Tatva suvvali – Mayavada Khandana

Composer : Shri Jagannatha dasaru

ಮಾಯಾವಾದಖಂಡನ

ಶಿವನು ನೀನಾದರೆ ಶಿವರಾಣಿ ನಿನಗೇನು
ಅವಿವೇಕಿ ಮನುಜ ಈ ಮಾತು | ಈ ಮಾತು ಕೇಳಿದರೆ
ಕವಿಜನರು ನಗರೇ ಕೈ ಹೊಡೆದು || ೧ || || ೩೫೪ ||

ಎಲ್ಲ ಒಂದೇ ಎಂಬ ಖುಲ್ಲಮಾನವ ನಿನ್ನ
ವಲ್ಲಭೆಯ ಬೆರೆದು ಸಂತಾನ | ಸಂತಾನ ಪಡೆವೇಕೆ
ಇಲ್ಲವೇ ಜನನೀ ಭಗಿನೇರು || ೨ || || ೩೫೫ ||

ಬಿಂಬ ಒಂದೇ ಪ್ರತಿಬಿಂಬ ಒಂದೆಂಬೆಲಾ
ಅಂಬರ ನೆಳಲು ಕಪ್ಪಾಗೆ | ಕಪ್ಪಾದ ಬಳಿಕ ನೀ –
ನೆಂಬ ಈ ಮಾತು ಪುಸಿಯಲ್ಲೇ || ೩ || || ೩೫೬ ||

ಎಲ್ಲ ಒಂದೇ ಎಂಬ ಸೊಲ್ಲು ಖರೆಯೆಂತೆನಲು
ಸುಳ್ಳು ಎಂಬೋದು ಖರೆಯಾಗಿ | ಖರೆಯೆಂಬ ಮಾತುಗಳು
ಸುಳ್ಳೆನ್ನರೇನೋ ಸುಜನರು || ೪ || || ೩೫೭ ||

ನಿನ್ನ ನಾ ಬೈದರೆ ಎನ್ನ ನೀ ಬೈಯಲು
ನಿರ್ಮೂಲವಾಯಿತು ಅದ್ವೈತ | ಅದ್ವೈತ ಉಳುಹಲಿಕೆ
ಸುಮ್ಮನಿರಬೇಕೋ ಎಲೊ ಪ್ರಾಣಿ || ೫ || || ೩೫೮ ||

ಶುದ್ಧ ಬ್ರಹ್ಮನ ಸುಗುಣ ಕದ್ದ ಪ್ರಯುಕ್ತ ಪ್ರ –
ಸಿದ್ಧ ಚೋರತ್ವ ನಿನ್ನಲ್ಲಿ | ನಿನ್ನಲ್ಲಿ ಪೊದ್ದಿತೋ
ಉದ್ಧಾರವೆಲ್ಲಿ ಭವದಿಂದ || ೬ || || ೩೫೯ ||

ಸುಳ್ಳಿಗಿಂತಧಿಕ ಮತ್ತಿಲ್ಲವೋ ಮಹಪಾಪ
ಸುಳ್ಳು ಕಳ್ಳತನವು ನಿನ್ನಲ್ಲಿ | ನಿನ್ನಲ್ಲಿ ಉಂಟಾಯಿ –
ತಲ್ಲೊ ಜಾರತ್ವ ಇದರಂತೆ || ೭ || || ೩೬೦ ||

ಮಾಯಾವಾದಿ ಮತವು ಹೇಯವೆಂಬುದು ಸಿದ್ಧ
ತಾಯಿತಂದೆಗಳು ಸತಿಪುತ್ರ | ಸತಿಪುತ್ರರಗಲಿದರೆ
ಬಾಯಿಬಿಟ್ಯಾಕೆ ಅಳುತಿದ್ದಿ || ೮ || || ೩೬೧ ||

ಮೇ ಮಾತೆ ವಂಧ್ಯೆಂಬ ಈ ಮಾತಿನಂತೆಲೆ
ಈ ಮೂರ್ತಮೂಜಗವು ಪುಸಿಯೆಂಬ | ಪುಸಿಯೆಂಬ ಮಾತುಗಳು
ಭ್ರಾಮಕವೊ ಖರೆಯೋ ನಿಜವೆಲ್ಲಿ || ೯ || || ೩೬೨ ||

