Composer : Shri Vijaya dasaru
ಶ್ರೀವಿಜಯದಾಸಾರ್ಯ ವಿರಚಿತ
ಶ್ರೀದಿಗ್ವಿಜಯ ರಾಮದೇವರ ಸುಳಾದಿ
ರಾಗ: ಬೃಂದಾವನಸಾರಂಗ
ಧ್ರುವತಾಳ
ವಂದೆ ಮುಕುಂದ ಮುಚಕುಂದ ಪರಿಪಾಲಕ
ಕುಂದೇಂದು ವದನ ಆನಂದಮೂರ್ತಿ
ಗಂಧದೋಷ ದೂರವಾಗಿದ್ದ ಚಿತ್ ಪ್ರಕೃತಿ –
ಯಿಂದ ನೋಡೆ ಚತುರ್ವಿಧ ದೋಷದೂರಾ
ವಂದೆ ಮುಕುಂದ ನಮೋ ವೃಂದಾರಕ ಮುನಿ
ವೃಂದ ವಂದ್ಯ ಸುಖಸಾಂದ್ರ ಸರ್ವೋತ್ತಮಾ
ಮಂದಹಾಸ ಮಂದಾಕಿನಿಜನಕ
ಸುಂದರೀನಾಥ ಗೋವಿಂದ
ಇಂದೀವರದಳ ಶ್ಯಾಮ
ಕಂದರ್ಪ ಕೋಟಿ ಲಾವಣ್ಯ ತಾರುಣ್ಯ ಸದಾ –
ಮಂದಿರಾ ವೈಕುಂಠ ವೈನತೇಯಾ
ಶ್ಯಂದನ ಸ್ಕಂದ ಸನಂದನಪ್ರಿಯ ಪು –
ರಂದರ ನಂದನ್ನ ಮಾನಭಂಗ
ಇಂಧನಭೋಕ್ತನೇತ್ರಾ ಒಂದೊಂದು ಒಂದಾರು ಮೇ –
ಲೊಂದು ಕಂಧರನ ಗೋಸುಗ ಅಹಮತಿಯಲ್ಲಿ
ಬಂದು ನಿಂದೆದಿರಾಗೆ ಜಡಮಾಡಿ ನಿಲಿಸಿದ ಅ –
ರಿಂದಮ ದಮ ಶಾಂತ ಪೂರ್ಣಾಪೂರ್ಣಾ
ವಂದೆ ಮುಕುಂದ ನಮೋ
ನಂದಗೋಕುಲ ಪಾವನ್ನ ವಿಜಯವಿಟ್ಠಲ ರಾಮ –
ಚಂದ್ರ ಪಾಪ ಪರ್ವತಕ್ಕೆ ಇಂದ್ರಾಯುಧವೆಂದೆನಿಪ || ೧ ||
ಮಟ್ಟತಾಳ
ಮಂಗಳಾಂಗಿ ರಮಣ ರಂಗ ರಂಗೋರಂಗ –
ಪುಂಗವ ಪರಿಯಂಕ ಸಂಗ ಸಂಗೀತಲೋಲ
ಅಂಗ ವಿಚಿತ್ರಾಂಗ ತುಂಗ ಮಾತಂಗ ರಿಪು
ಭಂಗ ರಾಜಸಿಂಗ ಭಂಗರಹಿತ ಸ –
ರ್ವಾಂಗ ರೋಮ ಪ್ಲವಂಗ ಕಟಕನಾಯಕ
ಇಂಗಿತ ಜನರಂತರಂಗ ಕರುಣಾಪಾಂಗ
ರಂಗುಮಾಣಿಕ ಭೂಷಾ ಶೃಂಗಾರಾಂಗ ಮಾರ್ಗಣ
ಶಿಂಗಾಡಿ ಹಸ್ತವಂಗುಳಿ ಚಾತುರ್ಯ
ಗಂಗಾಧರ ಚಾಪಭಂಗ ಭಕ್ತವತ್ಸಲ
ರಂಗ ರಂಗರಾಮ
ಮಂಗಳಾಂಗ ದೇವೋತ್ತುಂಗ ವಿಜಯವಿಟ್ಠಲ
ಜಂಗಮ ಸ್ಥಾವರ ಜಂಗುಳಿ ಜಡಭಿನ್ನಾ || ೨ ||
ತ್ರಿವಿಡಿತಾಳ
ಇಂದ್ರಗೋಪದಂತೆ ವರ್ನದಿಂದೊಪ್ಪುವ
ಅಂದವಾದ ದಿಗ್ವಿಜಯ ರಾಮಾ –
ಚಂದ್ರ ಭಕ್ತ ಚಕೋರ ಮಾನವ ಮನುಜ ಲೀಲಾ
ಸಂದರುಶನ ಮಾತ್ರದಿಂದ ಲಾಭಾ –
ಸಂದೋಹ ಕೊಡುವನೆ ಕ್ಷಾತ್ರಕುಲೋತ್ತಮ
ಶ್ಯಂದನಹತ್ತು ನಾಮಕ ನಂದನಾ
ಇಂದೆನ್ನ ಹೃದಯಾಬ್ಜ ಮಂದಿರದಲಿ ಬಂದು
ನಿಂದಾಡುವ ದಾಶರಥಿಯೆ ತಂದೆ
ತಂದೆ ತಂದೆ ತಂದೆ ಈ ಪರಿ ಎನ್ನಾ –
ನಂದವಾದ ಮನಕೆ ನಿನ್ನ ಮೂರ್ತಿ
ಪೊಂದಿಸು ಭುವನ ಪಾವನವಾದ ಚರಣಾರ –
ವಿಂದ ಪಾಂಶ ಲೇಶ ಧರಿಪಾರಲ್ಲಿ
ಬಂದು ಕಾರುಣ್ಯಸಿಂಧು ನಿನ್ನಂಘ್ರಿ ನಖ –
ಚಂದ್ರ ಚಂದ್ರಿಕೆಯಲಿ ಎನ್ನ ಹೃತ್ತಾಪವ
ನೊಂದಿಸು ನಾನಾವತಾರ ನಾರಾಯಣಾ
ಮಂದರೋದ್ಧರನೇ ಮಹಾಮಹಿಮಾ
ಸಂದೇಹ ಎನಗಿಲ್ಲ ನಿನ್ನ ಕಂಡ ಮೇಲೆ
ಬಿಂದು ಮಾತುರ ಕ್ಲೇಶ ಎನಗಿಪ್ಪುದೇ
