Composer: Shri Purandara dasaru
ರಂಗ ರಥವನೇರಿದನಕ್ಕ- ಮೋಹ- |
ನಾಂಗ ನಮ್ಮ ಸೇರದೆ ಪೋಗುವನಕ್ಕ [ಪ]
ಮಾತುಳ ಮಥರೆಯೊಳಿಹನಂತೆ – ಅಲ್ಲಿ |
ಮಾತಾಪಿತರಿಗೆ ಬಂಧನವಂತೆ, ಇವರು |
ನೂತನ ಬಿಲ್ಲಿನ ಅರ್ಥಿಗಳಂತೆ ||
ಪೀತಾಂಬರಧರನ ಪೂಜೆ ನೋಡುವೆನೆಂಬ |
ಆತುರದಿಂದಿರೆ ಅಕ್ರೂರನೊಡನೆ ಈಗ [೧]
ಬಲರಾಮ ಬಂಧುವಿನೊಡಗೂಡಿ ನಂದ-|
ನಡಿಗೆ ಯಶೋದೆಗೆ ವಂದನೆ ಮಾಡಿ-ತಾವು |
ಬಿಡಲಾರೆವೆಂದು ಭಾಷೆಯ ನೀಡಿ ||
ತಡೆಯೆನೆನುತ ತಾಯಿಗೆ ಭರವಸೆಯಿತ್ತು |
ಕಡಲಶಯನನು ಕಾತರದಿಂದಲಿ ಈಗ [೨]
ಮಧುರಾ ಪಟ್ಟಣದ ಮಾನಿನಿಯರು ಅತಿ |
ಚದುರೆ ಚೆಂಚಲೆ ಚಾಪಲತೆಯರು-ನಮ್ಮ |
ಮದನನಯ್ಯನ ಮೋಹಿಸುತಿಹರು ||
ಕಧಿಜನಾಭ ನಮ್ಮ ಪುರಂದರವಿಠಲ |
ಪದುಮನಾಭನ ಪಯಣವ ನಿಲ್ಲಿಸಕ್ಕ [೩]
raMga rathavanEridanakka- mOha- |
nAMga namma sErade pOguvanakka [pa]
mAtuLa mathareyoLihanaMte – alli |
mAtApitarige baMdhanavaMte, ivaru |
nUtana billina arthigaLaMte ||
pItAMbaradharana pUje nODuveneMba |
AturadiMdire akrUranoDane Iga [1]
balarAma baMdhuvinoDagUDi naMda-|
naDige yaSOdege vaMdane mADi-tAvu |
biDalAreveMdu BASheya nIDi ||
taDeyenenuta tAyige Baravaseyittu |
kaDalaSayananu kAtaradiMdali Iga [2]
madhurA paTTaNada mAniniyaru ati |
cadure ceMcale cApalateyaru-namma |
madananayyana mOhisutiharu ||
kadhijanABa namma puraMdaraviThala |
padumanABana payaNava nillisakka [3]
Leave a Reply