Endu kambenu Panduranga

Composer: Shri Jagannatha dasaru

ಎಂದು ಕಾಂಬೆನು ಪಾಂಡುರಂಗ ಮೂರುತಿಯಾ,
ಇಂದು ಭಾಗನಿವಾಸ ನರನ ಸಾರಥಿಯ [ಪ]

ಅರುಣಾಬ್ಜೋಪಮ ಚಾರು ಚರಣಾಂಗುಲಿ ನಖರ
ತರುಣೇಂದುಚ್ಛವಿ ತಿರಸ್ಕರಿಸುವ ಪ್ರಖರ
ಕಿರು ಗೆಜ್ಜೆ ಕಡಗ ನೂಪುರ ಪೆಂಡೆ ಶಫರ
ತೆರೆ ಜಂಘೆ ಜಾನು ಭಾಸುರ ರತ್ನ ಮುಕುರ [೧]

ರಂಭಾ ಪೋಲುವ ಊರು ಪೊಂಬಣ್ಣಾಂಬರವ
ಕುಂಭೀ ಮಸ್ತಕದೊಲ್ ನಿತಂಬದಿ ಪೊಳೆವ
ಕಂಬು ಮೇಖಳಕಂಜ ಗಂಭೀರ ನಾಭೀ
ಅಂಬುಧಿಶಾಯಿ ವಿಧಿ ಶಂಭು ಪೂಜಿತನ [೨]

ಪದಕ ಸರಿಗೆಯ ಜಾಂಬೂನದ ಕಂಬು ಕಂಠ
ರದನೀಕರ ಬಾಹು ಚದುರ ಭುಜ ಕೀರ್ತಿ
ಬದರ ಸಂಕಾಶಾ ಅಂಗದ ರತ್ನ ಕಟಕಾ
ಪದುಮಾರುಣ ಕರಯುಗ್ಮ ಕಟಿಯಲ್ಲಿಟ್ಟವನಾ [೩]

ತಲಿತಾ ಕುಂಡಲ ಕರ್ಣ ಸುಲತಾ ಭ್ರೂಯುಗಳ
ಲಲಿತಾ ಬಾಲ ಶಶಾಂಕ ತಿಲಕಾಂಕಿತ ಫಾಲ
ಅಳಿಜಾಲವೆನಿಪ ಕುಂತಳ ರತ್ನ ಖಚಿತ
ಕಲಧೌತ ಮಕುಟ ದಿಗ್ವಲಯ ಬೆಳಗುವನ [೪]

ಶಠ ಕೂರ್ಮ ರೂಪಿಯ ಕಿಟ ಮಾನವ ಹರಿಯಾ
ವಟು ಭಾರ್ಗವ ಕಾಕುತ್ಸ ಶಠ ಕಂಸ ದ್ವೇಷಿಯ
ನಿಟಿಲಾಂಬಕ ಸಹಾಯ ಖಳ ಕಟಕಾರಿ ಭೀಮಾ
ತಟವಾಸ ಜಗನ್ನಾಥವಿಠಲ-ನಾಕೃತಿಯ [೫]


eMdu kAMbenu pAMDuraMga mUrutiyA,
iMdu BAganivAsa narana sArathiya [pa]

aruNAbjOpama cAru caraNAMguli naKara
taruNEMducCavi tiraskarisuva praKara
kiru gejje kaDaga nUpura peMDe SaPara
tere jaMGe jAnu BAsura ratna mukura [1]

raMBA pOluva Uru poMbaNNAMbarava
kuMBI mastakadol nitaMbadi poLeva
kaMbu mEKaLakaMja gaMBIra nABI
aMbudhiSAyi vidhi SaMBu pUjitana [2]

padaka sarigeya jAMbUnada kaMbu kaMTha
radanIkara bAhu cadura Buja kIrti
badara saMkASA aMgada ratna kaTakA
padumAruNa karayugma kaTiyalliTTavanA [3]

talitA kuMDala karNa sulatA BrUyugaLa
lalitA bAla SaSAMka tilakAMkita PAla
aLijAlavenipa kuMtaLa ratna khacita
kaladhauta makuTa digvalaya beLaguvana [4]

SaTha kUrma rUpiya kiTa mAnava hariyA
vaTu BArgava kAkutsa SaTha kaMsa dvEShiya
niTilAMbaka sahAya KaLa kaTakAri BImA
taTavAsa jagannAthaviThala-nAkRutiya [5]

Leave a Reply

You might also like

error: Content is protected !!