Nod Noda ShriHari

Composer: Shri Purandara dasaru

Smt.Viraja Satya

ನೋಡ್ ನೋಡ ಶ್ರೀಹರಿ ತಾನೆಂಥ ಚೆಲುವ ನೋಡ
ನೋಡ್ ನೋಡ ರುಕ್ಮಿಣಿ ಅರಸೆಂಥಾ ಚೆಲುವ ನೋಡ |ಪ|

ಕಾಲಿನಲ್ಲಿ ಗೆಜ್ಜೆ ನೋಡ
ಮೇಲೆ ಪೈಝಣಿ ಸರಪಳಿ ನೋಡ |
ಉಂಗುಷ್ಟದಿಂದ ಗಂಗೆಯ ಪಡೆದ
ಮಂಗಳಾತ್ಮಕ ರಂಗನ್ನ ನೋಡ |೧|

ವಜ್ರದ ಕಿರೀಟ ನೋಡ
ಕರ್ಣ ಕುಂಡಲಗಳ ನೋಡ |
ಚಿನ್ನದ ಕೊಳಲನೂದುವಂಥ ಪುಟ್ಟ
ಬಾಲಕೃಷ್ಣನ್ನ ನೋಡ |೨|

ವಕ್ಷಸ್ಥಳದಲಿ ಲಕ್ಷ್ಮಿಯ ನೋಡ
ವೈಜಯಂತಿ ಮಾಲೆಯ ನೋಡ |
ನಾಭಿಯಿಂದ ಬ್ರಹ್ಮನ ಪಡೆದ ನೀಲವರ್ಣ
ಕೃಷ್ಣನ್ನ ನೋಡ |೩|

ಕಂದನ ಮೊರೆಯ ಕೇಳಿ
ಕಂಭದಿಂದ ಒಡೆದು ಬಂದ |
ಹಿರಣ್ಯ ಕಶಿಪಿನ ಒಡಲ ಸೀಳಿ
ಕರುಳ ಮಾಲೆ ಧರಿಸಿದ್ಯಾನ ನೋಡ |೪|

ಕರಿಯ ರಾಜನ ಮೊರೆಯ ಕೇಳಿ
ಚಕ್ರದಿಂದ ನಕ್ರನ ಸೀಳಿ |
ಪುರಂದರ ವಿಠ್ಠಲನಾಗಿ
ಗಿರಿಯ ಮೇಲೆ ನಿಂತನ ನೋಡ |೫|


nOD nODa SrIhari tAneMtha celuva nODa
nOD nODa rukmiNi araseMthA celuva nODa |pa|

kAlinalli gejje nODa
mEle paiJaNi sarapaLi nODa |
uMguShTadiMda gaMgeya paDeda
maMgaLAtmaka raMganna nODa |1|

vajrada kirITa nODa
karNa kuMDalagaLa nODa |
cinnada koLalanUduvaMtha puTTa
bAlakRuShNanna nODa |2|

vakShasthaLadali lakShmiya nODa
vaijayaMti mAleya nODa |
nABiyiMda brahmana paDeda nIlavarNa
kRuShNanna nODa |3|

kaMdana moreya kELi
kaMBadiMda oDedu baMda |
hiraNya kaSipina oDala sILi
karuLa mAle dharisidyAna nODa |4|

kariya rAjana moreya kELi
cakradiMda nakrana sILi |
puraMdara viThThalanAgi
giriya mEle niMtana nODa |5|

Leave a Reply

Your email address will not be published. Required fields are marked *

You might also like

error: Content is protected !!