Tatva suvvali – Prana Devara stotra

Composer : Shri Jagannatha dasaru

By Smt.Shubhalakshmi Rao

ಶ್ರೀ ಪ್ರಾಣದೇವರ ಸ್ತುತಿ

ಹನುಮಭೀಮಾನಂದಮುನಿರಾಯ ಎನ್ನ ದು- ರ್ಗುಣಗಳೆಣಿಸದಲೆ ಸಲಹೆಂದು |
ಸಲಹೆಂದು ಬಿನ್ನೈಪೆ ವಿ- ಜ್ಞಾನರೂಪ ವಿಜತಾತ್ಮ || ೫೨ ||

ಪ್ರಾಣನಾಯಕ ನಿನ್ನ ಕಾಣಬೇಕೆಂದೆನುತಸಾನುರಾಗದಲಿ ನಮಿಸುವೆ |
ನಮಿಸುವೆನು ಮೂಜಗ-ತ್ರಾಣ ಪಂಚಾಸ್ಯ ಪರಮೇಷ್ಠಿ || ೫೩ ||

ಚತುರವಿಂಶತಿ ತತ್ವಪತಿಗಳಾಳುವ ಶಕ್ತನತಿಸುವೆನು ನಿನ್ನ ಚರಣಕ್ಕೆ |
ಚರಣಕಮಲವ ತೋರಿ ಕೃತಕೃತ್ಯನೆನಿಸೋ ಕೃಪೆಯಿಂದ || ೫೪ ||

ತ್ರಿದಶತ್ರಿಂಶತಿರೂಪ ಸುದತಿಯಿಂದೊಡಗೂಡಿ | ಪದುಮಜಾಂಡದೊಳು ಸರ್ವತ್ರ |
ಸರ್ವತ್ರ ಭಕುತರ ಬಡಿಗನಾಗಿದ್ದು ಸಲಹುವಿ || ೫೫ ||

ಕೋಟಿತ್ರಯಸ್ವರೂಪ ದಾಟಿಸು ಭವಾಬ್ಧಿಯ ನಿಶಾಟಕುಲವೈರಿ ಭಯಹಾರಿ |
ಭಯಹಾರಿ ರಣದೊಳು ಕಿ- ರೀಟಿಯನು ಕಾಯ್ದಿ ಧ್ವಜನಾಗಿ || ೫೬ ||

ಮೂರೇಳುಸಾವಿರದ ಆರ್ನೂರುಮಂತ್ರ ಈರೇಳು ಜಗದಿ ಜನರೊಳು |
ಮಾಡಿ ಉ- ದ್ಧಾರಗೈಸುವಿಯೋ ಸುಜನರ || ೫೭ ||

ಪವಮಾನರಾಯ ನೀ ತ್ರಿವಿಧಜೀವರೊಳಿದ್ದು ವಿವಿಧವ್ಯಾಪಾರ ನೀ ಮಾಡಿ |
ನೀ ಮಾಡಿ ಮಾಡಿಸಿ ಅವರವರ ಗತಿಯ ಕೊಡುತಿಪ್ಪ || ೫೮ ||

ಪವಮಾನಗುರುವೆ ನಿನ್ನವರ ಸೇವಕ ನಾನು ಶ್ರವಣಮನನಾದಿಭಕುತಿಯ |
ಭಕುತಿ ನಿನ್ನಲ್ಲಿ ಮಾ- ಧವನಲ್ಲಿ ಕೊಟ್ಟು ಸಲಹಯ್ಯ || ೫೯ ||

ಮಿಶ್ರಜೀವರೊಳಗಿದ್ದು ಮಿಶ್ರಜ್ಞಾನವನಿತ್ತು ಮಿಶ್ರಸಾಧನವ ನೀ ಮಾಡಿ |
ನೀ ಮಾಡಿ ಮಾಡಿಸಿ ಮಿಶ್ರಗತಿಗಳನೇ ಕೊಡುತಿಪ್ಪಿ || ೬೦ ||