ಶಶವಿಷಾಣಗಳೆಂದರೊಪ್ಪುವರೆ ಬಲ್ಲವರು
ಬಸವಗುಂಟೇನೋ ಮೊಲೆಹಾಲು | ಮೊಲೆಹಾಲು ಉಂಟೆ ತೋ –
ರಿಸು ಮಿಥ್ಯೆ ಸತ್ಯವಹುದೇನೋ || ೧೦ || || ೩೬೩ ||

ಸತ್ಯವೆಂದರೆ ಖರೆಯು ಮಿಥ್ಯೆ ಎಂದರೆ ಸುಳ್ಳು
ಸತ್ಯಮಿಥ್ಯೆಗಳು ಏಕತ್ರ | ಏಕತ್ರ ಇಹುದೆ ಉ –
ನ್ಮತ್ತ ಈ ಮಾತು ನಿಜವೆಲ್ಲಿ || ೧೧ || || ೩೬೪ ||

ಭೀತಿ ನಿರ್ಭೀತಿ ಶೀತಾತಪಗಳೊತ್ತಟ್ಟು
ನೀತವಾಗಿಹವೆ ಜಗದೊಳು | ಜಗದೊಳಿದ್ದರೆ ತೋರು
ಜಾತಿ ಭೇದಗಳು ಇರಲಾಗಿ || ೧೨ || || ೩೬೫ ||

’ದ್ವಾಸುಪರ್ಣಾ’ ಎಂಬ ಈ ಶ್ರುತಿಗಳಲ್ಲಿ ವಿ –
ಶ್ವಾಸ ಮಾಡದಲೆ ಜೀವೇಶ | ಜೀವೇಶರೈಕ್ಯೋಪ –
ದೇಶ ಮಾಡಿದವ ಚಂಡಾಲ || ೧೩ || ||೩೬೬ ||

ಜೀವೆಶರೋಂದೇಂಬ ಈ ವಾಕು ಕೆಳ್ವರಿಗೇ
ಕೆವಲಾಶ್ರಾವ್ಯವೇಂದೇಂದು | ಏಂದೇಂದು ಬುಧರು ಪಶು –
ಗಾವಿ ನೀನೇಂದು ಕರೇಯರೇ || ೧೪ || || ೩೬೭ ||

ಗುಣವಂತನೇಂಬ ಮಾತನು ಕೆಳಿ ಸುಖಿಸದವ
ಮನುಜಪಶು ಸಿದ್ಧ ಪುಸಿಯಲ್ಲ | ಪುಸಿಯಲ್ಲ ನಿನ್ನ ಮತ
ಗಣನೆ ಮಾಡದಲೆ ಬೈಯ್ವೋರೋ || ೧೫ || || ೩೬೮ ||

ಮಲಗರ್ತಕೆ ಶುದ್ಧಜಲಧಿ ಸಮವೆಂತೆಂಬಿ
ಕಲುಷವರ್ಜಿತಗೆ ತೃಣಜೀವ | ತೃಣಜೀವ ಸರಿಯೆ ಸಿಂ –
ಬಳಕೆ ಗೋಘೃತವು ಸಮವೇನೋ || ೧೬ || || ೩೬೯ ||

ಐರಾವತಕೆ ಸರಿಯೆ ಕೂರೆಹೇನಿನ ಮರಿಯು
ಮೇರು ಪರ್ವತಕೆ ಕಸಕುಪ್ಪೆ | ಕಸಕುಪ್ಪೆ ಸರಿಬಹುದೆ
ತೋರಿತೋ ನಿನ್ನ ಅಜ್ಞಾನ || ೧೭ || || ೩೭೦ ||

ಅಜರಾಮರಣ ಬ್ರಹ್ಮಭುಜಗಭೂಷಣಪೂಜ್ಯ
ತ್ರಿಜಗದೇವೇಶ ಹರಿಯೆತ್ತ | ಹರಿಯೆತ್ತ ನೀನೆತ್ತ
ಅಜಗಜನ್ಯಾಯ ಪುಸಿಯಲ್ಲ || ೧೮ || || ೩೭೧ ||

ಪಾಲಗಡಲೊಳಗಿರುವ ಶ್ರೀಲೋಲ ಹರಿಯೆಲ್ಲಿ
ಹೇಲುಚ್ಚೆಯೊಳಗೆ ಹೊರಳುವ | ಹೊರಳುವ ಬಳಲುವ
ಖೂಳಮಾನವನೆ ನೀನೆಲ್ಲಿ || ೧೯ || || ೩೭೨ ||

