Composer: Shri Purandara dasaru
ಯಮನ ಶಾಸನ ಕೇಳೊ ಜೀವ ಇದು
ಸಂಶಯವಿಲ್ಲೆಂದು ಎಣಿಸು ಸ್ವಭಾವ ||ಪ||
ಪರ ಸತಿಯರ ನೋಡಿದವಗೆ ಪತ್ತು
ಕೊರಡು ಕೆಂಪಗೆ ಕಾಸಿ ಕುಕ್ಕಿ ಕಣ್ಣೊಳಗೆ
ಎರಡು ಗುಡ್ಡನು ಪೀಕೋರವಗೆ ಸೀಸವ
ಕರಗಿಸಿ ಪೊಯ್ಯುವರೊ ಅವನ ಕಿವಿಯೊಳಗೆ |೧|
ಅನ್ಯಸ್ತ್ರೀಪುರುಷರ ಸಂಗ
ತನ್ನವರ ಕುಲ ಅಳಿಸಿಟ್ಟು ಹಾಕುವರಂಗ
ನರಕಕ್ಕೆ ಗುರಿ ಮಾಡಿ ತುಂಗ
ಕೆಂಡ ಉರಿವ ಉಕ್ಕಿನ ಕಂಭ ಕಟ್ಟಿಪ್ಪ ಭಂಗ |೨|
ಪರಸತಿ ಮೆರೆವೋದು ಕಂಡು ಗಾಣ
ಒರಳೊಳಗಾಡಿಸಿ ಒಣಗಿಸಿ ಬೆಂಡು
ಉರಿ ತೈಲದೊಳಗೆ ಹಾಕಿ ಗುಂಡು, ಕರಿದ
ತೆರನಾಗಿ ಹಂದಿಯ ತಿನಿಸುವ ಖಂಡು |೩|
ಅನ್ಯ ಸ್ತ್ರೀ ವಿಚಾರ ಮೋಹವಿಟ್ಟಿಹ
ಘನ್ನ ಘಾತಕಗೆ ಗಳರಂತೆನೀಹ
ಬೆನ್ನ ಚರ್ಮವ ಕಿತ್ತಿ ದೇಹ
ಕುಟ್ಟಿ ಘೋರಿಸಿ ಬಾಧಿಸಿ ಕಾಡಲಿಕ್ಕೆ ಬಹ |೪|
ಗಂಡನಿಂದಲಿ ಕೆಲಸ ಮಾಡಿ
ಕೊಂಡ ಹೆಂಡಿರಿಗೆ ಖಡು ಹಿಡಿದವರ ಕಾಡಿ
ಮಂಡೆ ಕೂದಲು ಇನ್ನು ಕಿತ್ತೀಡಾಡಿ
ಖಂಡ ಖಂಡವ ಕಿತ್ತಿ ದಂಡಿಪ್ಪ ನೋಡಿ |೫|
ಅತಿಕಾಂಕ್ಷ ಸ್ತ್ರೀಯರಲ್ಲಿಂದ ಜನ್ಮದ
ಸದ್ಗತಿ ಕೇಳದೋ ಅತಿ ಕ್ರೂರದಿಂದ
ರಣಹದ್ದು ಗುಂಪು ಜತೆಯಿಂದ
ಪೀಡಿ ಪೀಡಿಸುವನು ಮುದದಿ ಮುಕುಂದ |೬|
ಇನ್ನು ಪಾಪಗಳ ನೀ ಮಾಡಬೇಡ
ಅನ್ಯರ ಗೊಡವೆಗೆ ನೀ ಹೋಗಬೇಡ
ಸಜ್ಜನರ ಸಂಗ ಬಿಡಬೇಡ
ಚೆನ್ನ ಪುರಂದರವಿಠಲನ್ನ
ಭಜಿಸದಿರಬೇಡ |೭|
yamana SAsana kELo jIva idu
saMSayavilleMdu eNisu svaBAva ||pa||
para satiyara nODidavage pattu
koraDu keMpage kAsi kukki kaNNoLage
eraDu guDDanu pIkOravage sIsava
karagisi poyyuvaro avana kiviyoLage |1|
anyastrIpuruShara saMga
tannavara kula aLisiTTu hAkuvaraMga
narakakke guri mADi tuMga
keMDa uriva ukkina kaMBa kaTTippa BaMga |2|
parasati merevOdu kaMDu gANa
oraLoLagADisi oNagisi beMDu
uri tailadoLage hAki guMDu, karida
teranAgi haMdiya tinisuva KaMDu |3|
anya strI vicAra mOhaviTTiha
Ganna GAtakage gaLaraMtenIha
benna carmava kitti dEha
kuTTi GOrisi bAdhisi kADalikke baha |4|
gaMDaniMdali kelasa mADi
koMDa heMDirige KaDu hiDidavara kADi
maMDe kUdalu innu kittIDADi
KaMDa KaMDava kitti daMDippa nODi |5|
atikAMkSha strIyaralliMda janmada
sadgati kELadO ati krUradiMda
raNahaddu guMpu jateyiMda
pIDi pIDisuvanu mudadi mukuMda |6|
innu pApagaLa nI mADabEDa
anyara goDavege nI hOgabEDa
sajjanara saMga biDabEDa
cenna puraMdaraviThalanna
BajisadirabEDa |7|
Leave a Reply