Tatva suvvali – Shri Krishna stuti

Composer : Shri Jagannatha dasaru

Smt.Nandini Sripad

ಶ್ರೀ ಕೃಷ್ಣ ಸ್ತುತಿ

ಜ್ಞಾನಸುಜ್ಞಾನಪ್ರಜ್ಞಾನವಿಜ್ಞಾನಮಯ
ಮಾಣವಕರೂಪ ವಸುದೇವ | ವಸುದೇವತನಯ ಸು –
ಜ್ಞಾನವನು ಕೊಟ್ಟು ಕರುಣಿಸೊ || ೧ || || ೧೩೭ ||

ಆದಿನಾರಾಯಣನು ಭೂದೇವಿ ಮೊರೆ ಕೇಳಿ
ಯಾದವರ ಕುಲದಲ್ಲಿ ಜನಿಸಿದ | ಜನಿಸಿದ ಶ್ರೀಕೃಷ್ಣ
ಪಾದಕ್ಕೆ ಶರಣೆಂಬೆ ದಯವಾಗೊ || ೨ || || ೧೩೮ ||

ವಸುದೇವನಂದನನ ಹಸುಗೂಸು ಎನಬೇಡಿ
ಶಿಶುವಾಗಿ ಕೊಂದ ಶಕಟನ್ನ | ಶಕಟವತ್ಸಾಸುರರ
ಅಸುವಳಿದು ಪೊರೆದ ಜಗವನ್ನ || ೩ || || ೧೩೯ ||

ವಾತರೂಪಿಲಿ ಬಂದ ಆ ತೃಣಾವರ್ತನ್ನ
ಪಾತಾಳಕಿಳುಹಿ ಮಡುಹಿದ | ಮಡುಹಿ ಮೊಲೆಯುಣಿಸಿದಾ
ಪೂತಣಿಯ ಕೊಂದ ಪುರುಷೇಶ || ೪ || || ೧೪೦ ||

ದೇವಕೀಸುತನಾಗಿ ಗೋವುಗಳ ಕಾಯ್ದರೆ
ಪಾವಕನ ನುಂಗಿ ನಲಿವೋನೆ | ನಲಿವೋನೆ ಮೂರ್ಲೋಕ
ಓವ ದೇವೇಂದ್ರ ತುತಿಪೋನೆ || ೫ || || ೧೪೧ ||

ಕುವಲಯಾಪೀಡನನು ಲವಮಾತ್ರದಲಿ ಕೊಂದು
ಶಿವನ ಚಾಪವನು ಮುರಿದಿಟ್ಟ | ಮುರಿದಿಟ್ಟ ಮುಷ್ಟಿಕನ
ಬವರದಲಿ ಕೆಡಹಿದ ಧರೆಯೋಳು || ೬ || || ೧೪೨ ||

ಕಪ್ಪ ಕೊಡಲಿಲ್ಲೆಂದು ದರ್ಪದಲಿ ದೇವೇಂದ್ರ
ಗುಪ್ಪಿದನು ಮಳೆಯ ವ್ರಜದೊಳು | ವ್ರಜದೊಳು ಪರ್ವತವ
ಪುಷ್ಪದಂತೆತ್ತಿ ಸಲಹೀದ || ೭ || || ೧೪೩ ||

ವಂಚಿಸಿದ ಹರಿಯೆಂದು ಸಂಚಿಂತೆಯಲಿ ಕಂಸ
ಮಂಚದ ಮೇಲೆ ಕುಳಿತಿರ್ದ | ಕುಳಿತಿರ್ದ ಮದಕರಿಗೆ
ಪಂಚಾಸ್ಯನಂತೆ ಎರಗೀದ || ೮ || || ೧೪೪ ||

ದುರ್ಧರ್ಷಕಂಸನ್ನ ಮಧ್ಯರಂಗದಿ ಕೆಡಹಿ
ಗುದ್ದಿಟ್ಟ ತಲೆಯ ಜನ ನೋಡೆ | ಜನ ನೋಡೆ ದುರ್ಮತಿಯ
ಮರ್ದಿಸಿದ ಕೃಷ್ಣ ಸಲಹೆಮ್ಮ || ೯ || || ೧೪೫ ||

