Composer : Shri Shrida vittala
ತಾರಕ ನೀನು ಹರಿ ಮುರಾರಿ | ಪ |
ಉದಕದಿ ನಕ್ರನು ಪದವೆಳೆಯಲು ನೊಂದು
ಮದಗಜ ಹರಿಯೆನ್ನೆ ಮುದದಿ ಸಲಹಿದ ಕಾರಣ | ೧ |
ತುಂಬಿದ ಸಭೆಯಲಿ ಮಾನ ಕೊಂಬುದ ಕೇಳಿ
ನಂಬಿದ ದ್ರೌಪದಿಗಂಬರವಿತ್ತ ಕಾರಣ | ೨ |
ಶ್ರೀದವಿಟ್ಠಲ ನಿನ್ನ ಪಾದಪೂಜಿಸಲರಿಯೆ
ಆದರದಲಿ ಅಜಾಮಿಳನನ ಕಾಯ್ದ ಕಾರಣ | ೩ |
tAraka nInu hari murAri | pa |
udakadi nakranu padaveLeyalu noMdu
madagaja hariyenne mudadi salahida kAraNa | 1 |
tuMbida saBeyali mAna koMbuda kELi
naMbida draupadigaMbaravitta kAraNa | 2 |
SrIdaviTThala ninna pAdapUjisalariye
Adaradali ajAmiLanana kAyda kAraNa | 3 |

Leave a Reply
You must be logged in to post a comment.