ಅನಿಲದೇವನೆ ದೈತ್ಯದನುಜಗಣದೊಳಗಿದ್ದು ಅನುಚಿತಕರ್ಮಗಳ ನೀ ಮಾಡಿ |
ನೀ ಮಾಡಿ ಮಾಡಿಸಿ ದಣಿಸುವಿಯೊ ಅವರ ದಿವಿಜೇಶ || ೬೧ ||

ಕಾಲನಿಯಾಮಕನೆ ಕಾಲತ್ರಯಂಗಳಲಿ ಕಾಲಗುಣಕರ್ಮ ಅನುಸಾರ |
ಅನುಸಾರವಿತ್ತು ಪರಿ-ಪಾಲಿಸುವಿ ಜಗವ ಪವಮಾನ || ೬೨ ||

ಆಖಣಾಶ್ಮನೆ ನಿನ್ನ ಸೋಕಲರಿಯೆವು ದೋಷ ಶ್ರೀಕಂಠಮುಖ್ಯಸುರರಿಗೆ |
ಸುರರಿಗಿಲ್ಲವೊ ಭಾರ- ತೀಕಾಂತ ನಿನಗೆ ಬಹದೆಂತೋ || ೬೩ ||

ಕಲ್ಯಾದಿದೈತ್ಯಕುಲದಲ್ಲಣ ದಯಾಸಾಂದ್ರ ಬಲ್ಲಿದನು ಜಗಕೆ ಭಯದೂರ |
ಭಯದೂರ ಭಕ್ತರನು ಎಲ್ಲಕಾಲದಲಿ ಸಲಹಯ್ಯ || ೬೪ ||

ಕಾರುಣ್ಯನಿಧಿ ಜಗದ ಉದ್ಧಾರಕನು ನೀನೆ ಉ- ದ್ಧಾರ ಮಾಡದಿರೆ ಭಕತರ |
ಭಕತರನು ಕಾವರಿನ್ನಾರು ಲೋಕದಲಿ ಜಯವಂತ || ೬೫ ||

ತ್ರಿಜದ್ಗುರುವರೇಣ್ಯ ಋಜುಗಣಾಧಿಪ ಪದಾಂಬುಜಯಗ್ಮಕೆರಗಿ ಬಿನ್ನೈಪೆ |
ಬಿನ್ನೈಪೆ ಮನ್ಮನದಿ ನಿಜರೂಪ ತೋರಿ ಸಂತೈಸು || ೬೬ ||

ಅನಿಲದೇವನೆ ನಿನ್ನ ಜನುಮಜನುಮಗಳಲ್ಲಿ ಇನಿತು ಬೇಡುವೆನು ಎಂದೆಂದು |
ಎಂದೆಂದು ವಿಷಯ ಚಿಂ- ತನೆಯ ಕೊಡದೆನ್ನ ಸಲಹೆಂದು || ೬೭ ||

ತಾರತಮ್ಯಜ್ಞಾನ ವೈರಾಗ್ಯಸದ್ಭಕ್ತಿ ದಾರಢ್ಯವಾಗಿ ಇರಲೆಂದು |
ಇರಲೆಂದು ಬಿನ್ನೈಪೆ ಭಾರತೀರಮಣ ನಿನಗಾನು || ೬೮ ||

ಮರಣಜನನಗಳು ಬಂದರೆ ಬರಲಿ ಪ್ರದ್ವೇಷ ಗುರುಹಿರಿಯರಲ್ಲಿ ಹರಿಯಲ್ಲಿ |
ಹರಿಯಲ್ಲಿ ಕೊಡದೆ ಉ-ದ್ಧರಿಸಬೇಕೆನ್ನ ಪರಮಾಪ್ತ || ೬೯ ||

ವಿಷಯದಾಶೆಯ ಬಿಡಿಸಿ ಅಸುನಾಥ ಎನ್ನ ಪಾಲಿಸಬೇಕು ಮನಸು ನಿನ್ನಲ್ಲಿ |
ನಿನ್ನಲ್ಲಿ ನಿಲಿಸಿ ಸಂ-ತಸದಿ ಕಾಯೆನ್ನ ಮರುದೀಶ || ೭೦ ||