ಉಗ್ರಸೇನಗೆ ಪಟ್ಟ ಶೀಘ್ರದಲಿ ಕಟ್ಟಿ ಕಾ –
ರಾಗೃಹದಲ್ಲಿದ್ದ ಜನನಿಯ | ಜನನಿಜನಕರ ಬಿಡಿಸಿ
ಅಗ್ರಜನ ಕೂಡಿ ಹೊರವಂಟ || ೧೦ || || ೧೪೬ ||

ಅಂಬುಜಾಂಬಕಿಗೊಲಿದು ಜಂಭಾರಿಪುರದಿಂದ
ಕೆಂಬಲ್ಲನ ಮರ ತೆಗೆದಂಥ | ತೆಗೆದಂಥ ಕೃಷ್ಣನ ಕ –
ರಾಂಬುಜಗಳೆಮ್ಮ ಸಲಹಲಿ || ೧೧ || || ೧೪೭ ||

ಒಪ್ಪಿಡಿಯವಲಕ್ಕಿಗೊಪ್ಪಿಕೊಂಡ ಮುಕುಂದ
ವಿಪ್ರನಿಗೆ ಕೊಟ್ಟ ಸೌಭಾಗ್ಯ | ಸೌಭಾಗ್ಯ ಕೊಟ್ಟ ನ –
ಮ್ಮಪ್ಪಗಿಂದಧಿಕ ದೊರೆಯುಂಟೆ || ೧೨ || || ೧೪೮ ||

ಗಂಧವಿತ್ತಬಲೆಯಳ ಕುಂದನೆಣಿಸದೆ ಪರಮ –
ಸುಂದರಿಯ ಮಾಡಿ ವಶನಾದ | ವಶನಾದ ಗೋ –
ವಿಂದ ಗೋವಿಂದ ನೀನೆಂಥ ಕರುಣಾಳೋ || ೧೩ || || ೧೪೯ ||

ಎಂದು ಕಾಂಬೆನೊ ನಿನ್ನ ಮಂದಸ್ಮಿತಾನನವ
ಕಂದರ್ಪನಯ್ಯ ಕವಿಗೇಯ | ಕವಿಗೇಯ ನಿನ್ನಂಥ
ಬಂಧುಗಳು ನಮಗಿರಲೊ ಅನುಗಾಲ || ೧೪ || || ೧೫೦ ||

ರಂಗರಾಯನೆ ಕೇಳು ಶೃಂಗಾರಗುಣಪೂರ್ಣ
ಭಂಗಪಡಲಾರೆ ಭವದೊಳು | ಭವಬಿಡಿಸಿ ಎನ್ನಂತ –
ರಂಗದಲಿ ನಿಂತು ಸಲಹಯ್ಯ || ೧೫ || || ೧೫೧ ||

ದಾನವಾರಣ್ಯಕೆ ಕೃಶಾನು ಕಾಮಿತಕಲ್ಪ –
ಧೇನು ಶ್ರೀಲಕ್ಷ್ಮೀಮುಖಪದ್ಮ | ಮುಖಪದ್ಮನವಸುಸ –
ದ್ಭಾನು ನೀನೆಮಗೆ ದಯವಾಗೊ || ೧೬ || || ೧೫೨ ||

ತಾಪತ್ರಯಗಳು ಮಹದಾಪತ್ತು ಪಡಿಸೋವು
ಕಾಪಾಡು ಕಂಡ್ಯ ಕಮಲಾಕ್ಷ | ಕಮಲಾಕ್ಷ ಮೊರೆಯಿಟ್ಟ
ದ್ರೌಪದಿಯ ಕಾಯ್ದೆ ಅಳುಕದೆ || ೧೭ || || ೧೫೩ ||

