Narasimha pahi lakshmi

Composer: Shri Jagannatha dasaru

ನರಸಿಂಹ ಪಾಹೀ ಲಕ್ಷ್ಮೀ ನರಸಿಂಹ ||ಪ||

ನರಸಿಂಹ ನಮಿಪೆ ನಾ ನಿನ್ನ , ಚಾರು-
ಚರಣ ಕಮಲಕೆ ನೀ ಎನ್ನ , |ಆಹಾ|
ಕರವ ಪಿಡಿದು ನಿಜ ಶರಣನೆಂದೆನಿಸು ಭಾ-
ಸುರ ಕರುಣಾಂಬುಧಿ ಗರುಡ ವಾಹನ ಲಕ್ಷ್ಮೀ- ||ಅ.ಪ||

ತರಳ ಪ್ರಹ್ಲಾದನ ನುಡಿಯ, ಕೇಳಿ
ತ್ವರಿತದಿ ಬಂದ್ಯೊ ಎನ್ನೊಡೆಯ, ಏನು
ಕರುಣಾಳೊ , ಭಕ್ತರ ಭಿಡೆಯ ಮೀರ-
ಲರಿಯೆನೆಂದೆಂದು ಕೆಂಗಿಡಿಯ |ಆಹಾ|
ಭರದಿಂದುಗುಳುತ ಬೊಬ್ಬಿರಿದು ಬೆಂಬತ್ತಿ ಕ-
ರ್ಬುರ ಕಶಿಪುವಿನ ಹಿಂಗೊರಳ ಪಿಡಿದೆ, ಲಕ್ಷ್ಮೀ- ||೧||

ಪ್ರಳಯಾಂಬುನಿಧಿ ಘನ ಘೋಷ-ದಂತೆ
ಘುಳಿಘುಳಿಸುತಲಿ ಪ್ರದೋಷ, ಕಾಲ
ತಿಳಿದು ದೈತ್ಯನಲ್ಲ್-ಅತಿ ರೋಷ-ದಿಂದ-
ಪ್ಪಳಿಸಿ ಮೇದಿನಿಗೆ ನಿರ್ದೋಷ |ಆಹಾ|
ಸೆಳೆ ಸೆಳೆಯುತ ಚರ್ಮಸುಲಿದು ಕೆನ್ನೆತ್ತರೋ-
ಕುಳಿಯನಾಡಿದೆ ದಿಶಾವಳಿಗಳೊಳಗೆ ಲಕ್ಷ್ಮೀ – ||೨||

ಕ್ರೂರ ದೈತ್ಯನ ತೋರ ಕರುಳ , ತೆಗೆ-ದ್
ಹಾರ ಮಾಡಿದೆ ನಿಜ ಕೊರಳ, ಕಂಡು
ವಾರಿಜಾಸನ ಮುಖ್ಯರರಳ, ಪುಷ್ಪ
ಭೂರಿಗರೆಯೆ ವೇಗ ತರಳ , |ಆಹಾ|
ಧೀರ ಪ್ರಹ್ಲಾದಂಗೆ ತೋರಿ ತ್ವದಂಘ್ರಿ ಸ-
ರೋರುಹವನೆ ಕಾಯ್ದ ಕಾರುಣ್ಯನಿಧಿ ಲಕ್ಷ್ಮೀ – ||೩||

ಜಯ ಜಯ ದೇವ ವರೇಣ್ಯ ಮಹ –
ದ್-ಭಯ ನಿವಾರಣ ಅಗ್ರಗಣ್ಯ, ಗುಣ –
ತ್ರಯದೂರ ದುರಿತಾರಣ್ಯ ಧನಂ
ಜಯ ಜಗದೇಕ ಶರಣ್ಯ , |ಆಹಾ|
ಲಯವಿವರ್ಜಿತ ಲೋಕತ್ರಯ ವ್ಯಾಪ್ತ ನಿಜಭಕ್ತ
ಪ್ರಿಯ ಘೋರಾಮಯಹರ ದಯಮಾಡೆನ್ನೊಳು ಲಕ್ಷ್ಮೀ- ||೪||

ಕುಟಿಲ ದ್ವೇಶದವ ನೀನಲ್ಲ , ನಿನ್ನಾ-
ರ್ಭಟಕಂಜಿದರು ಸುರರೆಲ್ಲ, ನರ-
ನಟನೆ ತೋರಿದ್ಯೊ ಲಕ್ಷ್ಮೀನಲ್ಲ , ನಾ
ಪಾಸಟಿಗಾಣೆ-ನಪ್ರತಿಮಲ್ಲ |ಆಹಾ|
ವತಪತ್ರ ಶಯನ ಧೂರ್ಜಟಿವಂದ್ಯ ಜಗನ್ನಾಥ –
ವಿಠಲ ಕೃತಾಂಜಲಿ ಪುಟದಿ ಬೇಡುವೆ ಲಕ್ಷ್ಮೀ – ||೫||


narasiMha pAhI lakShmI narasiMha ||pa||

narasiMha namipe nA ninna , cAru-
caraNa kamalake nI enna , |AhA|
karava piDidu nija SaraNaneMdenisu BA-
sura karuNAMbudhi garuDa vAhana lakShmI- ||a.pa||

taraLa prahlAdana nuDiya, kELi
tvaritadi baMdyo ennoDeya, Enu
karuNALo , Baktara BiDeya mIra-
lariyeneMdeMdu keMgiDiya |AhA|
BaradiMduguLuta bobbiridu beMbatti ka-
rbura kaSipuvina hiMgoraLa piDide, lakShmI- ||1||

praLayAMbunidhi Gana GOSha-daMte
GuLiGuLisutali pradOSha, kAla
tiLidu daityanall-ati rOSha-diMda-
ppaLisi mEdinige nirdOSha |AhA|
seLe seLeyuta carmasulidu kennettarO-
kuLiyanADide diSAvaLigaLoLage lakShmI – ||2||

krUra daityana tOra karuLa , tege-d
hAra mADide nija koraLa, kaMDu
vArijAsana muKyararaLa, puShpa
bhUrigareye vEga taraLa , |AhA|
dhIra prahlAdaMge tOri tvadaMGri sa-
rOruhavane kAyda kAruNyanidhi lakShmI – ||3||

jaya jaya dEva varENya maha –
d-Baya nivAraNa agragaNya, guNa –
trayadUra duritAraNya dhanaM
jaya jagadEka SaraNya , |AhA|
layavivarjita lOkatraya vyApta nijaBakta
priya GOrAmayahara dayamADennoLu lakShmI- ||4||

kuTila dvESadava nInalla , ninnA-
rBaTakaMjidaru surarella, nara-
naTane tOridyo lakShmInalla , nA
pAsaTigANe-napratimalla |AhA|
vatapatra Sayana dhUrjaTivaMdya jagannAtha –
viThala kRutAMjali puTadi bEDuve lakShmI – ||5||

Leave a Reply

You might also like

error: Content is protected !!