Composer : Shri Harapanahalli Bheemavva
ಗಜವದನನ ಪಾದಾಂಬುಜಗಳಿಗೆರಗುವೆ |
ಅಜನರಸಿಗೆ ನಮಸ್ಕರಿಸಿ |
ತ್ರಿಜಗವಂದಿತ ಲಕ್ಷ್ಮೀ ನಾರಾಯಣ ಸ್ವಾಮಿಯ |
ನಿಜ ಪತ್ನಿ ಕಥೆಯ ವರ್ಣಿಸುವೆ || ೧ ||
ಅರಸನ ಸೇವೆ ಮಾಡುತೊಂದು ಪಟ್ಟಣದೊಳು
ಇರುತಿದ್ದ ಸೋಮೇಶ ಭಟ್ಟ |
ಹರುಷದಿಂದಲಿ ಸೊಸೆಯರು ಗಂಡು ಮಕ್ಕಳು
ಭರಿತರಾದರು ಸುಖದಿಂದ || ೨ ||
ಆ ಮಹಾ ಕ್ಷೀರ ಸಾಗರದಲ್ಲಿ ಜನಿಸಿದ |
ಶ್ರೀಮಹಾಲಕ್ಷ್ಮೀ ದೇವಿಯನು |
ನೇಮ ದಿಂದಿಂದಿಟ್ಟು ನಿಷ್ಟೇಯಲಿ ಸೋಮೇಶನು |
ತಾ ಮಹಾ ಸಂಭ್ರಮ ದಿಂದ || ೩ ||
ಚಾರು ಪರಿಮಳ ಅರಿಶಿಣ ಗಂಧ ಕುಂಕುಮ |
ಕೇದಿಗೆ ಕುಸುಮ ಮಲ್ಲಿಗೆಯ |
ಮಾಧವನರಸಿ ಮಹಾಲಕ್ಷ್ಮೀಗರ್ಪಿಸಿ |
ಮಂಗಳರತಿ ಬೆಳಗಿದರು || ೪ ||
ಹೋಳಿಗೆಣ್ಣೋರಿಗೆ ಭಕ್ಷ, ಸಣ್ಣ ಶಾವಿಗೆ
ಪರಮಾನ್ನ | ಶಾಲ್ಯನ್ನ ಶಾಕಂಗಳು |
ಚೆನ್ನವಾಗಿದ್ದ ತಾಂಬೂಲ ವನ್ನರ್ಪಿಸಿ |
ಆದರದಿಂದುಂಡರತಿ ಹರುಷದಲಿ || ೫ ||
ಸುಂದರ ಗೌರಿ ಶುಕ್ರವಾರ ಪೂಜಿಸಿ |
ಆನಂದದಿ ಶನಿವಾರದಲ್ಲಿ |
ಕುಂದ ಮಂದಾರ ಮಲ್ಲಿಗೆ ಗಂಧ ಕುಂಕುಮ
ಚೆಂದದಿಂದಾರತಿ ಬೆಳಗಿದರು || ೬ ||
ಹಿಟ್ಟಿನ ಕಡುಬು ಹಿಂಡಿ ಪಲ್ಯವನೆ ಮಾಡಿ |
ಅಚ್ಚೆಳ್ಳು ಗಾಣದೆಣ್ಣೆಯನು |
ನುಚ್ಚು ಮಜ್ಜಿಗೆ ಹುಳಿ ತಿಳಿಯ ಕಟ್ಟಂಬಲಿ |
ಇಟ್ಟಾರು ನೈವೇದ್ಯವನು || ೭ ||
ಭೋಜನಕೆನುತ ಕುಳ್ಳಿರುವೋ ಕಾಲಕ್ಕೆ |
ಬಂದು ರಾಜನ ಸತಿಯು ಕುಳ್ಳಿರಲು |
ಸೂಜಿಗವೇ ನಿಮ್ಮ ಗೌರಿಯ ಸಂಪತ್ತು
ಮೂರ್ಜಗ ದೋಳು ಕಾಣೆನೆಂದು || ೮ ||
ಬೇಕಾದರೊಂದು ಬೇಡಲರಸನ ಸತಿ |
ಸಾಕು ದರಿದ್ರ ದಂಬಲಿಯು |
ಹಾಕಿದರ್ ಹರಡಿ ಕಂಕಣದೋಳು ಸಿಕ್ಕೀತು |
ನಾ ಕೈಯ ಇಡಲಾರೆನೆಂದು || ೯ ||
ಥಟ್ಟನೆಧಾಕಿ ಕೊಂಡಷ್ಟು ಪದಾರ್ಥವ
ಸಂತುಷ್ಟ ರಾಗುಂಡ ರವರು |
ಕಟ್ಟಿದ್ದ ತೂಗುಮಣಿಯಲಿ ಕಾಲುಗಳಿಳಿ ಬಿಟ್ಟು
ಕೂತಳು ರಾಜನರಸಿ || ೧೦ ||
ಒಂದೊಂದು ಅಡಿಗೆ ನಿಂದ್ಯವ ಮಾಡಿ
ನಗುತಿರೆ ಕುಂದಿತು ಸಕಲ ಸಂಪತ್ತು |
ಬಂದಿತು ಪರ ರಾಜರಿಂದ ಮುತ್ತಿಗೆ ದಾರಿ
ಬಂಧನ ಮಾಡ ಬೇಕೆನುತ || ೧೧ ||
ಅರಿತು ಓಡುತಲಿರೆ ತ್ವರಿತ ಬಂದರಿತನ
ಅನುಸರಿಸ್ಯಾಗ ನಡೆದಳು |
ದಿನ ತುಂಬಿದಂತೆ ಗರ್ಭಿಣಿಗಾಗ ಬಂದಾವು
ಕ್ಷಣ ಕೊಮ್ಮೆ ಟೊಂಕ ಬೇನೆಗಳು || ೧೨ ||
ಪುತ್ಥಳಿ ಗೊಂಬೆಯಂದದಿ ಜೋಡು ಮಕ್ಕಳು
ಕಿತ್ತಳೆ ವನದಲ್ಲಿ ಜನಿಸೆ |
ಹೊಚ್ಚಿಟ್ಟಳಾ ಬಾಳೆ ಎಲೆ ಹಾಕಿ ಮಲಗಿಸಿ
ಥಟ್ಟನೆ ದಾಟಿ ನಡೆದಳು || ೧೩ ||
ಬೇಕಾದ ಫಲಗಳನೇಕ ಪುಷ್ಪಂಗಳ
ಜೋಕೆ ಮಾಡುತಾ ವನದೋಳು |
ಕೋಗಿಲೆ ಗಿಳಿ ನವಿಲ್ ಹಿಂಡುಗಳನೆ ಕಂಡು
ಹಾಕುತಿದ್ದವು ಕಾಲಗಳನು || ೧೪ ||
ನಸುಕಿನೊಳಗೆ ಬಂದ ಸೋಮೇಶ ಭಟ್ಟನು |
ಹಸು ಮಕ್ಕಳನ್ನೇ ಕಾಣುತಲಿ |
ಮುಸುಕಿಟ್ಟು ತಂದು ಮುದ್ದಿಸುತ ತನ್ನಯ
ಸತಿ ವಶ ಮಾಡಿಕೊಟ್ಟ ಕೈಯ್ಯೊಳಗ || ೧೫ ||
ಹುಟ್ಟಲಿಲ್ಲವೋ ಹೆಣ್ಣು ಮಕ್ಕಳು ನಮಗಿನ್ನು |
ಕೊಟ್ಟಾನು ದೇವನೆಂದೆನುತಾ |
ಅರ್ತಿ ಯಿಂದಲಿ ಮೂಬಟ್ಟಾ ಲೀರಲು ಮಾಡಿ |
ತೊಟ್ಟಿಲೋಳಿಟ್ಟು ತೂಗಿದರು || ೧೬ ||
ನಾಮಕರಣವ ಮಾಡುತ ಹೆಸರಿಟ್ಟರು |
ಸಾಯಕ್ಕ ಧೇಯಕ್ಕ ಎಂದೆನುತ |
ಪ್ರಾಯಕ್ಕೆ ಬಂದ ಮಕ್ಕಳ ನೋಡಿ ಹುಡುಕಿದ
ಸೋಮಾರ್ಕರಂಥಾ ವರರನು || ೧೭ ||
ಅರಸನ ಕರೆತಂದು ಅಕ್ಕನ ಕೊಟ್ಟರಾಗಲೇ
ಕರೆಸಿ ಪ್ರಧಾನಿಗೆ ತಂಗಿಯನು |
ಹರುಷದಿಂದಲಿ ಧಾರೆ ಎರೆದು ಹೆಣ್
ಮಕ್ಕಳ ಕಳಿಸಿದನವರ ಮಂದಿರಕೆ || ೧೮ ||
ಅಕ್ಕರೆಯಿಂದ ಹೇಳಿದಳು ಸೋಮೇಶಮ್ಮ |
ಮಕ್ಕಳ ಕರೆದು ಬುದ್ಧಿಯನು |
ಶುಕ್ರವಾರದಗೌರಿ ಮರೆಯದೇ ಮಾಡೇ
ಶ್ರೀಲಕ್ಷ್ಮೀ ಒಲಿವಳೆಂದೆನುತ || ೧೯ ||
ಸಾಯಕ್ಕ ಮಾಡಲಾ ಸಂತಾನ ಸಂಪತ್ತಿಗೆ |
ಸಹಾಯವಾದಳು ಮಹಾಲಕ್ಷ್ಮೀ |
ಧೇಯಕ್ಕ ಮರೆತು ದೇಹಕ್ಕೆ ಗ್ರಾಸವಿಲ್ಲದೆ
ರಾಯನ ಸೆರೆಹಾಕಿದರು || ೨೦ ||
ಪೊಡವಿ ಪಾಲಕ ಬಂಧಿಡಿದು ಕೊಂಡೊಯ್ಯಲು |
ಉಡುಗೆ ತೊಡುಗೆ ವಸ್ತ್ರಾಭರಣ |
ಅಡಗಿತು ಸಕಲ ಸಂಪತ್ತು ಧೇಯಕ್ಕಗೆ
ಧೃಢವಾಯಿತಾಗ ದಾರಿದ್ರ್ಯ || ೨೧ ||
ಮಾತನಾಡಿದರು ಮಕ್ಕಳು ತಾಯರೊಡಗೂಡಿ |
ಈ ತೆರವಾಯಿತೇ ಬದುಕು | ಮಾತಾಪಿತೃರು
ಒಡ ಹುಟ್ಟಿ ದವರು ನಿನಗೆ
ಮಾತನಾಡಿಸುವವರು ಯಾರಿಲ್ಲೇ || ೨೨ ||
ದೂರದಲ್ಲಿರುವೋರೆನ್ನ ತಾಯ್ತಂದೆಯರು |
ಸಾರ್ಯಾದಲ್ಲಿರುವೋಳೊಬ್ಬ ತಂಗಿ |
ಸೂರೆ ಹೋಯಿತು ದೊರೆತನ ಭಾಗ್ಯ |
ಬಡ ಪ್ರಧಾನಿ ಹೇಗಿರುವನೋ ನಾ ಕಾಣೆ || ೨೩ ||
ಕಂಡು ಬರುವೆನೆಂದು ಚಿಂದಿ ಮೈಗೆ ಸುತ್ತಿ
ತುಂಡು ಕೋರಿಯ ಹೊದ್ದುಕೊಂಡು |
ಮಂಡೆಘಚ್ಚಿದ ತಾಳಾ ಪ್ರಣತಿ ಎಣ್ಣೆ ಹೊಳೆ |
ದಂಡೀಲಿ ಬಂದು ಕುಳಿತನು || ೨೪ ||
ಪೋರ ನೀನ್ಯಾರೆಂದ್ವಿಚಾರ ಮಾಡಲು |
ನೀರಿಗೆ ಬಂದ ನಾರಿಯರು | ದೂರದಿಂದ
