage dayavAgO || 96 || || 312 ||
SOkanASana vigataSOka nIneMdaridu
nA karava mugive karuNALu | karuNALu Bakatara –
SOkagaLa kaLedu suKavIyO || 97 || || 313 ||
AnaMdanaMda vij~jAnamaya vividha sa –
nmAnada pravarasamavarti | samavarti sumanasa –
trANa nInemage dayavAgO || 98 || || 314 ||
nInippa lOka nirvANaveMdAgamapu –
rANa pELuvuvu anudina | anudinadi naraka vi –
ddEnu mADuvudO enaginnu || 99 || || 315 ||
kRupaNavatsalane ennaparAdhagaLa nODi
kupitanAguvude kamalAkSha | kamalAkSha nInenage
upakAri eMdu smarisuve || 100 || || 316 ||
satyasaMkalpa jagadatyaMta Binna sa –
rvOttamOttamanE suKapUrNa | suKapUrNa nInenna
cittadiMda agaladiru kaMDya || 101 || || 317 ||
j~jAnakarmEMdriyagaLAnaMdamayagadhi –
ShThAnaveMdaridu pratidina | pratidina uMbanna –
pAnAdiviShaya harigenni || 102 || || 318 ||
enage ninnali Bakuti initilladiddarU
animittabaMdhu salahuvi | salahuvi sarvadA
eNegANe ninna karuNakke || 103 || || 319 ||
mAnadhanavanitesaMtAnagaLa bayasutta
snAna japa hOma upavAsa | upavAsa vrata nEma
Enu mADidarU hari mecca || 104 || || 320 ||
SrIvarane nI tatvadEvategaLoLagiddu
yAvattu karma nI mADi | nI mADi mADisuta
jIvarige Ive suKaduHKa || 105 || || 321 ||
vaiShamya modalAda dOSharahitane niraBi –
lASheyali ninna sarvatra | sarvatra ciMtipara
tOShisuve olidu suKavittu || 106 || || 322 ||
BUramaNa nityasaMsArigaLaliddu dhana –
dArAdigaLali mamateya | mamateya koTTu saM –
cAra mADisuve BavadoLu || 107 || || 323 ||
krUrakarmagaLa durgeramaNane daityaroLu
tOrikoLLadale nI mADi | nI mADi mADisuta
GOraduHKagaLanuNisuvi || 108 || || 324 ||
hariye nInoLagiddu paradAradhanagaLali
eragisuve manava marugisi | marugisi mOhisuve
karuNi ninagidu ucitave || 109 || || 325 ||
elli harirUpa mattalli guNakriyegaLu
alle guNarUpakriyegaLu | kriyegaLu guNarUpa
ballavane j~jAni jagadoLu || 110 || || 326 ||
ninnadhInanu nAnu ninna dAsara dAsa
ennadEnayya aparAdha | aparAdhagaLa nODi
bannabaDisOdu ucitave || 111 || || 327 ||
oLahorage nIniddu tiLiyagoDadale jagadi
halavu karmagaLa nI mADi | nI mADi mADisuta
PalagaLannIve janarige || 112 || || 328 ||
dEvagaMgeya taDiya BAvi tODuvanaMte
dEvESaniralu tiriduMba | tiriduMba rakkasara
dEvareMteMdu keDadiru || 113 || || 329 ||
nirdOSha guNapUrNa svardhunIjanaka gO –
vardhanOddhAra gaMBIra | gaMBIra KaLara kula –
mardanane nInenage dayavAgO || 114 || || 330 ||
nArAyaNaniruddha Iraidu karaNadi vi –
hAragoLutirpa pradyumna | pradyumna saMkarShaNane nI –
virAjisuvi jagadoLu || 115 || || 331 ||
vAsudEvane jIvarASiyoLagiddu ava –
kASa koDutirpe viShayakke | viShayagaLanuMDu saM –
tOSha paDisuvi Bakatara || 116 || || 332 ||
aNuvigaNutaranAgi Ganake GanataranAgi
aNumahattugaLa deSeyiMda | deSeyiMda nI vila –
