Shri Rama Mahima suladi – Vadirajaru

ಶ್ರೀವಾದಿರಾಜ ಗುರುಸಾರ್ವಭೌಮ ವಿರಚಿತ
ಶ್ರೀರಾಮ ಮಹಿಮಾ ಸುಳಾದಿ
(ಐತಿಹಾಸಿಕ ರಾಮಾಯಣ ಸಂಗ್ರಹ ಕಥಾ)
ರಾಗ: ಕಲ್ಯಾಣಿ

ಧ್ರುವತಾಳ

ದಶರಥ ನಂದನ ಋಷಿಯಾಗ ಸಂರಕ್ಷಣ
ಶಶಿಮುಖಿ ಶಾಪ ವಿಮೋಚನ ಪಶುಪತಿ ಧನುಭಂಜನ
ಬಿಸಜನೇತ್ರ ಜಾನಕಿ ಕುಶಲ ಮನೋರಂಜನ ಪ –
ರಶುರಾಮ ಗರ್ವನಾಶ ಅಸುರ ಸಂಹಾರಕ
ದಶರಥಾಜ್ಞಾಧಾರಕ ದಶಶಿರೋಭಗಿನಿ ಶಿಕ್ಷಕ
ರಸಿಕ ಸುಗ್ರೀವ ಪೋಷಣ ರೌದ್ರವತಿ ನಿಗ್ರಹಣ
ಅಸಮ ಸೇತು ಬಂಧನ ಅರಿಮದ ಖಂಡನ
ಶಶಿನಿಕರ ಲಾವಣ್ಯ ಶ್ರೀಮುದ್ದು ಹಯವದನ || ೧ ||

ಮಟ್ಟತಾಳ

ಲಂಕಾನಗರ ಪರಿಸ್ತರಣ ವಾಲಸ್ಯ –
ಗೈಯದೆ ಮಾಡಿದ ಹನುಮ
ಹುಂಕರಿಪ ಕುಂಭಕರ್ನನ ಹೊಡೆದು
ಕೆಡಹಿದಂಥ ಜಾಣ ನಿಶ್ಶಂಕ ಮುದ್ದು ಹಯವದನ
ಶರಣು ಹೊಕ್ಕೆ ಕಾಯೋ ಎನ್ನ || ೨ ||

ತ್ರಿವಿಡಿತಾಳ

ದಶಶಿರ ಛೇದನ ಧರಣಿ ಭಯಹರಣ
ಕುಶಲಗಂಧಿನಿ ಗ್ರಹಣ ಕೋವಿದ ಭರತ ಪ್ರಾಣ
ನಿಶಿಚರ ವಿಭೀಷಣಾರಿಷ್ಟ ಪರಿಹರಣ
ಶಶಿಮಂಡಲ ಭೂಷಣ ಶ್ರೀಮುದ್ದು ಹಯವದನ || ೩ ||

ಅಟ್ಟತಾಳ

ಅಯೋಧ್ಯಪುರಿಗಾಗತ ಅನುಜ ಮುನಿಸ್ತೋಮ ಗೀತ
ಪ್ರೀಯ ಪಟ್ಟಾಭಿಷೇಕಿತ ಪತಿ ಸೀತಾ ಸಮೇತ
ಶ್ರೀಪವನಸುತಪಾಲ ಶ್ರೀವೇದಗೀತ ಲೋಲ
ಭಯಹರ ಹಯವದನ ಭಕ್ತ ಜನಮೋಹನ || ೪ ||

ಆದಿತಾಳ

ಭೂದೇವಿ ಮನೋಹರ ಭೂಷಿತ ಪ್ರೀಯಕರ
ಸಾಧು ಬೋಧಾನಂದ ಸಜ್ಜನಾನಂದ
ವಾದಿರಾಜಗೊಲಿದ ಸೋಮನಿಸ್ಸೀಮ
ಮೋದಿತ ಬುಧಜನ ಮುದ್ದು ಹಯವದನ || ೫ ||

ಜತೆ

ಮುದ್ದು ಹಯವದನ ದೇವ ಮಾಮವ ಸರ್ವಾ –
ರಾಧ್ಯ ಶ್ರೀರಾಘವ ರಾಜಾಧಿರಾಜ ||


SrIvAdirAja gurusArvaBauma viracita
SrIrAma mahimA suLAdi
(aitihAsika rAmAyaNa saMgraha kathA)
rAga: kalyANi

dhruvatALa

daSaratha naMdana RuShiyAga saMrakShaNa
SaSimuKi SApa vimOcana paSupati dhanuBaMjana
bisajanEtra jAnaki kuSala manOraMjana pa –
raSurAma garvanASa asura saMhAraka
daSarathAj~jAdhAraka daSaSirOBagini SikShaka
rasika sugrIva pOShaNa raudravati nigrahaNa
asama sEtu baMdhana arimada KaMDana
SaSinikara lAvaNya SrImuddu hayavadana || 1 ||

maTTatALa

laMkAnagara paristaraNa vAlasya –
gaiyade mADida hanuma
huMkaripa kuMBakarnana hoDedu
keDahidaMtha jANa niSSaMka muddu hayavadana
SaraNu hokke kAyO enna || 2 ||

triviDitALa

daSaSira CEdana dharaNi BayaharaNa
kuSalagaMdhini grahaNa kOvida Barata prANa
niSicara viBIShaNAriShTa pariharaNa
SaSimaMDala BUShaNa SrImuddu hayavadana || 3 ||

aTTatALa

ayOdhyapurigAgata anuja munistOma gIta
prIya paTTABiShEkita pati sItA samEta
SrIpavanasutapAla SrIvEdagIta lOla
Bayahara hayavadana Bakta janamOhana || 4 ||

AditALa

BUdEvi manOhara BUShita prIyakara
sAdhu bOdhAnaMda sajjanAnaMda
vAdirAjagolida sOmanissIma
mOdita budhajana muddu hayavadana || 5 ||

jate

muddu hayavadana dEva mAmava sarvA –
rAdhya SrIrAGava rAjAdhirAja ||

Leave a Reply

Your email address will not be published. Required fields are marked *

You might also like

error: Content is protected !!