Composer: Shri Jagannatha dasaru
ರಂಗ ನಿನ್ನ ಕೊಂಡಾಡುವ ಮಂಗಳಾತ್ಮರ
ಸಂಗ ಸುಖವನಿತ್ತು ಕಾಯೋ ಕರುಣಾ ಸಾಗರ |ಪಾಂಡು| ||ಪ||
ಅರಿಯರೊ ನೀನಲ್ಲದೆ ಬೇರನ್ಯ ದೇವರ ಮರೆಯರೋ |
ನೀ ಮಾಡಿದ ಅನಿಮಿತ್ತುಪಕಾರ || ೧ ||
ತೊರೆಯರೋ ನಿನ್ನಂಘ್ರಿ ಸೇವ ಪ್ರತಿವಾಸರ
ಅರಿಯರೋ ಪರತತ್ವವಲ್ಲದ ಇತರ ವಿಚಾರ |ಪಾಂಡು| || ೨ ||
ಮೂಕ ಬಧಿರ-ರಂತಿಪ್ಪರೋ ನೋಳ್ಪ ಜನಕೆ |
ಕಾಕು ಯುಕುತಿಗಳನ್ನವರು ತಾರರೋ ಮನಕೆ || ೩ ||
ಸ್ವೀಕರಿಸರೋ ದೇವ ಅನರ್ಪಿತ ಒಂದು ಕಾಲಕ್ಕೆ |
ಆ ಕೈವಲ್ಯದ ಭೋಗ ಸುಖಗಳು ಅವರಿಗೆ ಬೇಕೇ |ಪಾಂಡು| || ೪ ||
ಜಯಾಜಯ ಲಾಭಾಲಾಭ ಮಾನಾಪಮಾನ |
ಭಯಾಭಯ ಸುಖದುಃಖ ಲೋಷ್ಠ ಕಾಂಚನ || ೫ ||
ಪ್ರಿಯಾಪ್ರಿಯ ನಿಂದಾ ಸ್ತುತಿಗಳೆಲ್ಲ ಅನುದಿನ |
ಶ್ರೀಯರಸನ ಚಿಂತಿಸುವರೋ ನಿನ್ನ ಅಧೀನ |ಪಾಂಡು||| ೬ ||
ಈಶಿತವ್ಯರೆಂಬೋರೆ ಏಕಾಂತ ಭಕ್ತರು |
ದೇಶ ಕಾಲೋಚಿತ ಧರ್ಮ ಕರ್ಮಾಸಕ್ತರು || ೭ ||
ಆಶಾ ಕ್ರೋಧ ಲೋಭ ಮೋಹ ಪಾಶ ಮುಕ್ತರು |
ಈ ಸುಜನರೆಲ್ಲಾ ಶಾಪಾನುಗ್ರಹ ಶಕ್ತರು |ಪಾಂಡು| || ೮ ||
ಕಂಡ ಕಂಡಲ್ಲೆಲ್ಲಾ ವಿಶ್ವರೂಪ ಕಾಂಬರೊ
ಉಂಡು ಉಣಿಸಿದ್ದೆಲ್ಲಾ ನಿನ್ನ ಯಜ್ಞವೆಂಬರೊ || ೯ ||
ಬಂಡುಣಿಯಂದದಿ ನಾಮಾಮೃತವ ಸವಿವರೊ |
ಹೆಂಡಿರು ಮಕ್ಕಳು ನಿನ್ನ ತೊಂಡರೆಂಬರೋ |ಪಾಂಡು| || ೧೦ ||
ಬಿಡರು ತಮ್ಮ ಸ್ವಧರ್ಮಗಳೇನು ಬಂದರು |
ಬಡರು ದೈನ್ಯ ಒಬ್ಬರಿಗು ಲೋಕ ವಂದ್ಯರು || ೧೧ ||
ಪಿಡಿಯರು ನಿನ್ನ ದ್ವೇಷಿಗಳಿಂದೇನು ಬಂದರು |
ಕೊಡುವರು ಬೇಡಿದಿಷ್ಟಾರ್ಥ ನಿತ್ಯಾನಂದರು |ಪಾಂಡು| || ೧೨ ||
ನಗುವರೋ ರೋಧಿಸುವರೋ ನಾಟ್ಯವಾಡುವರೋ |
ಬಗೆಯರೋ ಬಡತನ ಭಾಗ್ಯ ಭಾಗವತರು || ೧೩ ||
ತೆಗೆಯರೋ ನಿನ್ನಲ್ಲಿ ಮನವ -ನೊಮ್ಮೆಯಾದರೋ |
ಜಗನ್ನಾಥವಿಠ್ಠಲ ನಿನ್ನವರೇನು ಧನ್ಯರೋ |ಪಾಂಡು| || ೧೪ ||
raMga ninna koMDADuva maMgaLAtmara
saMga suKavanittu kAyO karuNA sAgara |pAMDu| ||pa||
ariyaro nInallade bEranya dEvara mareyarO |
nI mADida animittupakAra || 1 ||
toreyarO ninnaMGri sEva prativAsara
ariyarO paratatvavallada itara vicAra |pAMDu| || 2 ||
mUka badhira-raMtipparO nOLpa janake |
kAku yukutigaLannavaru tArarO manake || 3 ||
svIkarisarO dEva anarpita oMdu kAlakke |
A kaivalyada BOga suKagaLu avarige bEkE |pAMDu| || 4 ||
jayAjaya lABAlABa mAnApamAna |
BayABaya suKaduHKa lOShTha kAMcana || 5 ||
priyApriya niMdA stutigaLella anudina |
SrIyarasana ciMtisuvarO ninna adhIna |pAMDu||| 6 ||
ISitavyareMbOre EkAMta Baktaru |
dESa kAlOcita dharma karmAsaktaru || 7 ||
ASA krOdha lOBa mOha pASa muktaru |
I sujanarellA SApAnugraha Saktaru |pAMDu| || 8 ||
kaMDa kaMDallellA viSvarUpa kAMbaro
uMDu uNisiddellA ninna yaj~javeMbaro || 9 ||
baMDuNiyaMdadi nAmAmRutava savivaro |
heMDiru makkaLu ninna toMDareMbarO |pAMDu| || 10 ||
biDaru tamma svadharmagaLEnu baMdaru |
baDaru dainya obbarigu lOka vaMdyaru || 11 ||
piDiyaru ninna dvEShigaLiMdEnu baMdaru |
koDuvaru bEDidiShTArtha nityAnaMdaru |pAMDu| || 12 ||
naguvarO rOdhisuvarO nATyavADuvarO |
bageyarO baDatana BAgya BAgavataru || 13 ||
tegeyarO ninnalli manava -nommeyAdarO |
jagannAthaviThThala ninnavarEnu dhanyarO |pAMDu| || 14 ||

Leave a Reply
You must be logged in to post a comment.