Composer : Shri Shripadarajaru
ನೀನೇ ಬಲ್ಲಿದನೋ,
ನಿನ್ನ ದಾಸರೇ ಬಲ್ಲಿದರೋ ||ಪ||
ನಾನಾ ತೆರದಿ ನಿಧಾನಿಸಿ ನೋಡಲು
ನೀನೇ ಭಕ್ತರಾಧೀನನಾದ ಮೇಲೆ ||ಅ.ಪ||
ಪರಮಪುರುಷ ಪರಬೊಮ್ಮನೆಂದೆನುತಲಿ
ನಿರುತದಿ ಶ್ರುತಿಯು ಕೊಂಡಾಡಲು ನಿನ್ನನು
ನರ ಧರ್ಮ ಜನರ ಮನೆಯ ಒಳಗೆ ನಿಂ-
ದ್-ಹರುಷದಿಂದ ಕರೆದಲ್ಲಿ ಪೋದ ಮ್ಯಾಲೆ ||೧||
ಖ್ಯಾತಿಯಿಂದ ಪುರುಹೂತ ಸಹಿತ ಸುರ
ವ್ರಾತವು ನಿನ್ನನು ವಾಲೈಸುತಿರೆ
ಭೂತಳದೊಳು ಸಂಪ್ರೀತಿಯಿಂದ
ಪಾರ್ಥನ ರಥಕೆ ನೀ ಸೂತನಾದ ಮ್ಯಾಲೆ ||೨||
ಜಲಜ ಭವಾಂಡದೊಡೆಯನೆಂದೆನಿಸುವ
ಬಲು ಬಲು ದೊಡ್ಡವನಹುದಹುದಾದಡೆ
ಒಲಿದು ಸದ್ಗತಿಯೀವೆ ಅನುದಿನದಲಿ ನೀ
ಬಲಿಯ ಮನೆಯ ಬಾಗಿಲ ಕಾಯ್ದ ಮ್ಯಾಲೆ ||೩||
ಧುರದೊಳು ವಡೆಯ ನೆಚ್ಚೊಡೆದ ಭೀಷ್ಮನ
ಮರಳಿಪುದೆನುತಲಿ ಚಕ್ರವ ಪಿಡಿಯಲು
ಹರಿ ನಿನ್ನ ಕರುಣದ ಜೋಡು ತೊಟ್ಟಿರಲವ-
ನಿರವ ಕಂಡು ಸುಮ್ಮನೆ ತಿರುಗಿದ ಮ್ಯಾಲೆ ||೪||
ತರಳನ ಕರೆಯಲು ಒಡೆದು ಕಂಬದಿ ಬಂದು
ನರ ಮೃಗವೇಷದಿ ಭಕುತರ ತೆತ್ತಿಗನಾದೆ
ಕರುಣದಿ ಸಲಹೋ ಶ್ರೀರಂಗವಿಠಲ ನಿನ್ನ
ಸ್ಮರಿಪರ ಮನದಲಿ ಸೆರೆಯ ಸಿಕ್ಕಿದ ಮ್ಯಾಲೆ ||೫||
nInE ballidanO,
ninna dAsarE ballidarO ||pa||
nAnA teradi nidhAnisi nODalu
nInE BaktarAdhInanAda mEle ||a.pa||
paramapuruSha parabommaneMdenutali
nirutadi Srutiyu koMDADalu ninnanu
nara dharma janara maneya oLage niM-
d-haruShadiMda karedalli pOda myAle ||1||
KyAtiyiMda puruhUta sahita sura
vrAtavu ninnanu vAlaisutire
BUtaLadoLu saMprItiyiMda
pArthana rathake nI sUtanAda myAle ||2||
jalaja BavAMDadoDeyaneMdenisuva
balu balu doDDavanahudahudAdaDe
olidu sadgatiyIve anudinadali nI
baliya maneya bAgila kAyda myAle ||3||
dhuradoLu vaDeya neccoDeda BIShmana
maraLipudenutali cakrava piDiyalu
hari ninna karuNada jODu toTTiralava-
nirava kaMDu summane tirugida myAle ||4||
taraLana kareyalu oDedu kaMbadi baMdu
nara mRugavEShadi Bakutara tettiganAde
karuNadi salahO SrIraMgaviThala ninna
smaripara manadali sereya sikkida myAle ||5||
Leave a Reply
You must be logged in to post a comment.