ಕರಣನಿಯಾಮಕನೆ ಕರುಣಾಳು ನೀನೆಂದು
ಮೊರೆಹೊಕ್ಕೆ ನಾನಾ ಪರಿಯಲ್ಲಿ | ಪರಿಯಲ್ಲಿ ಮಧ್ವೇಶ
ಮರುಳು ಮಾಡುವುದು ಉಚಿತಲ್ಲ || ೧೮ || || ೧೫೪ ||

ಮತದೊಳಗೆ ಮಧ್ವಮತ ವ್ರತದೊಳಗೆ ಹರಿದಿನವು
ಕಥೆಯೊಳಗೆ ಭಾಗವತಕಥೆಯೆನ್ನಿ | ಕಥೆಯೆನ್ನಿ ಮೂರ್ಲೋಕ –
ಕತಿಶಯ ಶ್ರೀಕೃಷ್ಣಪ್ರತಿಮೆನ್ನಿ || ೧೯ || || ೧೫೫ ||

ನೀನಲ್ಲದನ್ಯರಿಗೆ ನಾನೆರಗೆನೋ ಸ್ವಾಮಿ
ದಾನವಾಂತಕನೆ ದಯವಂತ | ದಯವಂತ ಎನ್ನಭಿ –
ಮಾನ ನಿನಗಿರಲೋ ದಯವಾಗೊ || ೨೦ || || ೧೫೬ ||

ಲೆಕ್ಕವಿಲ್ಲದೆ ದೇಶ ತುಕ್ಕಿದರೆ ಫಲವೇನು
ಶಕ್ತನಾದರೆ ಮಾತ್ರ ಫಲವೇನು | ಫಲವೇನು ನಿನ್ನ ಸ –
ದ್ಭಕ್ತರನು ಕಂಡು ನಮಿಸದೆ || ೨೧ || || ೧೫೭ ||

ನರರ ಕೊಂಡಾಡಿ ದಿನ ಬರಿದೆ ಕಳೆಯಲು ಬೇಡ
ನರನ ಸಖನಾದ ಶ್ರೀಕೃಷ್ಣ | ಶ್ರೀಕೃಷ್ಣಮೂರ್ತಿಯ
ಚರಿತೆ ಕೊಂಡಾಡೋ ಮನವುಬ್ಬಿ || ೨೨ || || ೧೫೮ ||

ಪಾಹಿ ಪಾಂಡವಪಾಲ ಪಾಹಿ ರುಕ್ಮಿಣಿಲೋಲ
ಪಾಹಿ ದ್ರೌಪದಿಯ ಅಭಿಮಾನ | ಅಭಿಮಾನ ಕಾಯ್ದ ಹರಿ
ದೇಹಿ ಕೈವಲ್ಯ ನಮಗಿಂದು || ೨೩ || || ೧೫೯ |

ಪಾಹಿ ಕರುಣಾಕರನೆ ಪಾಹಿ ಲಕ್ಷ್ಮೀರಮಣ
ಪಾಹಿ ಗೋಪಾಲ ಗುಣಶೀಲ | ಗುಣಶೀಲ ಪಾಪಸಂ –
ದೋಹ ಕಳೆದೆನ್ನ ಸಲಹಯ್ಯ || ೨೪ || || ೧೬೦ ||

ಏಕಾಂತಿಗಳ ಒಡೆಯ ಲೋಕೈಕರಕ್ಷಕಾ –
ನೇಕಜನವಂದ್ಯ ನಳಿನಾಕ್ಷ | ನಳಿನಾಕ್ಷ ನಿನ್ನ ಪಾ –
ದಕ್ಕೆ ಕೈಮುಗಿವೆ ದಯವಾಗೋ || ೨೫ || || ೧೬೧ ||

ಬಾಹಿರಂತರದಲ್ಲಿ ದೇಹಾಭಿಮಾನಿಗಳು
ನೀ ಹೇಳಿದಂತೆ ನಡಿಸೋರು | ನಡಿಸೋರು ನುಡಿಸೋರು
ದ್ರೋಹಕ್ಕೆ ಎನ್ನ ಗುರಿಮಾಳ್ಪೆ || ೨೬ || || ೧೬೨ ||