ಬಂದೆ ಧೇಯಕ್ಕನ ಹಿರಿಯ
ಕುಮಾರನೆಂದ್- ಹೇಳಿ ಕಳುಹಿದನು || ೨೫ ||
ಬಂದ್ಹೇಳಿ ದವನ ಅಂದ ಚಂದಗಳೆಲ್ಲ |
ಕರೆತನ್ನಿ ಹಿತ್ತಲ ಬಾಗಿಲಿನಿಂದ |
ಬಂಧೇಳಿಕೊಂಡ ದಾರಿದ್ರ್ಯ ಕಷ್ಟಗಳೆಲ್ಲ
ಉಂಡುಟ್ಟು ಸುಖದಿ ತಾನಿದ್ದ || ೨೬ ||
ಆಲಯಖೋಗಿ ಬರುವೆನೆಂದಪ್ಪಣೆ ಕೇಳಿ
ಕಾಲಹರಣ ಮಾಡದಂತೆ |
ಕೋಲಿನೊಳಗೆ ಹಣ ತುಂಬಿ ಕೈಯಲಿ ಕೊಟ್ಟು |
ಆಲಸ್ಯವಿಲ್ಲದೇ ಕಳುಹಿದಳು || ೨೭ ||
ಬಾಲಕ ನಿನಗಿಂಥ ಕೋಲೇಕೆನುತಲಿ
ಗೋಪಾಲಕ ಸೆಳೆದು ಕೊಂಡೊಯ್ಯೇ |
ನೂತನದವರಿಗೆ ಇಂಥ ವಸ್ತು ಯಾಕೆಂದು |
ಅಲೋಚಿಸುತ ತಾ ಬಂದ || ೨೮ ||
ಮಿಡುಕುತ್ತ ಬಂದು ಮಾತೆಗೆರಗಿದನಾಗ
ಒಡನುಡಿ ವಾರ್ತೆ ಕೇಳುತಲಿ |
ಕೊಡುವಷ್ಟು ಕೊಟ್ಟಾರು ನಮಗೆ ದಕ್ಕದೆನುತಲಿ |
ನಡೆದನು ಮತ್ತೋಬ್ಬ ತನಯ || ೨೯ ||
ತಾಳಾ ಪ್ರಣತಿ ಎಣ್ಣೆ ತಲೆಗೆ ಪೂಸಿ ಮೊಳ
ಕೋರಿಯನ್ನೆ ಹೊದ್ದುಕೊಂಡು |
ಬಳಕುತ್ತ ಬಂದು ಭಾವಿಯ ಮೇಲೆ
ಕುಳಿತ್ಹೇಳಿ ಕಳುಹಿದನವರ ಮಂದಿರಕೆ || ೩೦ ||
ಗೊತ್ತಿಲಿ ಕರೆತಂದು ಹಿತ್ತಲ ಬಾಗಿಲಲ್ಲೇ
ವಾರ್ತೇಗಳನೆ ಕೇಳುತ | ಅತ್ಯಂತ
ಕರುಣ ದಿಂದಲೇ ಭಕ್ಷ್ಯ ಪಾಯಸ |
ಮೃಷ್ಟಾನ್ನವನ್ನುಣಿಸಿದರು || ೩೧ ||
ನಿತ್ಯುಪವಾಸ ಮಾಡುವರೆನ್ನ ಮನೆಯಲ್ಲಿ
ಅಪ್ಪಣೆಗಳ ನೀಡೆಂದೆನುತ |
ಬುಟ್ಟಿಯೊಳಗೆ ಹಣ ಕಟ್ಟಿ ಕಳುಹಲು
ಕಾಗೆ ಕಚ್ಚಿ ಕೊಂಡೊಯ್ಯಲಾಕ್ಷಣದಿ || ೩೨ ||
ಏನು ಹೇಳಲಿ ನಾ ಹೋದ ಕಾರ್ಯ
ಹೀನವಾಯಿತು ಹೀಗೆಂದೆನುತ |
ನಾ ಹೋಗಿ ಬರುವೆನೆಂದೆನುತ
ಮತ್ತೋಬ್ಬ ಕುಮಾರ ತಾ ತೆರಳಿದನು || ೩೩ ||
ಹರಕು ಕೋರಿಯನುಟ್ಟು ಒಡಕು
ತಂಬಿಗೆ ಪಿಡಿದು ಕೆರಕು ಬುತ್ತಿಯಯನೇ ಕಟ್ಟಿಕೊಂಡು |
ಗುರುತ್- ಹೇಳಿ ಕಳುಹೆ ಹಿತ್ತಿಲ ಬಾಗಿಲಿನಿಂದ
ಕರೆತಂದರಾಗ ಮಂದಿರಕೆ || ೩೪ ||
ಎರಡು ದಿನವಿಟ್ಟುಕೊಂಡು ಪಚರಿಸುತ್ತ |
ಬುರುಡೆಯೊಳಗೆ ಹಣವನ್ನು |
ಕಡುಬೇಗದಿಂದ ಕೈಯ್ಯಲಿ ಕೊಡಲಾಗ |
ನಡೆದೆತಾನಡವಿಮಾರ್ಗದಲಿ || ೩೫ ||
ಸೆಳೆದು ನಾಲಿಗೆ ಬಿಸಿಲೇರಿ ಭಾವಿಯ ಕಂಡು |
ಇಳಿದ ಪಾವಟಿಗೆಯಲ್ಲಿಟ್ಟು |
ಬುಡು ಬುಡು ಉರುಳಿ ಮಡುವ ಸೇರಲದ ಕಂಡು
ಮಿಡುಕುತ್ತ ಬಂದ ಮಂದಿರಕೆ || ೩೬ ||
ಗತಿ ಹೀನರೊಳಗೆ ನಮ್ಮಂಥ ನಿರ್ಭಾಗ್ಯರು
ಪೃಥ್ವಿಯೊಳಗೆ ಕಾಣೆನೆಂದೆನುತಾ |
ಅತಿ ಬಾಯಿ ಬಿಡುವ ಮಾತೆಯ ಕಂಡು
ಮತ್ತೊಬ್ಬ ಸುತನಾಗ ತಾ ತೆರಳಿದನು || ೩೭ ||
ಸೊಕ್ಕಿದ ಮೈಗೆ ಛಿದ್ರೆ ಬಟ್ಟೆಯ ಸುತ್ತಿ |
ಕುಕ್ಕುತ ಶೀರು ಹೇನುಗಳು |
ಚಿಕ್ಕಮ್ಮಗೆ ಪೇಳಿ ಕಳುಹಲು |
ಕರೆತಂದ್ರು ಹಿತ್ತಿಲ ಬಾಗಿಲಿನಿಂದಾ || ೩೮ ||
ಎಳೆಂಟು ದಿನದಲ್ಲಿ ಬಹಳುಪಚರಿ ಸುತ್ತ |
ಬಾಳುವ ಕ್ರಮ ಕೇಳುತಲಿ |
ಜಾಳಿಗಿ ಹೊನ್ನು ಚಮ್ಮಾಳಿಗೆಯಲಿ ತುಂಬಿ |
ಕಾಲ ಮೆಟ್ಟಿಸಿ ಕಳುಹಿದಳು || ೩೯ ||
ಅದು ಮೆಟ್ಟಿ ಬರುತಿರೆ ಒದಗಿ ಬಂದಾಂಶದಿ
ಹುದಲು ಕಾಣದೆ ಸಿಗಿಬಿದ್ದು |
ಎದೆ ಬಾಯಿ ಬಿಡುತೆತ್ತ ಹುಡುಕಿದರಿಲ್ಲೆಂದು |
ಎದುರಿಗೆ ಬಂದು ತಾ ನಿಂತಾ || ೪೦ ||
ನಾಲ್ಕು ಮಂದಿಯ ಸುದ್ದಿ ನಾನಾ ಪರಿಯಲಿ ಕೇಳಿ |
ವ್ಯಾಕುಲವಾಯಿತು ಮನಕೆ |
ನಾ ಕಂಡು ಬರುವೆನೆಂದೆನುತ ಧೇಯಕ್ಕ |
ಆ ಕಾಲದಲ್ಲಿ ತೆರಳಿದಳು || ೪೧ ||
ಉಟ್ಟಳು ಮಾರು ಸೀರೆಯನ್ನು ತೋಳಿನಲಿ |
ತೊಟ್ಟಾಳು ಚಿಂದಿ ಕುಪ್ಪಸವ |
ಕಟ್ಟಿದ ಜಡೆಗೆಣ್ಣೆ ಹಚ್ಚಿ ಗಂಟನೆ ಹಾಕಿ |
ಬೊಟ್ಟು ಕುಂಕುಮ ತೀಡಿದಳು || ೪೨ ||
ಒಂದೊಂದು ಗಾಜಿನ ಬಳೆ ಕೈಯಲ್ಲಿ |
ಕಂದಿ ಕುಂದಿದ ಕೂಸನ್ನೆತ್ತಿ
ಬಂದಾಳು ನಿಮ್ಮ ಧೇಯಕ್ಕನೆಂದೆನುತಲಿ
ತಂಗಿಗೇ ವಾರ್ತೆಯ ಕಳುಹಿದಳು || ೪೩ ||
ಅಕ್ಕನ ಕರೆತಂದರಾ ಹಿತ್ತಿಲಿಂದಲಿ
ಶುಕ್ರವಾರದ ಶುಭ ದಿನದಿ |
ಮಕ್ಕಳು ಸೊಸೆಯ ರೊಡಗೂಡಿ ಬಂದು
ಧೇಯಕ್ಕನ ಚರಣಕ್ಕೆರಗಿದರು || ೪೪ ||
ಅಂದಗಲಿದ ಅಕ್ಕ ತಂಗಿಯರಿಬ್ಬರು
ಇಂದಿಗೆ ಕಲೆತೆವೆಂದೆನುತಾ ಮಿಂದು
ಮಡಿಯನುಟ್ಟು ಬಂದೆಲ್ಲಾ ಪರಿವಾರ ಬಂದು
ಭೋಜನಕೆ ಕುಳಿತರು || ೪೫ ||
ಹೋಳಿಗೆ ಹೊಸ ಬೆಣ್ಣೆ ಕಾಸಿದಾ ತುಪ್ಪವು |
ಕ್ಷೀರ ಶಾವಿಗೆಯ ಮೃಷ್ಟಾನ್ನ |
ಬೇಗದಿಂದುಂಡು ಹಾಕುತಲೆ ತಾಂಬೂಲ
ತೂಗು ಮಂಚದಿ ಮಲಗಿದರು || ೪೬ ||
ಬೆಳಗಾಗಲೆದ್ದು ಹೇಳಿದರೆ ಆ ಸೊಸೆಯರ
ಕರೆದು ಸಾಯಕ್ಕ ಕೆಲಸವ | ಬಿಳಿಜೋಳ
ಕುಟ್ಟಿ ಬೀಸಿರೆ ನೀವು ಇಂದಿನ
ಅಡುಗೆಯ ಕ್ರಮ ಹೇಳುವೆನು || ೪೭ ||
ಹುಳಿನುಚ್ಚು ಮಾಡೀರೆ ತಿಳಿಯ ಕಟ್ಟಂಬಲಿ |
ಎಳೆಸೊಪ್ಪು ಹಿಂಡಿಪಲ್ಯವನು |
ತರಿಸುವೆ ಗಾಣದ ಎಳ್ಳಿನ ತಿಳಿ ಎಣ್ಣೆ |
ಹಿಟ್ಟೀನ ಕಡಬು ನೀವ್ ಎನುತ || ೪೮ ||
ಅದ ಕೇಳಿ ಧೇಯಕ್ಕ ಹೃದಯ
ತಲ್ಲಣಿಸುತ್ತ ಎದೆಯೊಳಗಲಗು ನಟ್ಟಂತೆ |
ಉರಿಯ ಒಳಗೆ ಎಣ್ಣೆ ಸುರುವಿದಂತಾಯಿತು
ಸಿರಿಯು ಸಂಪತ್ತಿನಿಂದಾಕೆಗೆ || ೪೯ ||
ಗರಗಸದಿಂದಲಿ ಕೊರೆದುಪ್ಪು ಸಾಸಿವೆ