ಕೊಂದು ಬಿಸುಟುವೆನು ಖಳರ ಉಪದ್ರವ
ಕಂದ ನಾನೆಲೋ ನಿನಗೆ ಜನುಮ ಜನುಮ
ಎಂದೆಂದಿಗೆ ಎನ್ನ ಸಾಧನದಿಂದಲಿ ಆ –
ನಂದ ಕೊಡುವೆನೆಂಬೊ ಕೀರ್ತಿಯುಂಟೇ
ಬಂದು ಸೇರಿದ ಭೂತ ಪ್ರೇತಾದಿಗಳು ಮಂತ್ರ –
ದಿಂದಲಿ ಅನ್ನಪಾನಾದಿಗಳು ತಂದು ಇತ್ತದ –
ರಿಂದ ವಶವಾಗಿ ಒಡನೊಡನೇ
ಹಿಂದೆ ತಿರುಗುತಿಪ್ಪವು ತ್ರಾಣಗೆಟ್ಟು
ವಂದಿಪೆ ಅದರಂತೆ ನಿನಗಲ್ಲವೊ ಎಳೆ –
ಗಂದಿಯೋ ಸಂತತ ಅನುಕಂಪನೆ
ಅಂದ ಜನಕೆ ಪ್ರಾಣ ನಿಜಸ್ವಭಾವ ಉ –
ಪೇಂದ್ರ ವಿಜಯವಿಟ್ಠಲ ರಾಮ ರಘುಕುಲತಿಲಕಾ || ೩ ||
ಅಟ್ಟತಾಳ
ಜಡ ಚೇತನದೊಳು ವ್ಯಾಪ್ತವಾಗಿಪ್ಪನೆ
ಧೃಢ ಭಕ್ತರಿಗೆ ತತ್ತದಾಕಾರ ರೂಪನಾಗಿ
ಬಿಡದೆ ಕಾಣಿಸಿಕೊಂಬದೇನು ಸೋಜಿಗವೊ
ಬಡವ ಭಾಗ್ಯವಂತ ಎಂಬೊ ವಾರ್ತೆಯಲ್ಲಿ
ಅಡಿಗಡಿಗೆ ಕೇಳು ಇದರ ವಿಚಿತ್ರದ
ನುಡಿ ಬೇರೆ ನಡೆ ಬೇರೆ ಪಾರಾವಾರ ಮೂರ್ತಿಯೆ
ಸಡಗರ ಏನೆಂಬೆ ಯೋಗ್ಯತಾನುಸಾರ
ಕೊಡುವನು ಜ್ಞಾನ ಭಕುತಿ ವೈರಾಗ್ಯವ
ಅಡಿಗಡಿಗೆ ತನ್ನ ಧ್ಯಾನವ ಪಾಲಿಸೀ
ಪೊಡವಿ ವಿಬುಧರೆಲ್ಲ ಮತ್ಸರ ದುರ್ಗವ
ಕಡಿದು ಮನೋರಥ ಪಡಕೊಂಡು ಸುಖಿಪುದು
ಕಡಲಶಯನ ನಮ್ಮ ವಿಜಯವಿಟ್ಠಲರೇಯಾ
ಅಡಿಗಳರ್ಚಿಪರ ಚಿತ್ತದಲ್ಲಿ ನೆಲಸಿಪ್ಪ || ೪ ||
ಆದಿತಾಳ
ಆನಂದ ಜ್ಞಾನಪ್ರದ ಶ್ರೀನಾಥನ ದಕ್ಷಿಣವಾ –
ಮಾಂಘ್ರಿಆನಂದಪಾದ ಆನಂದಪ್ರದ
ವಾನರಕಾಂತ ಲಕ್ಷ್ಮಣ ಸುಗ್ರೀವ
ದಾನವನಿಂದಲಿ ಪೂಜೆಗೊಂಬ ಪಾದ
ರಾಜಿಸುವ ಪಾದ ದೀನ ಮಾನವರಿಗೆ
ಒಲಿದೊಲಿದು ನಿತ್ಯ ಧ್ಯಾನಪ್ರದ ಪಾದ
ಮಾನಪ್ರದ ಪಾದ ಶ್ರೀನಾರಿ ಕರಕಮಲ ಪೂಜಿತ
ಸರ್ವಾಂಕಿತ ಪಾದ ಭವತಾರಕ ಪಾದ
ಏನೇನು ಬೇಡಿದಭೀಷ್ಟೆಯ ಕೊಡುವದು
ಒಳಗೆ ಪೊಳೆವ ಪಾದ ಹೊರಗೆ ತೋರುವ ಪಾದ
ಆನಂದತೀರ್ಥರ ಮನದಲ್ಲಿ ನಿಂದ ಅತಿ –
ನಿರ್ಮಲ ಪಾದ ಅಪಾಕೃತ ಪಾದಾ
ದಾನಿಗಳರಸ ವಿಜಯವಿಟ್ಠಲ ಕಾಮ –
ಧೇನು ರಾಮ ರಾಮ ಕೌಸಲ್ಯ ತನಯನ ಪಾದ || ೫ ||
ಜತೆ
ವಸುಧೇಂದ್ರ ಮುನಿಯಿಂದ ನಾನಾ ಪೂಜೆಯಗೊಂಡು
ವಸುಧಿಯೊಳಗೆ ಮೆರೆವ ವಿಜಯವಿಟ್ಠಲ ರಾಮಾ ||
SrIvijayadAsArya viracita
SrIdigvijaya rAmadEvara suLAdi
rAga: bRuMdAvanasAraMga
dhruvatALa
vaMde mukuMda mucakuMda paripAlaka
kuMdEMdu vadana AnaMdamUrti
gaMdhadOSha dUravAgidda cit prakRuti –
yiMda nODe caturvidha dOShadUrA
vaMde mukuMda namO vRuMdAraka muni