ಏಕಾದಶೇಂದ್ರಿಯಗಳೇಕಪ್ರಕಾರದಲಿ
ಲೋಕೈಕನಾಥ ನಿನ್ನಲ್ಲಿ | ನಿನ್ನಲ್ಲಿ ವಿಸ್ಮೃತಿಯ ಕೊಡಲು
ವೈಕುಂಠ ನಾನೊಲ್ಲೆ || ೨೭ || || ೧೬೩ ||

ನಿನ್ನವರ ನೀ ಮರೆದರಿನ್ನು ಸಾಕುವರ್ಯಾರು
ಪನ್ನಂಗಶಯನ ಪುರುಷೇಶ | ಪುರುಷೇಶ ನೀ ಸತತ ಶರಣ –
ರನು ಬಿಡುವೋದುಚಿತಲ್ಲ || ೨೮ || || ೧೬೪ ||

ಸ್ವಚ್ಛ ಗಂಗೆಯ ಒಳಗೆ ಅಚ್ಯುತನ ಸ್ಮರಿಸಿದೊಡೆ
ಅಚ್ಚ ಮಡಿಯೆಂದು ಕರೆಸೋರು | ಕರೆಸೋರು ಕೈವಲ್ಯ
ನಿಶ್ಚಯವು ಕಂಡ್ಯ ಎಮಗಿನ್ನು || ೨೯ || || ೧೬೫ ||

ಆನಂದನಂದ ಪರಮಾನಂದ ರೂಪ ನಿ –
ತ್ಯಾನಂದವರದ ಅಧಮಾರ | ಅಧಮರಿಗೆ ನಾರಾಯ –
ಣಾನಂದಮಯನೆ ದಯವಾಗೊ || ೩೦ || || ೧೬೬ ||

ಏನೆಂಬೆ ನಿನ್ನಾಟಕಾನಂದಮಯನೆ ಗುಣಿ –
ಗುಣಗಳೊಳಗಿದ್ದು ಗುಣಕಾರ್ಯ | ಗುಣಕಾರ್ಯಗಳ ಮಾಡಿ
ಪ್ರಾಣಿಗಳಿಗುಣಿಸುವಿ ಸುಖದುಃಖ || ೩೧ || || ೧೬೭ ||

ಕುಟ್ಟಿ ಬೀಸಿ ಕುಯ್ದು ಸುಟ್ಟು ಬೇಯ್ಸಿದ ಪಾಪ
ಕೆಟ್ಟುಪೋಪುದಕೆ ಬಗೆಯಿಲ್ಲ | ಬಗೆಯಿಲ್ಲದದರಿಂದ
ವಿಟ್ಠಲನ ಪಾಡಿ ಸುಖಿಯಾಗು || ೩೨ || || ೧೬೮ ||

ಶುಕನಯ್ಯ ನೀನೆ ತಾರಕನೆಂದು ನಿನ್ನ ಸೇ –
ವಕರು ಪೇಳುವುದು ನಾ ಕೇಳಿ | ನಾ ಕೇಳಿ ಮೊರೆಹೊಕ್ಕೆ
ಭಕುತವತ್ಸಲನೆ ದಯವಾಗೋ || ೩೩ || || ೧೬೯ ||

ಎನ್ನ ಪೋಲುವ ಪತಿತರಿನ್ನಿಲ್ಲ ಲೋಕದೊಳು ಪತಿತಪಾ –
ವನ ನಿನಗೆ ಸರಿಯಿಲ್ಲ | ಸರಿಯಿಲ್ಲ ಲೋಕದೊಳು
ಅನ್ಯಭಯ ಎನಗೆ ಮೊದಲಿಲ್ಲ || ೩೪ || || ೧೭೦ ||

