Banniri banniri

Composer : Shri Vidyaprasanna Teertharu

By Smt.Shubhalakshmi Rao

ಬನ್ನಿರಿ ಬನ್ನಿರಿ ಪುರಜನರೆಲ್ಲರು
ಕೃಷ್ಣನ ದರುಶನಕೆ ಪೋಗುವ [ಪ]

ಕೃಷ್ಣನು ಜನಿಸಿದ ಈ ದಿನ
ಇಷ್ಟವ ಪ್ರಾರ್ಥಿಸಲು ಪೋಗುವ [ಅ.ಪ]

ದುಂದುಭಿ ನಾದವು ಕೇಳುತಿದೆ ಬಲು
ಮಂದಿಯ ತಂಡವು ಹೋಗುತಿದೆ
ಕಂದನ ರೂಪದಿ ಬಂದಿಹ ಆನಕ
ದುಂದುಭಿ ಕುವರನ ಸಂಭ್ರಮ ನೋಡಲು [೧]

ಪೇಳಿರಿ ನಿಮ್ಮಯ ಕೊರತೆಗಳೆಲ್ಲವ
ಕೇಳಿರಿ ವರಗಳ ಧೈರ್ಯದಲಿ
ಬಾಲನು ಸುಲಭದಿ ಒಲಿಯುವ ಒಳ್ಳೆಯ
ಕಾಲವಿದೆಲ್ಲರಿಗೆ ಬೇಗನೆ [೨]

ಜನುಮ ಜನುಮಗಳ ಪುಣ್ಯದ ರಾಶಿಯು
ಜನುಮಾಷ್ಟಮಿ ದಿನದಿ ಲೋಕಕೆ
ಜನುಮಾದ್ಯಷ್ಟಕ ದಾತನ ದರುಶನ
ಮನಕೆ ಪ್ರಸನ್ನತೆ ಕೊಡುವುದು ಪೋಗುವ [೩]


banniri banniri purajanarellaru
kRuShNana daruSanake pOguva [pa]

kRuShNanu janisida I dina
iShTava prArthisalu pOguva [a.pa]

duMduBi nAdavu kELutide balu
maMdiya taMDavu hOgutide
kaMdana rUpadi baMdiha Anaka
duMduBi kuvarana saMBrama nODalu [1]

pELiri nimmaya korategaLellava
kELiri varagaLa dhairyadali
bAlanu sulaBadi oliyuva oLLeya
kAlavidellarige bEgane [2]

januma janumagaLa puNyada rASiyu
janumAShTami dinadi lOkake
janumAdyaShTaka dAtana daruSana
manake prasannate koDuvudu pOguva [3]

Leave a Reply

You might also like

error: Content is protected !!