Composer: Shri Prasannavenkata dasaru
ಎಂಥಾ ಶ್ರೀಮಂತಾನಂತನೋ ಶ್ರೀಕಾಂತೆಯ ಕಾಂತ
ಎಂಥಾ ಶ್ರೀಮಂತಾನಂತನೋ ||ಪ||
ಬೊಮ್ಮನು ಹೆಮ್ಮಗ ಮೊಮ್ಮ ಮೃಢಮ್ಮರಿ
ಮೊಮ್ಮಶ ಚಿಮ್ಮ ಸ್ವರಮ್ಮ ಪರಮ್ಮ
ಅಮ್ಮರು ಸಮ್ಮೋಹ ನಿಮ್ಮಣುಗಮ್ಮರು
ನಮ್ಮೊ ನಮ್ಮ ಪರಮ್ಮ ಮಹಿಮ್ಮ |೧|
ಅಂಗರು ಹೆಂಗಳ ಅಂಗನಂತ ಗಡ
ಮಂಗಳ-ಪಾಂಗ ವಿಶ್ವಂಗಳ ಮಂಗಳ
ಸಿಂಗರದಂಗುಟ ಸಂಗದ ಜಗದ
ಅಘಂಗಳ-ಘಂಗಳ ಹಿಂಗಿಪಳಾಂಗಾ |೨|
ಪನ್ನಗ ಪನ್ನ ಶಯನ್ನ ಮಹೋನ್ನತ
ಪನ್ನಗ ವರ ವಾಹನ್ನ ರತುನ್ನ
ಭವಾನ್ನ ಸುಖೋನ್ನತ ದನ್ನಗ ರನ್ನಿಜ
ನಿನ್ನೆದುರಿನ್ನ್ಯಾ-ರೆನ್ನೊಡೆಯನ್ನೆ |೩|
ಬಲ್ಲ ಕೈವಲ್ಯಜ್ಞ-ರೊಲ್ಲಭ ಸುಲ್ಲಭ
ಬಲ್ಲಿದ ಖುಲ್ಲರ ದಲ್ಲಣ-ನಲ್ಲದೆ
ಹುಲ್ಲುದನಲ್-ಲೊಳ-ವಲ್ಲ ನೀನ್ನಲ್ಲದೆ
ಸಲ್ಲದು ಸೊಲ್ಲ ನೀ ನಿಲ್ಲದಿನಿಲ್ಲ |೪|
ಅಂಬರ ದುಂಬಿಗೆ ತುಂಬೆ ವಿಶ್ವಂಬ
ಸುರ-ದಿಂಬಿಲಿ ನಿಂಬಿಟ್ಟು-ಕೊಂಬ ಕೃಪಾಂಬುಧೆ
ಇಂಬ ಕದಂಬಕ ಬಿಂಬ ಪ್ರಸನ್ವೇಂಕಟ
ನಂಬಿದರ್-ಗಿಂಬಿವನೆಂಬ ಕುಟುಂಬಿ |೫|
eMthA SrImaMtAnaMtanO SrIkAMteya kAMta
eMthA SrImaMtAnaMtanO ||pa||
bommanu hemmaga momma mRuDhammari
mommaSa chimma svaramma paramma
ammaru sammOha nimmaNugammaru
nammo namma paramma mahimma |1|
aMgaru heMgaLa aMganaMta gaDa
maMgaLa-pAMga viSvaMgaLa maMgaLa
siMgaradaMguTa saMgada jagada
aghaMgaLa-ghaMgaLa hiMgipaLAMgA |2|
pannaga panna Sayanna mahOnnata
pannaga vara vAhanna ratunna
BavAnna suKOnnata dannaga rannija
ninnedurinnyA-rennoDeyanne |3|
balla kaivalyaj~ja-rollaBa sullaBa
ballida Kullara dallaNa-nallade
hulludanal-loLa-valla nInnallade
salladu solla nI nilladinilla |4|
aMbara duMbige tuMbe viSvaMba
sura-diMbili niMbiTTu-koMba kRupAMbudhe
iMba kadaMbaka biMba prasanvEMkaTa
naMbidar-giMbivaneMba kuTuMbi |5|

Leave a Reply
You must be logged in to post a comment.