ಅಂಜಿದವರಿಗೆ ವಜ್ರಪಂಜರನು ನೀನೆ ಪ್ರಭಂಜನಪ್ರಭುವೆ ಪ್ರತಿದಿನ |
ಪ್ರತಿದಿನದಿ ನಮ್ಮ ಭಯ ಭಂಜಿಸಿ ಕಾಯೋ ಬಹುರೂಪ || ೭೧ ||

ಕಲಿಮುಖ್ಯದೈತ್ಯರುಪಟಳವ ಪರಿಹರಿಸಿ ಮತ್ಕುಲಗುರುವೆ ಸಲಹೋ ಕಾರುಣ್ಯ |
ಕಾರುಣ್ಯಸಿಂಧು ನಿನ್ನೊಲುಮೆಯೊಂದಿರಲು ಹರಿ ಕಾಯ್ವ || ೭೨ ||

ಭಾರತೀರಮಣ ಮದ್ಭಾರ ನಿನ್ನದು ಎನ್ನಪಾರದೋಷಗಳ ಎಣಿಸದೆ |
ಎಣಿಸದೆ ಸಂತೈಸೊ ಕಾರುಣ್ಯಸಿಂಧು ಎಂದೆಂದು || ೭೩ ||

ಶ್ರೀಶಸದ್ಮನೆ ಜೀವರಾಶಿಯೊಳಗೊಂದಧಿಕ ವಿಂಶತಿ ಸಹಸ್ರದಾರ್ನೂರು |
ಆರ್ನೂರು ಹಗಲಿರಳು ಶ್ವಾಸಜಪಮಾಡಿ ಹರಿಗೀವಿ || ೭೪ ||

ಭವಿಷ್ಯದ್ವಿಧಾತ ತವ ಚರಣಸೇವಿಪೆ ನಾ ಶ್ರವಣ ಮನನಾದಿ ಭಕುತಿಯ |
ಭಕುತಿ ನಿನ್ನಲ್ಲಿ ಮಾಧವನಲ್ಲಿ ಕೊಟ್ಟು ಸಲಹಯ್ಯ || ೭೫ ||

ತಾಸಿಗೊಂಭೈನೂರು ಶ್ವಾಸಜಪಗಳ ಮಾಡಿ ಬೇಸರದೆ ನಮ್ಮ ಸಲಹುವಿ |
ಸಲಹುವಿ ಶ್ರೀಭಾರ- ತೀಶ ನಿನ್ನಡಿಗೆ ಶರಣೆಂಬೆ || ೭೬ ||

ಬಲದೇವ ನೀನೆ ಬೆಂಬಲವಾಗಿ ಇರಲು ದುರ್ಬಲ ಕಾಲಕರ್ಮ ಕೆಡಿಸೋದೆ |
ಕೆಡಿಸೋದೆ ನಿನ್ನ ಹಂಬಲು ಉಳ್ಳ ಜನರ ಜಗದೊಳು || ೭೭ ||

ಹಾಲಾಹಲವನುಂಡು ಪಾಲಿಸಿದೆ ಜಗವ ಕರುಣಾಳು ಪವಮಾನ ವಿಜ್ಞಾನ |
ವಿಜ್ಞಾನಭಕುತಿ ಶ್ರೀಲೋಲನಲಿ ಕೊಟ್ಟು ಸಲಹಯ್ಯ || ೭೮ ||

ವಾತಾತ್ಮಜನೆ ನಿನ್ನ ಪ್ರೀತಿಯನೆ ಪಡೆದ ಖದ್ಯೋತನಂದನನ ಪೊರೆದಂತೆ |
ಪೊರೆದಂತೆ ಪೊರೆಯನ್ನ ನೀನಿಂತು ಕ್ಷಣದಿ ಕೃಪೆಯಿಂದ || ೭೯ ||