kShaNanenisikoMbe SrutiyoLu || 117 || || 333 ||
vihita karmagaLiMda ahikapAratrikaga –
Lahavu jIvarige sarvatra | sarvatra sajjanara
sahavAsaveMtu dorevudO || 118 || || 334 ||
ennappa ennamma ennayya ennaNNa
ennarasa enna kuladaiva | kuladaiva ihaparadi
enna biTTagaladE iru kaMDya || 119 || || 335 ||
enna baMdhugaLella ninna dAsaru svAmi
mannisu kaMDya maharAya | maharAya nI mareda –
rinnAru sAkalariyaru || 120 || || 336 ||
sarvAMtarAtmakane durviShayatailadoLu
darviyaMdadali carisuva | carisuva manadalli
sarvakAladali nelegoLLO || 121 || || 337 ||
Ena bEDali ninnadhInavI jagavu svA –
dhIna vastugaLa nA kANe | nA kANe Bakti vi –
j~jAnavairAgyavane karuNisO || 122 || || 338 ||
ASeyoMduMTu sarvESa vij~jApisuve
viSvaMBarABAgyasatimOha | satimOha tappisi
nI salahabEkO dayadiMda || 123 || || 339 ||
Enu bEDuvudilla mAnAdisaMpattu
nAnolle svapnadali tava nAma | tava nAma kShaNakShaNake
tAnodagalenna vadanakke || 124 || || 340 ||
siri ninna caraNada kiruberaLa naKada guNa
arisi nODutali anugAla | anugAla kANadire
beragubILuvaLO maruLAgi || 125 || || 341 ||
karmaj~ja karmESa karmapravartakane
karmaPaladAta karmastha | karmastha enna du –
Shkarma kaLedu nI salahayya || 126 || || 342 ||
svAnaMdaparipUrNa nAnA viShayagaLali
nI niMdu mamateya kalpisi | kalpisi hInaneM –
dennanEtakke daNisuvi || 127 || || 343 ||
vijitAtma nI BUBujaroLiddu anavarata
yajamAnaneMdu karesuvi | karesi SikShakanAgi
prajara saMtaipe anugAla || 128 || || 344 ||
ellaraMdadi lakShminallaneMdenabEDa
ballidanu kaMDya BagavaMta | BagavaMtana mahime
ballavaru illa jagadoLu || 129 || || 345 ||
gOviMdanE baMdu AvAva kAladali
kAvanu eMba nuDi siddha | nuDi siddhavAgiralu
Ava BayakaMje eMdeMdu || 130 || || 346 ||
karivaradanE ninna karuNavillade Bava –
Saradhiyane dATuva teranhyAMge | teranhyAMge lOkada –
variMdali emage suKavilla || 131 || || 347 ||
aparAdhi nAnalla aparAdhavenagilla
svaparagatanAgi nI mADi | nI mADi mADisi
aparicitanaMte irutirpe || 132|| || 348 ||
SaraNu dEvara dEva SaraNarige suKavIva
Saradhijeya ramaNa karuNiso | karuNisi salaho nA
morehokke ninna caraNakke || 133 || || 349 ||
dOShadUrane kELu dvEShi ninagAnalla
IShaNatrayadi mamateya | mamateya koTTu pra –
dvEShagoLisuvudu ucitalla || 134 || || 350 ||
pannagAcalavAsa ninnuLidu saMtaipa –
rinnelli kANe ninnANe | ninnANe suguNa saM –
panna sajjanara salaheMbe || 135 || || 351 ||
BUramaNa sarvaprakAradali olidemma
dUradali bappa duritauGa | duritauGa saMharisi
kAruNika nInE saMtaisO || 136 || || 352 ||
anAthabaMdhuve jagannAthaviTThala pra –
pannaparipAla mAlOla | mAlOla aripAMca –
janyadhRutapANi salahemma || 137 || || 353 ||

Leave a Reply
You must be logged in to post a comment.