vRuMda vaMdya suKasAMdra sarvOttamA
maMdahAsa maMdAkinijanaka
suMdarInAtha gOviMda
iMdIvaradaLa SyAma
kaMdarpa kOTi lAvaNya tAruNya sadA –
maMdirA vaikuMTha vainatEyA
SyaMdana skaMda sanaMdanapriya pu –
raMdara naMdanna mAnaBaMga
iMdhanaBOktanEtrA oMdoMdu oMdAru mE –
loMdu kaMdharana gOsuga ahamatiyalli
baMdu niMdedirAge jaDamADi nilisida a –
riMdama dama SAMta pUrNApUrNA
vaMde mukuMda namO
naMdagOkula pAvanna vijayaviTThala rAma –
caMdra pApa parvatakke iMdrAyudhaveMdenipa || 1 ||
maTTatALa
maMgaLAMgi ramaNa raMga raMgOraMga –
puMgava pariyaMka saMga saMgItalOla
aMga vicitrAMga tuMga mAtaMga ripu
BaMga rAjasiMga BaMgarahita sa –
rvAMga rOma plavaMga kaTakanAyaka
iMgita janaraMtaraMga karuNApAMga
raMgumANika BUShA SRuMgArAMga mArgaNa
SiMgADi hastavaMguLi cAturya
gaMgAdhara cApaBaMga Baktavatsala
raMga raMgarAma
maMgaLAMga dEvOttuMga vijayaviTThala
jaMgama sthAvara jaMguLi jaDaBinnA || 2 ||
triviDitALa
iMdragOpadaMte varnadiMdoppuva
aMdavAda digvijaya rAmA –
caMdra Bakta cakOra mAnava manuja lIlA
saMdaruSana mAtradiMda lABA –
saMdOha koDuvane kShAtrakulOttama
SyaMdanahattu nAmaka naMdanA
iMdenna hRudayAbja maMdiradali baMdu
niMdADuva dASarathiye taMde
taMde taMde taMde I pari ennA –
naMdavAda manake ninna mUrti
poMdisu Buvana pAvanavAda caraNAra –
viMda pAMSa lESa dharipAralli
baMdu kAruNyasiMdhu ninnaMGri naKa –
caMdra caMdrikeyali enna hRuttApava
noMdisu nAnAvatAra nArAyaNA
maMdarOddharanE mahAmahimA
saMdEha enagilla ninna kaMDa mEle
