Pranadeva neenallade

Composer: Shri Jagannatha dasaru

ಪ್ರಾಣದೇವ ನೀನಲ್ಲದೆ ಕಾಯ್ವರ
ಕಾಣೆನೋ ಜಗದೊಳಗೆ , ಮುಖ್ಯ- ||ಪ||

ಪ್ರಾಣಾಪಾನ ವ್ಯಾನೋದಾನ ಸ-
ಮಾನನೆನಿಪ ಮುಖ್ಯ – ||ಅ.ಪ||

ವಾಸವ ಕುಲಿಶದಿ ಘಾಸಿಸೆ ಜೀವರ
ಶ್ವಾಸ ನಿರೋಧಿಸಿದೆ |
ಆ ಸಮಯದಿ ಕಮಲಾಸನ ಪೇಳಲು
ನೀ ಸಲಹಿದೆ ಜಗವ ಮುಖ್ಯ- ||೧||

ಪರಿಸರ ನೀನಿರೆ ಹರಿತಾನಿಪ್ಪ
ನೀ ಇರದಿರೆ ಹರಿ ಇರನು |
ಕರಣ ನಿಯಾಮಕ ಸುರರ ಗುರುವೇ ನೀ-
ಕರುಣಿಸೆ ಕರುಣಿಸುವ ಮುಖ್ಯ- ||೨||

ಅಂಗದ ಪ್ರಮುಖ ಪ್ಲವಂಗರು ರಾಮನ
ಅಂಗನೆಯಳ ಹುಡುಕೆ
ತಿಂಗಳು ಮೀರಲು ಕೆಂಗೆಡೆ ಕಪಿಗಳ-
ಜೆಂಗುಳಿ ಪಾಲಿಸಿದೆ ಮುಖ್ಯ- ||೩||

ಪಾವಿನ ಪಾಶದಿ ರಾವಣಿ ನೀಲ ಸು-
ಗ್ರೀವ ಮುಖರ ಬಿಗಿಯೆ |
ಸಾವಿರದೈವತ್ತು ಗಾವುದದಲ್ಲಿಹ ಸಂ-
ಜೀವನ ಜವದಿ ತಂದಿತ್ತೆ ಮುಖ್ಯ- ||೪||

ಭೂತೇಂದ್ರಿಯಂಗಳಿಗ್-ಅಧಿನಾಥ ನಿಯಾಮಕ
ಆತೈಜಸ ಹರನ |
ತಾತನೆನಿಪ ಜಗನ್ನಾಥವಿಠ್ಠಲನ
ಪ್ರೀತಿ ಪಾತ್ರನಾದೆ ಮುಖ್ಯ- ||೫||

[ ಶ್ರೀಹನೂಮಂತಮೇಕಾಂತಭಾಜಂ
ರಾಘವಶ್ರೀಪದಾಂಭೋಜಭೃಂಗಮ್ |
ಮಾರುತಿಂ ಪ್ರಾಣಿನಾಂ ಪ್ರಾಣಭೂತಂ
ನಂದಯಾಮೋ ವಯಂ ನಂದಿತೀರ್ಥಮ್ ]


prANadEva nInallade kAyvara
kANenO jagadoLage , muKya- ||pa||

prANApAna vyAnOdAna sa-
mAnanenipa muKya – ||a.pa||

vAsava kuliSadi GAsise jIvara
SvAsa nirOdhiside |
A samayadi kamalAsana pELalu
nI salahide jagava muKya- ||1||

parisara nInire haritAnippa
nee iradire hari iranu |
karaNa niyAmaka surara guruvE nI-
karuNise karuNisuva muKya- ||2||

aMgada pramuKa plavaMgaru rAmana
aMganeyaLa huDuke
tiMgaLu mIralu keMgeDe kapigaLa-
jeMguLi pAliside muKya- ||3||

pAvina pASadi rAvaNi nIla su-
grIva muKara bigiye |
sAviradaivattu gAvudadalliha saM-
jIvana javadi taMditte muKya- ||4||

BUtEMdriyaMgaLig-adhinAtha niyAmaka
Ataijasa harana |
tAtanenipa jagannAthaviThThalana
prIti pAtranAde muKya- ||5||

[ SrIhanUmaMtamEkAMtaBAjaM
rAGavaSrIpadAMBOjaBRuMgam |
mArutiM prANinAM prANaBUtaM
naMdayAmO vayaM naMditIrtham ]

Leave a Reply

You might also like

error: Content is protected !!