Kollu bega kallara

Composer : Shri Vadirajaru

ಕೊಲ್ಲು ಬೇಗ ಕಳ್ಳರ ಸಿರಿನಲ್ಲ ಮಧ್ವವಲ್ಲಭ ||ಪ||
ಕೊಲ್ಲದಿದ್ದರೆ ನಿಲ್ಲರವರು ಕಲಿಯುಗದ ಕಳ್ಳರು ||ಅ.ಪ||

ಲಕ್ಷುಮೀ ನಾರಾಯಣಾ ಜಯ ಲಕ್ಷುಮೀ ನಾರಾಯಣಾ
ಲಕ್ಷುಮೀ ನಾರಾಯಣಾ ಮಹಾಲಕ್ಷುಮೀ ನಾರಾಯಣಾ

ಎಲ್ಲಕೂಡಿ ನಿನ್ನ ಪೂಜೆಗೆ ಕಲ್ಲು ಹಾಕುತ್ತಿದ್ದರು, ಗಡ
ಬಲ್ಲೆನವರ ಕೊಲೆಗಾರರ ಹಲ್ಲ ಕೀಳದೆ ನಿಲ್ಲರು ||೧||

ಲಕ್ಷುಮೀ ನಾರಾಯಣಾ ಜಯ ಲಕ್ಷುಮೀ ನಾರಾಯಣಾ
ಲಕ್ಷುಮೀ ನಾರಾಯಣಾ ಮಹಾಲಕ್ಷುಮೀ ನಾರಾಯಣಾ

ಒಳ್ಳೆ ಮಾತನಾಡಲವರು ಕೋಲಾಹಲವ ಮಾಡಿ ಬೈವರು
ಗೆಲ್ವ ಶಕ್ತಿ ಇಲ್ಲ ನಮಗೆ, ಬಲ್ಲೆ ನೀ ಮಧ್ವಗೊಲಿದವನೆ ||೨||

ಲಕ್ಷುಮೀ ನಾರಾಯಣಾ ಜಯ ಲಕ್ಷುಮೀ ನಾರಾಯಣಾ
ಲಕ್ಷುಮೀ ನಾರಾಯಣಾ ಮಹಾಲಕ್ಷುಮೀ ನಾರಾಯಣಾ

ಕಳ್ಳತನವ ನೊಲ್ಲೆನೆಂಬರು ಮುಳ್ಳು ಮೊನೆಯಂತಿಹರು
ಚೆಲ್ವ ಹಯವದನವರ ಕೊಲ್ಲು ಕೊಲ್ಲು ನಮ್ಮ ಗೆಲಿಸು ||೩||


kollu bEga kaLLara sirinalla madhvavallaBa ||pa||
kolladiddare nillaravaru kaliyugada kaLLaru ||a.pa||

lakShumI nArAyaNA jaya lakShumI nArAyaNA
lakShumI nArAyaNA mahAlakShumI nArAyaNA

ellakUDi ninna pUjege kallu hAkuttiddaru, gaDa
ballenavara kolegArara halla kILade nillaru ||1||

lakShumI nArAyaNA jaya lakShumI nArAyaNA
lakShumI nArAyaNA mahAlakShumI nArAyaNA

oLLe mAtanADalavaru kOlAhalava maaDi baivaru
gelva Sakti illa namage, balle nee madhvagolidavane ||2||

lakShumI nArAyaNA jaya lakShumI nArAyaNA
lakShumI nArAyaNA mahAlakShumI nArAyaNA

kaLLatanava nolleneMbaru muLLu moneyaMtiharu
celva hayavadanavara kollu kollu namma gelisu ||3||

Leave a Reply

You might also like

error: Content is protected !!