biMdu mAtura klESa enagippudE
koMdu bisuTuvenu KaLara upadrava
kaMda nAnelO ninage januma januma
eMdeMdige enna sAdhanadiMdali A –
naMda koDuveneMbo kIrtiyuMTE
baMdu sErida BUta prEtAdigaLu maMtra –
diMdali annapAnAdigaLu taMdu ittada –
riMda vaSavAgi oDanoDanE
hiMde tirugutippavu trANageTTu
vaMdipe adaraMte ninagallavo eLe –
gaMdiyO saMtata anukaMpane
aMda janake prANa nijasvaBAva u –
pEMdra vijayaviTThala rAma raGukulatilakA || 3 ||
aTTatALa
jaDa cEtanadoLu vyAptavAgippane
dhRuDha Baktarige tattadAkAra rUpanAgi
biDade kANisikoMbadEnu sOjigavo
baDava BAgyavaMta eMbo vArteyalli
aDigaDige kELu idara vicitrada
nuDi bEre naDe bEre pArAvAra mUrtiye
saDagara EneMbe yOgyatAnusAra
koDuvanu j~jAna Bakuti vairAgyava
aDigaDige tanna dhyAnava pAlisI
poDavi vibudharella matsara durgava
kaDidu manOratha paDakoMDu suKipudu
kaDalaSayana namma vijayaviTThalarEyA
aDigaLarcipara cittadalli nelasippa || 4 ||
AditALa
AnaMda j~jAnaprada SrInAthana dakShiNavA –
mAMGri^^AnaMdapAda AnaMdaprada
vAnarakAMta lakShmaNa sugrIva
dAnavaniMdali pUjegoMba pAda
rAjisuva pAda dIna mAnavarige
olidolidu nitya dhyAnaprada pAda
mAnaprada pAda SrInAri karakamala pUjita
sarvAMkita pAda BavatAraka pAda
EnEnu bEDidaBIShTeya koDuvadu
oLage poLeva pAda horage tOruva pAda
AnaMdatIrthara manadalli niMda ati –
nirmala pAda apAkRuta pAdA
dAnigaLarasa vijayaviTThala kAma –
dhEnu rAma rAma kausalya tanayana pAda || 5 ||
jate
vasudhEMdra muniyiMda nAnA pUjeyagoMDu
vasudhiyoLage mereva vijayaviTThala rAmA ||
Leave a Reply