Venunada baro

Composer : Shri Purandara dasaru

ವೇಣುನಾದ ಬಾರೋ
ವೇಂಕಟರಮಣನೇ ಬಾರೋ || ಪ ||

ಬಾಣನ ಭಂಗಿಸಿದಂಥ
ಭಾವಜನಯ್ಯನೆ ಬಾರೋ || ಅ.ಪ ||

ಪೂತನಿಯ ಮೊಲೆಯುಂಡ
ನವನೀತ ಚೋರನೇ ಬಾರೋ
ಭೀತ ರಾವಣನ ಸಂಹರಿಸಿದ
ಸೀತಾನಾಯಕ ಬಾರೋ || ೧ ||

ಬಿಲ್ಲಮುರಿದು ಮಲ್ಲರ ಗೆದ್ದ
ಪುಲ್ಲನಾಭನೇ ಬಾರೋ
ಗೊಲ್ಲತೇರನೊಡನೆ ನಲಿವ
ಚೆಲುವ ಮೂರುತಿ ಬಾರೋ || ೨ ||

ಮಂದರಗಿರಿ ಎತ್ತಿದಂಥ
ಇಂದಿರೆ ರಮಣನೇ ಬಾರೋ
ಕುಂದದೇ ಗೋವುಗಳ ಕಾಯ್ದ
ಪುಂಡರೀಕಾಕ್ಷನೇ ಬಾರೋ || ೩ ||

ನಾರಿಯರ ಮನೆಗೆ ಪೋಗುವ
ವಾರಿಜನಾಭನೇ ಬಾರೋ
ಈರೇಳು ಭುವನವ ಕಾಯುವ
ಮಾರನಯ್ಯನೇ ಬಾರೋ || ೪ ||

ಶೇಷಶಯನ ಮೂರುತಿಯಾದ
ವಾಸುದೇವನೇ ಬಾರೋ
ದಾಸರೊಳು ದಾಸನಾದ
ಪುರಂದರ ವಿಠಲ ಬಾರೋ || ೫ ||


vENunAda bArO
vEMkaTaramaNanE bArO || pa ||

bANana BaMgisidaMtha
BAvajanayyane bArO || a.pa ||

pUtaniya moleyuMDa
navanIta cOranE bArO
BIta rAvaNana saMharisida
sItAnAyaka bArO || 1 ||

billamuridu mallara gedda
pullanABanE bArO
gollatEranoDane naliva
celuva mUruti bArO || 2 ||

maMdaragiri ettidaMtha
iMdire ramaNanE bArO
kuMdadE gOvugaLa kAyda
puMDarIkAkShanE bArO || 3 ||

nAriyara manege pOguva
vArijanABanE bArO
IrELu Buvanava kAyuva
mAranayyanE bArO || 4 ||

SEShaSayana mUrutiyAda
vAsudEvanE bArO
dAsaroLu dAsanAda
puraMdara viThala bArO || 5 ||

Leave a Reply

You might also like

error: Content is protected !!