Maruti kodu bhakuti

Composer : Shri Uragadri vittala

By Smt.Shubhalakshmi Rao

ಮಾರುತೀ ಕೊಡು ಭಕುತಿ ನುಡಿಸು ಕೀರ್ತಿ [ಪ]
ತೋರೊ ನಿನ್ನೊಳು ಇಹ ನಿರ್ಮಲ ಮೂರುತಿಯ [ಅ.ಪ]

ಶ್ರವಣಮಾಡಲು ಭಕುತಿ ಆವಕಾಲಕು ಇತ್ತು
ತವಪದದಾಸರ ದಾಸ್ಯ ಕೊಡಿಸೋ ದೇವ (೧)

ಕೀರ್ತನದೊಳು ಹರಿಕೀರ್ತಿ ಕೊಂಡಾಡೆ ಸಂ
ಕೀರ್ತನ ಭಕುತಿಗೆ ಕರ್ತದಾತ ನೀನೆ (೨)

ಸ್ಮರಣೆಯು ಹರಿಯಲ್ಲಿ ನಿರುತವು ನಿನ್ನಲ್ಲಿ
ಕರುಣಿಸಿ ಪೊರೆಯೊ ಗುರುವರ ಸುಂದರ (೩)

ಪಾದ ಸೇವೆಯ ಕೊಡು ಸಾದರದಿಂದಲಿ
ಶ್ರೀಧರನಾ ಕೃಪಾಪಾತ್ರನೆಂದೆನಿಸಯ್ಯ (೪)

ಅಚ್ಯುತನಿಗೆ ನೀನಚ್ಚುಮೆಚ್ಚಾಗಿಹೆ
ನಿಚ್ಚದಿ ಹರಿಪಾದರ್ಚನೆ ಮಾಡಿಸಯ್ಯ (೫)

ವಂದನಾಭಕುತಿ ಎನ್ನಿಂದ ನೀ ಮಾಡಿಸಿ
ನಂದನಂದನಗಾನಂದಪಡಿಸೊ ದೇವ (೬)

ದಾಸಭಕುತಿ ಭಾಗ್ಯ ಆಶಿಸುವೆನು ನಿನ್ನ
ವಾಸುದೇವನ ನಿಜದಾಸನೆ ಸರ್ವದಾ (೭)

ಸಖ್ಯಭಕುತಿ ಕೊಡೋ ಮುಖ್ಯಪ್ರಾಣೇಶನೆ
ಮುಖ್ಯಕಾರಣ ಹರಿಯ ಮುಖ್ಯ ಪ್ರೇಮಪಾತ್ರ (೮)

ಆತ್ಮನಿವೇದನ ಭಕುತಿಯನ್ನು ಪರ
ಮಾತ್ಮನಲ್ಲಿತ್ತು ನಿರ್ಮಲಾತ್ಮನೆಂದೆನಿಸೊ (೯)

ನವವಿಧ ಭಕುತಿಯ ಕೊಟ್ಟು ಸಲಹೋ ದೇವ
ಅವಕಾಲಕು ಪವಮಾನ ನೀನೆ ಗತಿ (೧೦)

ಸಂಕಟ ಹರಿಪ ಶ್ರೀ ವೇಂಕಟೇಶನ ದೂತ
ಭಂಟನೆಂದೆನಿಸೆನ್ನ ಸಂಕಟ ಹರಿಸಯ್ಯ (೧೧)


mArutI koDu Bakuti nuDisu kIrti [pa]
tOro ninnoLu iha nirmala mUrutiya [a.pa]

SravaNamADalu Bakuti AvakAlaku ittu
tavapadadAsara dAsya koDisO dEva (1)

kIrtanadoLu harikIrti koMDADe saM
kIrtana Bakutige kartadAta nIne (2)

smaraNeyu hariyalli nirutavu ninnalli
karuNisi poreyo guruvara suMdara (3)

pAda sEveya koDu sAdaradiMdali
SrIdharanA kRupApAtraneMdenisayya (4)

acyutanige nInaccumeccAgihe
niccadi haripAdarcane mADisayya (5)

vaMdanABakuti enniMda nI mADisi
naMdanaMdanagAnaMdapaDiso dEva (6)

dAsaBakuti BAgya ASisuvenu ninna
vAsudEvana nijadAsane sarvadA (7)

saKyaBakuti koDO muKyaprANESane
muKyakAraNa hariya muKya prEmapAtra (8)

AtmanivEdana Bakutiyannu para
mAtmanallittu nirmalAtmaneMdeniso (9)

navavidha Bakutiya koTTu salahO dEva
avakAlaku pavamAna nIne gati (10)

saMkaTa haripa SrI vEMkaTESana dUta
BaMTaneMdenisenna saMkaTa harisayya (11)

Leave a Reply

Your email address will not be published. Required fields are marked *

You might also like

error: Content is protected !!