ನೀ ನುಡಿದು ನಡೆದಂತೆ ನಾ ನುಡಿದು ನಡೆವೆನೋ
ಜ್ಞಾನಿಗಳ ಅರಸ ಗುಣಪೂರ್ಣ | ಗುಣಪೂರ್ಣ ನೀನೆನ್ನ
ಹೀನತೆಯ ಮಾಡಿ ಬಿಡುವೊದೇ || ೩೫ || || ೧೭೧ ||

ಮೂರು ಗುಣಗಳ ಮಾನಿ ಶ್ರೀರಮಾಭೂದುರ್ಗೆ
ನಾರೇರ ಮಾಡಿ ನಲಿದಾಡಿ | ನಲಿದಾಡಿ ಜೀವಿಗಳ
ದೂರತರ ಮಾಡಿ ನಗುತಿರ್ಪೆ || ೩೬ || || ೧೭೨ ||

ವಿಷಯದೊಳು ಮನವಿರಿಸಿ ವಿಷಯ ಮನದೊಳಗಿರಿಸಿ
ವಿಷಯೇಂದ್ರಿಯಗಳ ಅಭಿಮಾನಿ | ಅಭಿಮಾನಿ ದಿವಿಜರಿಗೆ
ವಿಷಯನಾಗದಲೆ ಇರುತಿರ್ಪೆ || ೩೭ || || ೧೭೩ ||

ಲೋಕನಾಯಕನಾಗಿ ಲೋಕದೊಳು ನೀನಿದ್ದು
ಲೋಕಗಳ ಸೃಜಿಸಿ ಸಲಹುವಿ | ಸಲಹಿ ಸಂಹರಿಸುವ
ಲೋಕೇಶ ನಿನಗೆ ಎಣೆಗಾಣೆ || ೩೮ || || ೧೭೪ ||

ಜಗದುದರ ನೀನಾಗಿ ಜಗದೊಳಗೆ ನೀನಿಪ್ಪೆ
ಜಗದಿ ಜೀವರನು ಸೃಜಿಸು-ವಿ | ಸೃಜಿಸಿ ಜೀವರೊಳಿದ್ದು
ಜಗದನ್ನನೆಂದು ಕರೆಸು-ವಿ || ೩೯ || || ೧೭೫ ||

ಏಸು ಜನ್ಮದ ಪುಣ್ಯ ತಾ ಸಮನಿಸಿತೊ ಎನಗೆ
ವಾಸುಕಿಶಯನ ಜನರೆಲ್ಲ | ಜನರೆಲ್ಲ ವೈಕುಂಠ –
ದಾಸನೆಂದೆನ್ನ ತುತಿಸೋರು || ೪೦ || || ೧೭೬ ||

ಮಣಿಕುಂದಣಗಳು ಕಂಕಣದಿ ಶೋಭಿಸುವಂತೆ
ತೃಣದಿ ನಿನ್ನಖಿಳ ಶ್ರೀದೇವಿ | ಶ್ರೀದೇವಿಸಹಿತ ನಿ –
ರ್ಗುಣನು ಶೋಭಿಸುವಿ ಪ್ರತಿದಿನ || ೪೧ || || ೧೭೭ ||

ಈತನ ಪದಾಂಬುಜ ವಿಧಾತೃ ಮೊದಲಾದ ಸುರ –
ವ್ರಾತ ಪೂಜಿಪುದು ಪ್ರತಿದಿನ | ಪ್ರತಿದಿನದಿ ಶ್ರೀಜಗ –
ನ್ನಾಥವಿಟ್ಠಲನ ನೆನೆ ಕಂಡ್ಯ || ೪೨ || || ೧೭೮ ||


SrI kRuShNa stuti

j~jAnasuj~jAnapraj~jAnavij~jAnamaya
mANavakarUpa vasudEva | vasudEvatanaya su –
j~jAnavanu koTTu karuNiso || 1 || || 137 ||

