Composer: Shri Purandara dasaru
ನಿನ್ನ ಆಶ್ರಯಿಸುವೆನು ನಿಗಮಗೋಚರನೆ ನಿತ್ಯ
ಬೆನ್ನ ಬಿಡದೆ ಕಾಯೊ ಮನದಿಷ್ಟವೀಯೋ ||ಪ||
ಕುಂದಣದ ಆಶ್ರಯ ನವರತ್ನಗಳಿಗೆಲ್ಲ
ಚಂದಿರನ ಆಶ್ರಯ ಚಕೋರಗೆ
ಕಂದರ್ಪನಾಶ್ರಯ ವಸಂತ ಕಾಲಕ್ಕೆ
ಗೋವಿಂದನಾಶ್ರಯವು ಮರಣಕಾಲದೊಳು |೧|
ಹಣ್ಣುಳ್ಳ ಮರಗಳು ಪಕ್ಷಿಗಳಿಗಾಶ್ರಯವು
ಪುಣ್ಯನದಿಗಳು ಋಷಿಗಳಾಶ್ರಯವು
ಕಣ್ಣಿಲ್ಲದಾತಗೆ ಕೈಗೋಲಿನಾಶ್ರಯವು
ತನ್ನಿಷ್ಟ ಪಡೆದವಗೆ ನಿನ್ನ ಆಶ್ರಯವು |೨|
ಪತಿವ್ರತೆ ವನಿತೆಗೆ ಪತಿಯೊಂದೆ ಆಶ್ರಯವು
ಯತಿಗಳಿಗೆ ಶ್ರುತಿ ಪ್ರಣವದ ಆಶ್ರಯವು
ಮತಿವಂತನಿಗೆ ಹರಿಸ್ತುತಿಗಳೇ ಆಶ್ರಯವು
ಹಿತವಾದ ಪುರಂದರವಿಠಲನಾಶ್ರಯವು |೩|
ninna ASrayisuvenu nigamagOcarane nitya
benna biDade kAyo manadiShTavIyO ||pa||
kuMdaNada ASraya navaratnagaLigella
caMdirana ASraya cakOrage
kaMdarpanASraya vasaMta kAlakke
gOviMdanASrayavu maraNakAladoLu |1|
haNNuLLa maragaLu pakShigaLigASrayavu
puNyanadigaLu RuShigaLASrayavu
kaNNilladAtage kaigOlinASrayavu
tanniShTa paDedavage ninna ASrayavu |2|
pativrate vanitege patiyoMde ASrayavu
yatigaLige Sruti praNavada ASrayavu
mativaMtanige haristutigaLE ASrayavu
hitavAda puraMdaraviThalanASrayavu |3|
Leave a Reply