Composer : Shri Vijaya dasaru
ಎಲ್ಲಡಗಿದನೊ ಹರಿ, ಎನ್ನಯ ದೊರಿ ||ಪ||
ಎಲ್ಲೆಲ್ಲೂ ಪರಿಪೂರ್ಣನೆಂಬೋ ಸೊಲ್ಲನು ಮುನ್ನ
ಅಲ್ಲಲ್ಲಿ ಪುಸಿಮಾಡಿ ಮಲ್ಲಮರ್ದನ ಹರಿ ||ಅ.ಪ||
ಶರಣೆಂದವರ ಕಾಯ್ವ ಕರುಣ ಸಮುದ್ರನು
ಕರುಣನನರಿಯದೆ ಹರಿಣಾಂಕ ನಿಭವಕ್ತ್ರ |
ಕರಿರಾಜನ ಮೊರೆ ಕೇಳಿ ತ್ವರಿತದಿಂದ
ಗರುಡನೇರಿ ಬಂದ ಗರುವರಹಿತ ದೆವಾ ||೧||
ವರಾಭುಜದಲಿ ಶಂಖಚಕ್ರವ ಧರಿಸಿದ
ಪರಮ ಸುಂದರಮೂರ್ತಿ ಪರಮೇಷ್ಠಿ ಜನಕನು |
ವನಜ ಮಲ್ಲಿಗೆ ಜಾಜಿ ವನದಲ್ಲಿ ಚರಿಸುವ
ವನಿತೆಯರಾಟಕೆ ಮನಮೆಚ್ಚಿ ನಡೆದನೊ ||೨||
ಗೋವುಗಳ ಹಿಣ್ಡು ಗೋಪಾಲರನು ಕಣ್ಡು
ಕಾವ ವಿಶಯಕ್ಕಾಗಿ ಕಮಲಲೋಚನ ಹರಿ |
ಇನ ಚನ್ದ್ರನಿ ಭವಕ್ತ್ರ ಕನನಾಮ್ಬರಧರ
ವಿನಯದಿನ್ದಾಡುತ ಮುನಿಗಳಲ್ಲಿಗೆ ದೇವ ||೩||
ಗಜ ಧ್ರುವ ಬಲಿ ಪಾಂಚಾಲಿ ವರದನೆಂಬ
ನಿಜವಾದ ಬಿರುದುಳ್ಳ ವಿಜಯ ವಿಠಲರೇಯಾ ||೪||
ellaDagidano hari, ennaya dori ||pa||
ellellU paripUrNaneMbO sollanu munna
allalli pusimADi mallamardana hari ||a.pa||
SaraNeMdavara kAyva karuNa samudranu
karuNananariyade hariNAMka niBavaktra |
karirAjana more kELi tvaritadiMda
garuDanEri baMda garuvarahita devA ||1||
varABujadali SaMKacakrava dharisida
parama suMdaramUrti paramEShThi janakanu |
vanaja mallige jAji vanadalli carisuva
vaniteyarATake manamecci naDedano ||2||
gOvugaLa hiNDu gOpAlaranu kaNDu
kAva vishayakkAgi kamalalOcana hari |
ina candrani bhavaktra kananAmbaradhara
vinayadindADuta munigaLallige dEva ||3||
gaja dhruva bali pAMcAli varadaneMba
nijavAda biruduLLa vijaya viThalarEyA ||4||
Leave a Reply