Composer: Shri Purandara dasaru
ಶ್ರೀಕಾಂತ ಎನಗಿಷ್ಟು ದಯಮಾಡೊ ತಂದೆ
ಏಕಾಂತದಲಿ ನಿನ್ನ ಭಜಿಸುವ ಸೌಭಾಗ್ಯ ||ಪ||
ಧನದಾಸೆಗಾಗಿ ನಾ ಧನಿಕರ ಮನೆಗಳ
ಕೊನೆ ಬಾಗಿಲಲಿ ನಿಂದು ತೊಳಲಿ ಬಳಲಿದೆನೊ |೧|
ದೇಹಾಭಿಮಾನದಿಂದ ವಿಹಿತ ಧರ್ಮವ ತೊರೆದು
ಸ್ನೇಹಾನುಬದ್ಧನಾಗಿ ಸತಿ ಸುತರ ಪೊರೆದೆನೊ |೨|
ಏನಾದರೇನೆನ್ನ ಹೀನ ಗುಣಗಳನೆಲ್ಲ
ಮನ್ನಿಸಿ ಸಲಹೋ ಶ್ರೀಪುರಂದರವಿಠಲ |೩|
SrIkAMta enagiShTu dayamADo taMde
EkAMtadali ninna Bajisuva sauBAgya ||pa||
dhanadAsegAgi nA dhanikara manegaLa
kone bAgilali niMdu toLali baLalideno |1|
dEhABimAnadiMda vihita dharmava toredu
snEhAnubaddhanAgi sati sutara poredeno |2|
EnAdarEnenna hIna guNagaLanella
mannisi salahO SrIpuraMdaraviThala |3|
Leave a Reply