Macchanarasi vedavatige

Composer : Shri Purandara dasaru

By Smt.Shubhalakshmi Rao

ಮಚ್ಚನರಸಿ ವೇದವತಿಗೆ ಸ್ವಚ್ಛ ಮನದಲ್ಲೆರಗುವೆನು
ಅಚ್ಯುತನ್ನ ಪಾದ ನಮಗೆ ನಿಶ್ಚಯದಿ ತೋರಿಸೆ [ಪ]

ಕೂರ್ಮನರಸಿ ಕುಮುದವತಿಗೆ ಪ್ರೇಮದಿಂದ ಎರಗುವೆನು
ಕಾಮಿತಾರ್ಥ ಕರೆಯೆ ನಮಗೆ ಸೋಮ ಮುಖಿಯಳೆ (೧)

ಪೊಡವಿ ತಂದ ವರಹಮೂರ್ತಿ ತೊಡೆಯಲಿದ್ದ ನಿಮ್ಮ
ಅಡಿಗಳಿಗೆ ನಮಿಪೆ ಮತಿಯ ಕೊಡಬೇಕೆನುತಲಿ (೨)

ನಾರಸಿಂಹನರಸಿ ನೀನು ಸುಖವ ತೋರೆ ಮಹಾಲಕ್ಷ್ಮಿ
ಘೋರ ದುರಿತ ದೂರಮಾಡೆ ಚಾರುವದನಳೆ (೩)

ಸುಖಾಲಯಳೆ ವಾಮನಾಂಗಿ ಮುಖವ ನೋಡಿ
ಮೋದ ಪಡುವೆ ಭಕ್ತಿ ಜ್ಞಾನ ಕೊಟ್ಟು ಸಕಲರ ರಕ್ಷಿಸೆ (೪)

ಭಾರ್ಗವನರಸಿ ನಮ್ಮ ದೀರ್ಘವಾದ ಬಂಧನಗಳನು
ಪ್ರೀತಿ ಇಂದ ಬಿಡಿಸೆ ನೀನು ಇಂದು ಮುಖಿಯಳೆ (೫)

ಖ್ಯಾತರಾಮನರಸಿ ಸೀತೆ ನಿಮಗೆ ಎರಗುವೆನು
ಭೂತ ಬಂಧನವ ಬಿಡಿಸೆ ಪ್ರೀತಿಯಿಂದಲಿ (೬)

ದೊರೆ ಕೃಪ ರಾಜನರಸಿ ಹಿರಿಯ ರುಕ್ಷ್ಮಿಣಿಗೆರಗುವೆನು
ಭವದ ಬಂಧನವ ಬಿಡಿಸೆ ಪ್ರೀತಿಯಿಂದಲಿ (೭)

ಚೆಲುವ ರೇವತಿ ಬೌದ್ಧ ದೇವನ ಲಲನೆ ಚರಣಕ್ಕೆರಗುವೆನು
ಮನದಮಲಿನ ತೊಳೆದು ಪೊರೆಯೆ ನಮ್ಮನು ಸುಲಭದಿಂದಲಿ (೮)

ಕುದುರೆಯೇರಿ ಮೆರೆವ ಕಲ್ಕಿ ಲಲನೆ ಪ್ರಭಾದೇವಿ ನಮ್ಮನು
ನಿರಯದಿಂದ ಕಡೆಗೆ ಎತ್ತೆ ಶಿರವ ಬಾಗುವೆ (೯)

ನಾಗಶಯನನ ರಮಣಿ ರಮಾ ಭಾಗವತರ ಮ್ಯಾಳದಲ್ಲಿ
ಹೋಗಿ ಸೇರುವಂತೆ ನಮ್ಮ ಭಾಗ್ಯ ರಕ್ಷಿಸೆ (೧೦)

ಸತ್ಯ ಸಂಕಲ್ಪ ಹರಿಯ ಪತ್ನಿ ನಾಮಗಳನು ನೆನೆದವರ
ಭಕ್ತಿ ಜ್ಞಾನ ಕೊಟ್ಟು ಪುರಂದರ ವಿಠಲ ರಕ್ಷಿಸುವನು (೧೧)


maccanarasi vEdavatige svacCa manadalleraguvenu
acyutanna pAda namage niScayadi tOrise [pa]

kUrmanarasi kumudavatige prEmadiMda eraguvenu
kAmitArtha kareye namage sOma muKiyaLe (1)

poDavi taMda varahamUrti toDeyalidda nimma
aDigaLige namipe matiya koDabEkenutali (2)

nArasiMhanarasi nInu suKava tOre mahAlakShmi
GOra durita dUramADe cAruvadanaLe (3)

suKAlayaLe vAmanAMgi muKava nODi
mOda paDuve Bakti j~jAna koTTu sakalara rakShise (4)

BArgavanarasi namma dIrGavAda baMdhanagaLanu
prIti iMda biDise nInu iMdu muKiyaLe (5)

KyAtarAmanarasi sIte nimage eraguvenu
BUta baMdhanava biDise prItiyiMdali (6)

dore kRupa rAjanarasi hiriya rukShmiNigeraguvenu
Bavada baMdhanava biDise prItiyiMdali (7)

celuva rEvati bauddha dEvana lalane caraNakkeraguvenu
manadamalina toLedu poreye nammanu sulaBadiMdali (8)

kudureyEri mereva kalki lalane praBAdEvi nammanu
nirayadiMda kaDege ette Sirava bAguve (9)

nAgaSayanana ramaNi ramA BAgavatara myALadalli
hOgi sEruvaMte namma BAgya rakShise (10)

satya saMkalpa hariya patni nAmagaLanu nenedavara
Bakti j~jAna koTTu puraMdara viThala rakShisuvanu (11)

Leave a Reply

You might also like

error: Content is protected !!