Composer : Shri Purandara dasaru
ದಾರಿ ಯಾವುದಯ್ಯ | ವೈಕುಂಠಕೆ | ಹಾದಿ ತೋರಿಸಯ್ಯ ||ಪ||
ದಾರಿಯಾವುದಯ್ಯ | ದಾರಿ ತೋರಿಸಯ್ಯ |
ಆಧಾರಮೂರುತಿ ನಿನ್ನ ಪಾದ ಸೇರುವುದಕ್ಕೆ ||ಅ.ಪ||
ಬಲು ಭವದನುಭವದಿ | ಕತ್ತಲೆಯೊಳು |
ಬಲು ಅಂಜುತ ನಡುಗಿ |
ಬಳಲುತ್ತ ತಿರುಗಿದೆ ಹಾದಿಯ ಕಾಣದೆ |
ಹೊಳೆವಂಥ ದಾರಿಯ ತೋರೊ ನಾರಾಯಣ ||೧||
ಪಾಪ ಪೂರ್ವದಲ್ಲಿ | ಮಾಡಿದುದಕೆ |
ಲೇಪವಾಗಿದೆ ಕರ್ಮ |
ಈ ಪರಿಯಿಂದಲಿ ನಿನ್ನ ನೆನೆಸಿಕೊಂಬೆ |
ಶ್ರೀಪತಿ ಸಲಹೆನ್ನ ಭೂಪ ನಾರಾಯಣ ||೨||
ಇನ್ನು ನಾ ಜನಿಸಲಾರೆ | ಭೂಮಿಯ ಮೇಲೆ |
ನಿನ್ನ ದಾಸನಾದೆ |
ಪನ್ನಗಶಯನ ಶ್ರೀ ಪುರಂದರವಿಠಲ |
ಇನ್ನು ಪುಟ್ಟಿಸದಿರೊ ಎನ್ನ ನಾರಾಯಣ ||೩||
dAri yAvudayya | vaikuMThake | hAdi tOrisayya ||pa||
dAriyAvudayya | dAri tOrisayya |
AdhAramUruti ninna pAda sEruvudakke ||a.pa||
balu bhavadanubhavadi | kattaleyoLu |
balu aMjuta naDugi |
baLalutta tirugide hAdiya kANade |
hoLevaMtha dAriya tOro nArAyaNa ||1||
pApa pUrvadalli | mADidudake |
lEpavAgide karma |
ee pariyiMdali ninna nenesikoMbe |
shrIpati salahenna bhUpa nArAyaNa ||2||
innu nA janisalAre | bhUmiya mEle |
ninna dAsanAde |
pannagashayana shrI puraMdaraviThala |
innu puTTisadiro enna nArAyaNa ||3||

Leave a Reply
You must be logged in to post a comment.