Composer: Shri Purandara dasaru
ಹನುಮ ಭೀಮ ಮಧ್ವ ಮುನಿಯ ನೆನೆದು ಬದುಕಿರೋ ||ಪ||
ಅನುಮಾನಂಗಳಿಲ್ಲದಲೆ ಮನೋಭೀಷ್ಟಂಗಳನೀವ ||ಅ.ಪ||
ಪ್ರಾಣಿಗಳ ಪ್ರಾಣೋದ್ಧಾರ ಜೀವರೋತ್ತಮರು ಮತ್ತು
ಪ್ರಾಣಾಪಾನ ವ್ಯಾನೋದಾನ ಸಮಾನರೊಳುತ್ಕೃಷ್ಟ
ಕಾಣಿರೇನೊ ಕಾಯ ಕರ್ಮ ಚಕ್ಷುರಿಂದ್ರಿಯಗಳಿಗೆ
ತ್ರಾಣಗೊಟ್ಟು ಸಲಹುವ ಜಾಣ ಗುರು ಮುಖ್ಯ ಪ್ರಾಣ, ಹನುಮ |೧|
ಕಾಮಧೇನು ಚಿಂತಾಮಣಿ ಕಲ್ಪ ವೃಕ್ಷನಾದ ಸ್ವಾಮಿ
ಪ್ರೇಮದಿಂದಲಿ ನೆನೆಯುವವರ ಭಾಗ್ಯಕ್ಕೆಣೆಯುಂಟೆ
ಸಾಮಾನ್ಯವಲ್ಲವೋ ಈತ ಮೋಕ್ಷ ಸಂಪದವಿಗಳ ದಾತ
ಆ ಮಹಾ ಅಪರೋಕ್ಷ ಜ್ಞಾನ ದಾರ್ಢ್ಯ ಭಕ್ತಿಯ ಕೊಡುವ ಹನುಮ |೨|
ಅವತಾರ ತ್ರಯಂಗಳಲ್ಲಿ ಹರಿಯ ಸೇವಿಸುತ್ತ ಮತ್ತು
ತವಕದಿಂದ ಪೂಜಿಪ ಮಹಾ ಮಹಿಮೆಯುಳ್ಳವರೊ
ಕವಿತ ವಾಕ್ಯವಲ್ಲವಿದು ಅವಿವೇಕವೆಂದೆಣಿಸಬೇಡಿ
ಭವಬಂಧನ ಕಳೆದು ಕಾವ ಪುರಂದರ ವಿಠಲನ ದಾಸ ಹನುಮ |೩|
hanuma BIma madhva muniya nenedu badukirO ||pa||
anumAnaMgaLilladale manOBIShTaMgaLanIva ||a.pa||
prANigaLa prANOddhAra jIvarOttamaru mattu
prANApAna vyAnOdAna samAnaroLutkRuShTa
kANirEno kAya karma cakShuriMdriyagaLige
trANagoTTu salahuva jANa guru muKya prANa, hanuma |1|
kAmadhEnu ciMtAmaNi kalpa vRukShanAda svAmi
prEmadiMdali neneyuvavara BAgyakkeNeyuMTe
sAmAnyavallavO Ita mOkSha saMpadavigaLa dAta
A mahA aparOkSha j~jAna dArDhya Baktiya koDuva hanuma |2|
avatAra trayaMgaLalli hariya sEvisutta mattu
tavakadiMda pUjipa mahA mahimeyuLLavaro
kavita vAkyavallavidu avivEkaveMdeNisabEDi
BavabaMdhana kaLedu kAva puraMdara viThalana dAsa hanuma |3|
Leave a Reply