ಅಪರಾಜಿತನೆ ಮನದೊಳಪರೋಕ್ಷವಿತ್ತೆನಗೆ ಅಪವರ್ಗದಲ್ಲಿ ಸುಖವೀಯೋ |
ಸುಖವೀಯೋ ನೀ ಭಾವಿ ಲೋ- ಕಪಿತಮಹನೆ ದಯವಾಗೊ || ೮೦ ||

ಬುದ್ಧಿ ಬಲಕೀರ್ತಿ ಪರಿಶುದ್ಧ ಭಕ್ತಿಜ್ಞಾನ ಸದ್ಧೈರ್ಯಾಜಾಡ್ಯ ಆಯುಷ್ಯ |
ಆಯುಷ್ಯವಿತ್ತಭಿವೃದ್ಧಿಯೈದಿಸುವಿ ಪವಮಾನ || ೮೧ ||

ದ್ರೌಪದೀರಮಣ ವಿಜ್ಞಾಪಿಸುವೆ ನಿನ್ನಡಿಗೆ ತಾಪತ್ರಯಗಳ ಭಯಶೋಕ |
ಭಯಶೋಕ ಪರಿಹರಿಸಿ ಶ್ರೀಪತಿಯ ಧ್ಯಾನಸುಖವೀಯೋ || ೮೨ ||

ಪಾಲ್ಗಡಲ ಮಗಳಾಳ್ದ ನಾಳ್ಗಳೊಳಗಪ್ರತಿಮ ಓಲೈಪ ಜನರ ಸಲಹೆಂದು |
ಸಲಹೆಂದು ಬಿನ್ನೈಪೆ ಫಲ್ಗುಣಾಗ್ರಜನೆ ಪ್ರತಿದಿನ || ೮೩ ||

ಅದ್ವೈತಮತ ವಿಪಿನ ಪ್ರಧ್ವಂಸಕಾನಲನೆ ಮಧ್ಯಗೇಹಾಖ್ಯ ದ್ವಿಜಪತ್ನಿ |
ದ್ವಿಜಪತ್ನಿ ಜಠರದೊಳು ಉದ್ಭವಿಸಿ ಮೆರೆದೆ ಜಗದೊಳು || ೮೪ ||

ಮಧ್ವಾಖ್ಯವೆಂಬ ಪ್ರಸಿದ್ಧ ಶ್ರುತಿಪ್ರತಿಪಾದ್ಯ ಮಧ್ವಮುನಿರಾಯ ತವ ಕೀರ್ತಿ |
ತವ ಕೀರ್ತಿ ವಾಣಿ- ರುದ್ರಾದಿಗಳಿಗರಿದು ತುತಿಸಲ್ಕೆ || ೮೫ ||

ಹುಣಿಸೆ ಬೀಜದಿ ಪಿತನ ಋಣವ ತಿದ್ದಿದ ಪೂರ್ಣ- ಗುಣವಂತ ಗುರುವೆ ದಯವಾಗೊ |
ದಯವಾಗೊ ನೀನೆನ್ನ ಋಣಮೂರರಿಂದ ಗೆಲಿಸಯ್ಯ || ೮೬ ||

ಯತ್ಯಾಶ್ರಮವ ವಹಿಸಿ ಶ್ರುತ್ಯರ್ಥ ಗ್ರಂಥ ಮೂವತ್ತೇಳು ರಚಿಸಿ ದಯದಿಂದ |
ದಯದಿಂದ ನಿನ್ನವರಿ- ಗಿತ್ತು ಪಾಲಿಸಿದಿ ಕರುಣಾಳು || ೮೭ ||

ನಾಮತ್ರಯಾಂಕಿತ ಸುಧೀಮಂತ ಕುಲಗುರುವೆ ಶ್ರೀಮದಾಚಾರ್ಯ ಗುರುವರ್ಯ |
ಗುರುವರ್ಯ ಧರ್ಮಾರ್ಥ ಕಾಮ ಮೋಕ್ಷದನೆ ದಯವಾಗೋ || ೮೮ ||

