Composer: Shri Purandara dasaru
ರಾಗ: ಪೀಲು, ಆದಿತಾಳ
ಪೋಗುವುದುಚಿತವೇ ಮಾಧವ ಮಧುರೆಗೆ |
ಬಾಗುವೆ ನಿನಗೆ || ಪ ||
ನಾಗಶಯನ ನಿನ್ನಗಲಿ ಒಂದು ಕ್ಷಣ |
ಹೇಗೆ ಸೈರಿಸುವೆವೋ ಆಗಮನುತ ಕೃಷ್ಣ || ಅ ಪ ||
ಅಕ್ರೂರನೆಂಬವನಿಲ್ಲಿಗೇಕೆ ಬಂದ |
ಚಕ್ರಧರಗೂ ನಮಗೂ |
ಸತ್ಕ್ರೀಡೆಗಳನೆಲ್ಲಾ ಕೆಡಿಸಬೇಕೆನುತಲಿ |
ವಕ್ರನಂದದಲಿ ಬಂದು ||
ಚಕ್ರಧರನೆ ಪೋಗಬೇಡ ನೀ ಮಧುರೆಗೆ |
ಅಕ್ಕರದಿಂದಲಿ ಅಭಯ ಕೊಡೆಲೋ ಕೃಷ್ಣ || ೧ ||
ಹುಟ್ಟಿಸಿದವನು ಭ್ರಷ್ಟ ಮಾಡುವರೇನೋ |
ಕೃಷ್ಣರಾಯನೆ ನೀನು |
ಎಷ್ಟು ಹೇಳಿದರೂ ಒಂದಿಷ್ಟು ದಯಬಾರದೆ |
ಬೆನ್ನಟ್ಟಿದಲ್ಲದೆ ಬಿಡೆವೋ ||
ಕೃಷ್ಣಯ್ಯ ನಿನ್ನೊಳು ಇಷ್ಟು ಗುಣಂಗಳ |
ಭ್ರಷ್ಟವ ಮಾಡದೆ ಕೃಷ್ಣರಾಯನೆ ಬೇಗ || ೨ ||
ಮಾರನ ಬಾಧೆಗೆ ಅಗಲಿ ನೀ ಮಧುರಾ |
ಪುರಕಾಗಿ ಹೋಗುವರೆ |
ಸೇರಿದವರನೆಲ್ಲಾ ಮೀರಿ ನೀ ಪೋದರೆ |
ಯಾರೆಲೋ ಗತಿ ನಮಗೆ ||
ವರದ ಶ್ರೀಪುರಂದರವಿಠಲ ರಾಯನೆ |
ಸೆರಗೊಡ್ಡಿ ಬೇಡುವೆವೋ ನಿಲ್ಲು ನಿಲ್ಲೆಲೋ ಕೃಷ್ಣ || ೩ ||
rAga: pIlu, AditALa
pOguvuducitavE mAdhava madhurege |
bAguve ninage || pa ||
nAgaSayana ninnagali oMdu kShaNa |
hEge sairisuvevO Agamanuta kRuShNa || a pa ||
akrUraneMbavanilligEke baMda |
cakradharagU namagU |
satkrIDegaLanellA keDisabEkenutali |
vakranaMdadali baMdu ||
cakradharane pOgabEDa nI madhurege |
akkaradiMdali aBaya koDelO kRuShNa || 1 ||
huTTisidavanu BraShTa mADuvarEnO |
kRuShNarAyane nInu |
eShTu hELidarU oMdiShTu dayabArade |
bennaTTidallade biDevO ||
kRuShNayya ninnoLu iShTu guNaMgaLa |
BraShTava mADade kRuShNarAyane bEga || 2 ||
mArana bAdhege agali nI madhurA |
purakAgi hOguvare |
sEridavaranellA mIri nI pOdare |
yArelO gati namage ||
varada SrIpuraMdaraviThala rAyane |
seragoDDi bEDuvevO nillu nillelO kRuShNa || 3 ||
Leave a Reply