ಅರೆದ್-ಹಚ್ಚಿದಂಥ ಮಾತುಗಳು |
ಹುಟ್ಟ ಬಡವರು ಬರಬಾರದು ಜಗದೋಳು
ಅಟ್ಟುಂಬೋ ಮನೆಯ ಬಾಗಿಲಿಗೆ || ೫೦ ||
ಕಷ್ಟದಿ ಕಾಲ ಕಳೆಯಲಾಗದಿದ್ದರೆ
ಅಟ್ಟಡವಿ ಸೇರೋದೇ ಲೇಸು | ಪರರ
ಮನೆಯಲಿ ಅಪಹಾಸ್ಯ-ವಾಗುವದಕ್ಕಿಂತಾ
ವನವಾಸಗಳು ಲೇಸೆಂದೆನುತಾ || ೫೧ ||
ಮನದ ಸಂತಾಪ ಸೈರಿಸಲಾರದೆದ್ದಳು
ದನವನ್ನೇ ಕಟ್ಟೋ ಮಂದಿರಕೆ |
ಎತ್ತಿನ ಗೋದಾನಿ ಒಳಗೆ ಕಂದಲ ದಂಟು ಸಿಪ್ಪೆಗಳನೆ ಹೊದ್ದುಕೊಂಡು |
ಕಚ್ಚುತ್ತಿರಲು ಚಿಕ್ಕಾಡು ಕ್ರಿಮಿಗಳೆಲ್ಲಾ |
ಅತ್ತಿತ್ತಲುಗದೇ ಮಲಗಿದಳು || ೫೨ ||
ಮಧ್ಯಾಹ್ನವಾಯಿತು ಅಡಿಗೆ ಧೇಯಕ್ಕನ
ಸದ್ದು ಸುಳಿವು ಕಾಣಲಿಲ್ಲ | ನಿದ್ರೆಯಿಂದೆಲ್ಲೋ
ಮಲಗಿದ್ದಾಳಾಕೆಯು | ಇದ್ದಲ್ಲಿಂದ ಕರೆತನ್ನಿರವಳ || ೫೩ ||
ಬಲ್ಲಷ್ಟು ಮನೆ ಹುಡುಕಿದೆವು ಅತ್ತೆಬಾಯಾರ |
ಸೊಲ್ಲು ಸುಳಿವು ಕಾಣಲಿಲ್ಲಾ | ಎಲ್ಲಿ ಹುಡುಕಿದರಿಲ್ಲವೆನುತ
ಬಂದಾಗ ಎಲ್ಲ ಸೊಸೆಯರು ಹೇಳಿದರು || ೫೪ ||
ಒಳಗೆಲ್ಲ ಹುಡುಕಿ ಬಂದೇವು ಸಂದು ಗೊಂದಿಲಿ
ಆಕಳು ಕಟ್ಟುವ ಗೋದಾನಿಯಲಿ | ಸೆಳೆದು
ದಂಟುಗಳ ಹಾಕುತ್ತಿರು ವಾಗ ಸುಳಿವು
ಕಂಡ್-ಹಿಡಿದ ರಾಕ್ಷಣದಿ || ೫೫ ||
ಸಿಕ್ಕಾರು ನಮ್ಮ ಅತ್ತೆಯವರು ಎಂದೆಬ್ಬಿಸುತಲಿ |
ಹಸ್ತ ಹಿಡಿದು ಕರೆತಂದೇವ್ |
ಉಕ್ಕುವ ಉರಿಮೋರೆಯನೆ ನೋಡಿ
ಮನದಾ ಸಿಟ್ಟೇನೆನುತಾ ಕೇಳಿದರು || ೫೬ ||
ಹೇಳುವದೇನು ಕೇಳುವದೇನು ನಿಮಗಿಂಥಾ |
ಎಳ್ಳು ಆದೆನೆ ನಾನೆಂದೆನುತಾ |
ಜೋಳದನ್ನವ ಕಾಣದೇ ನಾ ಬಂದೇನೆ
ನಾಳೆ ಪೋಗುವೆ ನಮ್ಮ ಮನೆಗೆ || ೫೭ ||
ಭಕ್ಷ್ಯ ಪಾಯಸ ಮಾಡಿ ನಿನ್ನಿನ ದಿವಸ ಈವತ್ತೇ
ದುರ್ಭಿಕ್ಷದಡಿಗೆಯು | ಭಿಕ್ಷಕ್ಕೆ
ಬಂದೆನೆ ನಿಮ್ಮ ಮನೆಗೆ ನಾನು |
ಆ ಕ್ಷಣ ಜಲವ ತುಂಬಿದಳು || ೫೮ ||
ಅಕ್ಕನ ವಚನವ ಕೇಳಿ ಆಲೋಚಿಸಿ |
ನಕ್ಕಳು ತನ್ನ ಮನದಲ್ಲಿ |
ಶುಕ್ರವಾರದ ಗೌರಿ ಮಾಡದೇ
ನೀವಿಂಥ ದುಃಖಕ್ಕೆ ಗುರಿಯಾದಿರೆಂದು || ೫೯ ||
ಬರುವ ಕಾಲದಲ್ಲಿ ಕರೆದು ನಮ್ಮಮ್ಮನು |
ಅರುಹಲಿಲ್ಲವೇ ಗೌರಿಯನ್ನು | ಸಿರಿಯು
ಸಂಪತ್ತನ್ನು ಕೊಡುವಂಥ ಶನಿವಾರ
ಮರೆತು ಬಿಟ್ಟೇನೆ ಅಕ್ಕಯ್ಯಾ || ೬೦ ||
ಲಕ್ಷುಮೀ ದೇವಿಯ ಅಲಕ್ಷ್ಯ ಮಾಡಿದ್ದರಿಂದ
ಈಕ್ಷಕ್ಕೆ ಬಂದು ತೊಲಗಿದಿರಿ |
ಈ ಕ್ಷಣ ನಮ್ಮ ಮನೆಯಲ್ಲಿ ಪೂಜಿಸೆ |
ಸಾಕ್ಷಾತ್ ಶ್ರೀಗೌರಿಯನ್ನು || ೬೧ ||
ಎರೆದು ಪೀತಾಂಬರ ಉಡಿಸಿ ತಂದಿಟ್ಟರೆ |
ಪರಿಪರಿ ವಸ್ತ್ರಾಭರಣ | ವರ
ಮಣೆಯಮೇಲೆ ಮಂಟಪದೋಳು ಚಟ್ಟಂಗಿ |
ಬರೆದಿಟ್ಟರಾಗ ಪೀಠದಲಿ || ೬೨ ||
ಮುಂದೆ ಕಟ್ಟಿಸಿದರು ಮಕರ ತೋರಣಗಳ |
ದುಂದುಭಿ ಭೇರಿ ಹೊಡೆದವು |
ಮಿಂದು ಮುತ್ತೈದೇರು ಸಹಿತ ಬ್ರಾಹ್ಮಣರೆಲ್ಲ
ಅಂದರು ವೇದೋಕ್ತ ಮಂತ್ರಗಳ ||೬೩||
ಹಾಕಿದರೈದು ಫಲಗಳಕ್ಕಿ ಅದರೋಳು
ನಾಲ್ಕೆಂಟು ನಂದಾದೀವಿಗೆಯ | ಶ್ರೀ ಕಮಲ
ಮಧ್ಯದಲ್ಲಿ ಸ್ಥಾಪನೆ ಮಾಡಿ |
ಅನೇಕ ಭಕ್ತಿಂದಾ ಕುಳಿತು || ೬೪ ||
ಅರಿಶಿಣ ಪಿಡಿದು ಹಚ್ಚುತಲಿ ಶ್ರೀಗೌರಿಗೆ
ಸರಕಾನೆ ತಿರುವೆ ಮೋರೆಯನು | ಎಡಕ್-ಹೋಗಿ
ಎರಡು ಕೈಮುಗಿದ್-ಹೇಳಿಕೊಂಡರೆ
ಬಲಕೆ ಬಂದಳು ಭಾಗ್ಯಲಕ್ಷ್ಮೀ || ೬೫ ||
ಮಕ್ಕಳು ಮಾಡುವ ಮಹಾತಪ್ಪು
ಅಪರಾಧ ಹೆತ್ತ ಮಾತೆಯರೆಣಿಸುವರೆ |
ಸತ್ಯವಂತಳು ಈಕೆ ಸಮರಿಲ್ಲವೆನುತಲಿ
ಭಕ್ತಿಯಿಂದಲಿ ಕರವ ಮುಗಿದರು || ೬೬ ||
ಕಡಲಾಂಬುವಾಸನ ಮಡದಿ ಮಹಾಲಕ್ಷ್ಮೀಗೆ
ಒಡೆದ ತೆಂಗಿನಕಾಯಿ ಫಲವು |
ಮಡದಿಯರಿಗೆ ಅರಿಶಿಣ ಗಂಧ
ಕುಂಕುಮ ಕೊಡುತ ಪುಷ್ಪಗಳುಡಿತುಂಬೆ || ೬೭ ||
ಬಟ್ಟ ಮುತ್ತಿನ ಹರಿವಾಣದೊಳ್ ನೈವೇದ್ಯ |
ಭಕ್ಷ್ಯ ಪಾಯಸ ಬಡಿಸಿದರು |
ಸಂತುಷ್ಟಿಯಿಂದ ನೋಡುತಲಿ ಧೇಯಕ್ಕಗೆ
ಅಷ್ಟೈಶ್ವರ್ಯ ನೀಡಿದಳು || ೬೮ ||
ದುಂಡುಮುತ್ತಿನ ಹರಿವಾಣದೊಳ್ ನೈವೇದ್ಯ |
ಮಂಡಿಗೆ ತುಪ್ಪ ಸಕ್ಕರೆಯು |
ಕಂಡು ಸಂತೋಷ ದಿಂದಾಗ ಧೇಯಕ್ಕನ
ಗಂಡಗೆ ರಾಜ್ಯ ನೀಡಿದಳು || ೬೯ ||
ಹೊಳೆವ ಚಿನ್ನದ ಹರಿವಾಣದೊಳ್ ಕಡಬು
ಕಟ್ಟಂಬಲಿ ಬಡಿಸಿ | ತರಿಸಿದೆಳ್ಳೆಣ್ಣೆ
ಹಿಂಡಿಯ ಪಲ್ಯ ತಾಂಬೂಲ |
ನಲಿನಲಿದಾಡಿ ನೋಡುತಲಿ || ೭೦ ||
ಅಕ್ಕ ತಂಗಿಯರಾಗ ಜೊತೆಯಲಾರತಿ ಎತ್ತಿ
ಮುತ್ತೈದೆ ಯರು ಹಾಡುತಲಿ | ಉತ್ತಮಾಂಗನಿಗೆ
ಮಂತ್ರಾಕ್ಷತೆಗಳ ಹಾಕಿ |
ಎತ್ತಿದಾರತಿ ಇಳಿಸಿದರು || ೭೧ ||
ಉಂಡರು ಸಕಲ ಜನರು ಸಹಿತಾಗಿ
ತಕ್ಕೊಂಡು ಕರ್ಪುರದ ವಿಳ್ಯಗಳ |
ಉಂಡು ಸಂತೋಷದಿಂದಾಗ ಕೂತಿರಲು |
ಬಂದೆರಗಿದರು ಬಾಲಕರು || ೭೨ ||
ಅರಸು ತಾನಾಗಿಯೇ ಬಂದನೇ
ನಮ್ಮಯ್ಯನು ಕರೆಸಿದ ನಿಮ್ಮ ನೆಂದೆನುತ |
ಹರುಷದಿಂದವರ ಮಾತುಗಳ
ಕೇಳ್ಯಾನಂದ ಭರಿತರಾದರು ಮನೆಯಲ್ಲಿ || ೭೩ ||
ಗಡಗಡನಾಗ ಬಂದವು ತೇಜಿ ರಥಗಳು |
ನುಡಿದವು ಭೇರಿ ವಾದ್ಯಗಳು |
ಸಡಗರದಿಂದುಡುಗೋರೆ ವಿಳ್ಯವ ಕೊಟ್ಟು
