Vandisidavare Dhanyaru

Composer: Shri Purandara dasaru

Smt.Nandini Sripad

ರಾಗ: ಖರಹರಪ್ರಿಯ , ಆದಿತಾಳ

ವಂದಿಸಿದವರೆ ಧನ್ಯರು ||ಪ||
ನಮ್ಮ ಇಂದಿರಾಪತಿಗಡ್ಡ ಬೀಳುತಲೊಮ್ಮೆ ||ಅ||

ಒಂದೊಂದು ಸ್ತೋತ್ರದಿ ಒಂದೊಂದು ಮಂತ್ರದಿ
ಒಂದೊಂದು ನಾಮವ ನೆನೆಯುತ್ತ
ಮಂದರೋದ್ಧರನ ನೀ ಕುಂದದೆ ಪೂಜಿಸಿ
ವಂದಿಸುವ ಆನಂದದಿಂದ ||

ಬಿಟ್ಟು ಲಜ್ಜೆಯ ದೃಷ್ಟಿಸಿ ನೋಡುತ
ವಿಟ್ಠಲ ವಿಟ್ಠಲ ಎನ್ನುತ ಮನ-
ಮುಟ್ಟಿ ಮಾಡುವ ಭಕ್ತಿಸ್ತುತಿಯಿಂದ
ಅಷ್ಟಾಂಗದಲಿ ವಂದನೆಯ ಮಾಡುತ ||

ಸಿರಿಲಕ್ಷ್ಮೀಪತಿ ಶರಣಾಗತರನ್ನು
ಕರುಣಿಸೆಂದು ಕರಮುಗಿದು
ಹರುಷಪುಳಕದಿಂದ ಮರೆತು ದೇಹವ
ಪುರಂದರವಿಠಲರಾಯನ ದೇಹಕ್ಕೆ ||


vaMdisidavare dhanyaru ||pa||
namma iMdirApatigaDDa bILutalomme ||a||

oMdoMdu stOtradi oMdoMdu maMtradi
oMdoMdu nAmava neneyutta
maMdarOddharana nI kuMdade pUjisi
vaMdisuva AnaMdadiMda ||

biTTu lajjeya dRuShTisi nODuta
viTThala viTThala ennuta mana-
muTTi mADuva BaktistutiyiMda
aShTAMgadali vaMdaneya mADuta ||

sirilakShmIpati SaraNAgatarannu
karuNiseMdu karamugidu
haruShapuLakadiMda maretu dEhava
puraMdaraviThalarAyana dEhakke ||

Leave a Reply

Your email address will not be published. Required fields are marked *

You might also like

error: Content is protected !!