Narasimha Vajrasimha

Composer : Shri Vijaya dasaru

By Smt.Shubhalakshmi Rao

ನರಸಿಂಹ ವಜ್ರಸಿಂಹ
ಸರಸಿಜನಾಭ ದಕ್ಷಿಣ ಶರಧಿ ನಿವಾಸಾ ||ಪ||

ಹಿರಣ್ಯಕಶ್ಯಪು ತಾ ಪ್ರಹ್ಲಾದನಾ ಬಾಧಿಸಲು
ಪರಿಯ ದೈವವೆ ಮೊರೆಹೋಗಲೂ
ಹಿರಿದಾಗಿ ಕೇಳಿ ಹಿತದಲಿ ಬಂದು ಬೊಬ್ಬಿಡಲು
ಹಿರಣ್ಯಗರ್ಭಾದಿಗಳು ಹಿರಿದು ಚಿಂತಿಸಲೂ ||೧||

ಭುಗಿಲೆನೆ ದಿಕ್ಕಿನಲಿ ಪ್ರತಿ ಶಬ್ದ ಪುಟ್ಟುತಿರೆ
ಪಗಲಿರುಳು ಒಂದೆಂದರು ಸಕಲರೂ
ಝಗಝಗಿಪ ಬೆಳಗು ಕವಿದದು ಮೂರು ಲೋಕಕ್ಕೆ
ಉಗುರು ಕೊನೆ ಪೊಗಳಿ ವೇದಗಳು ಬೆರಗಾಗೆ ||೨||

ರಕ್ಕಸ ನೋಡಲು ಬಗೆದು ಕರುಳು ಕೊರಳಿಗೆ ಮಾಲೆ
ಇಕ್ಕಿ ಭಕ್ತಗೆ ಮೆಚ್ಚಿ ವರವನಿತ್ತಾ
ಕಕ್ಕಸದ ದೈವ ಅನಂತ ಪದುಮನಾಭ
ಮುಕ್ತಿದಾಯಕ ವಿಜಯವಿಠ್ಠಲ ಮಹದಾ ||೩||


narasiMha vajrasiMha
sarasijanABa dakShiNa Saradhi nivAsA ||pa||

hiraNyakaSyapu tA prahlAdanA bAdhisalu
pariya daivave morehOgalU
hiridAgi kELi hitadali baMdu bobbiDalu
hiraNyagarBAdigaLu hiridu ciMtisalU ||1||

Bugilene dikkinali prati Sabda puTTutire
pagaliruLu oMdeMdaru sakalarU
JagaJagipa beLagu kavidadu mUru lOkakke
uguru kone pogaLi vEdagaLu beragAge ||2||

rakkasa nODalu bagedu karuLu koraLige mAle
ikki Baktage mecci varavanittA
kakkasada daiva anaMta padumanABa
muktidAyaka vijayaviThThala mahadA ||3||

Leave a Reply

Your email address will not be published. Required fields are marked *

You might also like

error: Content is protected !!