Composer : Shri Gurugopala vittala
ಶ್ರೀ ಗುರುಗೋಪಾಲವಿಟ್ಠಲದಾಸರ ಕೃತಿ
ರಾಗ: ಮಧ್ಯಮಾವತಿ , ಖಂಡಛಾಪುತಾಳ
ವಿಜಯವಿಟ್ಠಲರಾಯಾ | ಅಸ್ಮದ್ಗುರೋರ್ಗುರು |
ವಿಜಯದಾಸರ ಪ್ರೀಯಾ | ಸ್ತುತಿ ಶ್ರವಣ ವಂದನೆ |
ಭಜನೆ ತಿಳಿಯದೊ ಜೀಯಾ | ವಲಿದೆನ್ನ ಪಾಲಿಸು |
ವಿಜಯಸಖ ಸುಖದಾಯ | ನಿರ್ಧೂತಮಾಯಾ || ಪ ||
ತ್ರಿಜಗದೀಶ್ವರ ತ್ರಿಗುಣವಿರಹಿತ |
ವೃಜಜನಾರ್ತಿಹ ಸತತ ಶ್ರೀವಧು |
ಭುಜಗಕುಚಸ್ಥಿತ ಕುಂಕುಮಾಂಕಿತ |
ನಿಜ ಪದಾಂಬುಜ ತೋರು ಮನದಲಿ || ಅ.ಪ ||
ಯಿಂದ್ರ ಭವಮುಖ ಅಮರಾ | ತಾರಾನಿಕರದೊಳು |
ಚಂದ್ರನಂತಿಹ ಧೀರಾ | ಪುರುಷೋತ್ತಮನೆ ಖಚ |
ರೇಂದ್ರ ಸ್ಕಂದವಿಹಾರ | ಮಮಸ್ವಾಮಿ ಸತತ ಫ |
ಣೀಂದ್ರ ಶೈಲಾಗಾರಾ | ಸೌಂದರ್ಯಸಾರಾ ||
ಚಂದ್ರಮಂಡಲ ಮಧ್ಯವರ್ತಿಯೆ |
ಚಂದ್ರಮಂಡಲನಿಭ ಶುಭಾನನ |
ಚಂದ್ರ ಸೋದರಿರಮಣ ಯದುಕುಲ |
ಚಂದ್ರ ಗೋಪಾಂಗನೇರ ಹೃದಯ ||
ಚಂದ್ರ ಕಾಂತಿಮಣಿ ಸಮೂಹಕೆ |
ಚಂದ್ರ ಮುನಿಹೃತ್ಕುಮುದ ಕೋರಕ |
ಚಂದ್ರ ಚಕ್ರಗದಾಬ್ಜಧರ ಶತ |
ಚಂದ್ರಪಾಣಿ ಸುಜನ ಚಕೋರಕೆ ||
ಚಂದ್ರ ಚಂದ್ರಕುಲಾಬ್ಧಿಚಂದ್ರನೆ |
ಚಂದ್ರರವಿ ಸ್ಮರನಂತೆ ಪ್ರಭೆ ಅಜ |
ಚಂದ್ರಶೇಖರನುತ ಚರಣ ನಖ |
ಚಂದ್ರ ಚಂದ್ರಿಕೆ ತೋರು ಹೃದಯದಿ || ೧ ||
ಮೌನವ್ರತ ಶ್ರುತಿಧ್ಯಾನಾ | ಅಹರಹಾ ಜಪ ವ್ಯಾ |
ಖ್ಯಾನ ಧರ್ಮಶೋಧನಾ | ಅಜಿತೇಂದ್ರಿಯರಿಗಹಿ |
ಕಾನುಭಾವ ಕಾರಣ | ಡಾಂಭಿಕರಿಗಿವು ಫಲ |
ವೇನು ಕೊಡವು ನಿದಾನ | ಮೋಕ್ಷಕಿವೆ ಕಾರಣಾ ||
ನಾನು ಅಜಿತೇಂದ್ರಿಯನು ಡಾಂಭಿಕ |
ಯೀ ನುಡಿದ ಸಾಧನದೊಳು ಯಿದೇನು |
ಖೂನ ಕಂಡುಕೇಳಿ ಅರಿಯೆನು |
ನೀನೊಲಿದು ರಕ್ಷಿಪ ಉಪಾಯವ ||
ನೀನೇ ಬಲ್ಲೆ ವಿಭುವೇ ಸುಖಮಯ |
ಮೀನ ಮಂದರಧರ ಧರಾಧರ |
ಶ್ರೀನೃಸಿಂಹ ಮಾಣವಕ ಭಾರ್ಗವ |
ಜಾನಕೀಪತಿ ಕೃಷ್ಣ ಬುದ್ಧನೆ ||
ದೀನವತ್ಸಲ ಕಲ್ಕಿ ಹಯಮುಖ |
ನಾನಾ ರೂಪಗುಣಾತ್ಮಕನೆ ಜಗ |
ತ್ರಾಣ ಅಖಿಳ ಬಿಂಬಾಹ್ವಯ ಕ್ರಿಯ |
ಜ್ಞಾನ ಪಾಲಿಸು ಶ್ರೀನಿಕೇತನ || ೨ ||
ನಾನು ಮಾಡುವ ಗಾನಾ | ನಿನಗಿದೆ ವಿಚಿತ್ರ ಸು |
ಸ್ನಾನಗಂಧ ಸುವಸನಾ | ಉಪವೀತ ಸೃಗ್ವಿಜ |
ಮಾನದೇಹವೆ ಭವನ | ಮನಸಿನ ಬಯಕೆಗಳು |
ನಾನಾಮಣಿಗಳಾಭರಣ | ದೀಪವು ಸುಜ್ಞಾನಾ ||
ಕೋಣತ್ರಯ ಹೃದಯಾಬ್ಜಪೀಠವು |
ಈ ನೆರೆದ ಜನರೆಲ್ಲಾವರಣವು |
ಸ್ನಾನ ಕರ್ಮವು ತುಲಸಿ ಪುಷ್ಫವು |
ಘ್ರಾಣೇಂದ್ರಿಯ ವಿಷಯ ಧೂಪವು ||
ಪಾನ ಉಂಬನ್ನವೆ ನೈವೇದ್ಯವು |
ಕಾಣಿಕೆ ಭಕ್ತಿಗತಿ ಪ್ರದಕ್ಷಿಣೆ ಶ |
ಯಾನ ನಮನವು ನುಡಿಯು ಮಹಜಪ |
ಏನು ಕಂಡರು ಕೇಳಿದುದು ಸುಖ ||
ಶ್ರೇಣಿ ನಿನ್ನ ಪ್ರತಿಮೆಗಳು ಜಗ |
ತ್ರಾಣ ಗುರುಗೋಪಾಲವಿಟ್ಠಲ |
ಶ್ರೀನಿಕೇತನ ಸಾತ್ವತಾಂಪತೆ |
ನೀ ನಗುತ ವಲಿದೆನ್ನ ಪಾಲಿಸು || ೩ ||
SrI gurugOpAlaviTThaladAsara kRuti
rAga: madhyamAvati , KaMDaCAputALa
vijayaviTThalarAyA | asmadgurOrguru |
vijayadAsara prIyA | stuti SravaNa vaMdane |
