Composer : Shri Prasannavenkata dasaru
ಶ್ರೀಗುರುವರ ಸತ್ಯಪ್ರಿಯ ಪಾಹಿ |
ಯೋಗಿ ಕುಮುದ ಕುಲ ಪ್ರೀಯಾ |
ತಪೋಯೋಗ ತೇಜೋಮಯ ಕಾಯಾ |
ಸುಗುಣೌಘ ಮಯೂಖನಿಕಾಯಾ || ಪ ||
ಸುಜನ ಚಕೋರ ಸಂರಕ್ಷಾ |
ಮತ್ತ ಕುಜನ ಕಮಲ ಮಂದ ಶೀಕ್ಷಾ |
ಭಜಕರಾಕ್ಷನ್ವಯ ಪಕ್ಷಾ |
ಪ್ರಣವ ಜಪ ಕಲಾ ಪೂರ್ಣ ದೀಕ್ಷಾ ||೧||
ಕ್ಷಿತಿಸುರಾಂಕುರ ಪ್ರತಿಪಾಲಾ | ದಶ |
ಮತಿ ತೀರ್ಥವಾರ್ದಿ ವಿಶಾಲಾ |
ಸತತ ಶ್ರೀವಿಷ್ಣು ಪದಲೋಲಾ |
ದುರ್ಮತ-ದ್ವಾಂತ ಹರಣ ಸುಶೀಲಾ ||೨||
ವಿಮಲ ಯಶೋದವಳಾಂಕಾ | ತಾಪ |
ಶಮನ ದವಳ ಬಿಂಬಾಂಕಾ |
ಸುಮತಿವಿರತಿ ನಿಷ್ಕಳಂಕಾ |
ರಾಮವಾಮನಸ್ಥ ಹೃತ್ಪರಿಯಂಕಾ ||೩||
ಅಪವರ್ಗ ಪಂಥಾದ್ಯಕ್ಷಾ | ಚೋರ
ಕಪಟದುರ್ವಾದಿ ವಿಪಕ್ಷಾ |
ಅಪಗತ ದುರಿತಾಬ್ರಕಕ್ಷಾ |
ಪರಮ ಪದಗ ಪ್ರಾಪ್ತಾಪರೋಕ್ಷಾ ||೪||
ಗುರು ಸತ್ಯ ವಿಜಯಾಬ್ದಿಜಾತಾ | ಚತಃ
ಶರದಿ ವಿಜಯ ವಿಖ್ಯಾತಾ |
ವರಪ್ರಸನ್ನ ವೇಂಕಟ ಪ್ರೀತಾ |
ವೇದಾಂಬರ ಚರ ಬುದ ಮುದದಾತಾ ||೫||
SrIguruvara satyapriya pAhi |
yOgi kumuda kula prIyA |
tapOyOga tEjOmaya kAyA |
suguNauGa mayUKanikAyA || pa ||
sujana cakOra saMrakShA |
matta kujana kamala maMda SIkShA |
BajakarAkShanvaya pakShA |
praNava japa kalA pUrNa dIkShA ||1||
kShitisurAMkura pratipAlA | daSa |
mati tIrthavArdi viSAlA |
satata SrIviShNu padalOlA |
durmata-dvAMta haraNa suSIlA ||2||
vimala yaSOdavaLAMkA | tApa |
Samana davaLa biMbAMkA |
sumativirati niShkaLaMkA |
rAmavAmanastha hRutpariyaMkA ||3||
apavarga paMthAdyakShA | cOra
kapaTadurvAdi vipakShA |
apagata duritAbrakakShA |
parama padaga prAptAparOkShA ||4||
guru satya vijayAbdijAtA | cataH
Saradi vijaya viKyAtA |
varaprasanna vEMkaTa prItA |
vEdAMbara cara buda mudadAtA ||5||
Leave a Reply