ಕ್ಷೀರಾಂಬುಧಿಗೆ ಸರಿಯೆ ಕಾರಿಕೆಯು ಶ್ಲೇಷ್ಮ ಭಾ –
ಗೀರಥಿಗೆ ಸರಿಯೆ ಖರಮೂತ್ರ | ಖರಮೂತ್ರ ಜೀವ ಲ –
ಕ್ಷ್ಮೀರಮಣಗೆಣೆಯೆ ಜಗದೊಳು || ೨೦ || || ೩೭೩ ||

ಗುಣಪೂರ್ಣ ಸರ್ವಜ್ಞ ಅಣುಮಹದ್ಗತನ ನಿ –
ರ್ಗುಣ ಅಜ್ಞ ಅಲ್ಪನೆನುತಿದ್ದೀ | ಎನುತಿದ್ದಿ ಹರಿಗೆ ದೂ –
ಷಣೆಯು ಬೇರುಂಟೆ ಇದಕಿಂತ || ೨೧ || || ೩೭೪ ||

ಈಶ ನಾನೆನಲು ಕೀನಾಶನಿಂದಲಿ ದಣಿಪ
ದಾಸನೆಂಬುವಗೆ ದಯದಿಂದ | ದಯದಿಂದ ತನ್ನಯಾ –
ವಾಸದೊಳಗಿಟ್ಟು ಸಲಹುವ || ೨೨ || || ೩೭೫ ||

ಈಶತ್ವವೆಂಬುದು ಶ್ರೀಶಗಲ್ಲದೆ ಜೀವ –
ರಾಶಿಗಳಿಗುಂಟೆ ಈ ಶಕ್ತಿ | ಈ ಶಕ್ತಿ ಸತ್ವಗುಣ
ಈಶ ಬಿಟ್ಟಿಹನೆ ಜಗದೊಳು || ೨೩ || || ೩೭೬ ||

ಉದ್ಗೀಥ ಶ್ರೀಪ್ರಾಣಹೃದ್ಗತನು ಜಗದೇಕ –
ಸದ್ಗುರುವರೇಣ್ಯನೆನುತಿಪ್ಪ | ಎನುತಿಪ್ಪವಗೆ ಯಮ
ಗದ್ಗದ ನಡುಗಿ ನಮಿಸುವ || ೨೪ || || ೩೭೭ ||

ಸ್ವಾಮಿಭೃತ್ಯನ್ಯಾಯ ಈ ಮಾತಿನೊಳು ಬಂತು
ಗ್ರಾಮಧಾಮಗಳು ಇದರಂತೆ | ಇದರಂತೆ ನೋಡಿಕೋ
ನೀ ಮಾತ್ರ ನುಡಿಯೆ ಸಾಕೆಂಬೆ || ೨೫ |||| ೩೭೮ ||

ಈಶ ನಾನೆಂದವನ ಶ್ವಾಸಬಿಡಗೊಡದೆ ಯಮ
ಪಾಶಗಳ ಕಟ್ಟಿ ಸೆಳೆದೊಯ್ದು | ಸೆಳೆದೊಯ್ದು ನರಕದಿ
ಘಾಸಿಗೊಳಿಸುವನೋ ಬಹುಕಾಲ || ೨೬ || || ೩೭೯ ||

ಮಾತೃಪಿತೃದ್ರೋಹಿ ಭ್ರಾತೃಸಖಗುರುಬಂಧು –
ಘಾತಕನು ನೀನು ಪುಸಿಯಲ್ಲ | ಪುಸಿಯಲ್ಲ ಶ್ರೀಜಗ –
ನ್ನಾಥವಿಟ್ಠಲನೇ ನಾನೆಂಬಿ || ೨೭ || || ೩೮೦ ||


mAyAvAdaKaMDana

Sivanu nInAdare SivarANi ninagEnu
avivEki manuja I mAtu | I mAtu kELidare
kavijanaru nagarE kai hoDedu || 1 || || 354 ||

ella oMdE eMba KullamAnava ninna
vallaBeya beredu saMtAna | saMtAna paDevEke
illavE jananI BaginEru || 2 || || 355 ||

biMba oMdE pratibiMba oMdeMbelA
aMbara neLalu kappAge | kappAda baLika nI –
neMba I mAtu pusiyallE || 3 || || 356 ||

ella oMdE eMba sollu KareyeMtenalu
suLLu eMbOdu KareyAgi | KareyeMba mAtugaLu
suLLennarEnO sujanaru || 4 || || 357 ||

ninna nA baidare enna nI baiyalu
nirmUlavAyitu advaita | advaita uLuhalike
summanirabEkO elo prANi || 5 || || 358 ||