ನಡೆದರು ತಮ್ಮ ಮಂದಿರಕೆ || ೭೪ ||
ಅಕ್ಕತಂಗಿಯರು ಅಂದಣವೇರಿ ಕೊಂಡು
ಪಲ್ಲಕ್ಕಿಯೊಳಗೆ ಕುಳಿತುಕೊಂಡು |
ಅರ್ತಿಯಿಂದಲಿ ಚಾಮರ ಬೀಸುತಲಿ ತಮ್ಮ
ಪಟ್ಟಣಕ್ಕೆ ನಡೆತಂದರು || ೭೫ ||
ಆ ಗೋಪಾಲ ತಂದಾಗ ಕೈಯಲಿ ಕೊಡೆ |
ಈ ಕೋಲು ನಿಮ್ಮದೆಂದೆನುತ |
ಹಾಕಿತು ಕಾಗೆ ಹಣದ ಬುತ್ತಿಯ ಗಂಟನು |
ಸ್ವೀಕರಿಸಿದ ನೊಬ್ಬ ಸುತನು || ೭೬ ||
ಮಡುವಿನೊಳಗೆ ಮುಳುಗಿ ಏಳುತಿರುವುದ ಕಂಡು |
ಬುರುಡೆ ಹಣವ ಕೈಯ್ಗೊಂಡು |
ನಡೆವ ಮಾರ್ಗದೊಳಗೆ ಹಾವಿಗೆ ಕಂಡು |
ಹಿಡಿದುಕೊಂಡ್-ಹಿಗ್ಗಿ ನಡೆದರು || ೭೭ ||
ದಡದಡನಾಗ ಬಂದವು ಮಳೆಗಳು |
ಸಿರಿ ತೊಯ್ಯಲಾಗದೆಂದೆನಲು |
ಹರದೇರಿಬ್ಬರು ಸೆರಗನೇ ಮರೆಮಾಡಿ |
ಕರೆತಂದರಾ ತೋಟದಲಿ || ೭೮ ||
ಒಂದು ಘಳಿಗೆ ಸ್ಥಳವನೆ ಮಾಡಿ
ಕೊಟ್ಟರೆ ಬಂದೀತು ಬಹಳ ಪುಣ್ಯಗಳು |
ಹಾಗೆಂದ ಮಾತಿಗೆ ತಾನೊಳಗಿನಿಂದ ಬಂದು |
ಇಲ್ಲೆಲ್ಲಿ ಸ್ಥಳವು ಹೋಗೆಂದಾ || ೭೯ ||
ಮನ್ನಿಸಿ ಕರೆದು ಮುದ್ದಿಸಿ ಮಹಾಲಕ್ಷೀ
ದೇವಿಗೆ ಸ್ಥಳ ಮಾಡಿ ಕೊಟ್ಟು |
ಮತ್ತೆ ನೀವೀಗ ಕೋಪಿಸಲಾರದೀ
ಗೌರಿ ಭಕ್ತಿಯಿಂದಲಿ ಕರವ ಮುಗಿದಳು || ೮೦ ||
ಎತ್ತಲ ಗೌರಿ ಎಲ್ಲಿಯ ದ್ರೋಹ ನಮಗಿನ್ನು
ಪತ್ನಿಯ ಕರೆದು ಕೇಳಿದನು |
ಸತ್ಯವಂತಳು ಆಕೆ ಸಮರಿಲ್ಲವೆನುತಲಿ |
ಭಕ್ತಿಯಿಂದಲಿ ಕರವ ಮುಗಿದಳು || ೮೧ ||
ಹಿಂದಕ್ಕೆ ಸೋಮೇಶಮ್ಮಾನ ಮನೆಯಲ್ಲಿ |
ನಿಂದೆ ಮಾಡಿದೆ ಗೌರಿಯನ್ನು |
ಬಂದಿತು ನಮಗೆ ವನವಾಸ ವೆಂದೆನುತಲಿ |
ಗಂಡಗೆ ತಿಳಿ ಹೇಳಿದಳು || ೮೨ ||
ಜಾತವಾದರು ಪಾರಿಜಾತ ವನದಾಗೆ |
ಅನಾಥರನ್ನ ಮಾಡಿ ಬಂದೆ |
ಪ್ರೀತಿಯಿಂದಲಿ ಸಲಹಿದವರ್ ಯಾರೆಂದು |
ಆ ತಾಯಿ ಸುತರ ಕೇಳಿದಳು || ೮೩ ||
ತುಲಸಿಗೆನುತ ಬಂದ ಸೋಮೇಶಭಟ್ಟನು |
ಗಳಿಸಿಕೊಂಡೊಯ್ದ ನಮ್ಮನ್ನ |
ಬೆಳೆಸಿ ಎರೆದನೆ ಧಾರೆ ಅರಸು ಪ್ರಧಾನಿಗೆ |
ಕಳಿಸಿದನಾಗ ಸಂಭ್ರಮದಿ || ೮೪ ||
ಅಕ್ಕರೆಯಿಂದ ಪೇಳಿದಳು ಸೋಮೇಶಮ್ಮ |
ಶುಕ್ರವಾರದ ಗೌರಿಯನ್ನು |
ಮಕ್ಕಳು ಸೊಸೆಯರು ಇದು ಎಲ್ಲ ಸೋಮೇಶ
ಭಟ್ಟನ ಪುಣ್ಯವಿದೆಂದು || ೮೫ ||
ಹಿಂದಾಗಲೊನವಾಸ ಮುಂದ್ಯಾಕೆ ನುತಲಿ |
ತಂದು ಕೊಟ್ಟರು ಉಡುಗೊರೆಯ |
ಮುಂಗಯ್ಯ ಹಿಡಿದು ಮುಪ್ಪಿನ ತಾಯಿ ತಂದೇರ |
ಅಂದಣವನೇರಿಸಿದರು || ೮೬ ||
ಭೋರೆಂಬೋ ನದಿಯ ದಾಟುತಲಿ ಕಟ್ಟಿಸಿದರು |
ಊರ ಬಾಗಿಲಿಗೆ ತೋರಣವ |
ಭೇರಿ ನಗಾರಿ ತುತ್ತೂರಿ ವಾದ್ಯಗಳಿಂದ |
ಸಾಲು ದೀವಟಿಗೆ ಸಂಭ್ರಮದಿ || ೮೭ ||
ಹಾಸುತ ನಡೆಮುಡಿ ಒಳಕದಲಾರತಿ |
ಬೀಸುತ್ತ ಬಿಳಿಯ ಚಾಮರವಾ |
ಸೋಸಿಲಿಂದಲಿ ಕರೆತಂದರ್ ಅರಮನೆಗೆ |
ಸಿಂಹಾಸನದಳೊಪ್ಪಿರೋ ಮಹಾಲಕ್ಷ್ಮೀಗೆ || ೮೮ ||
ಅರಳು ಪೂಗಂಧ ಕುಂಕುಮವ ನಾರಿಯರು |
ಹರಿವಾಣದೊಳು ತಂದಿರಿಸಿ | ಪರಿಪರಿಯಲಿ
ಸರ್ವಾಂಗ ಪೂಜೆಯ ಮಾಡಿ |
ಫಲಗಳನೊಪ್ಪಿಸಿ ಕೈಯ ಮುಗಿಯೇ || ೮೯ ||
ಬಿತ್ತಿದ ಬೆಳೆರಾಶಿ ಉಕ್ಕುವ ಧನಧಾನ್ಯ |
ಉಕ್ಕುವಂದದಿ ಕ್ಷೀರರಸವು |
ಲೆಕ್ಕವಿಲ್ಲದೇ ಮಕ್ಕಳಾಗೋರು ಮನೆತುಂಬ |
ಮುತ್ತೈದೆತನವ ನೀಡುವಳು || ೯೦ ||
ತಾ ಸುರಕಾಮಧೇನು ಎಂದೆನಿಸಿ
ಭೀಮೇಶ ಕೃಷ್ಣನು ಸಹಿತಾಗಿ |
ಲೇಸಾಗಿದ್ದ ಸಂಪತ್ತನ್ನೆಲ್ಲ ಕೊಟ್ಟು
ವಾಸವಾದಳು ಮಹಾಲಕ್ಷ್ಮೀ || ೯೧ ||
ಮಂಗಳಂ ಜಯವೆನ್ನಿ ಮಂಗಲಂ ಶುಭವೆನ್ನಿ |
ಮಂಗಳಾಂಗನೇ ಮಹಾಲಕ್ಷ್ಮೀ |
ಕಂಗಳು ತೆರೆದು ಕಟಾಕ್ಷದಿ ನೋಡಲು |
ಇಂಗೋದು ಸಕಲ ಪಾಪಗಳು ||
ಬರಡು ಕರೆಯಲಿ | ಬಂಜೆಗೆ ಮಕ್ಕಳಾಗಲಿ |
ಕುರುಡಗೆ ಕಂಗಳು ಬರಲಿ | ಬರ ಹರಿಯಲಿ |
ದಾರಿದ್ರ್ಯಗಳಿಂಗಲಿಶ್ರೀ ಹರಿ ನಮ್ಮ ಹೃದಯದೊಳಗಿರಲಿ ||
ಶ್ರೀ ಕೃಷ್ಣಾರ್ಪಣಮಸ್ತು |
gajavadanana pAdAMbujagaLigeraguve |
ajanarasige namaskarisi |
trijagavaMdita lakShmI nArAyaNa svAmiya |
nija patni katheya varNisuve || 1 ||
arasana sEve mADutoMdu paTTaNadoLu
irutidda sOmESa BaTTa |
haruShadiMdali soseyaru gaMDu makkaLu
BaritarAdaru suKadiMda || 2 ||
A mahA kShIra sAgaradalli janisida |
SrImahAlakShmI dEviyanu |
nEma diMdiMdiTTu niShTEyali sOmESanu |
tA mahA saMBrama diMda || 3 ||
cAru parimaLa ariSiNa gaMdha kuMkuma |
kEdige kusuma malligeya |
mAdhavanarasi mahAlakShmIgarpisi |
maMgaLarati beLagidaru || 4 ||
hOLigeNNOrige BakSha, saNNa SAvige
paramAnna | SAlyanna SAkaMgaLu |
cennavAgidda tAMbUla vannarpisi |
AdaradiMduMDarati haruShadali || 5 ||
