Composer: Shri Vijayadasaru
ರಾಗ: ಪೂರ್ವಿಕಲ್ಯಾಣಿ
ಧ್ರುವತಾಳ
ದಾಸರ ಹೃತ್ಕುಮುದ ಚಂದ್ರ ಗುಣಸಾಂದ್ರ
ವಾಸವಾಗಿರು ಎನ್ನ ಹೃದಯದೊಳಗೆ
ದಾಸರ ದಯೆಯಿಂದ ಭೂಸುರ ಗರ್ಭದಲಿ
ಈ ಶರೀರವು ಬಂದು ಲೇಸು ಕೃತಾರ್ಥನಾದೆ
ಏಸೇಸು ಜನುಮದ ದೋಷರಾಶಿಗಳು ನಿ –
ರಾಶೆಯಲಿ ನಿಂತು ಪರದೇಶಿಗಳಾದವು
ಮೀಸಲಾದ ಪುಣ್ಯವ ರಾಶಿಗೆ ತುಂಬಿ
ಸೂಸುವಂತೆ ಸುತ್ತೆ ಭೂಷಣವಾಗಿದೆ ನೋಡು
ದಾಸರ ಚೂಡಾಮಣಿ ದಾಸರ ಶಿರೋರತುನ
ದಾಸರಾಗ್ರಣಿಯೆ ಕರುಣೆಸಲು ಪಾಲಿಸಿತು
ಸಾಸಿರಾಂಶ ನಾಮ ವಿಜಯವಿಟ್ಠಲನ್ನ
ದಾಸರೊಳು ಕೂಡಿ ವಿಶೇಷದವನಾದೆ || ೧ ||
ಮಟ್ಟತಾಳ
ಗೆದ್ದೆನೊ ಗೆದ್ದೆನೊ ಜನನಾದಿಯ ಭೀತಿ
ಎದ್ದೆನೊ ಎದ್ದೆನೊ ಭವಗಡಲಿಂದ
ಇದ್ದೆನೊ ಇದ್ದೆನೊ ಉತ್ತುಮರ ಬಳಿಯ
ಮೆದ್ದೆನೊ ಮೆದ್ದೆನೊ ಹರಿನಾಮವನು
ಒದ್ದೆನೊ ಒದ್ದೆನೊ ಸಂಚಿತ ಪಾಪಗಳ
ಬಿದ್ದೆನೊ ಬಿದ್ದೆನೊ ಶ್ರೀಪತಿಯ ಪಾದಕ್ಕೆ
ಸಿದ್ಧನಾಮಕ ದೇವ ವಿಜಯವಿಟ್ಠಲರೇಯ
ಮದ್ಗುರು ಪಾದವ ಪಿಡಿಸಿದನೊ || ೨ ||
ತ್ರಿವಿಡಿತಾಳ
ಕಪಿ ಕುಲೋತ್ತಮನ ಮತ ಜಪಿಸಿ ಪೊಕ್ಕದರಿಂದ
ಕಪಟ ಮತಿಗಳೆಲ್ಲ ನಿಪತನವಾದವು
ತಪುತ ಮುದ್ರಿಗಳಿಂದ ತಪಿಸಿತು ದುರಿತೌಘ
ಉಪದೇಶದಿಂದಲಿ ಉಪಶಮನವಾಯಿತು
ಸ್ವಪನದಲ್ಲಿ ಪಾಪದುಪಹತಿ ಕಾಣೆನೊ
ವಿಪರೀತವೆಲ್ಲ ಬಲು ಸುಪರೀತವಾಯಿತು
ಸುಪಥ ತೋರಿದ ಮಹಾ ತಪ ವಿಜಯವಿಟ್ಠಲ
ಕೃಪೆ ಮಾಡಿದನು ಒಲಿದು ಕೃಪಣವತ್ಸಲ ರಂಗ || ೩ ||
ಅಟ್ಟತಾಳ
ನೆಲೆ ಇಲ್ಲದ ಕರ್ಮಜಲಧಿಯೊಳಗೆ ಮುಳುಗಿ
ನೆಲೆಗಾಣದಲೇವೆ ನೆಲೆಹತ್ತಿ ಪೋಗಿರೆ
ನೆಲವು ಹರಿದು ಕೆಳಗೆ ಬೀಳಲಮೃತವು
ನೆಲದ ಪಾಲಾದಂತೆ ಫಲಗಳು ಪೋಗಲು
ನೆಲೆಯ ಬಲ್ಲವರಿಲ್ಲ ನೆಲನ ತಂದವನೆ ಮು –
ನ್ನೆಲವೆಂದು ಕೂಗಲು ಒಳಗಿದ್ದವರೊದರೆ
ನೆಲೆ ಬಲ್ಲ ಜಾಣನು ನಲಿವುತ್ತ ವೇಗದಿ
ನೆಲೆಹತ್ತಗೊಡದಂತೆ ನಿಲಿಸಿದನು ತಡಿಗೆ
ನೆಲೆಗೊಳಿಸಿದನು ಎನ್ನಳಿಕೆ ಪರಿಹರಿಸಿ
ನೆಲಪತ್ತಿ ಸರ್ವಾಂಗ ವಿಜಯವಿಟ್ಠಲನ್ನ
ನೆಲೆ ಬಲ್ಲ ದಾಸರೆ ನೆಳಲು ನೆಲೆಯಾಗೆ || ೪ ||
ಆದಿತಾಳ
ಆರಿಗಂಜೆನು ಇನ್ನು ಕ್ರೂರರುಪಟಳ –
ವಾದರು ತೂರಿ ಬಿಡುವೆನು ಜೊಳ್ಳು
ಸುಂಟರಗಾಳಿಗೆ ಪೋದಂತೆ
ಸ್ಯಾರೆಗೊಡನು ಯಮದೂತರ
ಸೂರೆಗೊಂಬೆ ಮೇಲು ಲೋಕ
ಈ ರೀತಿಯಲ್ಲಿ ಇದ್ದು ಆರೈದು ಜನ್ಮಕ್ಕಾದರು
ಶಾರಂಗಧರ ನಾಮಾ ವಿಜಯವಿಟ್ಠಲನ ದಾ –
ಸರ ಕರುಣದಿಂದ ಮೆಲ್ಲನೆ ಆರಾಧಿಸುತ್ತ
ಹರಿಪಾದ || ೫ ||
ಜತೆ
ಸಂಶಯ ಪೋಯಿತು ಇಂದು ಗುರು ದಯದಿಂದ
ಪ್ರಾಂಶುವೆ ವಿಜಯವಿಟ್ಠಲ ಬಲವಾದ ||
rAga: pUrvikalyANi
dhruvatALa
dAsara hRutkumuda caMdra guNasAMdra
vAsavAgiru enna hRudayadoLage
dAsara dayeyiMda BUsura garBadali
