Dosha doora janardana

Composer : Shri Vijayadasaru

By Smt.Shubhalakshmi Rao

ದೋಷ ದೂರ ಜನಾರ್ದನ ದೋಷ ದೂರಾ [ಪ]

ದೋಷ ದೂರ ಎನ್ನ ಸಾಕುವುದು ಪರಾಶರ ವರದಾ [ಅ.ಪ]

ಬಲು ಕಾಲಗಳಿಂದ ನೆಲೆಯ ಕಾಣದೆ ನಿನ್ನ
ಚೆಲುವ ಚರಣ ದ್ವಂದ್ವ ನೆಳಲನಾಶ್ರೈಸಿದೆ [೧]

ಕಂಡೆ ನಾ ನಿನ್ನಯ ಪುಂಡರೀಕ ಪಾದ
ಚಂಡಾಘ ತಿಮಿರ ಮಾರ್ತಾಂಡ ಮುರವೈರಿ [೨]

ಅಜಗೆ ಪ್ರಸನ್ನ ವಿರಜ ಭಾಗ್ಯ ಸಂಪನ್ನ
ವಿಜಯಮೂರುತಿ ನಮ್ಮ ವಿಜಯವಿಠ್ಠಲರೇಯ [೩]


dOSha dUra janArdana dOSha dUrA [pa]

dOSha dUra enna sAkuvudu parASara varadA [a.pa]

balu kAlagaLiMda neleya kANade ninna
celuva caraNa dvaMdva neLalanASraiside [1]

kaMDe naa ninnaya puMDarIka pAda
chaMDAgha timira mArtAMDa muravairi [2]

ajage prasanna viraja BAgya saMpanna
vijayamUruti namma vijayaviThThalarEya [3]

Leave a Reply

You might also like

error: Content is protected !!