Composer : Shri Jagannatha dasaru
ಶ್ರೀ ಬ್ರಹ್ಮದೇವರ ಸ್ತುತಿ
ಸತ್ಯಲೋಕವೆ ಸದನ ತತ್ವಾಭಿಮಾನಿಗಳು ಭೃತ್ಯರೆನಿಸುವರು ಮಹಲಕ್ಷ್ಮೀ |
ಮಹಲಕ್ಷ್ಮಿ ಜನನಿ ಪುರುಷೋತ್ತಮನೆ ಜನಕನೆನಿಸುವ || ೯೮ ||
ಚತುರದಶ ಲೋಕಾಧಿ ಪತಿಯೆನಿಪ ನಿನಗೆ ಸರಸ್ವತಿಯು ನಿಜರಾಣಿ ವಿಹಗೇಂದ್ರ |
ವಿಹಗೇಂದ್ರ ಶೇಷ ಪಾರ್ವತಿ ಪರಾತ್ಮಜರು ಎನಿಸೋರು || ೯೯ ||
ದ್ವಿಶತ ಕಲ್ಪದಿ ತಪವೆಸಗಿ ಅಸುದೇವ ಪೊಂಬ ಸಿರಪದ ಪಡೆದೆ ಹರಿಯಿಂದ |
ಹರಿಯಿಂದ ಮಿಕ್ಕ ಸುಮನಸರಿಗುಂಟೇ ಈ ಭಾಗ್ಯ || ೧೦೦ ||
ಋಜುಗಣಾಧೀಶ್ವರನೆ ಅಜಪದವಿಗೋಸುಗದಿ ಭಜಿಸಿದವನಲ್ಲ ಹರಿಪಾದ |
ಹರಿಪಾದ ಸೇವೆಯು ಸ-ಹಜವೆ ಸರಿ ನಿನಗೆ ಎಂದೆಂದು || ೧೦೧ ||
ಚತುರಾಸ್ಯ ತತ್ವ ದೇವತೆಗಳಂತರ್ಯಾಮಿ ನುತಿಸಿ ಬಿನ್ನೈಪೆ ಅನುಗಾಲ |
ಅನುಗಾಲ ಭಕ್ತಿ ಶಾಶ್ವತವಾಗಿ ಇರಲಿ ಹರಿಯಲ್ಲಿ || ೧೦೨ ||
ಸತ್ಯಲೋಕೇಶನೆ ಬಳಿತ್ಥಾದಿ ಶ್ರುತಿವಿನುತ ಮೃತ್ಯುಂಜಯಾದಿ ಸುರಪೂಜ್ಯ |
ಸುರಪೂಜ್ಯ ಭಕ್ತರ ವಿ-ಪತ್ತು ಪರಿಹರಿಸಿ ಸಲಹಯ್ಯ || ೧೦೩ ||
ಇನಿತಿದ್ದ ನೀ ಸಲಹದಿಪ್ಪುದು ನಮ್ಮ ಅನುಚಿತನುಚಿತವೋ ನೀ ಬಲ್ಲಿ |
ನೀ ಬಲ್ಲಿ ಶಾರದಾ-ವನಿತೆಯ ರಮಣ ದಯವಾಗೋ || ೧೦೪ ||
ಸತ್ವಾತ್ಮಕ ಶರೀರ ಮಿಥ್ಯಾದಿ ಮತಗಳೊಳು ಉತ್ಪತ್ತಿ ಸಂಪತ್ತು ಕೊಡದಿರು |
ಕೊಡದಿರೆನಗೆಂದೂ ಸಂ-ಪ್ರಾರ್ಥಿಸುವೆ ನಿನಗೆ ನಮೊ ಎಂದು || ೧೦೫ ||
ಮಾತರಿಶ್ವನೆ ನಿನ್ನ ಪ್ರೀತಿಯೊಂದೇ ಜಗನ್ನಾಥ ವಿಠ್ಠಲನ ಕರುಣಕ್ಕೆ |
ಕರುಣಕ್ಕೆ ಕಾರಣೆಮ-ಯಾತನೆಯು ಬರಲು ನಾನಂಜೆ || ೧೦೬ ||
SrI brahmadEvara stuti
satyalOkave sadana tatvABimAnigaLu BRutyarenisuvaru mahalakShmI |
mahalakShmi janani puruShOttamane janakanenisuva || 98 ||
caturadaSa lOkAdhi patiyenipa ninage sarasvatiyu nijarANi vihagEMdra |
vihagEMdra SESha pArvati parAtmajaru enisOru || 99 ||
dviSata kalpadi tapavesagi asudEva poMba sirapada paDede hariyiMda |
hariyiMda mikka sumanasariguMTE I BAgya || 100 ||
RujugaNAdhISvarane ajapadavigOsugadi Bajisidavanalla haripAda |
haripAda sEveyu sa-hajave sari ninage eMdeMdu || 101 ||
caturAsya tatva dEvategaLaMtaryAmi nutisi binnaipe anugAla |
anugAla Bakti SASvatavAgi irali hariyalli || 102 ||
satyalOkESane baLitthAdi Srutivinuta mRutyuMjayAdi surapUjya |
surapUjya Baktara vi-pattu pariharisi salahayya || 103 ||
initidda nI salahadippudu namma anucitanucitavO nI balli |
nI balli SAradA-vaniteya ramaNa dayavAgO || 104 ||
satvAtmaka SarIra mithyAdi matagaLoLu utpatti saMpattu koDadiru |
koDadirenageMdU saM-prArthisuve ninage namo eMdu || 105 ||
mAtariSvane ninna prItiyoMdE jagannAtha viThThalana karuNakke |
karuNakke kAraNema-yAtaneyu baralu nAnaMje || 106 ||

Leave a Reply
You must be logged in to post a comment.