Composer: Shri Purandara dasaru
ಶ್ರೀನಿವಾಸನು ಬಂದ ಕೋನೇರಿ ತಿಮ್ಮಪ್ಪ |
ವಾಣಿಯರಸನಯ್ಯನು || ಪ ||
ವೇಣುಗಾನಲೋಲ ಮೋಸಮಾಡಲು ಬಂದ |
ದೀನರಕ್ಷಕನಯ್ಯ ಮೋಹನಕೃಷ್ಣ || ಅ.ಪ ||
ಪತಿತಪಾವನ ಬಂದ ಸಚ್ಚಿದಾನಂದನು |
ಹಿತಕರನು ಬಂದ ನಿಖಿಳವೇದ ||
ಪ್ರತಿಪಾದ್ಯನು ಬಂದ ಹಿಗ್ಗುತಲಿ ನಿಂದ |
ಮತಿಗೆಡಿಸಿ ಪೋದನಯ್ಯ ಮುದ್ದುರಂಗಯ್ಯ ಕೃಷ್ಣ || ೧ ||
ಉಡುಪಿನಿಲಯ ಬಂದ ಉಡುಪನಂತ್ಹೊಳೆಯುತ |
ತಟಿಯಂತೆ ಮರೆಯಾದ ಕಾಣಬಾರದ ವಸ್ತು ||
ಉಟ್ಟದ್ದು ತೊಟ್ಟದ್ದು ಇಟ್ಟದ್ದು ನೋಡಲು |
ಅಷ್ಟು ಮಾಯವಯ್ಯ ಬಲು ಮಾಯವಯ್ಯ || ೨ ||
ಏಸು ಹರುಷವೊ ಏಸು ಕರುಣವೊ |
ಕಾಸು ಬಾಳದ ಎನಮ್ಯಾಲೆ ಮುದ್ದು ಕೃಷ್ಣಯ್ಯಗೆ ||
ವಾಸುಕಿಶಯನನು ತಂದೆ ಪುರಂದರವಿಠಲ |
ಶೇಷಾದ್ರಿವಾಸನಯ್ಯ ಕೇಳಣ್ಣಯ್ಯ || ೩ ||
SrInivAsanu baMda kOnEri timmappa |
vANiyarasanayyanu || pa ||
vENugAnalOla mOsamADalu baMda |
dInarakShakanayya mOhanakRuShNa || a.pa ||
patitapAvana baMda saccidAnaMdanu |
hitakaranu baMda niKiLavEda ||
pratipAdyanu baMda higgutali niMda |
matigeDisi pOdanayya mudduraMgayya kRuShNa || 1 ||
uDupinilaya baMda uDupanaMt~hoLeyuta |
taTiyaMte mareyAda kANabArada vastu ||
uTTaddu toTTaddu iTTaddu nODalu |
aShTu mAyavayya balu mAyavayya || 2 ||
Esu haruShavo Esu karuNavo |
kAsu bALada enamyAle muddu kRuShNayyage ||
vAsukiSayananu taMde puraMdaraviThala |
SEShAdrivAsanayya kELaNNayya || 3 ||
Leave a Reply