ಮೂರೇಳು ಕುಮತಘೋರಾರಣ್ಯಪಾವಕ ಸಮೀರಾವತಾರ ಗಂಭೀರ |
ಗಂಭೀರ ತ್ವತ್ಪದಾಂಭೋರುಹ ಧ್ಯಾನ ಕರುಣಿಸೋ || ೮೯ ||

ಈ ಚರಾಚರದೊಳು ಅನಾಚಾರದಲಿ ನಡೆವ ನೀಚಮಾಯಿಗಳ ಗೆಲಿದಿರ್ಪ |
ಗೆಲಿದಿರ್ಪ ಶ್ರೀಮದಾಚಾರ್ಯರಡಿಗಳಿಗೆ ಶರಣೆಂಬೆ || ೯೦ ||

ನಿನಗಿಂದಧಿಕರಾದ ಅನಿಮಿತ್ತ ಬಾಂಧವರು ಎನಗಿಲ್ಲ ಶ್ರೀಮಧ್ವಮುನಿರಾಯ |
ಮುನಿರಾಯನಿರಲು ಯೋಚನೆಯಾಕೆ ಜಗದಿ ನಮಗಿನ್ನು || ೯೧ ||

ಶ್ರೀಮತ್-ಸಮಸ್ತ ಗುಣಧಾಮ ವಿಷ್ಣೋರಂಘ್ರಿ- ತಾಮರಸಮಧುಪ ಭವತಾಪ |
ಭವತಾಪ ಗುರುಸಾರ್ವಭೌಮ ಪರಿಹರಿಸಿ ಸಲಹಯ್ಯ || ೯೨ ||

ಉದ್ಧರಿಪುದೆಮ್ಮ ಹನುಮದ್-ಭೀಮಸೇನ ಗುರುಮಧ್ವಮುನಿರಾಯ ಕವಿಗೇಯ |
ಕವಿಗೇಯ ಎನ್ನ ದುರ್-ಬುದ್ಧಿಗಳ ಬಿಡಿಸೋ ದಯದಿಂದ || ೯೩ ||

ನಮೋನಮೋ ಭಾರತೀರಮಣ ಹನುಮದ್ಭೀಮ- ಯತಿಕುಲೋತ್ತಂಸ ಗುರುಮಧ್ವ |
ಗುರುಮಧ್ವ ದುರ್ವಾದಿ- ತಿಮಿರಮಾರ್ತಾಂಡ ಸುರಶೌಂಡ || ೯೪ ||

ನಮ್ಮ ಗುರುಗಳ ಪಾದ ಒಮ್ಮೆ ನೆನೆಯಲು ಜನ್ಮ- ಜನ್ಮಕೃತ ಪಾಪ ಪರಿಹಾರ |
ಪರಿಹಾರವಾಗಿ ಸದ್-ಬ್ರಹ್ಮಪದದಲ್ಲಿ ಸುಖಿಸೋರು || ೯೫ ||

ವಾಯು ಹನುಮದ್ಭೀಮರಾಯ ಮಧ್ವರ ಸ್ತೋತ್ರ ಬಾಯೊಳುಳ್ಳವಗೆ ಜನ್ಮಾಧಿ |
ಜನ್ಮಾಧಿರೋಗ ಭಯವೀಯನೆಂದೆಂದೂ ಭಗವಂತ || ೯೬ ||

ಮಾತರಿಶ್ವನೆ ಎನ್ನ ಮಾತ ಲಾಲಿಸಿ ಜಗನ್ನಾಥವಿಠ್ಠಲನ ಮನದಲ್ಲಿ |
ಮನದಲ್ಲಿ ತೋರಿ ಭವಭೀತಿ ಬಿಡಿಸಯ್ಯ ಭವ್ಯಾತ್ಮ || ೯೭ ||