suMdara gauri SukravAra pUjisi |
AnaMdadi SanivAradalli |
kuMda maMdAra mallige gaMdha kuMkuma
ceMdadiMdArati beLagidaru || 6 ||
hiTTina kaDubu hiMDi palyavane mADi |
acceLLu gANadeNNeyanu |
nuccu majjige huLi tiLiya kaTTaMbali |
iTTAru naivEdyavanu || 7 ||
BOjanakenuta kuLLiruvO kAlakke |
baMdu rAjana satiyu kuLLiralu |
sUjigavE nimma gauriya saMpattu
mUrjaga dOLu kANeneMdu || 8 ||
bEkAdaroMdu bEDalarasana sati |
sAku daridra daMbaliyu |
hAkidar haraDi kaMkaNadOLu sikkItu |
nA kaiya iDalAreneMdu || 9 ||
thaTTanedhAki koMDaShTu padArthava
saMtuShTa rAguMDa ravaru |
kaTTidda tUgumaNiyali kAlugaLiLi biTTu
kUtaLu rAjanarasi || 10 ||
oMdoMdu aDige niMdyava mADi
nagutire kuMditu sakala saMpattu |
baMditu para rAjariMda muttige dAri
baMdhana mADa bEkenuta || 11 ||
aritu ODutalire tvarita baMdaritana
anusarisyAga naDedaLu |
dina tuMbidaMte garBiNigAga baMdAvu
kShaNa komme ToMka bEnegaLu || 12 ||
putthaLi goMbeyaMdadi jODu makkaLu
kittaLe vanadalli janise |
hocciTTaLA bALe ele hAki malagisi
thaTTane dATi naDedaLu || 13 ||
bEkAda PalagaLanEka puShpaMgaLa
jOke mADutA vanadOLu |
kOgile giLi navil hiMDugaLane kaMDu
hAkutiddavu kAlagaLanu || 14 ||
nasukinoLage baMda sOmESa BaTTanu |
hasu makkaLannE kANutali |
musukiTTu taMdu muddisuta tannaya
sati vaSa mADikoTTa kaiyyoLaga || 15 ||
huTTalillavO heNNu makkaLu namaginnu |
koTTAnu dEvaneMdenutA |
arti yiMdali mUbaTTA lIralu mADi |
toTTilOLiTTu tUgidaru || 16 ||
nAmakaraNava mADuta hesariTTaru |
sAyakka dhEyakka eMdenuta |
prAyakke baMda makkaLa nODi huDukida
sOmArkaraMthA vararanu || 17 ||
arasana karetaMdu akkana koTTarAgalE
karesi pradhAnige taMgiyanu |
haruShadiMdali dhAre eredu heN
makkaLa kaLisidanavara maMdirake || 18 ||
akkareyiMda hELidaLu sOmESamma |
makkaLa karedu buddhiyanu |
SukravAradagauri mareyadE mADE
SrIlakShmI olivaLeMdenuta || 19 ||
sAyakka mADalA saMtAna saMpattige |
sahAyavAdaLu mahAlakShmI |
dhEyakka maretu dEhakke grAsavillade
rAyana serehAkidaru || 20 ||
poDavi pAlaka baMdhiDidu koMDoyyalu |
uDuge toDuge vastrABaraNa |
aDagitu sakala saMpattu dhEyakkage
dhRuDhavAyitAga dAridrya || 21 ||
mAtanADidaru makkaLu tAyaroDagUDi |
I teravAyitE baduku | mAtApitRuru
oDa huTTi davaru ninage
mAtanADisuvavaru yArillE || 22 ||
dUradalliruvOrenna tAytaMdeyaru |
sAryAdalliruvOLobba taMgi |
sUre hOyitu doretana BAgya |
baDa pradhAni hEgiruvanO nA kANe || 23 ||
kaMDu baruveneMdu ciMdi maige sutti
tuMDu kOriya hoddukoMDu |
maMDeghaccida tALA praNati eNNe hoLe |
daMDIli baMdu kuLitanu || 24 ||
pOra nInyAreMdvicAra mADalu |
nIrige baMda nAriyaru | dUradiMda
baMde dhEyakkana hiriya
kumAraneMd- hELi kaLuhidanu || 25 ||
baMd~hELi davana aMda caMdagaLella |
karetanni hittala bAgiliniMda |
baMdhELikoMDa dAridrya kaShTagaLella
uMDuTTu suKadi tAnidda || 26 ||
AlayakhOgi baruveneMdappaNe kELi
kAlaharaNa mADadaMte |
kOlinoLage haNa tuMbi kaiyali koTTu |
AlasyavilladE kaLuhidaLu || 27 ||
bAlaka ninagiMtha kOlEkenutali
