Composer: Shri Purandara dasaru
ನರಜನ್ಮ ಬಂದಾಗ ನಾಲಿಗೆ ಇರುವಾಗ
ಕೃಷ್ಣ ಎನಬಾರದೆ
ಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಿಲ್ಲ
ಕೃಷ್ಣ ಎನಬಾರದೆ [ಪ]
ಮಲಗೆದ್ದು ಮೈಮುರಿದು ಏಳುತಲೊಮ್ಮೆ
ಕೃಷ್ಣ ಎನಬಾರದೆ
ನಿತ್ಯ ಸುಳಿದಾಡುತ ಮನೆಯೊಳಗಾದರು ಒಮ್ಮೆ
ಕೃಷ್ಣ ಎನಬಾರದೆ [೧]
ಸ್ನಾನ ಪಾನ ಜಪ ತಪಗಳ ಮಾಡುತ
ಕೃಷ್ಣ ಎನಬಾರದೆ
ಶಾಲ್ಯಾನ್ನ ಷಡ್ರಸ ತಿಂದು ತೃಪ್ತನಾಗಿ
ಕೃಷ್ಣ ಎನಬಾರದೆ [೨]
ಮೇರೆ ತಪ್ಪಿ ಮಾತನಾಡುವಗಲೊಮ್ಮೆ
ಕೃಷ್ಣ ಎನಬಾರದೆ
ದೊಡ್ಡ ದಾರಿಯ ನಡೆವಾಗ ಭಾರವ ಹೊರುವಾಗ
ಕೃಷ್ಣ ಎನಬಾರದೆ [೩]
ಗಂಧವ ಪೂಸಿ ತಾಂಬೂಲವ ಮೆಲುವಾಗ
ಕೃಷ್ಣ ಎನಬಾರದೆ, ತನ್ನ
ಮಂದಗಮನೆ ಕೂಡ ಸರಸವಾಡುತಲೊಮ್ಮೆ
ಕೃಷ್ಣ ಎನಬಾರದೆ [೪]
ಪರಿಹಾಸ್ಯದ ಮಾತನಾಡುತಲೊಮ್ಮೆ
ಕೃಷ್ಣ ಎನಬಾರದೆ
ಪರಿ ಪರಿ ಕೆಲಸದೊಳ್-ಒಂದು ಕೆಲಸವೆಂದು
ಕೃಷ್ಣ ಎನಬಾರದೆ [೫]
ಕಂದನ ಬಿಗಿದಪ್ಪಿ ಮುದ್ದಾಡುತಲೊಮ್ಮೆ
ಕೃಷ್ಣ ಎನಬಾರದೆ
ಬಹು ಚಂದುಳ್ಳ ಹಾಸಿಗೆ ಮೇಲೆ ಕುಳಿತೊಮ್ಮೆ
ಕೃಷ್ಣ ಎನಬಾರದೆ [೬]
ನೀಗದಾಲೋಚನೆ ರೋಗೋಪದ್ರವದಲೊಮ್ಮೆ
ಕೃಷ್ಣ ಎನಬಾರದ
ಒಳ್ಳೆ ಭೋಗ ಪಡೆದು ಅನುರಾಗದಿಂದಿರುವಾಗ
ಕೃಷ್ಣ ಎನಬಾರದೆ [೭]
ದುರಿತರಾಶಿಗಳನು ತರಿದು ಬಿಸಾಡುವ
ಕೃಷ್ಣ ಎನಬಾರದೆ
ಸದಾ ಗರುಡವಾಹನ ಸಿರಿಪುರಂದರ ವಿಠಲನ್ನೇ
ಕೃಷ್ಣ ಎನಬಾರದೆ [೮]
narajanma baMdAga nAlige iruvAga
kRuShNa enabArade
kRuShNana nenedare kaShTa oMdiShTilla
kRuShNa enabArade [pa]
malageddu maimuridu ELutalomme
kRuShNa enabArade
nitya suLidADuta maneyoLagAdaru omme
kRuShNa enabArade [1]
snAna pAna japa tapagaLa mADuta
kRuShNa enabArade
SAlyAnna ShaDrasa tiMdu tRuptanAgi
kRuShNa enabArade [2]
mEre tappi mAtanADuvagalomme
kRuShNa enabArade
doDDa dAriya naDevAga BArava horuvAga
kRuShNa enabArade [3]
gaMdhava pUsi tAMbUlava meluvAga
kRuShNa enabArade, tanna
maMdagamane kUDa sarasavADutalomme
kRuShNa enabArade [4]
parihAsyada mAtanADutalomme
kRuShNa enabArade
pari pari kelasadoL-oMdu kelasaveMdu
kRuShNa enabArade [5]
kaMdana bigidappi muddADutalomme
kRuShNa enabArade
bahu caMduLLa hAsige mEle kuLitomme
kRuShNa enabArade [6]
nIgadAlOcane rOgOpadravadalomme
kRuShNa enabArada
oLLe BOga paDedu anurAgadiMdiruvAga
kRuShNa enabArade [7]
duritarASigaLanu taridu bisADuva
kRuShNa enabArade
sadA garuDavAhana siripuraMdara viThalannE
kRuShNa enabArade [8]
Leave a Reply