SrI prANadEvara stuti

hanumaBImAnaMdamunirAya enna du- rguNagaLeNisadale salaheMdu |
salaheMdu binnaipe vi- j~jAnarUpa vijatAtma || 52 ||

prANanAyaka ninna kANabEkeMdenutasAnurAgadali namisuve |
namisuvenu mUjaga-trANa paMcAsya paramEShThi || 53 ||

caturaviMSati tatvapatigaLALuva Saktanatisuvenu ninna caraNakke |
caraNakamalava tOri kRutakRutyanenisO kRupeyiMda || 54 ||

tridaSatriMSatirUpa sudatiyiMdoDagUDi | padumajAMDadoLu sarvatra |
sarvatra Bakutara baDiganAgiddu salahuvi || 55 ||

kOTitrayasvarUpa dATisu BavAbdhiya niSATakulavairi BayahAri |
BayahAri raNadoLu ki- rITiyanu kAydi dhvajanAgi || 56 ||

mUrELusAvirada ArnUrumaMtra IrELu jagadi janaroLu |
mADi u- ddhAragaisuviyO sujanara || 57 ||

pavamAnarAya nI trividhajIvaroLiddu vividhavyApAra nI mADi |
nI mADi mADisi avaravara gatiya koDutippa || 58 ||

pavamAnaguruve ninnavara sEvaka nAnu SravaNamananAdiBakutiya |
Bakuti ninnalli mA- dhavanalli koTTu salahayya || 59 ||

miSrajIvaroLagiddu miSraj~jAnavanittu miSrasAdhanava nI mADi |
nI mADi mADisi miSragatigaLanE koDutippi || 60 ||

aniladEvane daityadanujagaNadoLagiddu anucitakarmagaLa nI mADi |
nI mADi mADisi daNisuviyo avara divijESa || 61 ||

kAlaniyAmakane kAlatrayaMgaLali kAlaguNakarma anusAra |
anusAravittu pari-pAlisuvi jagava pavamAna || 62 ||

AKaNASmane ninna sOkalariyevu dOSha SrIkaMThamuKyasurarige |
surarigillavo BAra- tIkAMta ninage bahadeMtO || 63 ||

kalyAdidaityakuladallaNa dayAsAMdra ballidanu jagake BayadUra |
BayadUra Baktaranu ellakAladali salahayya || 64 ||

kAruNyanidhi jagada uddhArakanu nIne u- ddhAra mADadire Bakatara |
Bakataranu kAvarinnAru lOkadali jayavaMta || 65 ||

trijadguruvarENya RujugaNAdhipa padAMbujayagmakeragi binnaipe |
binnaipe manmanadi nijarUpa tOri saMtaisu || 66 ||

aniladEvane ninna janumajanumagaLalli initu bEDuvenu eMdeMdu |
eMdeMdu viShaya ciM- taneya koDadenna salaheMdu || 67 ||

tAratamyaj~jAna vairAgyasadBakti dAraDhyavAgi iraleMdu |
iraleMdu binnaipe BAratIramaNa ninagAnu || 68 ||

maraNajananagaLu baMdare barali pradvESha guruhiriyaralli hariyalli |
hariyalli koDade u-ddharisabEkenna paramApta || 69 ||

viShayadASeya biDisi asunAtha enna pAlisabEku manasu ninnalli |
ninnalli nilisi saM-tasadi kAyenna marudISa || 70 ||

aMjidavarige vajrapaMjaranu nIne praBaMjanapraBuve pratidina |
pratidinadi namma Baya BaMjisi kAyO bahurUpa || 71 ||

kalimuKyadaityarupaTaLava pariharisi matkulaguruve salahO kAruNya |
kAruNyasiMdhu ninnolumeyoMdiralu hari kAyva || 72 ||

BAratIramaNa madBAra ninnadu ennapAradOShagaLa eNisade |
eNisade saMtaiso kAruNyasiMdhu eMdeMdu || 73 ||

SrISasadmane jIvarASiyoLagoMdadhika viMSati sahasradArnUru |
ArnUru hagaliraLu SvAsajapamADi harigIvi || 74 ||