Bajane tiLiyado jIyA | validenna pAlisu |
vijayasaKa suKadAya | nirdhUtamAyA || pa ||
trijagadISvara triguNavirahita |
vRujajanArtiha satata SrIvadhu |
Bujagakucasthita kuMkumAMkita |
nija padAMbuja tOru manadali || a.pa ||
yiMdra BavamuKa amarA | tArAnikaradoLu |
caMdranaMtiha dhIrA | puruShOttamane Kaca |
rEMdra skaMdavihAra | mamasvAmi satata Pa |
NIMdra SailAgArA | sauMdaryasArA ||
caMdramaMDala madhyavartiye |
caMdramaMDalaniBa SuBAnana |
caMdra sOdariramaNa yadukula |
caMdra gOpAMganEra hRudaya ||
caMdra kAMtimaNi samUhake |
caMdra munihRutkumuda kOraka |
caMdra cakragadAbjadhara Sata |
caMdrapANi sujana cakOrake ||
caMdra caMdrakulAbdhicaMdrane |
caMdraravi smaranaMte praBe aja |
caMdraSEKaranuta caraNa naKa |
caMdra caMdrike tOru hRudayadi || 1 ||
maunavrata SrutidhyAnA | aharahA japa vyA |
KyAna dharmaSOdhanA | ajitEMdriyarigahi |
kAnuBAva kAraNa | DAMBikarigivu Pala |
vEnu koDavu nidAna | mOkShakive kAraNA ||
nAnu ajitEMdriyanu DAMBika |
yI nuDida sAdhanadoLu yidEnu |
KUna kaMDukELi ariyenu |
nInolidu rakShipa upAyava ||
nInE balle viBuvE suKamaya |
mIna maMdaradhara dharAdhara |
SrInRusiMha mANavaka BArgava |
jAnakIpati kRuShNa buddhane ||
dInavatsala kalki hayamuKa |
nAnA rUpaguNAtmakane jaga |
trANa aKiLa biMbAhvaya kriya |
j~jAna pAlisu SrInikEtana || 2 ||
nAnu mADuva gAnA | ninagide vicitra su |
snAnagaMdha suvasanA | upavIta sRugvija |
mAnadEhave Bavana | manasina bayakegaLu |
nAnAmaNigaLABaraNa | dIpavu suj~jAnA ||
kONatraya hRudayAbjapIThavu |
I nereda janarellAvaraNavu |
snAna karmavu tulasi puShPavu |
GrANEMdriya viShaya dhUpavu ||
pAna uMbannave naivEdyavu |
kANike Baktigati pradakShiNe Sa |
yAna namanavu nuDiyu mahajapa |
Enu kaMDaru kELidudu suKa ||
SrENi ninna pratimegaLu jaga |
trANa gurugOpAlaviTThala |
SrInikEtana sAtvatAMpate |
nI naguta validenna pAlisu || 3 ||

Leave a Reply
You must be logged in to post a comment.