AdinArAyaNanu BUdEvi more kELi
yAdavara kuladalli janisida | janisida SrIkRuShNa
pAdakke SaraNeMbe dayavAgo || 2 || || 138 ||

vasudEvanaMdanana hasugUsu enabEDi
SiSuvAgi koMda SakaTanna | SakaTavatsAsurara
asuvaLidu poreda jagavanna || 3 || || 139 ||

vAtarUpili baMda A tRuNAvartanna
pAtALakiLuhi maDuhida | maDuhi moleyuNisidA
pUtaNiya koMda puruShESa || 4 || || 140 ||

dEvakIsutanAgi gOvugaLa kAydare
pAvakana nuMgi nalivOne | nalivOne mUrlOka
Ova dEvEMdra tutipOne || 5 || || 141 ||

kuvalayApIDananu lavamAtradali koMdu
Sivana cApavanu muridiTTa | muridiTTa muShTikana
bavaradali keDahida dhareyOLu || 6 || || 142 ||

kappa koDalilleMdu darpadali dEvEMdra
guppidanu maLeya vrajadoLu | vrajadoLu parvatava
puShpadaMtetti salahIda || 7 || || 143 ||

vaMcisida hariyeMdu saMciMteyali kaMsa
maMcada mEle kuLitirda | kuLitirda madakarige
paMcAsyanaMte eragIda || 8 || || 144 ||

durdharShakaMsanna madhyaraMgadi keDahi
guddiTTa taleya jana nODe | jana nODe durmatiya
mardisida kRuShNa salahemma || 9 || || 145 ||

ugrasEnage paTTa SIGradali kaTTi kA –
rAgRuhadallidda jananiya | jananijanakara biDisi
agrajana kUDi horavaMTa || 10 || || 146 ||

aMbujAMbakigolidu jaMBAripuradiMda
keMballana mara tegedaMtha | tegedaMtha kRuShNana ka –
rAMbujagaLemma salahali || 11 || || 147 ||

oppiDiyavalakkigoppikoMDa mukuMda
vipranige koTTa sauBAgya | sauBAgya koTTa na –
mmappagiMdadhika doreyuMTe || 12 || || 148 ||

gaMdhavittabaleyaLa kuMdaneNisade parama –
suMdariya mADi vaSanAda | vaSanAda gO –
viMda gOviMda nIneMtha karuNALO || 13 || || 149 ||

eMdu kAMbeno ninna maMdasmitAnanava
kaMdarpanayya kavigEya | kavigEya ninnaMtha
baMdhugaLu namagiralo anugAla || 14 || || 150 ||

raMgarAyane kELu SRuMgAraguNapUrNa
BaMgapaDalAre BavadoLu | BavabiDisi ennaMta –
raMgadali niMtu salahayya || 15 || || 151 ||

dAnavAraNyake kRuSAnu kAmitakalpa –
dhEnu SrIlakShmImuKapadma | muKapadmanavasusa –
dBAnu nInemage dayavAgo || 16 || || 152 ||

tApatrayagaLu mahadApattu paDisOvu
kApADu kaMDya kamalAkSha | kamalAkSha moreyiTTa
draupadiya kAyde aLukade || 17 || || 153 ||

karaNaniyAmakane karuNALu nIneMdu
morehokke nAnA pariyalli | pariyalli madhvESa
maruLu mADuvudu ucitalla || 18 || || 154 ||

matadoLage madhvamata vratadoLage haridinavu
katheyoLage BAgavatakatheyenni | katheyenni mUrlOka –
katiSaya SrIkRuShNapratimenni || 19 || || 155 ||

nInalladanyarige nAneragenO svAmi
dAnavAMtakane dayavaMta | dayavaMta ennaBi –
mAna ninagiralO dayavAgo || 20 || || 156 ||

lekkavillade dESa tukkidare PalavEnu
SaktanAdare mAtra PalavEnu | PalavEnu ninna sa –
dBaktaranu kaMDu namisade || 21 || || 157 ||

narara koMDADi dina baride kaLeyalu bEDa
narana saKanAda SrIkRuShNa | SrIkRuShNamUrtiya
carite koMDADO manavubbi || 22 || || 158 ||

pAhi pAMDavapAla pAhi rukmiNilOla
pAhi draupadiya aBimAna | aBimAna kAyda hari
dEhi kaivalya namagiMdu || 23 || || 159 |

pAhi karuNAkarane pAhi lakShmIramaNa
pAhi gOpAla guNaSIla | guNaSIla pApasaM –
dOha kaLedenna salahayya || 24 || || 160 ||