BaviShyadvidhAta tava caraNasEvipe nA SravaNa mananAdi Bakutiya |
Bakuti ninnalli mAdhavanalli koTTu salahayya || 75 ||

tAsigoMBainUru SvAsajapagaLa mADi bEsarade namma salahuvi |
salahuvi SrIBAra- tISa ninnaDige SaraNeMbe || 76 ||

baladEva nIne beMbalavAgi iralu durbala kAlakarma keDisOde |
keDisOde ninna haMbalu uLLa janara jagadoLu || 77 ||

hAlAhalavanuMDu pAliside jagava karuNALu pavamAna vij~jAna |
vij~jAnaBakuti SrIlOlanali koTTu salahayya || 78 ||

vAtAtmajane ninna prItiyane paDeda KadyOtanaMdanana poredaMte |
poredaMte poreyanna nIniMtu kShaNadi kRupeyiMda || 79 ||

aparAjitane manadoLaparOkShavittenage apavargadalli suKavIyO |
suKavIyO nI BAvi lO- kapitamahane dayavAgo || 80 ||

buddhi balakIrti pariSuddha Baktij~jAna saddhairyAjADya AyuShya |
AyuShyavittaBivRuddhiyaidisuvi pavamAna || 81 ||

draupadIramaNa vij~jApisuve ninnaDige tApatrayagaLa BayaSOka |
BayaSOka pariharisi SrIpatiya dhyAnasuKavIyO || 82 ||

pAlgaDala magaLALda nALgaLoLagapratima Olaipa janara salaheMdu |
salaheMdu binnaipe PalguNAgrajane pratidina || 83 ||

advaitamata vipina pradhvaMsakAnalane madhyagEhAKya dvijapatni |
dvijapatni jaTharadoLu udBavisi merede jagadoLu || 84 ||

madhvAKyaveMba prasiddha SrutipratipAdya madhvamunirAya tava kIrti |
tava kIrti vANi- rudrAdigaLigaridu tutisalke || 85 ||

huNise bIjadi pitana RuNava tiddida pUrNa- guNavaMta guruve dayavAgo |
dayavAgo nInenna RuNamUrariMda gelisayya || 86 ||

yatyASramava vahisi Srutyartha graMtha mUvattELu racisi dayadiMda |
dayadiMda ninnavari- gittu pAlisidi karuNALu || 87 ||

nAmatrayAMkita sudhImaMta kulaguruve SrImadAcArya guruvarya |
guruvarya dharmArtha kAma mOkShadane dayavAgO || 88 ||

mUrELu kumataGOrAraNyapAvaka samIrAvatAra gaMBIra |
gaMBIra tvatpadAMBOruha dhyAna karuNisO || 89 ||

I carAcaradoLu anAcAradali naDeva nIcamAyigaLa gelidirpa |
gelidirpa SrImadAcAryaraDigaLige SaraNeMbe || 90 ||

ninagiMdadhikarAda animitta bAMdhavaru enagilla SrImadhvamunirAya |
munirAyaniralu yOcaneyAke jagadi namaginnu || 91 ||

SrImat-samasta guNadhAma viShNOraMGri- tAmarasamadhupa BavatApa |
BavatApa gurusArvaBauma pariharisi salahayya || 92 ||

uddharipudemma hanumad-BImasEna gurumadhvamunirAya kavigEya |
kavigEya enna dur-buddhigaLa biDisO dayadiMda || 93 ||

namOnamO BAratIramaNa hanumadBIma- yatikulOttaMsa gurumadhva |
gurumadhva durvAdi- timiramArtAMDa suraSauMDa || 94 ||

namma gurugaLa pAda omme neneyalu janma- janmakRuta pApa parihAra |
parihAravAgi sad-brahmapadadalli suKisOru || 95 ||

vAyu hanumadBImarAya madhvara stOtra bAyoLuLLavage janmAdhi |
janmAdhirOga BayavIyaneMdeMdU BagavaMta || 96 ||

mAtariSvane enna mAta lAlisi jagannAthaviThThalana manadalli |
manadalli tOri BavaBIti biDisayya BavyAtma || 97 ||

Leave a Reply

You might also like

error: Content is protected !!