Yaduveera odagenna

Composer: Shri Prasannavenkata dasaru

By Smt.Shubhalakshmi Rao

ಯದುವೀರ ಒದಗೆನ್ನ ನಾಲಿಗೆಗೆ
ಉದಯಾದಿ ಅಸ್ತಾಂತ ಆವಾವಾಗೆ [ಪ]

ನಿನ್ನ ನಾಮದ ಸ್ಮರಣೆಯೆ ಶುಭ ಕರ್ಮವು
ಉನ್ನತ ಸಂಕೀರ್ತನೆ ಶತಕ್ರತುವು
ಪುಣ್ಯ ಗಂಗಾ ಸ್ನಾನದ ಫಲಕಧಿಕವು
ಘನ್ನ ಜಪದ ಬೀಜವೆ ನಾಮವು [೧]

ಬಂಗಾರ-ದಿಳೆಯಳೆ-ದೊಲಿದೀವ ದಾನದಿ
ಹಿಂಗದೆ ಉಭಯಸ್ಯ ಗೋ ಶತದಿ
ಶೃಂಗಾರ ಕೋಟಿ ಕನ್ಯಾ ದಾನಕಧಿಕವು
ಮಂಗಳ ಮಹಿಮ ಮುಕುಂದನ ನಾಮವು [೨]

ಧರ್ಮಾರ್ಥ ಕಾಮ ಮೋಕ್ಷಗಳ
ಮೂಲವಿದೆಂದು ನಿರ್ಮಲ ಶ್ರುತಿ ಸಾರುತಾವೆಂದು
ಮರ್ಮವರಿತು ನಾಮ ನಂಬಿದೆ ಶೇಷಾದ್ರಿಯ
ಹರ್ಮ್ಯ ನಿಲಯ ಪ್ರಸನ್ವೆಂಕಟಯ್ಯ [೩]


yaduvIra odagenna nAligege
udayAdi astAMta AvAvAge [pa]

ninna nAmada smaraNeye SuBa karmavu
unnata saMkIrtane Satakratuvu
puNya gaMgA snAnada Palakadhikavu
Ganna japada bIjave nAmavu [1]

baMgAra-diLeyaLe-dolidIva dAnadi
hiMgade uBayasya gO Satadi
SRuMgAra kOTi kanyA dAnakadhikavu
maMgaLa mahima mukuMdana nAmavu [2]

dharmArtha kAma mOkShagaLa
mUlavideMdu nirmala Sruti sArutAveMdu
marmavaritu nAma naMbide SEShAdriya
harmya nilaya prasanveMkaTayya [3]

Leave a Reply

You might also like

error: Content is protected !!