EkAMtigaLa oDeya lOkaikarakShakA –
nEkajanavaMdya naLinAkSha | naLinAkSha ninna pA –
dakke kaimugive dayavAgO || 25 || || 161 ||

bAhiraMtaradalli dEhABimAnigaLu
nI hELidaMte naDisOru | naDisOru nuDisOru
drOhakke enna gurimALpe || 26 || || 162 ||

EkAdaSEMdriyagaLEkaprakAradali
lOkaikanAtha ninnalli | ninnalli vismRutiya koDalu
vaikuMTha nAnolle || 27 || || 163 ||

ninnavara nI maredarinnu sAkuvaryAru
pannaMgaSayana puruShESa | puruShESa nI satata SaraNa –
ranu biDuvOducitalla || 28 || || 164 ||

svacCa gaMgeya oLage acyutana smarisidoDe
acca maDiyeMdu karesOru | karesOru kaivalya
niScayavu kaMDya emaginnu || 29 || || 165 ||

AnaMdanaMda paramAnaMda rUpa ni –
tyAnaMdavarada adhamAra | adhamarige nArAya –
NAnaMdamayane dayavAgo || 30 || || 166 ||

EneMbe ninnATakAnaMdamayane guNi –
guNagaLoLagiddu guNakArya | guNakAryagaLa mADi
prANigaLiguNisuvi suKaduHKa || 31 || || 167 ||

kuTTi bIsi kuydu suTTu bEysida pApa
keTTupOpudake bageyilla | bageyilladadariMda
viTThalana pADi suKiyAgu || 32 || || 168 ||

Sukanayya nIne tArakaneMdu ninna sE –
vakaru pELuvudu nA kELi | nA kELi morehokke
Bakutavatsalane dayavAgO || 33 || || 169 ||

enna pOluva patitarinnilla lOkadoLu patitapA –
vana ninage sariyilla | sariyilla lOkadoLu
anyaBaya enage modalilla || 34 || || 170 ||

nI nuDidu naDedaMte nA nuDidu naDevenO
j~jAnigaLa arasa guNapUrNa | guNapUrNa nInenna
hInateya mADi biDuvodE || 35 || || 171 ||

mUru guNagaLa mAni SrIramABUdurge
nArEra mADi nalidADi | nalidADi jIvigaLa
dUratara mADi nagutirpe || 36 || || 172 ||

viShayadoLu manavirisi viShaya manadoLagirisi
viShayEMdriyagaLa aBimAni | aBimAni divijarige
viShayanAgadale irutirpe || 37 || || 173 ||

lOkanAyakanAgi lOkadoLu nIniddu
lOkagaLa sRujisi salahuvi | salahi saMharisuva
lOkESa ninage eNegANe || 38 || || 174 ||

jagadudara nInAgi jagadoLage nInippe
jagadi jIvaranu sRujisu-vi | sRujisi jIvaroLiddu
jagadannaneMdu karesu-vi || 39 || || 175 ||

Esu janmada puNya tA samanisito enage
vAsukiSayana janarella | janarella vaikuMTha –
dAsaneMdenna tutisOru || 40 || || 176 ||

maNikuMdaNagaLu kaMkaNadi SOBisuvaMte
tRuNadi ninnaKiLa SrIdEvi | SrIdEvisahita ni –
rguNanu SOBisuvi pratidina || 41 || || 177 ||

Itana padAMbuja vidhAtRu modalAda sura –
vrAta pUjipudu pratidina | pratidinadi SrIjaga –
nnAthaviTThalana nene kaMDya || 42 || || 178 ||

Leave a Reply

You might also like

error: Content is protected !!