Vishayada vichara

Composer: Shri Purandara dasaru

ವಿಷಯದ ವಿಚಾರ ಬಿಡು, ವಿಹಿತ ಕರ್ಮವ ಮಾಡು
ವೈರಾಗ್ಯ ಭಾಗ್ಯ ಬೇಡು ||ಪ||
ವಿಷವೆಂದು ಕಾಮ ಕ್ರೋಧಗಳೆಲ್ಲ ನೀಡಾಡು
ಮಸಣ ಮನವೇ ಮಾಧವನ್ನ ಕೊಂಡಾಡು ||ಅ||

ಅನುದಿನವು ಹರಿಕಥೆಯ ಕೇಳಿ ಸಂತೋಷ ಪಡು
ವಿನಯದಿ ಸಜ್ಜನರ ಕೂಡು
ಮನಮುಟ್ಟಿ ದುರಾಚರ ಮಾಳ್ಪರನು ನೀ ಕಾಡು
ಹಣ ಹೊನ್ನು ಪರಹೆಣ್ಣು ಹೆಂಚೆಂದು ನೋಡು |೧|

ವೇದ ಶಾಸ್ತ್ರಾರ್ಥ ತತ್ವದ ವಿಚಾರವ ಮಾಡು
ಮಾಧವನ ಭಕ್ತಿ ಬೇಡು
ಪಾದದಿಂದಲಿ ತೀರ್ಥ ಯಾತ್ರೆಗಳ ನೀ ಮಾಡು
ಖೇದಪಡ-ದನುದಿನದಿ ಸಂತೋಷ ಕೂಡು |೨|

ನಂಬದಿರು ಈ ದೇಹ ಅಂಬುಗುಳ್ಳೆಯಂತೆ
ನಂಬಿ ನೀ ಕೆಡಲು ಬೇಡ
ಕೊಂಬುವರು ಬಂದರೆ ಕೊಡರೊಂದು ರುವ್ವಿಯನು
ಅಂಬುಜಾಕ್ಷ ಶ್ರೀ ಪುರಂದರವಿಠಲನ್ನ ನೆನೆ ಮನವೆ |೩|


viShayada vicAra biDu, vihita karmava mADu
vairAgya BAgya bEDu ||pa||
viShaveMdu kAma krOdhagaLella nIDADu
masaNa manavE mAdhavanna koMDADu ||a||

anudinavu harikatheya kELi saMtOSha paDu
vinayadi sajjanara kUDu
manamuTTi durAcara mALparanu nI kADu
haNa honnu paraheNNu heMceMdu nODu |1|

vEda SAstrArtha tatvada vicArava mADu
mAdhavana Bakti bEDu
pAdadiMdali tIrtha yAtregaLa nI mADu
KEdapaDa-danudinadi saMtOSha kUDu |2|

naMbadiru I dEha aMbuguLLeyaMte
naMbi nI keDalu bEDa
koMbuvaru baMdare koDaroMdu ruvviyanu
aMbujAkSha SrI puraMdaraviThalanna nene manave |3|

Leave a Reply

Your email address will not be published. Required fields are marked *

You might also like

error: Content is protected !!