Lali rakkasavairi

Composer: Shri Harapanahalli Bheemavva

ಲಾಲಿ ರಕ್ಕಸವೈರಿ ಶ್ರೀ ನಿನ್ನ ಪಾದ ಸೇವೆಯಿಂದಲಿ
ಸುಖಿಸೋಳೊ ಲಕ್ಷ್ಮೀಲೋಲ ಪಾಡಿ
ತೂಗುವಳೊ ಮೋಹದಲಿ ಯಶೋದ
ಯೋಗಿ ಜನರು ಕೊಂಡಾಡಲ್ ವಿನೋದ [೧]

ದುರ್ಗೆ ರೂಪ ಪ್ರಳಯ ಜಲಧಿ ಭೂದೇವಿ
ಪ್ರಜ್ವಲಿಸುವ ಆಲದೆಲೆಯು ತಾನಾಗಿ
ನಿದ್ರೆ ಹಸಿವು ಬಿಟ್ಟು ನಿರುತದಿ ಆತನ-
ಲ್ಲಿದ್ದಳಂಭ್ರಣಿ ಸ್ತೋತ್ರದಲಿ ಭೂದೇವಿ [೨]

ವಟದ ಎಲೆಯ ಮೇಲೆ ವಟುವಾಗಿ ಮಲಗಿ ಉಂ-
ಗುಟವ ಬಾಯೊಳಗಿಟ್ಟು ಮುದದಿ ಚಪ್ಪರಿಸೆ
ಕಟುತರದಲಿ ನಾಲ್ಕು ವೇದವ ತೋರುತ
ಪಟುತರದಲಿ ಯೋಗನಿದ್ರೆ ಮಾಡಿದನು [೩]

ಹದಿನಾಲ್ಕು ಲೋಕ ತನ್ನುದರದಲ್ಲಿಡುವ
ಪದುಮಾಕ್ಷ ಶ್ರೀಕೃಷ್ಣ ಪರಮಾತ್ಮ ಲಾಲಿ
ಅಜಭವ ಸುರರೆಲ್ಲ ಭಜನೆಯ ಗೈವರು
ಮುದದಿ ಶಯನವ ಮಾಡೊ ಮಧು ಮುರಾಂತಕನೆ [೪]

ಕಡಲಶಯನ ಹರಿಯ ತೊಟ್ಟಿಲೊಳಿಟ್ಟು
ಬಿಡದೆ ನಾರಿಯರೆಲ್ಲ ಪಾಡಿ ತೂಗುವರು
ಪೊಡವಿಗೊಡೆಯ ನಿನ್ನ ನಾಮ ಕೊಂಡಾಡಲು
ಬಿಡದೆ ಭಕ್ತರ ಕಾಯೊ ಭೀಮೇಶಕೃಷ್ಣ [೫]


lAli rakkasavairi SrI ninna pAda sEveyiMdali
suKisOLo lakShmIlOla pADi
tUguvaLo mOhadali yaSOda
yOgi janaru koMDADal vinOda [1]

durge rUpa praLaya jaladhi BUdEvi
prajvalisuva Aladeleyu tAnAgi
nidre hasivu biTTu nirutadi Atana-
lliddaLaMBraNi stOtradali BUdEvi [2]

vaTada eleya mEle vaTuvAgi malagi uM-
guTava bAyoLagiTTu mudadi capparise
kaTutaradali nAlku vEdava tOruta
paTutaradali yOganidre mADidanu [3]

hadinAlku lOka tannudaradalliDuva
padumAkSha SrIkRuShNa paramAtma lAli
ajaBava surarella Bajaneya gaivaru
mudadi Sayanava mADo madhu murAMtakane [4]

kaDalaSayana hariya toTTiloLiTTu
biDade nAriyarella pADi tUguvaru
poDavigoDeya ninna nAma koMDADalu
biDade Baktara kAyo BImESakRuShNa [5]

Leave a Reply

Your email address will not be published. Required fields are marked *

You might also like

error: Content is protected !!