Suddha brahmana suguNa kadda prayukta pra –
siddha cOratva ninnalli | ninnalli podditO
uddhAravelli BavadiMda || 6 || || 359 ||

suLLigiMtadhika mattillavO mahapApa
suLLu kaLLatanavu ninnalli | ninnalli uMTAyi –
tallo jAratva idaraMte || 7 || || 360 ||

mAyAvAdi matavu hEyaveMbudu siddha
tAyitaMdegaLu satiputra | satiputraragalidare
bAyibiTyAke aLutiddi || 8 || || 361 ||

mE mAte vaMdhyeMba I mAtinaMtele
I mUrtamUjagavu pusiyeMba | pusiyeMba mAtugaLu
BrAmakavo KareyO nijavelli || 9 || || 362 ||

SaSaviShANagaLeMdaroppuvare ballavaru
basavaguMTEnO molehAlu | molehAlu uMTe tO –
risu mithye satyavahudEnO || 10 || || 363 ||

satyaveMdare Kareyu mithye eMdare suLLu
satyamithyegaLu Ekatra | Ekatra ihude u –
nmatta I mAtu nijavelli || 11 || || 364 ||

BIti nirBIti SItAtapagaLottaTTu
nItavAgihave jagadoLu | jagadoLiddare tOru
jAti BEdagaLu iralAgi || 12 || || 365 ||

‘dvAsuparNA’ eMba I SrutigaLalli vi –
SvAsa mADadale jIvESa | jIvESaraikyOpa –
dESa mADidava caMDAla || 13 || ||366 ||

jIveSarOMdEMba I vAku keLvarigE
kevalASrAvyavEMdEMdu | EMdEMdu budharu paSu –
gAvi nInEMdu karEyarE || 14 || || 367 ||

guNavaMtanEMba mAtanu keLi suKisadava
manujapaSu siddha pusiyalla | pusiyalla ninna mata
gaNane mADadale baiyvOrO || 15 || || 368 ||

malagartake Suddhajaladhi samaveMteMbi
kaluShavarjitage tRuNajIva | tRuNajIva sariye siM –
baLake gOGRutavu samavEnO || 16 || || 369 ||

airAvatake sariye kUrehEnina mariyu
mEru parvatake kasakuppe | kasakuppe saribahude
tOritO ninna aj~jAna || 17 || || 370 ||

ajarAmaraNa brahmaBujagaBUShaNapUjya
trijagadEvESa hariyetta | hariyetta nInetta
ajagajanyAya pusiyalla || 18 || || 371 ||

pAlagaDaloLagiruva SrIlOla hariyelli
hElucceyoLage horaLuva | horaLuva baLaluva
KULamAnavane nInelli || 19 || || 372 ||

kShIrAMbudhige sariye kArikeyu SlEShma BA –
gIrathige sariye KaramUtra | KaramUtra jIva la –
kShmIramaNageNeye jagadoLu || 20 || || 373 ||

guNapUrNa sarvaj~ja aNumahadgatana ni –
rguNa aj~ja alpanenutiddI | enutiddi harige dU –
ShaNeyu bEruMTe idakiMta || 21 || || 374 ||

ISa nAnenalu kInASaniMdali daNipa
dAsaneMbuvage dayadiMda | dayadiMda tannayA –
vAsadoLagiTTu salahuva || 22 || || 375 ||

ISatvaveMbudu SrISagallade jIva –
rASigaLiguMTe I Sakti | I Sakti satvaguNa
ISa biTTihane jagadoLu || 23 || || 376 ||

udgItha SrIprANahRudgatanu jagadEka –
sadguruvarENyanenutippa | enutippavage yama
gadgada naDugi namisuva || 24 || || 377 ||

svAmiBRutyanyAya I mAtinoLu baMtu
grAmadhAmagaLu idaraMte | idaraMte nODikO
nI mAtra nuDiye sAkeMbe || 25 |||| 378 ||

ISa nAneMdavana SvAsabiDagoDade yama
pASagaLa kaTTi seLedoydu | seLedoydu narakadi
GAsigoLisuvanO bahukAla || 26 || || 379 ||

mAtRupitRudrOhi BrAtRusaKagurubaMdhu –
GAtakanu nInu pusiyalla | pusiyalla SrIjaga –
nnAthaviTThalanE nAneMbi || 27 || || 380 ||

Leave a Reply

You might also like

error: Content is protected !!