Composer: Shri Harapanahalli Bheemavva
ಕೋಲು ಕೃಷ್ಣ ಸಾಗರ ಶಯನ
ಕೋಲಣ್ಣ ಕೋಲ
ಸಾಲಿಗ್ರಾಮಕೆ ಹಾಲಭಿಷೇಕ
ಕೋಲಣ್ಣ ಕೋಲ, ಕೋಲಣ್ಣ ಕೋಲ ||ಪ||
ಅಟ್ಟದ ಮೇಲಿನ ನೆಲವಲ್ಲಾಡಿಸಿ
ಸಕ್ಕರೆಗಳ ಸವಿದಾ
ಕೃಷ್ಣಾ ಕೃಷ್ಣೆಂದರೆ
ನಾನಲ್ಲ ಬೆಕ್ಕೇನೊ ಎಂದಾ |
ಬೆಕ್ಕೆಂದೋಡುತ ಊರೊಳಗಿದ್ದ
ಹಕ್ಕಿಗಳೋಡಿಸಿದ
ಮಕ್ಕಳು ಮಲಗ್ಯಾರೆಬ್ಬಿಸ ಬೇಡೆನೆ
ಬಟ್ಟಲು ಬಾರಿಸಿದಾ ||೧||
ಹಪ್ಪಳ ಸಂಡಿಗೆ ಹರವಿದ ಮನೆಯಲಿ
ತಪ್ಪದೆ ತಾ ಪೋದ
ಮುಚ್ಚಿಡಬ್ಯಾಡಿ ಮುಟ್ಟುವನಲ್ಲ
ಅಪ್ಪಂತವನಲ್ಲ |
ಸಾರಿಸಿದ ಮನೆಯಲಿ ಸುಣ್ಣವ ಚೆಲ್ಲಿ
ಧೂಳನು ಹರವಿದಾ
ಕಾಲಲಿ ರಂಗೋಲಿ ಹಾಕಿದೆ ಯಶೋದೆ
ನೋಡು ಬಾ ಎಂದು ಕರೆದಾ ||೨||
ಅಭಿಷೇಕಕೆಂದು ಅಘ್ರ್ಯೋದಕ ತಂದರೆ
ಅಚಮನ ಮಾಡಿದಾ
ಪ್ರೀತಿಯಿಂದ ಗಂಧಾಕ್ಷತೆ ಇಟ್ಟರೆ
ಶ್ರೀತುಳಸಿಯ ತಾ ಮುಡಿದ |
ನೈವೇದ್ಯಕೆಂದು ಅಮ್ರತಾನ್ನ
ಮಾಡಲು ಬಾಯ್ತೆರೆದೆ ಎಂದಾ
ನೈವೇದ್ಯಕೆಲ್ಲಣಿಯಾಗಿದೆ ಯಶೋದೆ
ನೋಡು ಬಾ ಎಂದು ಕರೆದ ||೩||
ಕಜ್ಜಾಯ ಮಾಡುವ ಅಲ್ಲಿಗೆ ಹೋಗಿ
ಒಬ್ಬಂತೆ ತಾ ನಿಂತ
ಜಜ್ಜಿಡೆರೆ ತಿಂದು ದೂರ ಹೋಗಿ ನಿಂತು
ಹಬ್ಬವು ಏನೆಂದ |
ಒಬ್ಬನೆ ತಿಂದು ಒಳಗಿದ್ದವರಿಗೆ
ಜಿಬ್ಬನು ತೋರಿಸಿದ
ಮಜ್ಜಿಗೆ ಕಳ್ಳನು ಹಿಡಿಹಿಡಿ ಎಂದರೆ
ಅಜ್ಜನ ಮಗನೆಂದಾ , ನಿಮ್ ಅಜ್ಜನ ಮಗನೆಂದಾ ||೪||
ಉಪ್ಪು ಸಾಕು ಸಾಲದು ನೋಡೆನೆ
ಅಪ್ಪಟವನೆ ಮೆದ್ದ
ತುಪ್ಪದ ಕಳ್ಳನ ಹಿಡಿಹಿಡಿ ಎಂದರೆ
ನಿಮ್ಮಪ್ಪನ ಮಗನೆಂದಾ |
ಧಿಮಿ ಧಿಮಿ ಮಲ್ಲಿಗೆ ,ಧಿಮಾಕು ಜಾಜಿಗೆ
ಕೋಲಣ್ಣಾ ಕೋಲ, ರಾಮನ
ನೆಂಟ ಭೀಮೇಶ ಕ್ರುಷ್ಣ
ಕೋಲಣ್ಣ ಕೋಲ , ಕೋಲಣ್ಣ ಕೋಲ ||೫||
kOlu kRuShNa sAgara Sayana
kOlaNNa kOla
sAligrAmake hAlaBiShEka
kOlaNNa kOla, kOlaNNa kOla ||pa||
aTTada mElina nelavallADisi
sakkaregaLa savidA
kRuShNA kRuShNeMdare
nAnalla bekkEno eMdA |
bekkeMdODuta UroLagidda
hakkigaLODisida
makkaLu malagyArebbisa bEDene
baTTalu bArisidA ||1||
happaLa saMDige haravida maneyali
tappade tA pOda
mucciDabyADi muTTuvanalla
appaMtavanalla |
sArisida maneyali suNNava celli
dhULanu haravidA
kAlali raMgOli hAkide yaSOde
nODu bA eMdu karedA ||2||
aBiShEkakeMdu aGryOdaka taMdare
acamana mADidA
prItiyiMda gaMdhAkShate iTTare
SrItuLasiya tA muDida |
naivEdyakeMdu amratAnna
mADalu bAyterede eMdA
naivEdyakellaNiyAgide yaSOde
nODu bA eMdu kareda ||3||
kajjAya mADuva allige hOgi
obbaMte tA niMta
jajjiDere tiMdu dUra hOgi niMtu
habbavu EneMda |
obbane tiMdu oLagiddavarige
jibbanu tOrisida
majjige kaLLanu hiDihiDi eMdare
ajjana maganeMdA , nim ajjana maganeMdA ||4||
uppu sAku sAladu nODene
appaTavane medda
tuppada kaLLana hiDihiDi eMdare
nimmappana maganeMdA |
dhimi dhimi mallige ,dhimAku jAjige
kOlaNNA kOla, rAmana
neMTa BImESa kruShNa
kOlaNNa kOla , kOlaNNa kOla ||5||
Leave a Reply