Janani palise shubhangi

Composer : Shri Shyamasundara dasaru

By Smt.Shubhalakshmi Rao

ಜನನಿ ಪಾಲಿಸೆ ಶುಭಾಂಗಿ ಸಲೆ
ದಯದಿ ವಲಿಸುತಲಿ,
ಪಾಲಾಬ್ಧಿ ಬಾಲೆ ಶೀಲೆ [ಪ]

ವಾರಿಜಾರಿ ಸಹೋದರಿಯೆ |
ಮೂರು ಭುವನೋದ್ಧಾರಿ,
ಚಾರುಗಾತ್ರಿ ಶ್ರೀರಮಣಿ |
ದೂರ ನೋಡದಿ ಬಾರೆ ಮನೆಗೆ [೧]

ದಾತೆ ಖ್ಯಾತೆ ಮಾತೆ | ಸುಜನೋಪಕಾರಿ
ಸೀತಾಮಾತೆ ಭೂತರುಣಿ ಜಾತೆ |
ಪಾವನಿ ಪ್ರೀತೆ ಸದಯೆ [೨]

ಶಾಮಸುಂದರ ರಾಣಿಯೆ ಸುರ |
ಸ್ತೋಮ ವಂದಿತೆ ತ್ರಿಗುಣಮಾನಿ
ಭಾಮೆ ಭಾಗ್ಯದಾಯಕಿಯೆ
ಪ್ರೇಮವಾರಿಧಿ ಬೀರು ದಯವ [೩]


janani pAlise SuBAMgi sale
dayadi valisutali,
pAlAbdhi bAle SIle [pa]

vArijAri sahOdariye |
mUru BuvanOddhAri,
cArugAtri SrIramaNi |
dUra nODadi bAre manege [1]

dAte KyAte mAte | sujanOpakAri
sItAmAte BUtaruNi jAte |
pAvani prIte sadaye [2]

SAmasuMdara rANiye sura |
stOma vaMdite triguNamAni
BAme BAgyadAyakiye
prEmavAridhi bIru dayava [3]

Leave a Reply

You might also like

error: Content is protected !!