gOpAlaka seLedu koMDoyyE |
nUtanadavarige iMtha vastu yAkeMdu |
alOcisuta tA baMda || 28 ||
miDukutta baMdu mAtegeragidanAga
oDanuDi vArte kELutali |
koDuvaShTu koTTAru namage dakkadenutali |
naDedanu mattObba tanaya || 29 ||
tALA praNati eNNe talege pUsi moLa
kOriyanne hoddukoMDu |
baLakutta baMdu BAviya mEle
kuLit~hELi kaLuhidanavara maMdirake || 30 ||
gottili karetaMdu hittala bAgilallE
vArtEgaLane kELuta | atyaMta
karuNa diMdalE BakShya pAyasa |
mRuShTAnnavannuNisidaru || 31 ||
nityupavAsa mADuvarenna maneyalli
appaNegaLa nIDeMdenuta |
buTTiyoLage haNa kaTTi kaLuhalu
kAge kacci koMDoyyalAkShaNadi || 32 ||
Enu hELali nA hOda kArya
hInavAyitu hIgeMdenuta |
nA hOgi baruveneMdenuta
mattObba kumAra tA teraLidanu || 33 ||
haraku kOriyanuTTu oDaku
taMbige piDidu keraku buttiyayanE kaTTikoMDu |
gurut- hELi kaLuhe hittila bAgiliniMda
karetaMdarAga maMdirake || 34 ||
eraDu dinaviTTukoMDu pacarisutta |
buruDeyoLage haNavannu |
kaDubEgadiMda kaiyyali koDalAga |
naDedetAnaDavimArgadali || 35 ||
seLedu nAlige bisilEri BAviya kaMDu |
iLida pAvaTigeyalliTTu |
buDu buDu uruLi maDuva sEralada kaMDu
miDukutta baMda maMdirake || 36 ||
gati hInaroLage nammaMtha nirBAgyaru
pRuthviyoLage kANeneMdenutA |
ati bAyi biDuva mAteya kaMDu
mattobba sutanAga tA teraLidanu || 37 ||
sokkida maige Cidre baTTeya sutti |
kukkuta SIru hEnugaLu |
cikkammage pELi kaLuhalu |
karetaMdru hittila bAgiliniMdA || 38 ||
eLeMTu dinadalli bahaLupacari sutta |
bALuva krama kELutali |
jALigi honnu cammALigeyali tuMbi |
kAla meTTisi kaLuhidaLu || 39 ||
adu meTTi barutire odagi baMdAMSadi
hudalu kANade sigibiddu |
ede bAyi biDutetta huDukidarilleMdu |
edurige baMdu tA niMtA || 40 ||
nAlku maMdiya suddi nAnA pariyali kELi |
vyAkulavAyitu manake |
nA kaMDu baruveneMdenuta dhEyakka |
A kAladalli teraLidaLu || 41 ||
uTTaLu mAru sIreyannu tOLinali |
toTTALu ciMdi kuppasava |
kaTTida jaDegeNNe hacci gaMTane hAki |
boTTu kuMkuma tIDidaLu || 42 ||
oMdoMdu gAjina baLe kaiyalli |
kaMdi kuMdida kUsannetti
baMdALu nimma dhEyakkaneMdenutali
taMgigE vArteya kaLuhidaLu || 43 ||
akkana karetaMdarA hittiliMdali
SukravArada SuBa dinadi |
makkaLu soseya roDagUDi baMdu
dhEyakkana caraNakkeragidaru || 44 ||
aMdagalida akka taMgiyaribbaru
iMdige kaleteveMdenutA miMdu
maDiyanuTTu baMdellA parivAra baMdu
BOjanake kuLitaru || 45 ||
hOLige hosa beNNe kAsidA tuppavu |
kShIra SAvigeya mRuShTAnna |
bEgadiMduMDu hAkutale tAMbUla
tUgu maMcadi malagidaru || 46 ||
beLagAgaleddu hELidare A soseyara
karedu sAyakka kelasava | biLijOLa
kuTTi bIsire nIvu iMdina
aDugeya krama hELuvenu || 47 ||
huLinuccu mADIre tiLiya kaTTaMbali |
eLesoppu hiMDipalyavanu |
tarisuve gANada eLLina tiLi eNNe |
hiTTIna kaDabu nIv enuta || 48 ||
ada kELi dhEyakka hRudaya
tallaNisutta edeyoLagalagu naTTaMte |
uriya oLage eNNe suruvidaMtAyitu
siriyu saMpattiniMdAkege || 49 ||
garagasadiMdali koreduppu sAsive
ared-haccidaMtha mAtugaLu |
