Composer : Shri Vidyaprasanna Tirtharu
ರಾಮ ಭಜನೆ ಮಾಡೋ ಹೇ ಮನುಜ
ರಾಮ ಭಜನೆ ಮಾಡೋ [ಪ]
ರಾಮ ರಾಮ ಜಯ ರಾಘವ ಸೀತಾ
ರಾಮನೆಂದು ಸುಸ್ವರದಲಿ ಪಾಡುತ [ಅ.ಪ]
ತಾಳವನು ಬಿಡಬೇಡ ಮೇಳವನು ಮರೆಬೇಡ
ತಾಳಮೇಳಗಳ ಬಿಟ್ಟು ನುಡಿದರೆ
ತಾಳನು ನಮ್ಮ ಇಳಾಸುತೆಯರಸನು [೧]
ಭೃತ್ಯ ಮನೋಭಾವದಲಿ
ಸತ್ಯ ಜ್ಞಾನ ಅನಂತ ಬ್ರಹ್ಮನು
ಹೃದ್ಗತನೆಂದರಿಯುತ ಭಕುತಿಯಲಿ [೨]
ಭಲಿರೆ ಭಲಿರೆಯೆಂದು ತಲೆದೂಗುವ ತೆರದಿ
ಕಲಿಯುಗದಲ್ಲಿ ವರ ಕೀರ್ತನೆಯಿಂದಲಿ
ಸುಲಭದಿ ಹರಿಯ ಪ್ರಸನ್ನತೆ ಪಡೆಯಲು [೩]
rAma Bajane mADO hE manuja
rAma Bajane mADO [pa]
rAma rAma jaya rAGava sItA
rAmaneMdu susvaradali pADuta [a.pa]
tALavanu biDabEDa mELavanu marebEDa
tALamELagaLa biTTu nuDidare
tALanu namma iLAsuteyarasanu [1]
BRutya manOBAvadali
satya j~jAna anaMta brahmanu
hRudgataneMdariyuta Bakutiyali [2]
Balire BalireyeMdu taledUguva teradi
kaliyugadalli vara kIrtaneyiMdali
sulaBadi hariya prasannate paDeyalu [3]
Leave a Reply