Composer: Shri Jagannatha dasaru
ಕೃಷ್ಣನ ನೋಡಿರೈ ಭಕ್ತಿ ಸಂತುಷ್ಟನ ಪಾಡಿರೈ || ಪ ||
ಕೃಷ್ಣೆಗೆ ಒಲಿದತಿ ದುಷ್ಟ ರಾಯರ ತರಿದ |
ಜಗದೊಳು ಮೆರೆದ || ಅ ಪ ||
ನಂದವ್ರಜದಲಿ ಕಂದನಾಗಿ ತಾ ಬೆಳೆದ |
ದೈತ್ಯರನಳಿದ |
ವೃಂದಾವನದೊಳು ಇಂದು ಮುಖಿಯರನು ಕೂಡಿ |
ಪರಿಪರಿಯಾಡಿ |
ಒಂದೊಂದು ಪರಿಲೀಲೆ ಸಂದೋಹಗಳ ತೋರಿಸಿದ |
ಮೋಹ ಬೆರೆಸಿದ ||
ಕಂದರ್ಪ ಪಿತ ತನ್ನ ಹೊಂದಿದ ಜನರನು ಕಾವಾ |
ವರಗಳನೀವಾ || ೧ ||
ಬಾಲೇರ ಮನೆಯಲಿ ಪಾಲು ಮೊಸರುಗಳ ಕದ್ದ |
ತೀವ್ರದಿ ಮೆದ್ದ |
ಕಾಲಕಾಲದಲ್ಲಿ ಗೋಪಾಲರ್-ಒಡಗೂಡಿ ಗೋವ |
ಕಾಯ್ದನು ದೇವ |
ಶೈಲವ ಬೆರಳಲಿ ತಾಳಿ ಗೋಕುಲವ ಪೊರೆದ |
ಗರ್ವ ಮುರಿದ ||
ಶ್ರೀಲೋಲುಪನು ವಿಶಾಲ ಮಹಿಮೆಗಳ ತೋರ್ದ |
ಸುರರಿಂ ಮೆರೆದ || ೨ ||
ಮಧುರ ಪಟ್ಟಣದಿ ಕದನ ಕರ್ಕಶರ ಕೊಂದ |
ಸಚ್ಚಿದಾನಂದ |
ಸದುಗುಣನಿಧಿಯ ಪಡೆದವಳ ಜನಕಗೆ ಪಟ್ಟ – |
ಗಟ್ಟಿದ ಧಿಟ್ಟ |
ಸುದತಿಯಗೋಸುಗ ಸುರಪನ ಪುರ-ದಿಂದ |
ಸುರತರು ತಂದ ||
ಪದುಮಜಾಂಡಧರ ಜಗನ್ನಾಥವಿಠಲ ನೀತ |
ತ್ರಿಗುಣಾತೀತ || ೩ ||
kRuShNana nODirai Bakti saMtuShTana pADirai || pa ||
kRuShNege olidati duShTa rAyara tarida |
jagadoLu mereda || a pa ||
naMdavrajadali kaMdanAgi tA beLeda |
daityaranaLida |
vRuMdAvanadoLu iMdu muKiyaranu kUDi |
paripariyADi |
oMdoMdu parilIle saMdOhagaLa tOrisida |
mOha beresida ||
kaMdarpa pita tanna hoMdida janaranu kAvA |
varagaLanIvA || 1 ||
bAlEra maneyali pAlu mosarugaLa kadda |
tIvradi medda |
kAlakAladalli gOpAlar-oDagUDi gOva |
kAydanu dEva |
Sailava beraLali tALi gOkulava poreda |
garva murida ||
SrIlOlupanu viSAla mahimegaLa tOrda |
surariM mereda || 2 ||
madhura paTTaNadi kadana karkaSara koMda |
saccidAnaMda |
saduguNanidhiya paDedavaLa janakage paTTa – |
gaTTida dhiTTa |
sudatiyagOsuga surapana puradiMda |
surataru taMda ||
padumajAMDadhara jagannAthaviThala nIta |
triguNAtIta || 3 ||

Leave a Reply
You must be logged in to post a comment.