huTTa baDavaru barabAradu jagadOLu
aTTuMbO maneya bAgilige || 50 ||
kaShTadi kAla kaLeyalAgadiddare
aTTaDavi sErOdE lEsu | parara
maneyali apahAsya-vAguvadakkiMtA
vanavAsagaLu lEseMdenutA || 51 ||
manada saMtApa sairisalAradeddaLu
danavannE kaTTO maMdirake |
ettina gOdAni oLage kaMdala daMTu sippegaLane hoddukoMDu |
kaccuttiralu cikkADu krimigaLellA |
attittalugadE malagidaLu || 52 ||
madhyAhnavAyitu aDige dhEyakkana
saddu suLivu kANalilla | nidreyiMdellO
malagiddALAkeyu | iddalliMda karetanniravaLa || 53 ||
ballaShTu mane huDukidevu attebAyAra |
sollu suLivu kANalillA | elli huDukidarillavenuta
baMdAga ella soseyaru hELidaru || 54 ||
oLagella huDuki baMdEvu saMdu goMdili
AkaLu kaTTuva gOdAniyali | seLedu
daMTugaLa hAkuttiru vAga suLivu
kaMD-hiDida rAkShaNadi || 55 ||
sikkAru namma atteyavaru eMdebbisutali |
hasta hiDidu karetaMdEv |
ukkuva urimOreyane nODi
manadA siTTEnenutA kELidaru || 56 ||
hELuvadEnu kELuvadEnu nimagiMthA |
eLLu Adene nAneMdenutA |
jOLadannava kANadE nA baMdEne
nALe pOguve namma manege || 57 ||
BakShya pAyasa mADi ninnina divasa IvattE
durBikShadaDigeyu | BikShakke
baMdene nimma manege nAnu |
A kShaNa jalava tuMbidaLu || 58 ||
akkana vacanava kELi AlOcisi |
nakkaLu tanna manadalli |
SukravArada gauri mADadE
nIviMtha duHKakke guriyAdireMdu || 59 ||
baruva kAladalli karedu nammammanu |
aruhalillavE gauriyannu | siriyu
saMpattannu koDuvaMtha SanivAra
maretu biTTEne akkayyA || 60 ||
lakShumI dEviya alakShya mADiddariMda
IkShakke baMdu tolagidiri |
I kShaNa namma maneyalli pUjise |
sAkShAt SrIgauriyannu || 61 ||
eredu pItAMbara uDisi taMdiTTare |
paripari vastrABaraNa | vara
maNeyamEle maMTapadOLu caTTaMgi |
barediTTarAga pIThadali || 62 ||
muMde kaTTisidaru makara tOraNagaLa |
duMduBi BEri hoDedavu |
miMdu muttaidEru sahita brAhmaNarella
aMdaru vEdOkta maMtragaLa ||63||
hAkidaraidu PalagaLakki adarOLu
nAlkeMTu naMdAdIvigeya | SrI kamala
madhyadalli sthApane mADi |
anEka BaktiMdA kuLitu || 64 ||
ariSiNa piDidu haccutali SrIgaurige
sarakAne tiruve mOreyanu | eDak-hOgi
eraDu kaimugid-hELikoMDare
balake baMdaLu BAgyalakShmI || 65 ||
makkaLu mADuva mahAtappu
aparAdha hetta mAteyareNisuvare |
satyavaMtaLu Ike samarillavenutali
BaktiyiMdali karava mugidaru || 66 ||
kaDalAMbuvAsana maDadi mahAlakShmIge
oDeda teMginakAyi Palavu |
maDadiyarige ariSiNa gaMdha
kuMkuma koDuta puShpagaLuDituMbe || 67 ||
baTTa muttina harivANadoL naivEdya |
BakShya pAyasa baDisidaru |
saMtuShTiyiMda nODutali dhEyakkage
aShTaiSvarya nIDidaLu || 68 ||
duMDumuttina harivANadoL naivEdya |
maMDige tuppa sakkareyu |
kaMDu saMtOSha diMdAga dhEyakkana
gaMDage rAjya nIDidaLu || 69 ||
hoLeva cinnada harivANadoL kaDabu
kaTTaMbali baDisi | tarisideLLeNNe
hiMDiya palya tAMbUla |
nalinalidADi nODutali || 70 ||
akka taMgiyarAga joteyalArati etti
muttaide yaru hADutali | uttamAMganige
maMtrAkShategaLa hAki |
ettidArati iLisidaru || 71 ||
uMDaru sakala janaru sahitAgi