I SarIravu baMdu lEsu kRutArthanAde
EsEsu janumada dOSharASigaLu ni –
rASeyali niMtu paradESigaLAdavu
mIsalAda puNyava rASige tuMbi
sUsuvaMte sutte BUShaNavAgide nODu
dAsara cUDAmaNi dAsara SirOratuna
dAsarAgraNiye karuNesalu pAlisitu
sAsirAMSa nAma vijayaviTThalanna
dAsaroLu kUDi viSEShadavanAde || 1 ||
maTTatALa
geddeno geddeno jananAdiya BIti
eddeno eddeno BavagaDaliMda
iddeno iddeno uttumara baLiya
meddeno meddeno harinAmavanu
oddeno oddeno saMcita pApagaLa
biddeno biddeno SrIpatiya pAdakke
siddhanAmaka dEva vijayaviTThalarEya
madguru pAdava piDisidano || 2 ||
triviDitALa
kapi kulOttamana mata japisi pokkadariMda
kapaTa matigaLella nipatanavAdavu
taputa mudrigaLiMda tapisitu duritauGa
upadESadiMdali upaSamanavAyitu
svapanadalli pApadupahati kANeno
viparItavella balu suparItavAyitu
supatha tOrida mahA tapa vijayaviTThala
kRupe mADidanu olidu kRupaNavatsala raMga || 3 ||
aTTatALa
nele illada karmajaladhiyoLage muLugi
nelegANadalEve nelehatti pOgire
nelavu haridu keLage bILalamRutavu
nelada pAlAdaMte PalagaLu pOgalu
neleya ballavarilla nelana taMdavane mu –
nnelaveMdu kUgalu oLagiddavarodare
nele balla jANanu nalivutta vEgadi
nelehattagoDadaMte nilisidanu taDige
nelegoLisidanu ennaLike pariharisi
nelapatti sarvAMga vijayaviTThalanna
nele balla dAsare neLalu neleyAge || 4 ||
AditALa
ArigaMjenu innu krUrarupaTaLa –
vAdaru tUri biDuvenu joLLu
suMTaragALige pOdaMte
syAregoDanu yamadUtara
sUregoMbe mElu lOka
I rItiyalli iddu Araidu janmakkAdaru
SAraMgadhara nAmA vijayaviTThalana dA –
sara karuNadiMda mellane ArAdhisutta
haripAda || 5 ||
jate
saMSaya pOyitu iMdu guru dayadiMda
prAMSuve vijayaviTThala balavAda ||
Leave a Reply