Composer: Shri Purandara dasaru
ನಿನ್ನನೆ ನಂಬಿದೆ ನೀರಜನಯನ
ಎನ್ನ ಪಾಲಿಸೊ ಇಂದಿರಾರಮಣ |ಪ|
ಗೌತಮ ಮುನಿಯ ಶಾಪದಲಿ ಅಹಲ್ಯೆಯು
ಪಥದೊಳು ಶಿಲೆಯಾಗಿ ಮಲಗಿರಲು
ಪತಿತಪಾವನ ನಿನ್ನ ಪಾದ ಸೋಕೆ ಸತಿಯಾಗೆ
ಅತಿಶಯದಿ ಭಕುತರನು ಕಾಯಿದನೆಂಬೋದು ಕೇಳಿ |೧|
ಬಲವಂತ ಉತ್ತಾನಪಾದ-ರಾಯನಣುಗನ
ಮಲತಾಯಿ ನೂಕಲಡವಿಯೊಳಗೆ
ಜಲಜಾಕ್ಷ ನಿನ್ನನು ಕುರಿತು ತಪವಿ-
ರಲಾಗೆ ನೀನವಗೆ ಧ್ರುವಪಟ್ಟ ಕಟ್ಟಿದ್ದು ಕೇಳಿ |೨|
ಸುರನರಲೋಕದಿ ಪುಣ್ಯದ ಜನರನ್ನು
ಪೊರೆಯಬೇಕೆಂದು ವೈಕುಂಠದಿಂದ
ಸಿರಿಸಹಿತದಿ ಬಂದು ಶೇಷಾಚಲದಿ ನಿಂದು
ಕರುಣಿ ಶ್ರೀಪುರಂದರವಿಠಲನೆಂಬುದ ಕೇಳಿ |೩|
ninnane naMbide nIrajanayana
enna pAliso iMdirAramaNa |pa|
gautama muniya SApadali ahalyeyu
pathadoLu SileyAgi malagiralu
patitapAvana ninna pAda sOke satiyAge
atiSayadi Bakutaranu kAyidaneMbOdu kELi |1|
balavaMta uttAnapAda-rAyanaNugana
malatAyi nUkalaDaviyoLage
jalajAkSha ninnanu kuritu tapavi-
ralAge nInavage dhruvapaTTa kaTTiddu kELi |2|
suranaralOkadi puNyada janarannu
poreyabEkeMdu vaikuMThadiMda
sirisahitadi baMdu SEShAcaladi niMdu
karuNi SrIpuraMdaraviThalaneMbuda kELi |3|
Leave a Reply