takkoMDu karpurada viLyagaLa |
uMDu saMtOShadiMdAga kUtiralu |
baMderagidaru bAlakaru || 72 ||
arasu tAnAgiyE baMdanE
nammayyanu karesida nimma neMdenuta |
haruShadiMdavara mAtugaLa
kELyAnaMda BaritarAdaru maneyalli || 73 ||
gaDagaDanAga baMdavu tEji rathagaLu |
nuDidavu BEri vAdyagaLu |
saDagaradiMduDugOre viLyava koTTu
naDedaru tamma maMdirake || 74 ||
akkataMgiyaru aMdaNavEri koMDu
pallakkiyoLage kuLitukoMDu |
artiyiMdali cAmara bIsutali tamma
paTTaNakke naDetaMdaru || 75 ||
A gOpAla taMdAga kaiyali koDe |
I kOlu nimmadeMdenuta |
hAkitu kAge haNada buttiya gaMTanu |
svIkarisida nobba sutanu || 76 ||
maDuvinoLage muLugi ELutiruvuda kaMDu |
buruDe haNava kaiygoMDu |
naDeva mArgadoLage hAvige kaMDu |
hiDidukoMD-higgi naDedaru || 77 ||
daDadaDanAga baMdavu maLegaLu |
siri toyyalAgadeMdenalu |
haradEribbaru seraganE maremADi |
karetaMdarA tOTadali || 78 ||
oMdu GaLige sthaLavane mADi
koTTare baMdItu bahaLa puNyagaLu |
hAgeMda mAtige tAnoLaginiMda baMdu |
illelli sthaLavu hOgeMdA || 79 ||
mannisi karedu muddisi mahAlakShI
dEvige sthaLa mADi koTTu |
matte nIvIga kOpisalAradI
gauri BaktiyiMdali karava mugidaLu || 80 ||
ettala gauri elliya drOha namaginnu
patniya karedu kELidanu |
satyavaMtaLu Ake samarillavenutali |
BaktiyiMdali karava mugidaLu || 81 ||
hiMdakke sOmESammAna maneyalli |
niMde mADide gauriyannu |
baMditu namage vanavAsa veMdenutali |
gaMDage tiLi hELidaLu || 82 ||
jAtavAdaru pArijAta vanadAge |
anAtharanna mADi baMde |
prItiyiMdali salahidavar yAreMdu |
A tAyi sutara kELidaLu || 83 ||
tulasigenuta baMda sOmESaBaTTanu |
gaLisikoMDoyda nammanna |
beLesi eredane dhAre arasu pradhAnige |
kaLisidanAga saMBramadi || 84 ||
akkareyiMda pELidaLu sOmESamma |
SukravArada gauriyannu |
makkaLu soseyaru idu ella sOmESa
BaTTana puNyavideMdu || 85 ||
hiMdAgalonavAsa muMdyAke nutali |
taMdu koTTaru uDugoreya |
muMgayya hiDidu muppina tAyi taMdEra |
aMdaNavanErisidaru || 86 ||
BOreMbO nadiya dATutali kaTTisidaru |
Ura bAgilige tOraNava |
BEri nagAri tuttUri vAdyagaLiMda |
sAlu dIvaTige saMBramadi || 87 ||
hAsuta naDemuDi oLakadalArati |
bIsutta biLiya cAmaravA |
sOsiliMdali karetaMdar aramanege |
siMhAsanadaLoppirO mahAlakShmIge || 88 ||
araLu pUgaMdha kuMkumava nAriyaru |
harivANadoLu taMdirisi | paripariyali
sarvAMga pUjeya mADi |
PalagaLanoppisi kaiya mugiyE || 89 ||
bittida beLerASi ukkuva dhanadhAnya |
ukkuvaMdadi kShIrarasavu |
lekkavilladE makkaLAgOru manetuMba |
muttaidetanava nIDuvaLu || 90 ||
tA surakAmadhEnu eMdenisi
BImESa kRuShNanu sahitAgi |
lEsAgidda saMpattannella koTTu
vAsavAdaLu mahAlakShmI || 91 ||
maMgaLaM jayavenni maMgalaM SuBavenni |
maMgaLAMganE mahAlakShmI |
kaMgaLu teredu kaTAkShadi nODalu |
iMgOdu sakala pApagaLu ||
baraDu kareyali | baMjege makkaLAgali |
kuruDage kaMgaLu barali | bara hariyali |
dAridryagaLiMgaliSrI hari namma hRudayadoLagirali ||
SrI kRuShNArpaNamastu |

Leave a Reply
You must be logged in to post a comment.